Latest Updates
-
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು?
ಅತ್ಯಧಿಕ antioxidants ಇರುವ 11 ಆಹಾರಗಳು
ನಾವು ತಿನ್ನುವ ಆಹಾರದಲ್ಲಿ antioxidants ಇರಬೇಕು, ಈ ಅಂಶ ನಮ್ಮ ಆರೋಗ್ಯ ವೃದ್ಧಿಸಲು ಅವಶ್ಯಕ ಎಂದು ನಿಮಗೆ ಗೊತ್ತಿರಬಹುದು. ಆದರೆ ನಾವು ತಿನ್ನುವ ಎಲ್ಲಾ ಆಹಾರಗಳಲ್ಲಿ antioxidants ಅಂಶ ಇರುವುದೇ? ಎಂದು ನೋಡಿದರೆ ಖಂಡಿತ ಇರುವುದಿಲ್ಲ.
ಒಂದೇ ಆಹಾರದಲ್ಲಿ ಎಲ್ಲಾ ಬಗೆಯ ಪೋಷಕಾಂಶಗಳಿರುವುದಿಲ್ಲ, ಕೆಲವೊಂದು ಆಹಾರದಲ್ಲಿ ಕೆಲವು ಪೋಷಕಾಂಶಗಳಷ್ಟೇ ಇರುತ್ತದೆ. ಆದ್ದರಿಂದಲೇ ಎಲ್ಲಾ ಬಗೆಯ ಆಹಾರಗಳು ದೇಹದ ಆರೋಗ್ಯಕ್ಕೆ ಅವಶ್ಯಕ. ಅದರಲ್ಲೂ antioxidants ನಿಮ್ಮ ಆರೋಗ್ಯ ಮತ್ತು ಸೌಂದರ್ಯದ ರಕ್ಷಕದಂತೆ ಕೆಲಸ ಮಾಡುತ್ತದೆ. ಈ ಅಂಶಗಳಿರುವ ಕೆಲ ಪ್ರಮುಖ ಆಹಾರಗಳ ಪಟ್ಟಿಯನ್ನು ನೀಡಿದ್ದೇವೆ ನೋಡಿ:

ಬ್ಲ್ಯಾಕ್ ಬೀನ್ಸ್
ಇದು antioxidants ಅತ್ಯಧಿಕವಾಗಿರುವ ಆಹಾರವಾಗಿದೆ. ಇದನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಲು ಮರೆಯದಿರಿ.

ಕಿಡ್ನಿ ಬೀನ್ಸ್
ಕಿಡ್ನಿ ಬೀನ್ಸ್ ನಿಂದ ತಯಾರಿಸುವ ಖಾದ್ಯಗಳು ರುಚಿಕರವಾಗಿರುತ್ತದೆ. ಈ ಆಹಾರ ನಿಮ್ಮ ಬಾಯಿ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಆರೋಗ್ಯವನ್ನೂ ವೃದ್ಧಿಸುತ್ತದೆ.

ಬೀನ್ಸ್
ಬೀನ್ಸ್ ಅನ್ನು ಬೇಯಿಸಿ ತಿಂದರೆ ಹೆಚ್ಚು ಆರೋಗ್ಯಕರ. ಈ ಆರೋಗ್ಯಕರ ಆಹಾರಗಳನ್ನು ತಯಾರಿಸುವಾಗ ಎಣ್ಣೆಯಂಶವನ್ನು ಮಿತಿಯಲ್ಲಿ ಹಾಕಿ ಆಹಾರವನ್ನು ತಯಾರಿಸಿ.

ಬೆರ್ರಿ
ಸಾಮಾನ್ಯವಾಗಿ ಎಲ್ಲಾ ಬಗೆಯ ಬೆರ್ರಿ ಹಣ್ಣುಗಳಲ್ಲಿ antioxidants ಅಂಶ ಅಧಿಕವಿರುತ್ತದೆ. ಆದ್ದರಿಂದ ನಿಮ್ಮ ಆಹಾರಕ್ರಮದಲ್ಲಿ ಯಾವುದಾದರೂ ಒಂದು ಬಗೆಯ ಬೆರ್ರಿ ಹಣ್ಣು ಇರುವಂತೆ ನೋಡಿಕೊಳ್ಳುವುದು ಒಳ್ಳೆಯದು.

ವಾಲ್ ನಟ್
ವಾಲ್ ನಟ್ ನಲ್ಲಿ ಒಮೆಗಾ 3 ಕೊಬ್ಬಿನಂಶ ಮತ್ತು antioxidants ಅಧಿಕವಾಗಿದೆ.

ಪ್ಲಮ್
ಒಣ ಹಾಗೂ ತಾಜಾ ಪ್ಲಮ್ ಹಣ್ಣಿನಲ್ಲಿ ಕೂಡ antioxidants ಅಧಿಕವಾಗಿರುತ್ತದೆ.

ಪ್ಲಮ್
ಒಣ ಹಾಗೂ ತಾಜಾ ಪ್ಲಮ್ ಹಣ್ಣಿನಲ್ಲಿ ಕೂಡ antioxidants ಅಧಿಕವಾಗಿರುತ್ತದೆ.

ಸೇಬು
ಸೇಬಿನಲ್ಲಿ antioxidants ಜೊತೆ ಇತರ ಪೋಷಕಾಂಶಗಳೂ ಅಧಿಕವಾಗಿರುವುದರಿಂದ ದಿನದಲ್ಲಿ ಒಂದು ಸೇಬು ತಿನ್ನುವುದು ಒಳ್ಳೆಯದು.

ಚೆರ್ರಿ
ದಿನಕ್ಕೆ ಒಂದು ಚೆರ್ರಿ ಹಣ್ಣು ತಿನ್ನಿ, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಮಂಡಿ ನೋವು, ಸ್ನಾಯು ಸೆಳೆತ ಈ ರೀತಿಯ ಸಮಸ್ಯೆಯಿಂದ ಹೊರಬರಲು ಸಹಕಾರಿಯಾಗಿದೆ.

ಬಾದಾಮಿ
ಪ್ರತೀದಿನ 2-3 ನೆನೆ ಹಾಕಿದ ಬಾದಾಮಿ ತಿನ್ನಿ, ಆರೋಗ್ಯಕ್ಕೆ ಶಕ್ತಿ ದೊರೆಯುವುದು. ನಿಮ್ಮ ಕೂದಲಿಗೂ ತುಂಬಾ ಒಳ್ಳೆಯದು.

ಕಿವಿ ಹಣ್ಣು
ಹಣ್ಣುಗಳಲ್ಲಿಯೇ ಅತ್ಯಧಿಕ ಪೋಷಕಾಂಶವಿರುವ ಹಣ್ಣೆಂದರೆ ಕಿವಿ ಹಣ್ಣು. ಇದರಲ್ಲಿ antioxidants, ವಿಟಮಿನ್ ಎ ಮತ್ತು ಇ ಹೇರಳವಾಗಿದೆ.



Click it and Unblock the Notifications