Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಜಂಕ್ ಫುಡ್ ಪ್ರಿಯರಾ ನೀವು? ಹಾಗಾದರೆ ಆರೋಗ್ಯ?
ಫೀಜಾ, ಬರ್ಗರ್ ನಂತಹ ಜಂಕ್ / ಫಾಸ್ಟ್ ಫುಡ್ ಗಳು ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ? ದೊಡ್ಡ ದೊಡ್ಡ ಮಾಲ್ ಗಳಲ್ಲಿ ಅಥವಾ ಹೋಟೆಲ್ ಗಳಲ್ಲಿ ಅತ್ಯಂತ ಐಷಾರಾಮಿ ಎನಿಸುವ ತಿನಿಸುಗಳು ಎಂಥಹವರನ್ನಾದರೂ ಸೆಳೆದುಬಿಡುತ್ತದೆ. ತದನಂತರ ಈ ತಿನಿಸುಗಳೇ ಅಭ್ಯಾಸವಾಗಿ ದಿನವೂ ಅದನ್ನೇ ಸೇವಿಸುತ್ತೇವೆ. ಆದರೆ ಇದರಿಂದ ದೇಹದ ಮೇಲಾಗುವ ಪರಿಣಾಮದ ಬಗ್ಗೆ ಗಮನವೇ ಇರುವುದಿಲ್ಲ !
ಪ್ರತಿದಿನ ಜಂಕ್ ಫುಡ್ ಗಳನ್ನು ತಿನ್ನುತ್ತಾ ಹೋದಂತೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲು ಶುರುವಾಗುತ್ತದೆ. ಕೊಬ್ಬಿನ ಅಂಶ ದೇಹದಲ್ಲಿ ಅಧಿಕವಾಗಿ ಸೇರಿ ಒಂದೇ ಸಮನೆ ದೇಹದ ತೂಕ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ಉಂಟಾಗುವ ಸಮಸ್ಯೆಗಳಂತೂ ಒಂದೆರಡಲ್ಲ.
ಆದ್ದರಿಂದ ಜಂಕ್ ಫುಡ್ ತಿನ್ನುವುದನ್ನು ನಿಲ್ಲಿಸಿ. ಇದನ್ನು ನಿಲ್ಲಿಸಲು ಇಲ್ಲಿದೆ ಒಂದಿಷ್ಟು ಟಿಪ್ಸ್.

1. ಉದ್ಧೇಶ ಸ್ಪಷ್ಟವಾಗಿರಲಿ
ಜಂಕ್ ಫುಡ್ ತಿನ್ನುವುದನ್ನು ಬಿಡುವುದಕ್ಕೆ ನೀವು ಪಾಲಿಸಬೇಕಾದ ಮೊದಲ ಕ್ರಮ. ಜಂಕ್ ಫುಡ್ ಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೇರುತ್ತವೆ ಎಂಬುದನ್ನು ಅರಿತು ಇಂತಹ ತಿನಿಸುಗಳನ್ನು ತಿನ್ನುವುದನ್ನು ಬಿಡುವುದಕ್ಕೆ ಮಾನಸಿಕವಾಗಿ ಸಿದ್ಧರಾಗುವುದು. ನಿಮಗೆ ಆ ತಿನಿಸುಗಳನ್ನುತಿಂದರೆ ರಕ್ತದೊತ್ತಡ, ಅಧಿಕ ತೂಕ ಹೀಗೆ ಯಾವ ಸಮಸ್ಯೆಯುಂಟಾಗಿದೆ ಎಂಬುದನ್ನು ಅರಿತುಕೊಳ್ಳಿ. ಇದರಿಂದ ನೀವು ಜಂಕ್ ಫುಡ್ ತಿನ್ನದೇ ಇರುವುದಕ್ಕೆ ಬಲವಾದ ಕಾರಣ ದೊರಕಿದಂತಾಗುತ್ತದೆ.
2. ಯೋಜನೆಯನ್ನು ಮಾಡಿ
ನೀವು ಬರ್ಗರ್ ಅಥವಾ ಕರಿದ ತಿಂಡಿಗಳನ್ನು ತಿನ್ನುವುದನ್ನು ಬಿಡುವುತ್ತೀರಿ ಎಂದಾದರೆ ಅದು ನಿಮ್ಮ ಜೀವನದಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ. ಆದ್ದರಿಂದ ಈ ತಿಂಡಿಗಳ ಬದಲು ಆರೋಗ್ಯಕರವಾದ ತಿಂಡಿ ತಿನಿಸುಗಳನ್ನು ಸೇವಿಸಲು ಆರೋಗ್ಯಕರ ಆಹಾರದ ಒಂದು ಪಟ್ಟಿ ತಯಾರಿಸಿ. ಇದರಿಂದ ನೀವು ಕೇವಲ ಹಣವನ್ನು ಉಳಿಸುವುದು ಮಾತ್ರವಲ್ಲದೇ ನೀವು ಉತ್ತಮ ಬಾಣಸಿಗರಾಗಬಹುದು !
3. ವ್ಯಾಯಾಮ
ದಿನವೂ ವ್ಯಾಯಾಮ ಮಾಡುವುದು ಆರೋಗ್ಯದ ದೃಷ್ಠಿಯಿಂದ ತುಂಬ ಒಳ್ಳೆಯದು. ಇದು ನಿಮ್ಮನ್ನು ಬೇರೆಯದೇ ಮೂಡ್ ಗೆ ಕರೆದೊಯ್ಯುತ್ತದೆ. ನಿಮಗೆ ವಾಕ್ ಹೋಗಲು ಮನಸ್ಸಿದ್ದರೆ ಮುಂಜಾನೆ ಹಾಗೂ ಸಂಜೆ ವಾಕ್ ಹೋಗುವುದು ಉತ್ತಮ. ನೃತ್ಯ ತರಗತಿಗಳಿಗೂ ಸೇರಿಕೊಳ್ಳಬಹುದು. ಅಥವಾ ಜಿಮ್ ಗೆ ಹೋಗುವುದು ಕೂಡ ದೇಹವನ್ನು ಸದೃಢವಾಗಿಡುವಲ್ಲಿ ಸಹಕಾರಿಯಾಗುತ್ತದೆ.
4. ನಿಮ್ಮ ಆಹಾರವನ್ನು ಇಷ್ಟಪಡಿ
ಆರೋಗ್ಯಕರ ಆಹಾರ ಅಷ್ಟು ರುಚಿಕರವಾಗಿರುವುದಿಲ್ಲ ಎಂದು ನೀವು ತಿಳಿದಿದ್ದರೆ ನಿಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಿ. ಇದು ಕೂಡ ಜಂಕ್ ಫುಡ್ ಗಳಂತೆಯೆ ಅತ್ಯಂತ ರುಚಿಕಟ್ಟಾಗಿ ಕೂಡ ತಯಾರಿಸಬಹುದು. ನಿಮ್ಮದೇ ಆದ ರೆಸಿಪಿಗಳನ್ನು ಸಿದ್ಧಪಡಿಸಿಕೊಳ್ಳಿ. ಮನೆಯಲ್ಲಿಯೇ ಬೇರೆ ಬೇರೆ ವಿಧಾನದಲ್ಲಿ ಅಡುಗೆಗಳನ್ನು ತಯಾರಿಸಿ. ಇದು ಆರೋಗ್ಯಕ್ಕೆ ಮಾತ್ರವಲ್ಲದೆ ಬಾಯಿಗೆ ರುಚಿಯನ್ನೂ ನೀಡುತ್ತದೆ.
5. ಬದಲಾವಣೆ
ನಿಮ್ಮ ಆಸೆಗಳನ್ನು ಹೆಚ್ಚಾಗಿ ಹತ್ತಿಕ್ಕಬೇಕಾಗಿಲ್ಲ. ತಿಂಗಳಿಗೊಮ್ಮೆ ಬರ್ಗರ್ ಗಳಂತಹ ತಿಂಡಿಗಳನ್ನು ಬೇಕೆನಿಸಿದರೆ ತಿನ್ನಬಹುದು. ಆದರೆ ಅದು ನಿಯಂತ್ರಣದಲ್ಲಿರಲಿ. ಅದು ಅತಿಯಾದರೆ ನಿಮ್ಮ ದೇಹಕ್ಕೆ ಒಳ್ಳೆಯದಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.
ಸೂಕ್ತವಾದ ಮಾರ್ಗದರ್ಶನ ಯಾವುದೇ ಚಟವನ್ನೂ ಬಿಡಿಸಬಲ್ಲದು. ಈ ಮೇಲಿನ ಮಾಹಿತಿಗಳು ಜಂಕ್ ಫುಡ್ ನಿಂದ ನೀವು ದೂರ ಇರಲು ಸಹಾಯಮಾಡುತ್ತವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
