Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಚಾಕಲೇಟ್ ಬಗ್ಗೆ ಕೆಲ ಕುತೂಹಲಕಾರಿ ಅಂಶಗಳು
ನೀವು ಚಾಕಲೇಟ್ ಇಷ್ಟ ಪಡುತ್ತೀರಾ? ಇರಲಿ, ಯಾರು ತಾನೇ ಇಷ್ಟ ಪಡುವುದಿಲ್ಲ? ಚಾಕಲೇಟ್ ಪ್ರಕೃತಿ ನಮಗೆ ನೀಡಿರುವ ಅತ್ಯುತ್ತಮ ಆಹಾರವಾಗಿದೆ. ಇವು ಕೇವಲ ಅಧಿಕ ಕ್ಯಾಲೋರಿಯನ್ನು ಹೊಂದಿರುವುದಷ್ಟೆ ಅಲ್ಲ, ನೀವು ಆರೋಗ್ಯಕರ ತೂಕವನ್ನು ಪಡೆಯಲು ಸಹ ಇದು ನೆರವಾಗುತ್ತದೆ. ಆದರೆ ಇದಕ್ಕಾಗಿ ನೀವು ಅಧಿಕ ಪ್ರಮಾಣದಲ್ಲಿ ಚಾಕಲೇಟ್ ಸೇವಿಸಬೇಕಾಗುತ್ತದೆ. ಹಾಗೆಂದು ಹುಚ್ಚಾ ಪಟ್ಟೆ ಸೇವಿಸಬೇಡಿ.
ಎಷ್ಟು ಅಗತ್ಯವೊ ಅಷ್ಟು ಮಾತ್ರ ತಿನ್ನಿ. ಆಗ ನಿಮಗೆ ಯಾವ ಸಮಸ್ಯೆಯು ಆಗುವುದಿಲ್ಲ. ಈಗ ನೀವು ಖಂಡಿತವಾಗಿ ನಿನ್ನೆ ರಾತ್ರಿ ತಿಂದ ಚಾಕಲೇಟ್ ಬಾರ್ ಕುರಿತು ಪಶ್ಚಾತ್ತಾಪ ಪಡುವ ಅಗತ್ಯವಿಲ್ಲ. ಬದಲಿಗೆ ಅದರಿಂದ ನಿಮ್ಮ ಆರೋಗ್ಯಕ್ಕೆ ಅನುಕೂಲವಿದೆ ಎಂದು ಖುಷಿ ಪಡಲು ಕೆಲವು ಕಾರಣಗಳನ್ನು ನಾವು ಇಲ್ಲಿ ನೀಡಿದ್ದೇವೆ.

1. ಹೃದಯಾಘಾತವನ್ನು ತಡೆಯುತ್ತದೆ
ಬಾರ್ ಚಾಕಲೇಟ್ ಗಳಲ್ಲಿ ಕೆಲವು ರಾಸಾಯನಿಕಗಳು ಇದ್ದು, ಅವು ಹೃದಯದ ನಾಳಗಳ ಸರಾಗ ಕಾರ್ಯನಿರ್ವಹಣೆಗೆ ಸಹಕರಿಸಿ ಹೃದಯಾಘಾತವನ್ನು ತಡೆಯಲು ಸಹಾಯ ಮಾಡುತ್ತವೆ. ವಿಶೇಷವಾಗಿ ಡಾರ್ಕ್ ಚಾಕಲೇಟ್ ಶೇ. 50% ರಷ್ಟು ಹೃದಯಾಘಾತ ಬರದಂತೆ ತಡೆಯುತ್ತದೆ. ಅಲ್ಲದೆ ಶೇ.10% ರಷ್ಟು ಅಪದಮನಿಗಳಿಗೆ ಸಂಬಂಧಿಸಿದ ಕಾಯಿಲೆ ಬರದಂತೆ ತಡೆಯುತ್ತದೆ. ಹಾಗಾಗಿ ಪ್ರತಿದಿನವು ಒಂದು ತುಣುಕು ಚಾಕಲೇಟ್ ತಿನ್ನಲು ನಿಮಗೆ ಯಾವ ಅಡ್ಡಿಯು ಇಲ್ಲ.

2. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ಚಾಕಲೇಟ್ ಗಳು ನಮ್ಮಲ್ಲಿ ದೊರೆಯುವ ತರಕಾರಿಗಳಂತೆಯೆ, ಇವುಗಳಲ್ಲಿ ಸಹ ಆರೋಗ್ಯಕ್ಕೆ ಅತ್ಯಾವಶ್ಯಕವಾಗಿರುವ ಅಂಶಗಳು ಮತ್ತು ಅನುಕೂಲಗಳು ಇವೆ. ಚಾಕಲೇಟ್ ಗಳಲ್ಲಿ ಫ್ಲೇವೊನೊಯ್ಡ್ಸ್ ಎಂಬ antioxidants ಇವೆ. ಈ antioxidants ನೈಟ್ರಿಕ್ ಆಕ್ಸಡ್ ಉತ್ಪತ್ತಿ ಮಾಡಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ. ಇದರ ಜೊತೆಗೆ ಇವು ನಿಮ್ಮ ದೇಹದಲ್ಲಿರುವ ಹಾರ್ಮೊನ್‍ಗಳನ್ನು ಸಹ ಸಮತೋಲನದಲ್ಲಿಡುತ್ತವೆ.

3. ಕೊಲೆಸ್ಟ್ರಾಲ್ ನಿಯಂತ್ರಿಸುತ್ತವೆ
ಚಾಕಲೇಟ್ ತಿನ್ನುವುದರಿಂದ ಕೊಲೆಸ್ಟ್ರಾಲನ್ನು ನಿಯಂತ್ರಿಸಬಹುದು. ಇದು ದೇಹದಲ್ಲಿನ ಎಲ್ ಡಿ ಎಲ್ ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕರಿಸುತ್ತದೆ. ಹಾಗಾಗಿ ನೀವೇನಾದರು ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ನಿಯಂತ್ರಿಸಲು ಪರದಾಡುತ್ತಿದ್ದರೆ ಮೊದಲು ಚಾಕಲೇಟ್ ತಿನ್ನಿ. ಚಾಕಲೇಟ್ ನಿಮ್ಮ ದೇಹದಲ್ಲಿ ಆರೋಗ್ಯಕರ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಕರಿಸುತ್ತದೆ.

4. ಖಿನ್ನತೆಯನ್ನು ಹೊಡೆದೊಡಿಸುವ ಸಾಧನ
ಹೌದು ಚಾಕಲೇಟ್ ನಿಮ್ಮನ್ನು ಸಂತೋಷದಿಂದ ಇರುವಂತೆ ಮಾಡುತ್ತದೆ. ಏಕೆಂದರೆ ಚಾಕಲೇಟ್ ನಲ್ಲಿ ಸೆರೊಟೊನಿನ್ ಎಂಬ ಅಂಶವಿದೆ. ಇದು ಸ್ವಾಭಾವಿಕವಾಗಿ ಖಿನ್ನತೆಯನ್ನು ಹೊರದೂಡುವ ಅಂಶವಾಗಿದೆ.

5. ಕಡಿಮೆ ಕೊಬ್ಬು ಹೊಂದಿದೆ
ಕೋಕಾ ಪುಡಿಯು ಚಾಕಲೇಟ್ ತಯಾರಿಕೆಯಲ್ಲಿ ಬಳಸಲಾಗುವ ಪ್ರಮುಖ ಅಂಶವಾಗಿದೆ. ಇದು ಕಡಿಮೆ ಪ್ರಮಾಣದ ಕೊಬ್ಬನ್ನು ಹೊಂದಿರುತ್ತದೆ. ನಿಮ್ಮ ತೂಕವನ್ನು ನೀವು ನಿಯಂತ್ರಣದಲ್ಲಿಡಬೇಕು ಎಂದರೆ ಆರಾಮವಾಗಿ ಚಾಕಲೇಟ್ ತಿನ್ನಿ. ಆದರೆ ಎಲ್ಲವು ಒಂದು ಇತಿ ಮಿತಿಯಲ್ಲಿರಲಿ. ಚಾಕಲೇಟ್ ಸೇವಿಸುವಾಗ ಕೋಕಾ ಪ್ರಮಾಣ ಶೇ.60% ರಷ್ಟು ಇಲ್ಲವೆಂಬುದನ್ನು ಖಾತ್ರಿ ಪಡಿಸಿಕೊಳ್ಳಿ.

6. ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ
ಈ ಮೊದಲೆ ತಿಳಿಸಿದ ಫ್ಪ್ಲೇವೊನಾಯ್ಡ್ಸ್ ಗಳು ನೀವು ಚಾಕಲೇಟ್ ತಿಂದು 2-3 ಗಂಟೆಗಳ ನಂತರ ರಕ್ತ ಪರಿಚಲನೆಯ ವೇಗವನ್ನು ವೃದ್ಧಿಸುತ್ತವೆ. ಅಲ್ಲದೆ ಇವು ಮೆದುಳಿನಲ್ಲಿ ಸಹ ರಕ್ತವು ಸರಾಗವಾಗಿ ಹರಿಯಲು ನೆರವಾಗುತ್ತವೆ. ಹಾಗಾಗಿ ಚಾಕಲೇಟ್ ತಿನ್ನಿ ಹಾಯಾಗಿರಿ.

7. ತೀವ್ರತರದ ಸುಸ್ತನ್ನು ತಡೆಯುತ್ತದೆ
ಪ್ರತಿಯೊಬ್ಬ ವ್ಯಕ್ತಿಗೆ ತೀವ್ರತರದ ಸುಸ್ತು ಆರೋಗ್ಯ ಮತ್ತು ಸಂತೋಷದಿಂದಿರಲು ತೊಂದರೆಯನ್ನುಂಟು ಮಾಡುತ್ತದೆ. ಒಂದು ವೇಳೆ ವ್ಯಕ್ತಿಯು ತಲೆನೋವು, ಮೈ ಕೈ ನೋವು, ಹೃದಯ ಮತ್ತು ಶ್ವಾಸಕೋಶದ ಸಮಸ್ಯೆಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದರೆ, ತಾನು ಸೇವಿಸುವ ಆಹಾರದ ಜೊತೆಗೆ ಪ್ರತಿದಿನವು 50ಗ್ರಾಂ ಚಾಕೊಲೆಟನ್ನು ಸೇವಿಸುವುದರಿಂದ ತೀವ್ರತರದ ಸುಸ್ತನ್ನು ನಿಯಂತ್ರಿಸಬಹುದು.

8.ವೃದ್ಧಾಪ್ಯವನ್ನು ಮುಂದೂಡುತ್ತದೆ
ಚಾಕಲೇಟ್ ತಿನ್ನುವುದರಿಂದ ಆಗುವ ಮತ್ತೊಂದು ಲಾಭವೇನೆಂದರೆ ಇದು ವೃದ್ಧಾಪ್ಯವನ್ನು ತಡೆಯಲು ಸಹಕರಿಸುತ್ತದೆ. ಇದರರ್ಥ ನಿಮಗೆ ಯಾವುದೇ ಅವಧಿಪೂರ್ವ ಸುಕ್ಕು ಮುಂತಾದ ವೃದ್ಧಾಪ್ಯದ ಲಕ್ಷಣಗಳು ಬರದಂತೆ ತಡೆಯುತ್ತವೆ. ಇದಕ್ಕೆ ಕಾರಣ ಚಾಕಲೇಟ್ ನಲ್ಲಿರುವ antioxidants.

9. ಗರ್ಭಿಣಿಯರು ತಿಂದರೆ ತುಂಬಾ ಒಳ್ಳೆಯದು
ಇತ್ತೀಚೆಗೆ ನಡೆದ ಸಂಶೋಧನೆಯು ಚಾಕಲೇಟ್ ಕುರಿತು ಒಂದು ಕುತೂಹಲದಾಯಕವಾದ ಅಂಶವನ್ನು ಹೊರಗೆಡವಿತು. ಅದೇನೆಂದರೆ ಚಾಕೊಲೇಟ್ ಸೇವಿಸುವ ತಾಯಂದಿರು ಸದಾ ಸಂತಸದಿಂದ ಇರುವ ಮಕ್ಕಳನ್ನು ಹೆರುತ್ತಾರೆಂದು ಇದು ಸಾಭೀತು ಮಾಡಿದೆ. ಅಲ್ಲದೆ ಚಾಕಲೇಟ್ ಸೇವಿಸುವ ತಾಯಂದಿರು ಹೆತ್ತ ಮಕ್ಕಳು ಹೊಸ ಸನ್ನಿವೇಶಗಳಿಗೆ ಹೆದರುವ ಮನೋಭಾವವು ಚಾಕಲೇಟ್ ಸೇವಿಸದ ತಾಯಂದಿರ ಮಕ್ಕಳಿಗೆ ಹೋಲಿಸಿದರೆ ತೀರಾ ಕಡಿಮೆ.

10. ಅವಧಿಪೂರ್ವ ಸಾವು ಬರದಂತೆ ತಡೆಗಟ್ಟುತ್ತದೆ
ಇದು ಚಾಕಲೇಟ್ ಅನ್ನು ಏಕೆ ಸೇವಿಸಬೇಕೆಂದು ನೀಡುವ ಅತ್ಯುತ್ತಮ ಕಾರಣಗಳಲ್ಲಿ ಒಂದಾಗಿದೆ. ಏಕೆಂದರೆ ಇವುಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಉತ್ತಮ ಅನುಕೂಲಗಳು ದೊರೆಯುತ್ತವೆ. ಚಾಕಲೇಟ್ ಸೇವಿಸುವ ಜನರು ಇತರರಿಗಿಂತ ಕನಿಷ್ಠ ಒಂದು ವರ್ಷವಾದರು ಹೆಚ್ಚಿಗೆ ಜೀವಿಸುತ್ತಾರೆಂದು ತಿಳಿದುಬಂದಿದೆ. ಇದು ಹಲವಾರು ಸಂಶೋಧನೆಗಳಿಂದ ಧೃಢಪಟ್ಟಿದೆ ಸಹ. ಇವುಗಳು ಎಲ್ಲವು ಚಾಕಲೇಟ್ ಸೇವನೆಯು ಅವಧಿ ಪೂರ್ವ ಸಾವನ್ನು ಶೇ.8%ರಷ್ಟು ತಡೆಯುತ್ತದೆ ಎಂದು ತಿಳಿಸಿವೆ.



Click it and Unblock the Notifications









