Latest Updates
-
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು!
ಬಿಳಿ ಈರುಳ್ಳಿಯಲ್ಲಿರುವ 4 ಪ್ರಮುಖ ಔಷಧೀಯ ಗುಣಗಳು
ಹೆಚ್ಚಿನವರಿಗೆ ಮಾಮೂಲಿ ಅಡುಗೆಯಲ್ಲಿ ಈರುಳ್ಳಿ ಬೇಕೇಬೇಕು. ಈರುಳ್ಳಿ ಹಾಕಿ ಅಡುಗೆ ಮಾಡುವವರಿಗೆ ಈರುಳ್ಳಿ ಇಲ್ಲ ಅಂದರೆ ಅಡುಗೆ ರುಚಿಸುವುದೇ ಇಲ್ಲ. ಈರುಳ್ಳಿ ಅನೇಕ ಬಣ್ಣದಲ್ಲಿ, ಅನೇಕ ಗಾತ್ರದಲ್ಲಿ ದೊರೆಯುತ್ತದೆ. ಮಾಮೂಲಿ ಈರುಳ್ಳಿ, ಚಿಕ್ಕ ಗಾತ್ರದ ಈರುಳ್ಳಿ, ಬಿಳಿ ಬಣ್ಣದ ಈರುಳ್ಳಿ, ತೆಳು ಹಳದಿ ಬಣ್ಣದ ಈರುಳ್ಳಿ, ಪಿಂಕ್ ಬಣ್ಣದ ಈರುಳ್ಳಿ ಹೀಗೆ ವಿವಿಧ ಬಣ್ಣದಲ್ಲಿ ದೊರೆಯುತ್ತದೆ.
ಈ ವಿವಿಧ ಬಣ್ಣದ, ಗಾತ್ರದ ಈರುಳ್ಳಿಗಳು ತನ್ನದೇ ಆದ ರುಚಿಯನ್ನು ಹೊಂದಿದೆ. ಅದರಲ್ಲೂ ಸಿಹಿ ಈರುಳ್ಳಿ ಎಂದು ಕರೆಯುವ ಬಿಳಿ ಬಣ್ಣದ ಈರುಳ್ಳಿಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಅದರಲ್ಲಿರುವ ಔಷಧೀಯ ಗುಣಗಳಾವುವು ಎಂದು ನೋಡೋಣ ಬನ್ನಿ:

ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಬಿಳಿ ಈರುಳ್ಳಿಯಲ್ಲಿ ಫ್ಲೇವೋನೈಡ್ಸ್ ಅಧಿಕವಿರುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅನೇಕ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುವ ಸಾಮರ್ಥ್ಯ ಫ್ಲೇವೋನೈಡ್ಸ್ ಗೆ ಇದೆ.
ಅಜೀರ್ಣ ಸಮಸ್ಯೆ ಉಂಟಾಗುವುದಿಲ್ಲ
ಸಿಹಿ ಈರುಳ್ಳಿಯಲ್ಲಿ ಪ್ರೀಬಯೋಟಿಕ್(prebiotics)e ಇರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಅಜೀರ್ಣ ಸಸ್ಯೆ ಇರುವವರು ಇದನ್ನು ಮನೆಮದ್ದಾಗಿ ಉಪಯೋಗಿಸಬಹುದು.
ಮೂಳೆಗಳನ್ನು ಬಲಪಡಿಸುತ್ತದೆ
ಸಿಹಿ ಈರುಳ್ಳಿಯಲ್ಲಿ 'chondrocytes' ಇದ್ದು, ಇದು ಜೀವಕಣಗಳಿಗೆ ಹಾನಿಯಾಗದಂತೆ ತಡೆಯುತ್ತದೆ. ಇದರಿಂದ ಮೂಳೆಗಳ ಸವೆತ, ಮೈಕೈ ನೋವು ಉಂಟಾಗುವುದಿಲ್ಲ.
ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ
ಇದರಲ್ಲಿ ವಿಟಮಿನ್ ಸಿ , anti-inflammatory ಅಂಶವಿದ್ದು, ಇವುಗಳು ಕಾಯಿಲೆಗಳ ವಿರುದ್ಧ ಹೋರಾಡಿ ಆರೋಗ್ಯವನ್ನು ವೃದ್ಧಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
