ಸ್ಟ್ರೆಸ್ ಹೋಗಲಾಡಿಸಲು ಕೆಲ ಸೆಕ್ಸಿ ಮಾರ್ಗಗಳು

By Super

ಇಂದಿನ ಕಾಲದಲ್ಲಿ ಮಕ್ಕಳಿಂದ ವೃದ್ಧರವರೆಗಿನವರನ್ನು ಕಾಡುವ ಸಮಸ್ಯೆಯೆಂದರೆ ಸ್ಟ್ರೆಸ್ ಅಥವಾ ಮಾನಸಿಕ ಒತ್ತಡ. ಇಂದಿನ ಜೀವನ ಶೈಲಿ, ಬದಲಾದ ಆಹಾರ ಕ್ರಮ, ಎಲ್ಲಾ ಕಡೆ ತೋರಿಬರುವಂಥಹ ಸ್ಪರ್ಧಾತ್ಮಕ ಮನೋಭಾವ ಇವೆಲ್ಲವೂ ಕಾರಣವಾಗಬಹುದು. ಹಲವರಿಗೆ ಸ್ಟ್ರೆಸ್ ಎಂಬುದು ಒಂದು ಜೀವನ ಶೈಲಿ ಎಂಬಷ್ಟು ಸಾಮಾನ್ಯವಾಗಿರುವ ವಿಷಯವಾಗಿದೆ.

ಸ್ಟ್ರೆಸ್ ಕೆಟ್ಟದು ಎಂದಲ್ಲ. ಸಣ್ಣ ಪ್ರಮಾಣದ ಮಾನಸಿಕ ಒತ್ತಡ ನಿಮ್ಮ ಕಾರ್ಯಕ್ಷಮತೆ ಹೆಚ್ಚಿಸುವುದಲ್ಲದೆ ನಿಮ್ಮ ಕೆಲಸದಲ್ಲಿ ಅಧಿಕವಾಗಿ ತೊಡಗಿಸಿಕೊಳ್ಳಲು ನಿಮ್ಮನ್ನು ಪ್ರೇರೇಪಿಸುತ್ತದೆ. ಆದರೆ ಈ ಒತ್ತಡ ಹೆಚ್ಚಾದಂತೆ ನಿಮ್ಮ ಮನಸ್ಸು ಹಾಗೂ ದೇಹದ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ. ಒತ್ತಡ ಎಂಬುದು ನಿಮ್ಮನ್ನು ಎಲ್ಲಾ ಥರದಲ್ಲೂ ಬಾಧಿಸುತ್ತದೆ. ನಿದ್ರಾಹೀನತೆ ಉಂಟಾಗಬಹುದು. ನಿದ್ರೆ ಬಂದರೂ ಅರ್ಧ ರಾತ್ರಿಯಲ್ಲಿ ಎಚ್ಚರವಾಗಬಹುದು. ಹೀಗೆ ಎಚ್ಚರವಾದ ಬಳಿಕ ಮತ್ತೆ ನಿದ್ರೆಗೆ ಜಾರುವುದು ಕಷ್ಟವಾಗಬಹುದು. ಮೀಟಿಂಗ್ ವೇಳೆಯಲ್ಲಿ ಮಾತುಗಳು ತೊದಲಿದಂತೆ, ಅಥವಾ ಮಾತನಾಡಲು ಶಬ್ದಗಳು ಸಿಗದಂಥಹ ಅನುಭವವೂ ಆಗಬಹುದು. ದೇಹದಲ್ಲಿನ ಶಕ್ತಿಯೂ ಕುಗ್ಗಿದಂತಹ ಅನುಭವವಾಗಬಹುದು.

ಸ್ಟ್ರೆಸ್ ಅನ್ನು ಮೊದಲ ಹಂತದಲ್ಲೇ ಗುರುತಿಸಿವುದರಿಂದ ಇದರಿಂದ ಮುಕ್ತಿ ಪಡೆಯಬಹುದು. ನಿಮ್ಮ ಜೀವನವನ್ನು ಒತ್ತಡ ಮುಕ್ತಗೊಳಿಸಲು ನಾವು 10 ಸೆಕ್ಸಿ ವಿಧಾನಗಳನ್ನು ಸಂಗ್ರಹಿಸಿದ್ದೇವೆ. ಇವುಗಳನ್ನು ಅನುಸರಿಸಿ ನಿಮ್ಮ ಜೀವನ ಕ್ರಮವನ್ನು ಉತ್ತಮಗೊಳಿಸಿ.

1. ಆಲಸ್ಯಕ್ಕೆ ನೀರೆರಚಿ

1. ಆಲಸ್ಯಕ್ಕೆ ನೀರೆರಚಿ

ನೀವು ಆಗಾಗ ತಲೆನೋವು, ನಿಧಾನ ಪ್ರತಿಕ್ರಿಯೆ, ಸಿಡುಕು, ಆಲಸ್ಯ ಮತ್ತು ಸುಸ್ತು ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವಿರೆ? ಇದಕ್ಕೆ ಕಾರಣ ನಿರ್ಜಲೀಕರಣ(dehydration). ಮಾನಸಿಕ ಒತ್ತಡ ಉಂಟಾದಾಗ ನೀವು ಮದ್ಯದ ಕಡೆಗೆ ಆಕರ್ಷಿತರಾಗಬಹುದು, ಆದರೆ ನಿಜವಾಗಿಯೂ ನೀವು ಕುಡಿಯಬೇಕಾದದ್ದು ನೀರು. ಮದ್ಯ ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹಾನಿಗೊಳಿಸುವುದಲ್ಲದೆ, ನಿಮ್ಮ ದೇಹವನ್ನು ಇನ್ನಷ್ಟು ನಿರ್ಜಲೀಕರಣಗೊಳಿಸುತ್ತದೆ.

2. ಮೀಟಿಂಗ್ ಗೆ ಮುನ್ನ ಹಾಲು ಕುಡಿಯಿರಿ

2. ಮೀಟಿಂಗ್ ಗೆ ಮುನ್ನ ಹಾಲು ಕುಡಿಯಿರಿ

ಹೌದು, ಹಾಲು ಒತ್ತಡವನ್ನು ಕಡಿಮೆಗೊಳಿಸುತ್ತದೆ. ಸ್ಟ್ರೆಸ್, ದೇಹದಲ್ಲಿನ ಸೆರೋಟೋನಿನ್ ಎಂಬ ಶಾಂತತೆಯ ರಾಸಾಯನಿಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದರೆ ಹಾಲಿನಲ್ಲಿ ವ್ಹೆಯ್ ಪ್ರೋಟೀನ್ ಇದ್ದು, ಇದು ಟ್ರಿಪ್ಟೊಫನ್ ಎಂಬ ಸೆರೋಟೋನಿನ್ ನ ಉತ್ಪತ್ತಿಗೆ ಸಹಾಯಕವಾಗಿರುವ ರಾಸಾಯನಿಕವನ್ನು ಶೇಕಡಾ 43 ರಷ್ಟು ಹೆಚ್ಚಿಸುತ್ತದೆ. ಸಕ್ಕರೆ ಹಾಗೂ ಕಾಫಿಯನ್ನು ದೂರವಿಡಿ.

3. ಗೋ ಗ್ರೀನ್

3. ಗೋ ಗ್ರೀನ್

ಹಸಿರು ಸೊಪ್ಪುಗಳಾದ ಅರುಗುಲ ಹಾಗೂ ಪಾಲಕ್ ವಿಟಮಿನ್ ಬಿ ಯುಕ್ತವಾಗಿದ್ದು, ಇದು ಸೆರೋಟೋನಿನ್, ಡೋಪಮೈನ್ ಮತ್ತು ನೋರೆಪಿನೆಫ್ರಿನ್ ಎಂಬ ಆರಾಮದಾಯಕ ಹಾರ್ಮೋನ್ ಗಳ ತಯಾರಿಯಲ್ಲಿ ಮೂಲಭೂತ ಘಟಕವಾಗಿದೆ. ಅಧ್ಯಯನದ ಪ್ರಕಾರ ವಿಟಮಿನ್ B6 ನ ಕೊರತೆಯಿಂದ ಸಿಡುಕು, ಅಂಜಿಕೆ ಹಾಗೂ ಖಿನ್ನತೆ ಕೂಡಾ ಉಂಟಾಗಬಹುದು. ನಿಮ್ಮ ಬಾಸ್ ಜೊತೆಗಿನ ಮುಖ್ಯ ಮೀಟಿಂಗ್ ಗೆ ಮೊದಲು ಒಂದು ಬೌಲ್ ಸಲಾಡ್ ಗೆ ಆರ್ಡರ್ ಕೊಡಿ.

4. ಸಮಾಧಾನದಿಂದ ನಿಮ್ಮ ಕೈಗಳ ಸಹಾಯದಿಂದ ಮಾತನಾಡಿ

4. ಸಮಾಧಾನದಿಂದ ನಿಮ್ಮ ಕೈಗಳ ಸಹಾಯದಿಂದ ಮಾತನಾಡಿ

ಇಂಟರ್ವ್ಯೂ ಸಮಯದಲ್ಲಿ ಕೈಗಳನ್ನು ತೊಡೆಯ ಮೇಲಿರಿಸಿ, ಮೊಣಕೈ ಸ್ವಲ್ಪ ಬಗ್ಗಿಸಿ, ಬೆರಳುಗಳು ಸೋಕುವಂತಿರಲಿ. ನಿಮ್ಮ ಶರೀರವನ್ನು ಶಾಂತವಾಗಿಡಲು ಇದು ಉತ್ತಮ ವಿಧಾನ. ಇದಲ್ಲದೆ ನೀವು ಮಾತನಾಡಲು ಉತ್ಸುಕರಾದಂತೆ ಕಾಣುವಿರಿ.

5. ನಿಮ್ಮ ಕ್ಯಾಲ್ಫ್ ನ ಮೇಲೆ ಒತ್ತಡ ಹಾಕಿ

5. ನಿಮ್ಮ ಕ್ಯಾಲ್ಫ್ ನ ಮೇಲೆ ಒತ್ತಡ ಹಾಕಿ

ಮೆದುಳಿನ ಬದಲಾಗಿ ನಿಮ್ಮ ಕ್ಯಾಲ್ಫ್ (calf) ಸ್ನಾಯುವಿನ ಮೇಲೆ ಒತ್ತಡ ಹಾಕಿ. ಕ್ಯಾಲ್ಫ್ ಅನ್ನು ಬಿಗಿ ಹಿಡಿಯುವುದರಿಂದ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಬಹುದು. ನಿಮ್ಮ ಕೆಳ ಕಾಲುಗಳ ಮೇಲೆ ಒತ್ತಡ ಹಾಕುವುದರಿಂದ, ಕ್ಲಿಷ್ಟ ಸನ್ನಿವೇಶಗಳನ್ನು ಗೆಲ್ಲಬಹುದು.

6. ಹಸಿರು ಚುಕ್ಕಿಗಳ ಸಂಕೇತ ಪಾಲಿಸಿರಿ

6. ಹಸಿರು ಚುಕ್ಕಿಗಳ ಸಂಕೇತ ಪಾಲಿಸಿರಿ

ಇದರ ಅರ್ಥ ನೀವು ಸಸ್ಯಾಹಾರಿ ಆಗಬೇಕೆಂದಲ್ಲ. ನಿಮ್ಮ ಫೋನ್ ನಲ್ಲಿ ಕಾಣಿಸುವ ಹಸಿರು ನಿಶಾನೆಯು, ಉತ್ತರಿಸುವ ಮೊದಲು ಒಂದು ದೀರ್ಘ ಶ್ವಾಸ ಎಳೆದುಕೊಳ್ಳಿ ಎಂಬುದರ ಗೋಪ್ಯ ನಿಶಾನೆಯಾಗಿರಲಿ.ದೀರ್ಘ ಶ್ವಾಸ ಸ್ಟ್ರೆಸ್ ಕಡಿಮೆ ಮಾಡುವುದಲ್ಲದೆ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

7. ಸಂಗೀತದ ಮೊರೆ ಹೋಗಿ

7. ಸಂಗೀತದ ಮೊರೆ ಹೋಗಿ

ಕೆಲಸದ ವೇಳೆಯಲ್ಲಿ ನಿಮಗೆ ಇಷ್ಟವಾದ ಸಂಗೀತವನ್ನು ಆಸ್ವಾದಿಸಿ. ಪ್ರಪಂಚದಾದ್ಯಂತ ನಡೆಸಿದ ಸಮೀಕ್ಷೆಯ ಪ್ರಕಾರ, ಕೆಲಸದ ವೇಳೆಯಲ್ಲಿ ಸಂಗೀತ ಒಳ್ಳೆಯ ಸ್ಟ್ರೆಸ್ ಬಸ್ಟರ್ ಆಗಿದೆ, ಇದಲ್ಲದೆ ಇದು ಸಾಮಾನ್ಯ ಶೀತವನ್ನು ಕಡಿಮೆಗೊಳಿಸುತ್ತದೆ. ಇದನ್ನು ನೀವೇ ಪರೀಕ್ಷಿಸಿಕೊಳ್ಳಿ.

8. ಗಂಜಿ ತಿಂದು ಶಕ್ತಿ ಪಡೆಯಿರಿ

8. ಗಂಜಿ ತಿಂದು ಶಕ್ತಿ ಪಡೆಯಿರಿ

ಒಂದು ಬೌಲ್ ಓಟ್ಸ್ ನಿಮಗೆ ಬೇಕಾಗಿರುವ ಶಕ್ತಿ ನೀಡುತ್ತದೆ. ಓಟ್ಸ್ ನಲ್ಲಿ ಕಡಿಮೆ ಪ್ರಮಾಣದ ಗ್ಲೈಕಮಿಕ್ ಇಂಡೆಕ್ಸ್(GI) ಇದ್ದು, ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುವ ಮೂಲಕ ನೀವು ಸದಾ ಕೆಲಸಕ್ಕೆ ಸಿದ್ಧರಾಗುವಂತೆ ಮಾಡುತ್ತದೆ.

9.ಆರೆಂಜ್ ಜ್ಯೂಸ್ ಮೂಲಕ ಒತ್ತಡವನ್ನು ಕಡಿಮೆಗೊಳಿಸಿ

9.ಆರೆಂಜ್ ಜ್ಯೂಸ್ ಮೂಲಕ ಒತ್ತಡವನ್ನು ಕಡಿಮೆಗೊಳಿಸಿ

ಒತ್ತಡದ ಸಂದರ್ಭದಲ್ಲಿ ವಿಟಮಿನ್ ಸಿ ಪ್ರಮಾಣ ಕುಸಿಯುತ್ತದೆ. ಇದನ್ನು ಹೆಚ್ಚಿಸಲು ಆರೆಂಜ್ ಜ್ಯೂಸ್ ಗಿಂತ ಒಳ್ಳೆಯ ಉಪಾಯವೇನಿದೆ? ಊಟದ ಜೊತೆ ವಿಟಮಿನ್ ಸಿ ಯುಕ್ತ ಆಹಾರವನ್ನು ಸೇರಿಸಿ.

10. ಅದ್ಭುತ ಬಾದಾಮಿ

10. ಅದ್ಭುತ ಬಾದಾಮಿ

ಖಿನ್ನರಾಗಿರುವಿರೇ? ಮೆಗ್ನೀಷಿಯಂ ನ ಕೊರತೆಯಿಂದ ಇರಬಹುದು. ಕೂಡಲೇ ಮೆಗ್ನೀಷಿಯಂ ಯುಕ್ತ ಆಹಾರವಾದ ಬಾದಾಮಿ ಮುಂತಾದುವುಗಳನ್ನು ಸೇವಿಸಿರಿ

X
Desktop Bottom Promotion