Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಜೇನಿನ 100% ಗುಣ ಪಡೆಯಲು ಈ ರೀತಿ ಬಳಸಿ
ಫಿಟ್ ನೆಸ್ ಪ್ರಜ್ಞೆ ಇರುವವರಂತೂ ಪ್ರತೀದಿನ ಜೇನು ಬಳಸುತ್ತಾರೆ. ಜೇನು ದೇಹದಲ್ಲಿರುವ ಕೊಬ್ಬಿನಂಶವನ್ನು ಕರಗಿಸುತ್ತದೆ ಎಂದು ನಮಗೆಲ್ಲಾ ಗೊತ್ತು. ಆದರೆ ಜೇನನ್ನು ಹೆಚ್ಚು ಪರಿಣಾಮರಿ ಬಳಸುವ ವಿಧಾನ ಮಾತ್ರ ಕೆಲವರಿಗೆ ಮಾತ್ರ ಗೊತ್ತಿರುತ್ತದೆ. ಆ ಪರಿಣಾಮಕಾರಿಯಾದ ವಿಧಾನವನ್ನು ನಿಮಗೆ ತಿಳಿಸಲು ಇಷ್ಟಪಡುತ್ತೇವೆ.
ಜೇನಿನಲ್ಲಿ ಔಷಧೀಯ ಗುಣಗಳಿವೆ. ಆದ್ದರಿಂದ ಸಕ್ಕರೆ ಬಳಕೆಯನ್ನು ಬದಿಗೊತ್ತಿ, ಜೇನು ಬಳಸಿದರೆ ಆರೋಗ್ಯಕ್ಕೂ ಒಳ್ಳೆಯದು, ಫಿಟ್ ನೆಸ್ ದೊರೆಯುವುದು. ಆದ್ದರಿಂದ ನಿಮ್ಮ ದಿನಿತ್ಯದ ಜೀವನದಲ್ಲಿ ಜೇನನ್ನು ಈ ರೀತಿ ಬಳಸಿ, ಬೊಜ್ಜು ರಹಿತ ದೇಹ ನಿಮ್ಮದಾಗಿಸಿ..

ನಿಂಬೆ ಪಾನೀಯ ಜೊತೆ ಜೇನು
ನಿಂಬೆ ಪಾನೀಯ ಜೊತೆ ಸ್ವಲ್ಪ ಜೇನು ಹಿಂಡಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ರೀತಿ ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಸಿಟ್ರಸ್ ಮತ್ತು ಸಕ್ಕರೆಯಂಶ ದೊರೆಯುವುದು.ಅಲ್ಲದೆ ಬೇಡದ ಕಲ್ಮಶಗಳು ದೇಹದಿಂದ ಹೊರಹೋಗುವುದು.

ಬಾದಾಮಿಯನ್ನು ಜೇನಿನ ಜೊತೆ ತಿನ್ನಿ
ಬೆಳಗ್ಗೆ ಸ್ವಲ್ಪ ಬಾದಾಮಿ ತಿನ್ನುವ ಅಭ್ಯಾಸ ಇರುವವರು 4 ಬಾದಾಮಿಯನ್ನು ಪುಡಿ ಮಾಡಿ, ಜೇನಿನ ಜೊತೆ ಮಿಕ್ಸ್ ಮಾಡಿ ಬೆಳಗ್ಗೆ ತಿಂದರೆ ದೇಹಕ್ಕೆ ವಿಟಮಿನ್ ಇ ಮತ್ತು ಜೇನಿನಲ್ಲಿರುವ ಅಗತ್ಯದ ಖನಿಜಾಂಶ ದೊರೆಯುವುದು.

ಟೀ ಜೊತೆ ಜೇನು
ಗ್ರೀನ್ ಟೀ ಅಥವಾ ಬ್ಲ್ಯಾಕ್ ಟೀಗೆ ಸಕ್ಕರೆ ಬದಲು ಜೇನು ಹಾಕಿ ಕುಡಿಯಿರಿ, ಹೀಗೆ ಮಾಡಿದರೆ ಹೊಟ್ಟೆ ಬೊಜ್ಜಿನ ಸಮಸ್ಯೆ ನಿಮಗಿರುವುದಿಲ್ಲ.

ಮೊಸರಿಗೆ ಜೇನು
ಮೊಸರಿಗೆ ಜೇನು ಬೆರೆಸಿ ತಿಂದಿದ್ದೀರಾ? ಹೀಗೆ ತಿಂದರೆ ರುಚಿಯಾಗಿರುವುದು ಮಾತ್ರವಲ್ಲ, ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಊಟದ ನಂತರ ಜೇನು ಹಾಕಿದ ನೀರು
ಊಟದ ಬಳಿಕ ಬಿಸಿ ನೀರಿಗೆ ಸ್ವಲ್ಪ ಜೇನು ಹಾಕಿ ಕುಡಿದರೆ ಜೀರ್ಣಕ್ರಿಯೆಗೆ ಸಹಕಾರಿ, ಅಲ್ಲದೆ ನಿಮ್ಮ metabolism ಹೆಚ್ಚು ಮಾಡುತ್ತೆ.

ಸಲಾಡ್ ಗೆ ಜೇನು
ಸಲಾಡ್ ಆಹಾರಕ್ರಮದಲ್ಲಿರುವುದು ಉತ್ತಮವಾದ ಆಹಾರ ಪದ್ಧತಿಯಾಗಿದೆ. ಸಲಾಡ್ ಗೆ ಜೇನು ಹಾಕಿದರೆ ಮತ್ತಷ್ಟು ಆರೋಗ್ಯಕರ.

ಹಾಲಿಗೆ ಜೇನು
ಬರೀ ಹಾಲನ್ನು ಕುಡಿದರೆ ಅಷ್ಟು ರುಚಿ ಅನಿಸುವುದಿಲ್ಲ, ಅದರಿಂದಾಗಿ ಸಕ್ಕರೆ ಹಾಕಿ ಕುಡಿಯುತ್ತೇವೆ. ಸಕ್ಕರೆ ಬದಲು ಜೇನು ಹಾಕಿದರೆ 100% ಆರೋಗ್ಯಕರ ಹಾಲನ್ನು ಕುಡಿದಂತೆ.

ಜೇನು ಮತ್ತು ಚಕ್ಕೆ
ಚಕ್ಕೆ ಹಾಕಿ ತಯಾರಿಸಿದ ನೀರಿಗೆ ಜೇನು ಹಾಕಿ ಕುಡಿದರೆ ಹೊಟ್ಟೆ ಬೊಜ್ಜು ಬೇಗನೆ ಕರಗುವುದು.

ಜೇನು ಮತ್ತು ಶುಂಠಿ
ಕೆಮ್ಮು, ಶೀತ ಕಾಣಿಸಿದಾಗ ಶುಂಠಿ ರಸಕ್ಕೆ ಸ್ವಲ್ಪ ಜೇನು ಬೆರೆಸಿ ಸೇವಿಸಿದರೆ ಗಂಟಲು ಕೆರತ, ಕೆಮ್ಮು ಕಡಿಮೆಯಾಗುವುದು.



Click it and Unblock the Notifications
