Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೊಸವರ್ಷಕ್ಕೆ 24 ಕ್ಯಾರೆಟ್ ರೆಸಲ್ಯೂಷನ್ನುಗಳು
ಜನವರಿ ಬಂತಂದ್ರೆ ಸಾಕಪ್ಪಾ. ನಮ್ಮ ಫ್ರೆಂಡ್ಸ್ ಹೊಸ ಹೊಸ ಸಂಕಲ್ಪಗಳನ್ನು ಕೈಗೊಳ್ಳುತ್ತಲೇ ಇರ್ತಾರೆ. ಕೆಲವು ವರ್ಕ್ ಔಟ್ ಆಗತ್ತೆ, ಇನ್ನು ಕೆಲವು ಶಟ್ ಅಪ್ ಆಗತ್ತೆ.
ನಮ್ಮ ದೇಶದಲ್ಲಿ ಸಂಕಲ್ಪಗಳಿಗೆ ಬರಗಾಲವಿಲ್ಲ. ಪ್ರತೀ ವರ್ಷ ಈ ರಿಚ್ಯುವಲ್ ಇದ್ದದ್ದೇ. ಹಳೇ ಚಾಳಿಗೆ ಗುಡ್ ಬೈ ಹೇಳುವುದು, ಹೊಸ ಜೀವನಶೈಲಿಗೆ ಹೊಂದಿಕೊಳ್ಳುವ ಆಕಾಂಕ್ಷೆಗಳನ್ನು ವ್ಯಕ್ತಪಡಿಸುವುದು ತುಂಬಾ ಕಾಮನ್.
ಕೆಲವರು ನಿಜಕ್ಕೂ ಸೀರಿಯಸ್. ಹಲವರು ತುಂಬಾ ಕ್ಯಾಷುವಲ್. ಹೊಸ ವರ್ಷದ ಹಬೆಯಲ್ಲಿ ಕೆಲವು ಸಂಕಲ್ಪಗಳು ಬೇಯುವುದಿಲ್ಲ. ಅವುಗಳ ಆಯಸ್ಸು ಕಡಿಮೆ. ಬೀರಿನ ನೊರೆಯಂತೆ ಹಾಗೆ ಕರಗಿ ಹೋಗತ್ವೆ. ತಾವೇ ಕೈಗೊಂಡ ತೀರ್ಮಾನಗಳಿಗೆ ತಾವೇ ಎಳ್ಳುನೀರು ಬಿಡುವ ರೆಸಲ್ಯೂಷನ್ ಶೂರರ ಬಗ್ಗೆ ನಾವು ಹೆಚ್ಚಿಗೆ ಹೇಳುವುದೇನಿಲ್ಲ.
ಆದರೆ, ತಮ್ಮ ಹೊಸ ವರ್ಷದ ಠರಾವುಗಳಿಗೆ ತಾವೇ ಬದ್ಧರಾಗುತ್ತಾ ಹೊಸ ಜೀವನ ಶೈಲಿಗೆ ಮೈಮನಗಳನ್ನು ಒಗ್ಗಿಸಿಕೊಳ್ಳಲು ಇದೇ ಈಗಷ್ಟೆ ಆರಂಭಿಸಿರುವ ಗಟ್ಟಿ ಮನಸ್ಸುಗಳಿಗೆ ಸ್ಪೆಷಲ್ ಹ್ಯಾಪಿ ನ್ಯೂ ಇಯರ್ ಹೇಳುತ್ತಿದ್ದೇವೆ. ಜತೆಗೆ, ಆರೋಗ್ಯದ ಕಡೆ ನಿಗಾ ಇಡುವ ನಮ್ಮ ವಾಹಿನಿಯ ಓದುಗ ಸಮುದಾಯಕ್ಕೆ ಕೆಲವು ಹೆಲ್ತಿ ಹೆಲ್ತಿ ಕಿವಿಮಾತುಗಳನ್ನು ಹೇಳಲಾಗಿದೆ.
ಓದಿ : ಆರೋಗ್ಯವೂ ನಿಮ್ಮದೇ, ಭಾಗ್ಯವೂ ನಿಮ್ಮದೇ. ಗುಡ್ ಲಕ್ ಟು ಯು ಅಂಡ್ ಟು ಯುವರ್ ಬಿಲವೆಡ್ಸ್.

1. ಸಮತೂಕದ ದೇಹ
ದಪ್ಪಗಿದ್ದವರು ದೇಹದ ತೂಕವನ್ನು ಇಳಿಸಿಕೊಳ್ಳಬೇಕು, ತೆಳ್ಳಗಿದ್ದವರು ಸ್ವಲ್ಪ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬೇಕು. ಒಟ್ಟಿನಲ್ಲಿ ಸಮತೂಕದ ಮೈಕಟ್ಟು ಹೊಂದುವ ನಿರ್ಧಾರ ಮಾಡಬೇಕು. ಸಮತೂಕದ ಮೈಕಟ್ಟಿನಿಂದ ಒಬೆಸಿಟಿ, ಮಂಡಿ ನೋವು ಮುಂತಾದ ಅನೇಕ ಸಮಸ್ಯೆಗಳನ್ನು ದೂರ ಇಡಬಹುದು.

2. ವ್ಯಾಯಾಮ
ದಿನದಲ್ಲಿ ಅರ್ಧ ಗಂಟೆ ವ್ಯಾಯಮಕ್ಕಾಗಿ ಮೀಸಲಿಡುವೆ ಎಂಬ ಪ್ರತಿಜ್ಞೆ ಮಾಡಿ. ದಿನದಲ್ಲಿ ಅರ್ಧ ಗಮಟೆ ವ್ಯಾಯಾಮ ಮಾಡಿದರೆ ನೀವು ದಿನಾ ಪೂರ್ತಿ ಚಟುವಟಿಕೆಯಿಂದ ಇರುವಿರಿ ಹಾಗೂ ದೇಹದ ಆರೋಗ್ಯ ಕೂಡ ಹೆಚ್ಚಾಗುತ್ತದೆ.

3. ಎಲ್ಲರ ಜೊತೆ ಉತ್ತಮ ಸಂಬಂಧದಿಂದ ಇರಿ
ಕುಟುಂಬದಲ್ಲಿ ಎಲ್ಲರ ಜೊತೆ ಉತ್ತಮವಾಗಿ ವರ್ತಿಸುವುದು, ಆದಷ್ಟೂ ಯಾರಿಗೂ ನೋವು ಮಾಡದಿರುವುದು, ಹಳೆಯ ಸ್ನೇಹಿತರ ಜೊತೆ ಟಚ್ ನಲ್ಲಿರುವುದು, ಸಾಮಾಜಿಕ ಬಂಧವನ್ನು ಸರಿಯಾಗಿ ಇಟ್ಟುಕೊಳ್ಳುವುದು ಮಾಡಿದರೆ ನಿಮ್ಮ ಮನಸ್ಸಿಗೆ ಆನಂದ ಸಿಗುತ್ತದೆ ಹಾಗೂ ನೀವೂ ಬೆಳೆಯುವಿರಿ.

4. ಕೆಟ್ಟ ಚಟಗಳು
ಸ್ನೇಹಿತರ ಜೊತೆ ಸೇರಿ ಮೋಜು ಮಾಡುವಾಗ ಖುಷಿಯಾದರೂ ನಂತರ ಇದರಿಂದ ಉಂಟಾಗುವ ತೊಂದರೆಗಳನ್ನು ನೀವು ಒಬ್ಬರೇ ಅನುಭವಿಸಬೇಕೆಂಬುದನ್ನು ಮರೆಯಬೇಡಿ.

5. ಹಣವನ್ನು ಉಳಿಸಿಕೊಳ್ಳಿ
ಹಣ ಇಲ್ಲದಿದ್ದರೆ ಚಿಂತೆ -ಪ್ರಾರಂಭವಾಗುತ್ತದೆ ಆದ್ದರಿಂದ ಬಂದ ಸಂಬಳನ್ನು ಸಂಪೂರ್ಣವಾಗಿ ಖರ್ಚು ಮಾಡದೆ ಸ್ವಲ್ಪ ಉಳಿಸಲು ನೋಡಿ. ನಾನಂತೂ ಈ ವಿಷಯದ ಬಗ್ಗೆ ತುಂಬಾ ಸೀರಿಯಸ್ ಆಗಿ ನಿರ್ಧಾರ ಕೈಗೊಂಡಿದ್ದೇನೆ.

6. ಒತ್ತಡ
ಮಾನಸಿಕ ಒತ್ತಡ ಎಲ್ಲರಿಗೆ ಬಂದೇ ಬರುತ್ತದೆ. ಇದರಿಂದ ಹೊರಬರಲು ಪ್ರಯತ್ನಿಸಬೇಕು. ಧ್ಯಾನ, ಸಂಗೀತವನ್ನು ಕೇಳುವುದು, ಬುಕ್ ಓದುವುದು ಹೀಗೆ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.

7. ನಿದ್ದೆ
ಈ ವರ್ಷ ನಿದ್ದೆಗೆ ಮೋಸ ಮಾಡಬೇಡಿ. ದಿನದಲ್ಲಿ 7-8 ಗಂಟೆ ನಿದ್ದೆ ಮಾಡಿ, ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.

8. ಪ್ರಯಾಣ
ಕೆಲಸದ ನಡುವೆ ಸ್ವಲ್ಪ ಬ್ರೇಕ್ ತೆಗೆದುಕೊಂಡು ಪ್ರಯಾಣ ಮಾಡುವುದು, ಸಾಹಸಿ ಕ್ರೀಡೆಗಳನ್ನು ಆಡುವುದು ಮಾಡಿ. ಇದರಿಂದ ನಿಮ್ಮ ಚಿಂತೆಗಳನ್ನು ಬದಿಗಿಟ್ಟು ಸಂತೋಷವನ್ನು ಅನುಭವಿಸಬಹುದು. ಒಟ್ಟಿನಲ್ಲಿ ಧನಾತ್ಮಕವಾಗಿ ಯೋಚಿಸಿ, ಕನಸ್ಸು ಕಾಣಿರಿ ಹಾಗೂ ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಿ.



Click it and Unblock the Notifications
