ಹೊಟ್ಟೆ ಕೊಬ್ಬು ಕರಗಿಸಲು ಹತ್ತು ಸಲಹೆಗಳು

By Arpitha Rao

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದಿರುವವರಲ್ಲಿ ಮೊದಲು ಮಾಡುವ ದೂರು ಎಂದರೆ ಹೊಟ್ಟೆ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬುದು. ಹೊಟ್ಟೆಯ ಉಬ್ಬುವಿಕೆಯನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಾಕಷ್ಟು ಊಹಾಪೋಹಗಳು ಎಲ್ಲೆಡೆ ನಡೆಯುತ್ತಿರುತ್ತವೆ.

ಈ ಕೆಳಗೆ ನೀಡಿರುವ ಹತ್ತು ಸಲಹೆಗಳು ನೀವು ಸುಲಭವಾಗಿ ಹೊಟ್ಟೆಯ ಕೊಬ್ಬನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸುತ್ತವೆ.ಇದನ್ನು ನೀವು ಪಾಲಿಸಿದಲ್ಲಿ ಯಶಸ್ಸು ನಿಮ್ಮದಾಗುವುದರಲ್ಲಿ ಆಶ್ಚರ್ಯವಿಲ್ಲ.

ಹೊಟ್ಟೆ ಬೊಜ್ಜು ಕರಗಿಸಲು ದಿ ಬೆಸ್ಟ್ ಟಿಪ್ಸ್

1.ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಇತರ ಭಾಗಗಳಿಗಿಂತ ಹೆಚ್ಚು ಕೊಬ್ಬು ಶೇಖರಣೆ ಆಗಿರುತ್ತದೆ:

1.ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಇತರ ಭಾಗಗಳಿಗಿಂತ ಹೆಚ್ಚು ಕೊಬ್ಬು ಶೇಖರಣೆ ಆಗಿರುತ್ತದೆ:

ಮಾನವ ದೇಹದಲ್ಲಿ ಶೇಖರವಾಗಿರುವ ಕೊಬ್ಬು ಯಾವ ರೀತಿ ಶೇಖರಗೊಂಡಿದೆ ಎಂಬುದಕ್ಕಿಂತ ಯಾವ ಭಾಗದಲ್ಲಿ ಕೊಬ್ಬು ಶೇಖರಗೊಂಡಿದೆ ಎಂಬುದು ಹೆಚ್ಚು ಅಪಾಯಕಾರಿ ಎನ್ನಬಹುದು.

ಹೊಟ್ಟೆಯಲ್ಲಿ ಶೇಖರಗೊಂಡಿರುವ ಕೊಬ್ಬು ಹೆಚ್ಚು ಅಪಾಯಕಾರಿ ಏಕೆಂದರೆ ಅದು ಇತರ ಪ್ರಮುಖ ಅಂಗಗಳ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುತ್ತದೆ.ಹೊಟ್ಟೆಯ ಸುತ್ತಲಿರುವ ಇತರ ಅಂಗಗಳ ಮೇಲೆ ಹೊಟ್ಟೆಯಲ್ಲಿ ಶೇಖರಗೊಳ್ಳುವ ಅಧಿಕ ಕೊಬ್ಬು ಕೆಟ್ಟ ಪರಿಣಾಮ ಬೀರಬಹುದು.

2. ದೀರ್ಘಕಾಲ ಕುಳಿತುಕೊಂಡಿದ್ದರೆ ಹೊಟ್ಟೆಯಲ್ಲಿ ಕೊಬ್ಬು ಶೇಖರಗೊಳ್ಳುತ್ತದೆ:

2. ದೀರ್ಘಕಾಲ ಕುಳಿತುಕೊಂಡಿದ್ದರೆ ಹೊಟ್ಟೆಯಲ್ಲಿ ಕೊಬ್ಬು ಶೇಖರಗೊಳ್ಳುತ್ತದೆ:

ಜಡತ್ವ ಹೊಂದಿರುವುದೇ ಅಮೇರಿಕಾದಲ್ಲಿ ಸಾಕಷ್ಟು ಜನರು ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳಲು ಈಗ ಕಷ್ಟಪಡುತ್ತಿರುವುದಕ್ಕೆ ಮುಖ್ಯ ಕಾರಣ. ಅಮೆರಿಕಾದಲ್ಲಿ ಸಾಕಷ್ಟು ಜನರು ಕೇವಲ ಟಿವಿ ನೋಡುತ್ತಾ ಕುಳಿತುಕೊಳ್ಳುತ್ತಾರೆ ಅಥವಾ ಟಿವಿ ನೋಡಿ ಮುಗಿದ ನಂತರ ಕುಳಿತು ಸ್ನಾಕ್ ತಿನ್ನುವುದು ಕೂಡ ತೂಕ ಹೆಚ್ಚಳಕ್ಕೆ ಮುಖ್ಯ ಕಾರಣ. ಒಂದು ದಿನದಲ್ಲಿ ಅರ್ಧದಷ್ಟು ಟಿವಿ ನೋಡುವುದನ್ನು ಕಡಿಮೆ ಮಾಡಿ 100 ಕ್ಯಾಲೋರಿಯಷ್ಟು ಆಹಾರ ಸೇವನೆ ಕಡಿಮೆ ಮಾಡಿದರೆ 35 ದಿನಗಳಲ್ಲಿ ಒಂದು ಪೌಂಡ್ ನಷ್ಟು ತೂಕ ಕಡಿಮೆ ಮಾಡಿಕೊಳ್ಳಬಹುದು. ಮನೆಯಿಂದ ಹೊರಹೊರಟು ಪ್ರತಿದಿನ ವಾಕಿಂಗ್ ಮಾಡುವುದರಿಂದ ಹೊಟ್ಟೆಯ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ವಾರದಲ್ಲಿ 3 ಗಂಟೆ ಬ್ರಿಸ್ಕ್ ವಾಕ್ ಮಾಡುವುದರಿಂದ ಹೊಟ್ಟೆ ತೂಕ ಕಡಿಮೆ ಮಾಡಿಕೊಳ್ಳಬಹುದು.

3.ಒತ್ತಡ ಹೊಟ್ಟೆ ಕೊಬ್ಬನ್ನು ಇನ್ನಷ್ಟು ಹೆಚ್ಚಿಸುತ್ತದೆ:

3.ಒತ್ತಡ ಹೊಟ್ಟೆ ಕೊಬ್ಬನ್ನು ಇನ್ನಷ್ಟು ಹೆಚ್ಚಿಸುತ್ತದೆ:

ಪ್ರತಿಯೊಬ್ಬರ ಜೀವನದಲ್ಲೂ ಒತ್ತಡ ಇದ್ದೇ ಇರುತ್ತದೆ.ಆದರೆ ಅದರಿಂದ ಹೇಗೆ ಹೊರಬರುತ್ತೀರಿ ಎಂಬುದೇ ಮುಖ್ಯ.ದೇಹ ಭಾವನಾತ್ಮಕ ಒತ್ತಡಕ್ಕೆ ಒಳಗಾದಾಗ ಕೋರ್ಟಿಸೋಲ್ ಎಂಬ ಹಾರ್ಮೊನೊಂದನ್ನು ಉತ್ಪತ್ತಿ ಮಾಡುತ್ತದೆ ಇದು ಹಸಿವು ಹೆಚ್ಚುವಂತೆ ಮಾಡಿ ಹೆಚ್ಚು ತಿನ್ನುವಂತೆ ಮಾಡುತ್ತದೆ.ಜನರು ಈ ರೀತಿ ಹೆಚ್ಚು ಹಸಿವಾದಾಗ ಹೆಚ್ಚು ಕ್ಯಾಲೋರಿ ಇರುವ ಆಹಾರವನ್ನು ಹೊಟ್ಟೆ ತುಂಬಿಸಿಕೊಳ್ಳಲು ಹೆಚ್ಚು ಹೆಚ್ಚು ತಿನ್ನುತ್ತಾರೆ.

ಇನ್ನು ಮುಂದೆ ನಿಮಗೆ ಹೆಚ್ಚು ಒತ್ತಡವಾದಾಗ ಕಣ್ಣು ಮುಚ್ಚಿಕೊಂಡು ನಿಮ್ಮ ಉಸಿರಾಟವನ್ನು ಆಲಿಸಿ.ಜೀವನದಲ್ಲಿ ಸ್ವಲ್ಪ ಹಾಸ್ಯವಿರಲಿ.ಒಳ್ಳೆಯ ರೀತಿಯಲ್ಲಿ ನಗುವುದರಿಂದ ರಕ್ತ ಸಂಚಲನ ಸರಿಯಾಗಿ ಆಗುತ್ತದೆ ಮತ್ತು ದೇಹ ವಿಶ್ರಾಂತಿ ಪಡೆದು ಒತ್ತಡವನ್ನು ಕಡಿಮೆ ಮಾಡುತ್ತದೆ ಇದರಿಂದ ಹೆಚ್ಚು ಹಸಿವಾಗುವುದು ಕೂಡ ನಿಲ್ಲುತ್ತದೆ.

4.ಹೊಟ್ಟೆಗೆ ಮಾಡುವ ವ್ಯಾಯಾಮದಿಂದ ಕೊಬ್ಬು ಕರಗುವುದಿಲ್ಲ:

4.ಹೊಟ್ಟೆಗೆ ಮಾಡುವ ವ್ಯಾಯಾಮದಿಂದ ಕೊಬ್ಬು ಕರಗುವುದಿಲ್ಲ:

ಸಿಟ್ ಅಪ್ ಅಥವಾ ಇನ್ನಿತರ ಬೆಲ್ಲಿ ವ್ಯಾಯಾಮಗಳನ್ನು ಮಾಡುವುದರಿಂದ ನಿಮಗೆ ಮೊದಲಿನ ರೀತಿಯ ಹೊಟ್ಟೆಯನ್ನು ತರಿಸುತ್ತೀವಿ ಎಂಬ ಸಾಕಷ್ಟು ಜಾಹೀರಾತುಗಳಿಗೆ ನೀವು ಮರುಳಾಗಿರಬಹುದು.

ಆದರೆ ಅನದೃಷ್ಟವಶಾತ್ ಹೀಗೆ ಆಸೆ ಹೊತ್ತು ಸಾಕಷ್ಟು ಹಣ ಖರ್ಚು ಮಾಡುವವರ ಕನಸು ಕೇವಲ ಕನಸಾಗಿಯೇ ಇರುತ್ತದೆ.ತಕ್ಷಣ ಹೊಟ್ಟೆ ಕೊಬ್ಬು ಕರಗಿಸುವುದು ಅಸಾಧ್ಯ,ಜೊತೆಗೆ ಹೊಟ್ಟೆ ಕೊಬ್ಬು ಕರಗಿಸಲು ಇರುವ ವ್ಯಾಯಮಗಳು ದೇಹದ ಇತರ ಸ್ನಾಯುಗಳಿಗೆ ಹೆಚ್ಚಿನ ಹೊಡೆತ ನೀಡುತ್ತದೆ. ಸಿಟ್ ಅಪ್ ಮತ್ತು ಕ್ರಂಚ್ ಗಳು ಹೊಟ್ಟೆಯ ಸ್ನಾಯುಗಳನ್ನು ಬಲಯುತವಾಗಿ ಮಾಡುತ್ತದೆ ಆದರೆ ಅದು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಕರಿಸುವುದಿಲ್ಲ.ಹೊಟ್ಟೆಯ ಕೊಬ್ಬು ಮತ್ತು ದೇಹದ ಅಧಿಕ ಕೊಬ್ಬನ್ನು ಕರಗಿಸುವಲ್ಲಿ ಸಹಕರಿಸುವ ಒಂದೇ ಒಂದು ವ್ಯಾಯಾಮ ಎಂದರೆ ಕಾರ್ಡಿಯೋ ವ್ಯಾಯಾಮಗಳು.

5.ಹೊಟ್ಟೆ ಕೊಬ್ಬು ಕರಗಿಸಲು ತೀವ್ರವಾದ ವ್ಯಾಯಾಮ ಮಾಡಬೇಕು ಎಂಬ ಅನಿವಾರ್ಯವಿಲ್ಲ:

5.ಹೊಟ್ಟೆ ಕೊಬ್ಬು ಕರಗಿಸಲು ತೀವ್ರವಾದ ವ್ಯಾಯಾಮ ಮಾಡಬೇಕು ಎಂಬ ಅನಿವಾರ್ಯವಿಲ್ಲ:

ದೇಹದ ಕೊಬ್ಬನ್ನು ಕರಗಿಸಲು ಮತ್ತು ತೆಳುವಾಗಿ ಕಾಣಲು ಮಿಲಿಟರಿ ರೀತಿಯ ವ್ಯಾಯಾಮಗಳನ್ನು ಮಾಡುವುದನ್ನು ಟಿವಿಗಳಲ್ಲಿ ತೋರಿಸಿಕೊಳ್ಳುವುದನ್ನು ನೀವು ನೋಡಿರಬಹುದು.ಆದರೆ ನಿಜ ಏನೆಂದರೆ ಹೊಟ್ಟೆಯ ತೂಕವನ್ನು ಕರಗಿಸಲು ತೀವ್ರತರವಾದ ವ್ಯಾಯಾಮಗಳನ್ನು ಮಾಡುವ ಅಗತ್ಯವಿಲ್ಲ.ಅದರ ಬದಲು ವಾಕಿಂಗ್,ಜಾಗಿಂಗ್,ರನ್ನಿಂಗ್, ಮತ್ತಿತರ ಕಾರ್ಡಿಯೋ ಸಂಬಂಧಿಸಿದ ಜಿಮ್ ನಲ್ಲಿ ಒದಗುವ ವ್ಯಾಯಾಮಗಳು ಹೊಟ್ಟೆ ಕೊಬ್ಬು ಕರಗಿಸಲು ಸೂಕ್ತ ವಿಧಾನ.

6.ಕ್ಯಾಲೋರಿ ಎಣಿಸುವಿಕೆ ಪರಿಣಾಮಕಾರಿ ವಿಧಾನವಲ್ಲ:

6.ಕ್ಯಾಲೋರಿ ಎಣಿಸುವಿಕೆ ಪರಿಣಾಮಕಾರಿ ವಿಧಾನವಲ್ಲ:

ಸಾಕಷ್ಟು ಡಯೆಟ್ ವಿಧಾನಗಳು ಕ್ಯಾಲೋರಿ ನೋಡಿ ಆಹಾರ ತೆಗೆದುಕೊಳ್ಳುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು ಎನ್ನುತ್ತದೆ ಆದರೆ ಇದು ಅಸಾಧ್ಯ.

ಪ್ರತಿದಿನ ನೀವು ಸೇವಿಸುವ ಆಹಾರದ ಪ್ರಮಾಣ ಕಡಿಮೆ ಮಾಡುವುದರಿಂದ ಕೊಬ್ಬು ಕರಗುವುದಿಲ್ಲ.ನೀವು ಎಷ್ಟು ತಿನ್ನುತ್ತೀರಿ ಎಂಬುದಕ್ಕಿಂತ ಯಾವ ರೀತಿಯ ಆಹಾರ ತಿನ್ನುತ್ತೀರಿ ಎಂಬುದು ಬಹಳ ಮುಖ್ಯ.

7.ಆಹಾರ ಕಡಿಮೆ ಮಾಡಿದರೆ ಹೊಟ್ಟೆ ಕೊಬ್ಬು ಕರಗುವುದಿಲ್ಲ:

7.ಆಹಾರ ಕಡಿಮೆ ಮಾಡಿದರೆ ಹೊಟ್ಟೆ ಕೊಬ್ಬು ಕರಗುವುದಿಲ್ಲ:

ಜನರು ತಮ್ಮ ತೂಕವನ್ನು ಕಳೆದುಕೊಳ್ಳಲೇಬೇಕು ಎಂದು ಹಠ ತೊಟ್ಟು ಕ್ಯಾಲೋರಿ ಅಹಾರಗಳನ್ನೆಲ್ಲ ಒಂದು ಪಟ್ಟಿ ಮಾಡಿಬಿಡುತ್ತಾರೆ. ಆದರೆ ನಿಜ ಏನೆಂದರೆ ಆಹಾರದಲ್ಲಿ ಆರೋಗ್ಯಕರ ಕೊಬ್ಬು ಮತ್ತು ಅನಾರೋಗ್ಯಕರ ಕೊಬ್ಬು ಎಂಬ ಎರಡು ವಿಧಗಳಿರುತ್ತವೆ ಮತ್ತು ಆರೋಗ್ಯಕರ ಕೊಬ್ಬು ನಿಮ್ಮ ದೇಹವನ್ನು ಅರೋಗ್ಯಯುತವಾಗಿ ಕಾಪಾಡಲು ಅತಿ ಅವಶ್ಯಕ. ಹೇಗೆ ಕ್ಯಾಲೋರಿ ತೆಗೆದುಕೊಳ್ಳುವಿಕೆಯಲ್ಲಿ ಖಡಿತ ಮಾಡಿದರೆ ಪರಿಣಾಮ ಬೀರುವುದಿಲ್ಲವೋ ಹಾಗೆಯೇ ಆಹಾರ ತೆಗೆದುಕೊಳ್ಳುವಿಕೆಯಲ್ಲಿ ಖಡಿತ ಮಾಡಿದರೆ ಹೊಟ್ಟೆಯ ಕೊಬ್ಬು ಕರಗುವುದಿಲ್ಲ. ಮೆಡಿಟರೇನಿಯನ್ ಆಹಾರ ಪದ್ಧತಿ ಆರೋಗ್ಯಯುತ ಆಹಾರ ಪದ್ಧತಿ ಎಂದು ಜನಪ್ರಿಯ ಹೊಂದಿದೆ.ಅವರ ಆಹಾರ ಪದ್ಧತಿಯಲ್ಲಿ ಅವರು ಹೆಚ್ಚು ನಟ್ಸ್ ಮತ್ತು ಆಲಿವ್ ಎಣ್ಣೆ ಬಳಸುತ್ತಾರೆ.

8.ಕೆಲವು ಆಹಾರಗಳು ಹೊಟ್ಟೆ ಕೊಬ್ಬನ್ನು ಕರಗಿಸಬಹುದು:

8.ಕೆಲವು ಆಹಾರಗಳು ಹೊಟ್ಟೆ ಕೊಬ್ಬನ್ನು ಕರಗಿಸಬಹುದು:

ಕೆಲವು ಆಹಾರಗಳು ಹೊಟ್ಟೆಯಲ್ಲಿ ಕೊಬ್ಬು ಶೇಖರಗೊಳ್ಳುವುದನ್ನು ತಡೆಯುವ ಗುಣವನ್ನು ಹೊಂದಿರುತ್ತದೆ.

ಉದಾರಹಣೆಗೆ :- ಆಪಲ್ ಸೈಡರ್ ವಿನೆಗರ್:- ಒಂದು ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಒಂದು ಅಥವಾ ಎರಡು ಟೀ ಚಮಚದಷ್ಟು ಆಪಲ್ ಸೈಡರ್ ವಿನೆಗರ್ ಅನ್ನು ಪ್ರತಿದಿನ ಸೇವಿಸಲು ಹೇಳಲಾಗಿತ್ತು.ಪ್ಲಸಿಬೋ ಬದಲಿಗೆ ವಿನೆಗರ್ ಬಳಸಿದವರಲ್ಲಿ ಹೆಚ್ಚು ಕೊಬ್ಬು ಪಸರಿಸಿರುವುದು ಕೊನೆಯಲ್ಲಿ ಕಂಡು ಬಂತು. ಹಾಗೆಯೇ ಗ್ರೀನ್ ಟೀ ಯಲ್ಲಿ ಕೂಡ ದೇಹದ ಅಧಿಕ ಕೊಬ್ಬನ್ನು ಕರಗಿಸುವ ಶಕ್ತಿ ಇದೆ ಎಂದು ಕೂಡ ಸಾಬೀತಾಗಿದೆ.

9.ಹೊಟ್ಟೆಯ ಕೊಬ್ಬು ಕರಗುವಿಕೆ ಇಂಚಿನಲ್ಲಿರಬೇಕು,ಪೌಂಡ್ ನಲ್ಲಲ್ಲ:

9.ಹೊಟ್ಟೆಯ ಕೊಬ್ಬು ಕರಗುವಿಕೆ ಇಂಚಿನಲ್ಲಿರಬೇಕು,ಪೌಂಡ್ ನಲ್ಲಲ್ಲ:

ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಕೇಳಿ ನೋಡಿ, ಅಳತೆ ಸ್ಕೇಲ್ ಅವರ ದೊಡ್ಡ ಶತ್ರು ಎಂಬಂತೆ ನೋಡುತ್ತಾರೆ. ಪ್ರತಿದಿನ ಅಳತೆ ನೋಡಿ ತೂಕ ಕಡಿಮೆ ಆಗದಿರುವುದು ಕಂಡು ಅವರ ಮೂಡ್ ಕೆಟ್ಟಿರುತ್ತದೆ.ಆದರೆ ಹೊಟ್ಟೆ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರು ತೂಕ ಕೆಜಿ ಅಥವಾ ಪೌಂಡ್ ಗಳಲ್ಲಿ ನೋಡುವ ಬದಲು ಹೊಟ್ಟೆಯ ಸುತ್ತಳತೆಯನ್ನು ಇಂಚು ಎಷ್ಟು ಕಡಿಮೆ ಆಗಿದೆ ಎಂದು ನೋಡಬೇಕು. ಟೇಪ್ ತೆಗೆದುಕೊಂಡು ಹೊಟ್ಟೆಯ ಸುತ್ತ ಹಿಡಿದು ಅಳತೆ ಬರೆದಿಟ್ಟುಕೊಳ್ಳಿ ಮತ್ತು ಪ್ರತಿದಿನ ಅದನ್ನು ಕಡಿಮೆ ಮಾಡಲು ಪ್ರಯತ್ನಿಸಿ.ದಿನಗಳು,ತಿಂಗಳುಗಳು ಕಳೆದ ನಂತರ ಅಳತೆಯನ್ನು ನೋಡಿ ಮತ್ತು ಕಡಿಮೆ ಆಗಿರುವುದನ್ನು ಗಮನಿಸಬಹುದು.

10.ನೀವು ಹೆಚ್ಚು ತಿನ್ನಬಹುದು ಜೊತೆಗೆ ಹೊಟ್ಟೆಯ ತೂಕ ಕಡಿಮೆ ಮಾಡಿಕೊಳ್ಳಬಹುದು:

10.ನೀವು ಹೆಚ್ಚು ತಿನ್ನಬಹುದು ಜೊತೆಗೆ ಹೊಟ್ಟೆಯ ತೂಕ ಕಡಿಮೆ ಮಾಡಿಕೊಳ್ಳಬಹುದು:

ನೀವು ಆಗಾಗ ತಿನ್ನುತ್ತ ಇರುವುದರಿಂದ ಹೊಟ್ಟೆಯ ಕೊಬ್ಬು ಕರಗಿಸಬಹುದು.ನೀವು ಹೊಟ್ಟೆ ಕರಗಿಸಲು ಬೇರೆ ರೀತಿಯ ಆಹಾರ ಪದ್ಧತಿ ಪ್ರಾರಂಭಿಸಿರದಿದ್ದಲ್ಲಿ ಇದನ್ನು ಮಾಡಿನೋಡಿ. ಬಹುಶಃ ನೀವು ಮೊದಲಿನಿಂದಲೂ ಬೆಳಗಿನ ತಿಂಡಿ,ಮದ್ಯಾನ್ಹದ ಊಟ,ಮತ್ತು ರಾತ್ರಿ ಊಟ ಮಾಡಿಕೊಂಡು ಬಂದಿರಬಹುದು.ಆದರೆ ಅಧ್ಯಯನ ಕಂಡು ಹಿಡಿದ ಪ್ರಕಾರ ದಿನದಲ್ಲಿ ಮೂರು ದೊಡ್ಡ ಊಟ ಮಾಡುವ ಬದಲು ಐದರಿಂದ ಆರು ಬಾರಿ ಸಣ್ಣ ಪ್ರಮಾಣದಲ್ಲಿ ತಿನ್ನುವವರು ತಮ್ಮ ಹೊಟ್ಟೆಯ ಸುತ್ತಳತೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನಲಾಗುತ್ತದೆ.

Story first published: Sunday, April 27, 2014, 11:01 [IST]
X
Desktop Bottom Promotion