ಏಲಕ್ಕಿಯ ಚಮತ್ಕಾರೀ ಪ್ರಯೋಜನಗಳು

ನಿಮ್ಮ ದೈನಂದಿನ ಆಹಾರದಲ್ಲಿ ಇದರ ಬಳಕೆಯನ್ನು ಕೇವಲ ಪರಿಮಳಕ್ಕಾಗಿ ಮಾತ್ರವಲ್ಲ ದೈಹಿಕ ಸ್ವಾಸ್ಥ್ಯಕ್ಕೂ ಏಲಕ್ಕಿ ಪರಿಣಾಮಕಾರಿಯಾಗಿದೆ. ಸಿಪ್ಪೆಯಿಂದ ಆವೃತವಾಗಿರುವ ಈ ಸಾಂಬಾರು ಪದಾರ್ಥ ಮಾಡುವ ಜಾದೂ ನಂಬಿಕೆಗೆ ಮಿಗಿಲಾದುದು. ಇದರಲ್ಲಿರುವ ಸಿಟ್ರಸಿ ಖಾರ ರೋಗವನ್ನು ಹೊಡೆದೋಡಿಸುವ ಚೈತನ್ಯವನ್ನು ದೇಹಕ್ಕೆ ನೀಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಣ್ಣಲ್ಲಿ ನೀರು ತರಿಸಿದರೂ ಆರೋಗ್ಯ ಕಾಪಾಡುವ ಈರುಳ್ಳಿ

ಭಾರತದ ನಿತ್ಯಹರಿದ್ವರ್ಣ ಕಾಡುಗಳಿಗೆ ಏಲಕ್ಕಿ ಸ್ಥಳೀಯವಾಗಿದೆ. ಭಾರತೀಯ ಅಡುಗೆಯಲ್ಲಿ ತನ್ನ ಚಮತ್ಕಾರವನ್ನು ತೋರುವ ಈ ಪುಟ್ಟ ಸಾಂಬಾರು ಪದಾರ್ಥ, ಆಯುರ್ವೇದದಲ್ಲಿ ದಿವ್ಯೌಷಧವಾಗಿದೆ ಎಂದರೆ ನೀವು ನಂಬಲೇಬೇಕು.

ಬಾಯಿ ಹುಣ್ಣು, ಜೀರ್ಣಕ್ರಿಯೆ ಸಮಸ್ಯೆ, ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಏಲಕ್ಕಿ ಸಿದ್ಧಹಸ್ತವಾಗಿದೆ. ಇದರಲ್ಲಿನ ಸುಗಂಧವು ಬಾಯಿಯ ಸ್ವಚ್ಛತೆಗೂ ಸಹಕಾರಿ. ಇದರ ಇನ್ನೂ ಕೆಲವು ವಿಶೇಷ ಗುಣಗಳನ್ನು ತಿಳಿದುಕೊಳ್ಳೋಣ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯ ಉತ್ತಮಪಡಿಸುವಲ್ಲಿ ನುಗ್ಗೆ ಸೊಪ್ಪಿನ ಮಹತ್ವ

ಜೀರ್ಣ ಕ್ರಿಯೆಯನ್ನು ಸುಲಭಗೊಳಿಸುತ್ತದೆ:

ಜೀರ್ಣ ಕ್ರಿಯೆಯನ್ನು ಸುಲಭಗೊಳಿಸುತ್ತದೆ:

ಏಲಕ್ಕಿಯು ಹೊಟ್ಟೆಯುಬ್ಬರವನ್ನು ನಿವಾರಿಸುವ ಗುಣವನ್ನು ಹೊಂದಿದ್ದು ಇದು ಚಯಪಚಯ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ, ಅಲ್ಲದೆ ಹೊಟ್ಟೆಯಲ್ಲಿ ಆಗಾಗ ಕಂಡುಬರುವ ಉರಿಯನ್ನು ಶಮನಗೊಳಿಸುವಲ್ಲಿ ಸಹಕಾರಿಯಾಗಲಿದೆ, ಜೊತೆಗೆ ಹುಳಿತೇಗು ಮತ್ತು ವಾಂತಿಯ ಲಕ್ಷಣಗಳ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಏಲಕ್ಕಿಯು ಹೊಟ್ಟೆಯಲ್ಲಿನ ವಾಯು ಹಾಗೂ ನೀರಿನ ಅಂಶ/ಗುಣಗಳನ್ನು ಕಡಿಮೆ ಮಾಡಿ, ಆಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಜೀರ್ಣಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ತಲೆನೋವಿನಿಂದ ಉಪಶಮನ:

ತಲೆನೋವಿನಿಂದ ಉಪಶಮನ:

ತಲೆನೋವಿನಿಂದ ತ್ವರಿತ ಉಪಶಮನವನ್ನು ನೀಡುತ್ತದೆ. (ಏಲಕ್ಕಿಯ ಪೇಸ್ಟ್ ಅನ್ನು ನೆತ್ತಿಗೆ ಹಚ್ಚಿಕೊಳ್ಳುವುದರಿಂದ ಪರಿಹಾರ ದೊರೆಯುತ್ತದೆ.

ಹೃದಯಾಘಾತದ ವಿರುದ್ಧ ರಕ್ಷಣೆ:

ಹೃದಯಾಘಾತದ ವಿರುದ್ಧ ರಕ್ಷಣೆ:

ಹೃದಯಾಘಾತದ ವಿರುದ್ಧ ರಕ್ಷಣೆಯನ್ನು ನೀಡುವಲ್ಲಿ ಏಲಕ್ಕಿ ಸಹಕಾರಿ. ಮನೆಯಿಂದ ಹೊರಹೋಗುವ ಸಂದರ್ಭದಲ್ಲಿ ಏಲಕ್ಕಿಯನ್ನು ಜಗಿಯುವುದು ಉತ್ತಮ.

ಕೆಫೀನ್ ವಿರುದ್ಧ ರಕ್ಷಣೆ:

ಕೆಫೀನ್ ವಿರುದ್ಧ ರಕ್ಷಣೆ:

ಕೆಫೀನ್ ವಿರುದ್ಧ ಹೋರಾಡಬಲ್ಲ ಪರಿಷ್ಕರಣ ಮಸಾಲೆ ಏಲಕ್ಕಿಯಾಗಿದೆ. (ಕೆಫೇನ್ ಅನ್ನು ನಿರ್ವಷೀಕರಿಸುತ್ತದೆ).

"ತ್ರಿದೋಷಕ":

"ತ್ರಿದೋಷಕ" ಎಂಬ ಹೆಸರಿರುವ ಮೂರು ದೋಷಗಳೆಲ್ಲವನ್ನೂ ನಿಯಂತ್ರಿಸಲು ಏಲಕ್ಕಿ ಸಹಕಾರಿ. ಏಲಕ್ಕಿಯ ಸಣ್ಣ ಪ್ರಮಾಣ ಕಫದಿಂದ ಮುಕ್ತಿ ನೀಡುತ್ತದೆ.

ಅಸ್ತಮಾ ವಿರುದ್ಧ ಹೋರಾಡುತ್ತದೆ:

ಅಸ್ತಮಾ ವಿರುದ್ಧ ಹೋರಾಡುತ್ತದೆ:

ಅಸ್ತಮಾ ಮತ್ತು ನಾಯಿಕೆಮ್ಮುವಿನ ನಿವಾರಣೆ ಏಲಕ್ಕಿಯಿಂದ ಸಾಧ್ಯ. ಏಲಕ್ಕಿ ಹುಡಿ ಮತ್ತು ಜೇನನ್ನು ಸೇರಿಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣದ ನಿಯಮಿತ ಸೇವನೆಯು ನಾಯಿಕೆಮ್ಮು ಮತ್ತು ಅಸ್ತಮಾದಿಂದ ಪರಿಹಾರ ನೀಡುತ್ತದೆ.

ಕಾಲು ಸೆಳೆತದಿಂದ ಪರಿಹಾರ:

ಕಾಲು ಸೆಳೆತದಿಂದ ಪರಿಹಾರ:

ಸೆಳೆತದ ವಿರುದ್ಧ ಹೋರಾಡುವ ಉತ್ತಮ ಸಾಮರ್ಥ್ಯ ಏಲಕ್ಕಿಗಿದೆ ಆದ್ದರಿಂದ ಸೆಳೆತ ಮತ್ತು ನಡುಕದ ಸಮಯದಲ್ಲಿ ಇದು ಹೆಚ್ಚು ಸಹಕಾರಿಯಾಗಿದೆ.

ಗ್ಯಾಸ್ಟ್ರಿಕ್‌ದಿಂದ ಶಮನ:

ಗ್ಯಾಸ್ಟ್ರಿಕ್‌ದಿಂದ ಶಮನ:

ಗ್ಯಾಸ್ಟ್ರಿಕ್ ಅಂಶವಿರುವ ಜ್ಯೂಸ್‌ಗಳ ಪ್ರಕ್ರಿಯೆಯ ಉತ್ತೇಜನ ಮತ್ತು ನಿಯಂತ್ರಣಕ್ಕೆ ಸಹಕಾರಿ ಮತ್ತು ಹೊಟ್ಟೆಯ ಗ್ಯಾಸ್‌ಗಳನ್ನು ಇದು ದೂರಮಾಡುತ್ತದೆ.

ಹಲ್ಲಿನ ವಸಡಿನದಕ್ಕೆ ಸಹಕಾರಿ:

ಹಲ್ಲಿನ ವಸಡಿನದಕ್ಕೆ ಸಹಕಾರಿ:

ಹಲ್ಲಿನ ವಸಡಿನ ತೊಂದರೆ ಮತ್ತು ಇನ್‌ಫೆಕ್ಷನ್‌ನಿಂದ ರಕ್ಷಿಸುತ್ತದೆ. ದೇಹದ ನಿರ್ವಿಶೀಕರಣವನ್ನು ಏಲಕ್ಕಿ ಬೆಂಬಲಿಸುತ್ತದೆ ಮತ್ತು ಸಂಪೂರ್ಣ ದೇಹವನ್ನು ಶೋಧಿಸಲು ಸಹಾಯ ಮಾಡುತ್ತದೆ.

ಮೂತ್ರ ಸಮಸ್ಯೆಯನ್ನು ನಿವಾರಿಸುತ್ತದೆ:

ಮೂತ್ರ ಸಮಸ್ಯೆಯನ್ನು ನಿವಾರಿಸುತ್ತದೆ:

ಮೂತ್ರ ಸಮಸ್ಯೆಯ ಪರಿಹಾರವನ್ನು ನಿವಾರಿಸುವಲ್ಲಿ ಏಲಕ್ಕಿಯ ಪಾತ್ರ ಹಿರಿದು. ನೆಲ್ಲಿಕಾಯಿ, ಮೊಸರು ಅಥವಾ ಜೇನಿನೊಂದಿಗೆ ಏಲಕ್ಕಿ ಬೆರೆಸಿ ತಿನ್ನಬಹುದು.

ಶ್ವಾಸನಾಳವನ್ನು ಬೆಚ್ಚಗಿರುಸುತ್ತದೆ:

ಶ್ವಾಸನಾಳವನ್ನು ಬೆಚ್ಚಗಿರುಸುತ್ತದೆ:

ಏಲಕ್ಕಿ ಶ್ವಾಸನಾಳವನ್ನು ಬೆಚ್ಚಗಾಗಿಸುತ್ತದೆ ಮತ್ತು ಇದರಿಂದ ಶ್ವಾಸಕೋಶದ ಪರಿಚಲನೆ ಹೆಚ್ಚಾಗುತ್ತದೆ. ಏಲಕ್ಕಿಯು ಶ್ವಾಸಕೋಶದಲ್ಲಿ ರಕ್ತದ ಸರಬರಾಜನ್ನು ಹೆಚ್ಚಿಸಿ ತನ್ಮೂಲಕ ಉಸಿರಾಟದ ಸಮಸ್ಯೆಗಳಾದ ಅಸ್ತಮಾ, ನೆಗಡಿ, ಮತ್ತು ಕೆಮ್ಮು ಇವುಗಳನ್ನು ನಿವಾರಿಸುತ್ತದೆ.

Story first published: Thursday, February 27, 2014, 16:42 [IST]
X
Desktop Bottom Promotion