Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಮಳೆಗಾಲದಲ್ಲಿ ಕಾಯಿಲೆ ಬೀಳದಿರಲು ಇವುಗಳನ್ನು ಪಾಲಿಸಿ
ಮಾನ್ಸೂನ್ ತಿಂಗಳಿನಲ್ಲಿ ಶೀತ, ನೆಗಡಿಯಂತಹ ಕಾಯಿಲೆಗಳು ಸರ್ವೇ ಸಾಮಾನ್ಯ. ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗೆ ನಮ್ಮ ದೇಹ ಹೊಂದಿಕೊಂಡಿರುವುದಿಲ್ಲ ಆದ್ದರಿಂದ ಕಾಯಿಲೆ ಬೀಳುತ್ತೇವೆ.
ತೇವವಾದ ವಾತಾವರಣ ಸೂಕ್ಷ್ಮಾಣು ಜೀವಿಗಳನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತವೆ. ಆದ್ದರಿಂದ ಮಳೆಗಾಲದಲ್ಲಿ ಸ್ವಲ್ಪ ಮುಂಜಾಗ್ರತೆಯಿಂದ ಇರುವುದು ಒಳ್ಳೆಯದು. ಇಲ್ಲಿ ನಾವು ಕೆಲ ಟಿಪ್ಸ್ ನೀಡಿದ್ದೇವೆ. ಇವುಗಳನ್ನು ಪಾಲಿಸಿದರೆ ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಶೀತ, ಕೆಮ್ಮು, ಜ್ವರ ಈ ರೀತಿಯ ಸಾಮಾನ್ಯ ಕಾಯಿಲೆಗಳನ್ನು ದೂರವಿಡಬಹುದು:

ಮಳೆಯಲ್ಲಿ ಒದ್ದೆಯಾಗಬೇಡಿ
ಮೂವಿಯಲ್ಲಿ ಮಳೆಯಲ್ಲಿ ಒದ್ದೆಯಾಗುವುದನ್ನು ನೋಡಿ ಅದರಂತ ನೀವೂ ಮಾಡಬೇಡಿ. ಮಳೆ ನೆನೆಯುವುದು ಖುಷಿಕೊಟ್ಟರೂ ಕೆಲವರಿಗೆ ಮಳೆ ನೆನೆದರೆ ಒಂದು ವಾರ ಕಾಯಿಲೆ ಬೀಳುವವರು. ಆದ್ದರಿಂದ ಮಳೆ ನೆನಯುವ ಆಸೆ ಇದ್ದರೆ ನಿಮ್ಮ ದೇಹ ಸ್ಥಿತಿಯ ಬಗ್ಗೆ ಯೋಚಿಸಿ, ನಂತರ ನಿರ್ಧಾರ ಕೈಗೊಳ್ಳಿ.

ಕುದಿಸಿದ ನೀರು ಕುಡಿಯಿರಿ
ಮಳೆಗಾಲದಲ್ಲಿ ಸಾಕಷ್ಟು ಕಾಯಿಲೆಗಳು ನೀರಿನ ಮುಖಾಂತರ ಬರುತ್ತದೆ. ಆದ್ದರಿಂದ ಕುದಿಸಿದ ನೀರನ್ನು ಮಾತ್ರ ಕುಡಿಯಿರಿ.

ಶುದ್ಧತೆ ಬಗ್ಗೆ ಗಮನವಿರಲಿ
ಪ್ರತೀಬಾರಿ ಮಳೆಯಲ್ಲಿ ಹೊರಗಡೆ ಹೋಗಿ ಬಂದ ಮುಖ, ಕೈ, ಕಾಲು ತೊಳೆಯಲು ಮರೆಯಬೇಡಿ. ಈ ರೀತಿ ಮಾಡುವುದರಿಂದ ರೋಗಾಣುಗಳು ನಿಮ್ಮ ಮೇಲೆ ದಾಳಿ ಮಾಡುವುದನ್ನು ತಡೆಯಬಹುದು. ಅದರಲ್ಲೂ ಬಿಸಿ ನೀರು ಮಳೆ ಕೈ, ಕಾಲು ತೊಳೆಯುವುದು ಒಳ್ಳೆಯದು.

ಸೂಪ್, ಕಷಾಯ
ಈ ಸಮಯದಲ್ಲಿ ಸೂಪ್, ಕಷಾಯ ಇವುಗಳನ್ನು ಮಾಡಿ ಕುಡಿಯುವುದು ಒಳ್ಳೆಯದು. ಇವುಗಳು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ಇವುಗಳು ರೋಗಾಣುಗಳ ವಿರುದ್ಧ ಹೋರಾಡಿ, ಕಾಯಿಲೆ ಬೀಳುವುದನ್ನು ತಡೆಗಟ್ಟುತ್ತದೆ.

ಮಳೆಯಲ್ಲಿ ನೆನೆದರೆ ಸ್ನಾನ ಮಾಡಿ
ಮಳೆಯಲ್ಲಿ ನೆನೆದರೆ ಮನೆಗೆ ಬಂದ ತಕ್ಷಣ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಇದರಿಂದ ಕಾಯಿಲೆ ಬೀಳುವುದನ್ನು ತಡೆಯಬಹುದು. ಇದರಿಂದ ದೇಹದ ಉಷ್ಣತೆ ಸಮಸ್ಥಿತಿಗೆ ಬಂದು ಶೀತ ಉಂಟಾಗುವುದನ್ನು ತಡೆಯಬಹುದು.

ಸರಿಯಾದ ಸಮಯಕ್ಕೆ ನಿದ್ದೆ ಮಾಡಿ
ಮಳೆಗಾಲದಲ್ಲಿ ನಿದ್ದೆ ಬೇಗನೆ ಬಳಿ ಸುಳಿಯುವುದು, ಟಿವಿ ನೋಡುತ್ತಾ, ಟ್ಯಾಪ್ ಟಾಪ್ ಮುಂದೆ ಕೂರುತ್ತಾ ಸುಂದರ ನಿದ್ದೆ ಹಾಳು ಮಾಡಿ, ಆರೊಗ್ಯ ಹಾಳು ಮಾಡ್ಕೋಬೇಡಿ.

ವ್ಯಾಯಾಮ
ಮಳೆಗಾಲ ಅಂತ ವ್ಯಾಯಾಮಕ್ಕೆ ಬ್ರೇಕ್ ಹಾಕಬೇಡಿ, ಮನೆಯಲ್ಲಿ ವ್ಯಾಯಾಮ ಮಾಡಿ, ಸಮತೂಕವನ್ನು ಕಾಪಾಡಿಕೊಳ್ಳಿ.

ಆಹಾರಗಳು
ಪೋಷಕಾಂಶವಿರುವ ಆಹಾರಗಳನ್ನು ತಿನ್ನಿ. ಅದರಲ್ಲೂ ದೇಹ ಉಷ್ಣತೆ ಹೆಚ್ಚಿಸುವ ಆಹಾರ ತಿನ್ನಿ. ಶುಂಠಿ, ಕರಿ ಮೆಣಸಿನ ಪುಡಿ ಇವೆಲ್ಲಾ ನಿಮ್ಮ ಆಹಾರದಲ್ಲಿ ಇರಲಿ.



Click it and Unblock the Notifications
