Latest Updates
-
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು?
ಟಾನ್ಸಿಲೈಟಿಸ್ ತಡೆಗಟ್ಟಲು ಹೀಗೆ ಮಾಡಿ
ಗಲಗ್ರಂಥಿಯ ಉರಿಯೂತ(Tonsillitis) ಸಮಸ್ಯೆಯೂ ಗಂಟಲಿನಲ್ಲಿ ಬ್ಯಾಕ್ಟೀರಿಯಾ ಅಥವಾ ವೈರಾಣುಗಳಿಂದ ಉಂಟಾಗುತ್ತದೆ. ಅದರಲ್ಲೂ ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುವುದು ಅಧಿಕ. ಇದು ಬಂದಾಗ ಜ್ವರ, ತಲೆನೋವು, ಗಂಟಲಿನಲ್ಲಿ ನೋವು ಕಂಡು ಬರುವುದು. ಈ ಸಮಸ್ಯೆಗೆ ಸೂಕ್ತ ಚಿಕಿತ್ಸೆ ನೀಡಿದರೆ ಸಂಪೂರ್ಣವಾಗಿ ಗುಣ ಪಡಿಸಬಹುದು.
ಇಲ್ಲಿ ನಾವು ಕೆಲವು ಸಲಹೆಗಳನ್ನು ನೀಡಿದ್ದೇವೆ, ಅವುಗಳನ್ನು ಪಾಲಿಸಿದರೆ ಗಲಗ್ರಂಥಿಯ ಉರಿಯೂತವನ್ನು ಕಮ್ಮಿ ಮಾಡಬಹುದು:

* ಬಲಗ್ರಂಥೀಯ ಊತವನ್ನು ಮೊದಲೇ ಗುರುತಿಸಿದರೆ ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ ಗುಣ ಪಡಿಸಬಹುದು. ಟಾನ್ಸಿಲೈಟಿಸ್ ಅನ್ನು ಕಮ್ಮಿ ಮಾಡಲು ಆರೋಗ್ಯಕರ ಆಹಾರವನ್ನು ತಿನ್ನಬೇಕು, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಕಮ್ಮಿ ಮಾಡಬೇಕು.
* ಬಾಯಿಯನ್ನು ಶುಚಿಯಾಗಿ ಇಡದಿದ್ದರೆ ಟಾನ್ಸಿಲಿಟಿ ಸಮಸ್ಯೆ ಹೆಚ್ಚಾಗುವುದು. ಆದ್ದರಿಂದ ಹಲ್ಲನ್ನು ಎರಡು ಬಾರಿ ಉಜ್ಜಬೇಕು, ಮತ್ತು ನಾಲಗೆಯನ್ನು ಶುದ್ಧ ಮಾಡಬೇಕು. ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು ಕೂಡ ಒಳ್ಳೆಯದು.
ಟಾನ್ಸಿಲೈಟಿಸ್ ಕಮ್ಮಿ ಮಾಡುವ ಇತರ ಪ್ರಮುಖ ಮಾರ್ಗಗಳು
ರೋಗ ನಿರೋಧಕ ಶಕ್ತಿ ಕಮ್ಮಿ ಇರುವವರಲ್ಲಿ ಟಾನ್ಸಿಲಿಟಿ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಆದ್ದರಿಂದ ವಿಟಮಿನ್ ಸಿ ಇರುವ ಆಹಾರಗಳನ್ನು ಹೆಚ್ಚಾಗಿ ತಿನ್ನಬೇಕು. ಕಿತ್ತಳೆ, ಮೂಸಂಬಿ, ನಿಂಬೆ ಪಾನೀಯ, ಸ್ಟ್ರಾಬೆರಿ ಹಾಗೂ ಸಿಟ್ರಸ್ ಅಂಶವಿರುವ ಸಿಟ್ರಸ್ ಆಹಾರಗಳನ್ನು ತಿನ್ನಿ.
ಲೈಫ್ ಸ್ಟೈಲ್
ಧೂಮಪಾನ, ತಂಬಾಕು ಜಗಿಯುವುದು, ಮದ್ಯಪಾನ ಅಭ್ಯಾಸಗಳಿದ್ದರೆ ಸಂಪೂರ್ಣವಾಗಿ ನಿಲ್ಲಿಸಬೇಕು, ಇಲ್ಲದಿದ್ದರೆ ಟಾನ್ಸಿಲೈಟಿಸ್ ಸಮಸ್ಯೆ ಹೆಚ್ಚಾಗಿ ಕ್ಯಾನ್ಸರ್ ಬರುವುದು.
ಆಂಟಿ ಬಯೋಟಿಕ್ ಬಳಸಿ
ವೈದ್ಯರು ಆಂಟಿ ಬಯೋಟಿಕ್ ಮಾತ್ರೆಗಳನ್ನು ಕೊಟ್ಟಿದ್ದರೆ ತಪ್ಪದೆ ಬಳಸಿ. ಟಾನ್ಸಿಲಿಟಿಯಿಂದ ಜ್ವರ ಬಂದಾಗ ವೈದ್ಯರ ಸಲಹೆ ಪಡೆದು ಆಂಟಿ ಬಯೋಟಿಕ್ ಮಾತ್ರೆಗಳನ್ನು ಪಡೆಯಬೇಕು, ಈ ಸಮಯದಲ್ಲಿ ಸ್ವಚಿಕಿತ್ಸೆ ಮಾಡಬೇಡಿ.
ಪ್ರತೀದಿನ ಬಾಯಿ ಮುಕ್ಕಳಿಸಿ
ಟಾನ್ಸಿಲೈಟಿಸ್ ಸಮಸ್ಯೆ ಆಗಾಗ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಇದು ಬರದಂತೆ ತಡೆಯಲು ಪ್ರತೀದಿನ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ.
ಸರ್ಜರಿ
ಆಗಾಗ ಗಂಟಲಿನಲ್ಲಿ ಸಮಸ್ಯೆ ಕಂಡು ಬರುತ್ತಿದ್ದರೆ ಸರ್ಜರಿ ಮಾಡಿಸಿದರೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
ಟೂತ್ ಪೇಸ್ಟ್
ಆಕ್ಸೀಜನೇಟ್ ಟೂತ್ ಪೇಸ್ಟ್ ಬಳಸುವುದು ಒಳ್ಳೆಯದು. ವಸಡು ಮತ್ತು ಮತ್ತು ಹಲ್ಲುಗಳನ್ನು ಸದಾ ಶುಚಿಯಾಗಿಟ್ಟರೆ ಟಾನ್ಸಿಲೈಟಿಸ್ ಸಮಸ್ಯೆ ಬರದಂತೆ ಶೇ. 90ರಷ್ಟು ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications