Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಖಿನ್ನತೆಯಿಂದ ಹೊರಬರಲು ಹತ್ತು ದಾರಿಗಳು
ನೀವು ಖಿನ್ನತೆಗೆ ಒಳಗಾಗಿದ್ದೀರಿ ಎನ್ನುವುದರ ಸೂಚನೆ ಮೊದಲು ನೀಡುವುದು ನಿಮ್ಮ ದೇಹ. ಇದರಿಂದ ದೂರವಾಗಲು 10 ಸುಲಭ ವಿಧಾನಗಳಿವೆ. ಅಧ್ಯಯನಗಳ ಪ್ರಕಾರ ಖಿನ್ನತೆಯಿಂದ ಬಳಲುವ ಶೇ. 65ರಷ್ಟು ಮಹಿಳೆಯರು ಇದು ಶೋಚನೀಯವೆಂದು ಭಾವಿಸುವುದಿಲ್ಲ. ಆದರೆ ಅವರ ದೇಹವು ವಿಚಿತ್ರ ಆಕ್ಷೇಪ, ಮಧ್ಯಾಹ್ನದ ವೇಳೆ ಅರೆ ನಿದ್ರಾವಸ್ಥೆ ಮತ್ತು ಅತಿಯಾಗಿ ತಿನ್ನುವಂತಹ ಸೂಚನೆಗಳನ್ನು ನೀಡುತ್ತದೆ.
ವಾಷಿಂಗ್ಟನ್‌ನ ಯೂನಿವರ್ಸಿಟಿಯೊಂದು ನಡೆಸಿರುವ ಸಂಶೋಧನೆಯ ಪ್ರಕಾರ, ನಿಮ್ಮ ದೇಹವು ಈ ಮೂರರಲ್ಲಿ ಯಾವುದಾದರೂ ಸೂಚನೆಗಳನ್ನು ನೀಡುತ್ತಿದ್ದರೆ ಆಗ ನೀವು ಖಿನ್ನತೆಯಿಂದ ಬಳಲುತ್ತಿದ್ದೀರಿ ಎಂದರ್ಥ. ಖಿನ್ನತೆ ನಿಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡು ಕುಸಿಯುವಂತೆ ಮಾಡುವ ಮೊದಲು ಈ ಸರಳ ಟಿಪ್ಸ್ ಗಳನ್ನು ಪಾಲಿಸಿ ಸಂತಸವಾಗಿರಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆತ್ಮಹತ್ಯೆ ಯೋಚನೆಯನ್ನು ತಡೆಯಬಹುದೇ?

ವಿಟಮಿನ್ ಡಿ ಪಡೆಯಿರಿ:
ವಿಟಮಿನ್ ಡಿಗೆ ವಿಟಮಿನ್ ಸೂರ್ಯಪ್ರಕಾಶವೆನ್ನುತ್ತಾರೆ. ಇದರಿಂದ ನಿಮ್ಮ ಮೆದುಳು ಖಿನ್ನತೆ ನಿವಾರಣೆಯ ಹಾರ್ಮೋನುಗಳಾದ ಸಿರೊಟೋನಿನ್ ಮತ್ತು ಆಕ್ಸಿಟೋಸಿನ್ ಬಿಡುಗಡೆ ಮಾಡಿ ನಿಮ್ಮ ದೇಹದ ಮೂಡ್ ನ್ನು ಶೇ. 30ರಷ್ಟು ಹೆಚ್ಚಿಸುತ್ತದೆ. ಟೆಕ್ಸಾಸ್ ನ ಯೂನಿವರ್ಸಿಟಿಯ ಸಂಶೋಧನೆಯ ಪ್ರಕಾರ ಪೋಷಕಾಂಶಗಳನ್ನು ಪಡೆಯಲು ಬೆಳಗ್ಗಿನ ಅವಧಿ ತುಂಬಾ ಒಳ್ಳೆಯದು. ವಿಟಮಿನ್ ಡಿಯನ್ನು ಬೆಳಗ್ಗಿನ ಅವಧಿಯಲ್ಲಿ ಪಡೆದರೆ ಖಿನ್ನತೆಯ ಅಪಾಯ ಅರ್ಧದಷ್ಟು ಕಡಿಮೆಯಾಗುತ್ತದೆ.

ಕಡಿಮೆ ಅಚ್ಚುಕಟ್ಟಾಗಿರುವುದು:
ನೈರ್ಮಲ್ಯದ ಗುಣಮಟ್ಟವನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ನೀವು ಹೆಚ್ಚಿನ ಸಮಯ ಆರಾಮವಾಗಿರಬಹುದು. ಇದು ಮೆದುಳಿಗೆ ಪರಿಣಾಮ ಬೀರಬಲ್ಲ ಒತ್ತಡದ ಹಾರ್ಮೋನ್ ಕೊರ್ಟಿಸೊಲ್ ನ ಉತ್ಪತ್ತಿ ಕಡಿಮೆ ಮಾಡಲು ನೆರವಾಗುತ್ತದೆ ಮತ್ತು ಖಿನ್ನತೆ ತಡೆಯುವ ಹಾರ್ಮೋನು ಬಿಡುಗಡೆಗೆ ನೆರವಾಗುತ್ತದೆ.

ಬೆಳಕು ಇರಲಿ:
ನಿಮ್ಮ ಕಣ್ಣುಗಳು ಮತ್ತು ನೀವು ಬಳಸುವ ಜೈವಿಕ ಗಡಿಯಾರದ ಮಧ್ಯೆ ನೇರ ಸಂಬಂಧವಿದೆ. ನಿಮ್ಮ ಮನೆ ಮತ್ತು ಕೆಲಸ ಮಾಡುವ ಸ್ಥಳ ತುಂಬಾ ಪ್ರಕಾಶಮಾನವಾಗಿರುವಂತೆ ಮಾಡಲು ಹೆಚ್ಚಿನ ಪ್ರಕಾಶಮಾನವಾದ ಲೈಟ್ ಬಲ್ಪ್ ಬಳಸಿ ಅಥವಾ ಕರ್ಟೈನ್ ಸರಿಸಿ. ಮಲಗುವ ಒಂದು ಗಂಟೆಗೆ ಮೊದಲು ಲೈಟ್ ಗಳನ್ನು ಡಿಮ್ ಮಾಡಿ ಮತ್ತು ಕಂಪ್ಯೂಟರ್ ಹಾಗೂ ಇತರ ಲೈಟ್ ಗಳನ್ನು ಆಫ್ ಮಾಡಿ.

ಸಂತಸಕ್ಕಾಗಿ ಕುಣಿಯಿರಿ:
ಡಾನ್ಸ್ ಎನ್ನುವುದು ವ್ಯಾಯಾಮ ಮತ್ತು ಲಯಬದ್ಧ ಚಲನೆಗಳ ಸಂಯೋಜನೆ. ಈ ರೀತಿಯ ಚಟುವಟಿಕೆಗಳು ನಿಮ್ಮ ಮೆದುಳು ಹೆಚ್ಚಿನ, ಸ್ಥಿರವಾದ ಮನಸ್ಥಿತಿಯನ್ನು ಉಂಟುಮಾಡಬಲ್ಲ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ನಾಲ್ಕು ಸಲ ಕನಿಷ್ಠ 30 ನಿಮಿಷ ಡಾನ್ಸ್ ಮಾಡಿ.

ಸ್ವತಃ ಗಾಯಕರಾಗಿ:
ಡಾನ್ಸ್ ನ ಹೆಜ್ಜೆಗಳನ್ನು ಕಲಿಯುವಾಗ ನೀವು ನಿಮ್ಮೊಳಗೆ ಹಾಡುಗಳನ್ನು ಹಾಡಿ. ಹಾಡುವುದರಿಂದ ನಿಮ್ಮ ಮೆದುಳು ಶಾಂತ ಮತ್ತು ಮನಸ್ಥಿತಿಯನ್ನು ಉತ್ತಮಪಡಿಸುವ ಅಲ್ಪಾ ಬ್ರೈನ್ ವೇವ್ಸ್ ಗಳನ್ನು ಬಿಡುಗಡೆ ಮಾಡುತ್ತದೆ. ದಿನಂಪ್ರತಿ ಸಂಗೀತದಲ್ಲಿ ತೊಡಗಿಕೊಂಡಿರುವವರು, ತಮ್ಮ ಫೇವರಿಟ್ ಹಾಡುಗಳನ್ನು 10-15 ನಿಮಿಷ ಹಾಡುವವರು ಶೇ. 55ರಷ್ಟು ಖಿನ್ನತೆಯಿಂದ ಬೇಗನೆ ಚೇತರಿಸಿಕೊಳ್ಳುತ್ತಾರೆ ಮತ್ತು ಇದರ ಅಪಾಯವನ್ನು ಅರ್ಧದಷ್ಟು ಕಡಿಮೆ ಮಾಡುತ್ತಾರೆ ಎಂದು ಅಧ್ಯಯನಗಳು ಹೇಳಿವೆ.

ಬೆಣ್ಣೆಹಣ್ಣು ತಿನ್ನಿ:
ಸಂಶೋಧನೆಗಳ ಪ್ರಕಾರ ಪ್ರತೀದಿನ ಅರ್ಧ ಬೆಣ್ಣೆಹಣ್ಣು ತಿನ್ನುವುದರಿಂದ ಖಿನ್ನತೆಯ ಅಪಾಯವನ್ನು ಅರ್ಧದಷ್ಟು ಮತ್ತು ಅದರ ಲಕ್ಷಣವನ್ನು ಶೇ. 25ರಷ್ಟು ಕಡಿಮೆ ಮಾಡುತ್ತದೆ. ಯಾಕೆಂದರೆ ಇದರಲ್ಲಿ ನೈಸರ್ಗಿಕ ಕೊಬ್ಬು ಇದೆ. ಇದರಲ್ಲಿನ ಪೋಷಕಾಂಗಳು ಖಿನ್ನತೆ ನಿವಾರಿಸುವ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ.

ಆಹಾರಕ್ರಮದಲ್ಲಿ ಪಿಷ್ಟ ಸೇರಿಸಿ:
ಆಲೂಗಡ್ಡೆ ಮೆದುಳಿನಲ್ಲಿರುವ ಟ್ರಿಪ್ಟೊಫಾನ್ ಮಟ್ಟ ಹೆಚ್ಚಿಸುತ್ತದೆ. ಇದರಿಂದ ಖಿನ್ನತೆ ತಡೆಯುವ ಹಾರ್ಮೋನು ಸಿರೊಟೋನಿನ್ ನ್ನು ಶೇ. 54ರಷ್ಟು ನಿರ್ಮಿಸುತ್ತದೆ. ಅದು ನಿಮ್ಮ ಸೊಂಟದ ಸುತ್ತಳತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ನಿಮಗನಿಸಿದರೆ ಆಗ ನೀವು ಕಡಿಮೆ ಕೊಬ್ಬು ಮತ್ತು ಹೆಚ್ಚಿನ ಪಿಷ್ಟವಿರುವ ಆಹಾರಗಳಾದ ಬೆಣ್ಣೆ ಹಾಕದ ಪಾಪ್ ಕಾರ್ನ್ ಅಥವಾ ಸಿರಾಲ್ ಗಳನ್ನು ಬಳಸಬಹುದು.

ಚಟುವಟಿಕೆಯ ಕ್ಲಬ್ ಸೇರಿ:
ನೀವು ಓದಿರುವಂತಹ ಯಾವುದಾದರೂ ಹಳೆಯ ಕಥೆಗಳನ್ನು ನೆನಪಿಸಿಕೊಳ್ಳಿ. ಇದು ನಿಮಗೆ ತುಂಬಾ ಒಳ್ಳೆಯದು. ವಾರದಲ್ಲಿ ಒಮ್ಮೆಯಾದರೂ ಯಾವುದಾದರೂ ಗುಂಪಿನೊಂದಿಗೆ ಕಾರ್ಯಚಟುವಟಿಕೆಯಲ್ಲಿ ತೊಡಗುವ ಮಹಿಳೆ ತುಂಬಾ ಚುರುಕಾಗಿ ಮತ್ತು ಆರೋಗ್ಯವಾಗಿರುತ್ತಾರೆ.

ಮಲಗುವ ಸಮಯ ಬದಲಾಯಿಸಿ:
ಮೇಲಿನವುಗಳಿಗೆ ಹೋಲಿಸಿದರೆ ರಾತ್ರಿಯ ಜೀವನ ನಿಮ್ಮ ಖಿನ್ನತೆಯನ್ನು ನಾಲ್ಕು ಪಟ್ಟು ಹೆಚ್ಚು ಮಾಡುತ್ತದೆ. ರಾತ್ರಿ ತುಂಬಾ ತಡವಾಗಿ ಮಲಗುವುದು ಮತ್ತು ಬೆಳಗ್ಗೆ ಸೂರ್ಯನ ಬೆಳಕು ಮೂಡಿದ ಬಳಿಕವೂ ಮಲಗಿರುವುದು ನಿಮ್ಮ ಜೈವಿಕ ಗಡಿಯಾರಕ್ಕೆ ಸಮಸ್ಯೆಯುಂಟು ಮಾಡುತ್ತದೆ. ಇದರಿಂದ ನಿಮ್ಮ ಮೆದುಳು ಖಿನ್ನತೆ ತಡೆಯುವ ಹಾರ್ಮೋನುಗಳನ್ನು ತಯಾರಿಸುವ ಸಾಮರ್ಥ್ಯವನ್ನು ಕಳಕೊಳ್ಳುತ್ತದೆ. 11 ಗಂಟೆಗೆ ಮೊದಲು ಮಲಗಿ ಮತ್ತು ಒಂದು ವಾರದಲ್ಲಿ ಖಿನ್ನತೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

ಮಸಾಜ್ ಮಾಡಿಸಿಕೊಳ್ಳಿ:
ನಿಯಮಿತವಾಗಿ ಮಸಾಜ್ ಮಾಡುವುದಿಂದ ಬಲದ ಬದಿಯಲ್ಲಿ ಬ್ರೈನ್ ವೇವ್ ಚಟುವಟಿಕೆ ಆರಂಭವಾಗುತ್ತದೆ. ಇದು ನಕಾರಾತ್ಮಕ ಭಾವನೆ ತಡೆಯುತ್ತದೆ ಮತ್ತು ಧನಾತ್ಮಕ ಭಾವನೆಯನ್ನು ಉಂಟುಮಾಡುತ್ತದೆ. ವಾರದಲ್ಲಿ ಕೇವಲ 20 ನಿಮಿಷ ಮಸಾಜ್ ಮಾಡಿಕೊಂಡರೆ ನಿಮ್ಮ ಮೆದುಳು ಉತ್ತಮ ಭಾವನೆ ಮೂಡಿಸುವ ಎಂಡ್ರೋಫಿನ್ಸ್ ನಂತಹ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ನಿಮ್ಮ ನೋವು ಮತ್ತು ದೈಹಿಕ ಸೂಚನೆಗಳನ್ನು ಶೇ. 25ರಷ್ಟು ಕಡಿಮೆ ಮಾಡುತ್ತದೆ.



Click it and Unblock the Notifications