Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಆಹಾರದಲ್ಲಿ ಇರಲಿ ಮೊಳಕೆ ಕಾಳುಗಳ ಸತ್ವ!
ಮೊಳಕೆ ಬರಿಸಿದ ಕಾಳುಗಳಲ್ಲಿ ಪೌಷ್ಟಿಕಾಂಶ ಅಧಿಕವಿರುತ್ತದೆ ಅನ್ನುವುದು ವೈಜ್ಞಾನಿಕವಾದ ಸತ್ಯವಾಗಿದೆ. ಕಾಳುಗಳನ್ನು ಹಾಗೇ ತಿನ್ನುವ ಬದಲು ಮೊಳಕೆ ಬರಿಸಿ ತಿನ್ನುವುದು ಒಳ್ಳೆಯದು. ಇದರಿಂದ ಹೆಚ್ಚಿನ ಆರೋಗ್ಯಕರ ಲಾಭ ಪಡೆಯಬಹುದು.
ಇಲ್ಲಿ ಮೊಳಕೆ ಬರಿಸಿದ ಕಾಳುಗಳ ಕೆಲವು ಪ್ರಮುಖ ಆರೋಗ್ಯಕರ ಗುಣಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

ಅಗತ್ಯವಾದ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ: ಮೊಳಕೆ ಕಾಳುಗಳಲ್ಲಿ ಎ ಜೀವಸತ್ವ, ಸಿ ಜೀವಸತ್ವ, B1 ಜೀವಸತ್ವ, B6 ಜೀವಸತ್ವ ಮತ್ತು ವಿಟಾಮಿನ್ ಕೆ ಅಧಿಕವಾಗಿ ಇರುತ್ತದೆ. ಅಲ್ಲದೇ ಕಬ್ಬಿಣ, ರಂಜಕ (ರಾಸಾಯನಿಕ ಮೂಲವಸ್ತು), ಮ್ಯಾಗ್ನಿಷಿಯಂ, ಪೊಟಾಷ್ಯಿಯಂ, ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂ ಖನಿಜಾಂಶಗಳನ್ನು ಹೇರಳವಾಗಿ ಹೊಂದಿದೆ. ಇವುಗಳ ಜೊತೆಗೆ ಕಾಳುಗಳು ನಾರಿನಂಶ, ಫೋಲೆಟ್ ಮತ್ತು ಒಮೆಗಾ -3 ಕೊಬ್ಬಿನಂಶವನ್ನು ಹೊಂದಿರುತ್ತದೆ.
ಕಿಣ್ವಗಳ (Enzymes) ಅತ್ಯುತ್ತಮ ಮೂಲ: ಮೊಳಕೆ ಬರಿಸಿದ ಕಾಳುಗಳು ಆರೋಗ್ಯಕರ ಮೈಕಟ್ಟನ್ನು ಹೊಂದಲು ಸಹಕಾರಿಯಾಗಿವೆ. ಆದರೆ ಆಹಾರ ಪದಾರ್ಥಗಳನ್ನು ಬೇಯಿಸಿದಾಗ ಕಿಣ್ವಗಳು ನಷ್ಟವಾಗುತ್ತವೆ. ಹಸಿ ಮೊಳಕೆ ಕಾಳುಗಳನ್ನು ಸಲಾಡ್ ಮಾಡಿ ತಿಂದರೆ ಹೆಚ್ಚು ಆರೋಗ್ಯಕರ.
ಪ್ರೊಟೀನ್: ಹೆಚ್ಚಿನ ಜನರು ಮೊಳಕೆಗಳಲ್ಲಿ ಪ್ರೊಟೀನ್ ಅಧಿಕವಾಗಿರುತ್ತದೆ ಎಂಬ ವಾಸ್ತವ ಅಂಶದ ಬಗ್ಗೆ ಅರಿವಿರುವುದಿಲ್ಲ. ಕಾಳುಗಳಲ್ಲಿ ಶೇ 35 ರಷ್ಟು ಹೆಚ್ಚಿನ ಪ್ರೊಟೀನ್ ಅಂಶವಿರುತ್ತದೆ. ನಿಮ್ಮ ಆಹಾರದಲ್ಲಿ ಮೊಳಕೆ ಕಾಳುಗಳನ್ನು ಸೇರಿಸುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ಪ್ರೊಟೀನ್ ದೊರೆಯುತ್ತದೆ.
ಜೀರ್ಣಕ್ರಿಯೆ ಸುಲಭ: ನೀವು ಮೊಳಕೆ ವಸ್ತುಗಳನ್ನು ಇಷ್ಟಪಡಬಹುದಾದ ಇನ್ನೊಂದು ಪ್ರಮುಖ ಕಾರಣ. ಸುಲಲಿತವಾದ ಜೀರ್ಣಕ್ರಿಯೆ.
ತೂಕ ಇಳಿಕೆಗೆ ಒಳ್ಳೆಯದು: ಮೊಳಕೆ ಬರಿಸಿದ ಕಾಳುಗಳು ಹೆಚ್ಚಿನ ಪ್ರಮಾಣದ ನಾರಿನಂಶ ಹೊಂದಿದ್ದು ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತವೆ. ಇದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ.
ಮೊಳಕೆ ಕಾಳುಗಳು ಕೇವಲ ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲ, ತಿನ್ನಲೂ ರುಚಿಕರವಾಗಿರುತ್ತದೆ ನೀವು ಸಲಾಡ್, ಸೂಪ್, ಪಾಸ್ತಾ ತಯಾರಿಸುವಾಗ ಮೊಳಕೆ ಬರಿಸಿದ ಬಳಸಿ ಮಾಡಿದರೆ ರುಚಿ ಹೆಚ್ಚು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications