Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಈ ಲಕ್ಷಣಗಳು ಕಾಣಿಸಿದಾಗ ನೀರು ಕುಡಿಯದಿದ್ದರೆ ಅಪಾಯ
ದಿನಕ್ಕೆ 8-10 ಗ್ಲಾಸ್ ನೀರು ಕುಡಿದರೆ ಒಳ್ಳೆಯದು ಎನ್ನುವುದು ನಮಗೆಲ್ಲಾ ಗೊತ್ತು. ಆದರೆ ಬಾಯಾರಿಕೆಯಾದಾಗ ಕೆಲವೊಮ್ಮೆ ತಂಪು ಪಾನೀಯಾ ಕುಡಿದು ಬಾಯಾರಿಕೆಯನ್ನು ತಣಿಸುತ್ತೇವೆ. ಇನ್ನು ಕೆಲವರು ದಿನದಲ್ಲಿ ಹೆಚ್ಚೆಂದರೆ 3-4 ಗ್ಲಾಸ್ ನೀರು ಮಾತ್ರ ಕುಡಿಯುತ್ತಾರೆ.
ನೀರನ್ನು ಕಮ್ಮಿ ಕುಡಿದಾಗ ನಿಮ್ಮ ದೇಹದಲ್ಲಿ ಕೆಲವೊಂದು ಲಕ್ಷಣಗಳು ಗೋಚರಿಸುತ್ತದೆ. ಅದನ್ನು ಕಡೆಗಣಿಸಿದರೆ ಕಾಯಿಲೆ ಬೀಳುವಿರಿ. ನಮ್ಮ ದೇಹದ ಪ್ರತಿಯೊಂದು ಕಣಕ್ಕೂ ನೀರು ಅವಶ್ಯಕ. ನೀರನಂಶ ಕಮ್ಮಿಯಾದರೆ ಅವುಗಳ ಕಾರ್ಯದಲ್ಲೂ ವ್ಯತ್ಯಾಸ ಉಂಟಾಗುತ್ತದೆ.
ಅದರಲ್ಲೂ ಈ ಕೆಳಗಿನ ಸಮಸ್ಯೆಗಳು ನಿಮಗೆ ಕಂಡು ಬಂದರೆ ನಿಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗಿದೆಯೆಂದು ಅರ್ಥ. ಆಗ ಸಾಕಷ್ಟು ನೀರು ಕುಡಿದರೆ ನಿಮ್ಮ ಸಮಸ್ಯೆ ಕಡಿಮೆಯಾಗುವುದು.

ಮೈಗ್ರೇನ್
ಹೆಚ್ಚಿನವರು ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಾರೆ. ಮೈಗ್ರೇನ್ ಕಾಣಿಸಿದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿದೆಯೆಂದು ಅರ್ಥ.

ಹೀಟ್ ಸ್ಟ್ರೋಕ್
ನಮ್ಮ ದೇಹ ಬೆವರುವುದು ಕೂಡ ಅವಶ್ಯಕ. ನಮ್ಮ ದೇಹ ಬೆವರದೆ, ದೇಹದ ಉಷ್ಣತೆ ಹೆಚ್ಚಾದರೆ ಹೀಟ್ ಸ್ಟ್ರೋಕ್ ಆಗಿ ವ್ಯಕ್ತಿ ಸಾಯಬಹುದು, ಎಚ್ಚರ.

ಮಲಬದ್ಧತೆ
ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಮಲ ಬದ್ಧತೆ ಸಮಸ್ಯೆ ಕಾಣಿಸುವುದು. ಈ ರೀತಿ ಕಂಡು ಬಂದರೆ ಸಾಕಷ್ಟು ನೀರು ಕುಡಿಯಿರಿ.

ತ್ವಚೆ ಡ್ರೈಯಾಗಿ, ಒರಟಾಗುವುದು
ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತ್ವಚೆ ತನ್ನ ಮೃದುತ್ವವನ್ನು ಕಳೆದುಕೊಳ್ಳುತ್ತದೆ. ಡ್ರೈ ತ್ವಚೆಯಾದರೆ ಯಾವ ಕ್ರೀಮ್ ಹಚ್ಚಬೇಕೆಂದು ತಲೆ ಕೆಡಿಸಿಕೊಳ್ಳುವ ಬದಲು ನೀರನ್ನು ಹೆಚ್ಚಾಗಿ ಕುಡಿಯುವತ್ತ ಗಮನ ಕೊಡುವುದು ಒಳ್ಳೆಯದು.

ತೀವ್ರವಾದ ಎದೆ ಬಡೆತ
ದೇಹದಲ್ಲಿ ನೀರಿನಂಶ ಕಮ್ಮಿಯಾದರೆ ಎದೆ ಬಡೆತ ತೀವ್ರವಾಗಿ, ರಕ್ತ ಸಂಚಾರಕ್ಕೆ ತೊಂದರೆ ಉಂಟಾಗುವುದು. ನೀರನ್ನು ಕುಡಿಯದಿದ್ದರೆ ಈ ರೀತಿಯ ಸಮಸ್ಯೆಗಳನ್ನು ನೀವೇ ಆಹ್ವಾನಿಸಿದಂತೆ.

ಸ್ನಾಯು ಸೆಳೆತ
ಸ್ನಾಯು ಸೆಳೆತ ದೇಹದಲ್ಲಿ ನೀರಿನಂಶ ಕಮ್ಮಿಯಾದರೆ ಉಂಟಾಗುವುದು. ವ್ಯಾಯಾಮ ಮಾಡುವಾಗ ಸ್ನಾಯು ಸೆಳೆತ ಉಂಟಾದರೆ ನಿಮ್ಮ ದೇಹಕ್ಕೆ ನೀವು ನೀರನ್ನು ಹೆಚ್ಚಾಗಿ ಒದಗಿಸಬೇಕೆನ್ನುವುದು ಸೂಚಿಸುತ್ತದೆ.

ತಲೆಸುತ್ತು
ನಿರ್ಜಲೀಕರಣ ಉಂಟಾಗಿ, ದೇಹದಲ್ಲಿ ಬೆವರು ಉತ್ಪತ್ತಿಯಾಗದಿದ್ದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿದೆ ಎಂದು ಅರ್ಥ.

ಹಳದಿ ಬಣ್ಣದ ಮೂತ್ರ
ನಿಮ್ಮ ದೇಹದಲ್ಲಿ ನಿರಿನಂಶ ಕಮ್ಮಿಯಾದರೆ ಹಳದಿ ಬಣ್ಣದಲ್ಲಿ ಮೂತ್ರ ವಿಸರ್ಜನೆಯಾಗುವುದು. ಹಳದಿ ಬಣ್ಣದ ಮೂತ್ರ ಕಂಡು ಬಂದರೆ ಸಾಕಷ್ಟು ನೀರು ಕುಡಿಯಿರಿ. ತುಂಬಾ ನೀರು ಕುಡಿದ ಬಳಿಕವೂ ಮೂತ್ರ ಹಳದಿ ಬಣ್ಣದಲ್ಲಿದ್ದರೆ ತಕ್ಷಣ ವೈದ್ಯರನ್ನು ಕಾಣಿ.

ಬಾಯಿ ಒಣಗುವುದು
ನಮ್ಮ ದೇಹಕ್ಕೆ ನೀರಿನ ಅವಶ್ಯಕತೆ ಇರುವಾಗ ಸ್ವಾಭಾವಿಕವಾಗಿ ಬಾಯಾರಿಕೆಯಾಗುತ್ತದೆ. ಆಗಾಗ ಬಾಯಿ ಡ್ರೈಯಾದಂತೆ ಅನಿಸಿದರೆ ನೀವು ನೀರನ್ನು ಹೆಚ್ಚಾಗಿ ಕುಡಿಯಬೇಕೆನ್ನುವುದು ಸೂಚಿಸುತ್ತದೆ.



Click it and Unblock the Notifications