ಹೊಟ್ಟೆ ಬೊಜ್ಜು ಕರಗಿಸಲು ಪಾಲಿಸಬೇಕಾದ ನಿಯಮಗಳಿವು

ಹೊಟ್ಟೆಯ ಬೊಜ್ಜು ಇಲ್ಲದಿದ್ದರೆ ಸ್ವಲ್ಪ ದಪ್ಪವಿದ್ದರೂ ಆಕರ್ಷಕವಾಗಿ ಕಾಣುವಿರಿ. ತೆಳ್ಳಗಿದ್ದು ಹೊಟ್ಟೆ ಬೊಜ್ಜಿದ್ದರೆ ಅಸಹ್ಯವಾಗಿ ಕಾಣುವುದು. ಹೊಟ್ಟೆ ಬೊಜ್ಜು ದಪ್ಪಗಿದ್ದವರಿಗೆ ಮಾತ್ರವಲ್ಲ, ತೆಳ್ಳಗಿದ್ದವರಲ್ಲೂ ಬರಬಹುದು. ಹೊಟ್ಟೆಯ ಬೊಜ್ಜು ಬಂದರೆ ಅದನ್ನು ಕರಗಿಸುವತ್ತ ಗಮನ ಹರಿಸಲೇಬೇಕು. ಈ ರೀತಿ ಮಾಡುವುದು ಸುಂದರವಾಗಿರಲು ಅನ್ನುವ ಬದಲು, ಆರೋಗ್ಯಕರವಾಗಿ ಇರಲು ಎನ್ನಬಹುದು.

ಹೊಟ್ಟೆಯ ಬೊಜ್ಜು ಕರಗಿಸಲು ಕೆಲವೊಂದು ನಿಯಮಗಳನ್ನು ಅನುಸರಿಸಿದರೆ ಮಾತ್ರ ಸಾಧ್ಯ. ಆ ನಿಯಮಗಳಾವುವು ಎಂದು ತಿಳಿಯಲು ಮುಂದೆ ಓದಿ:

ಹೊತ್ತಿಗೆ ಸರಿ ಊಟ ಮಾಡುವುದು

ಹೊತ್ತಿಗೆ ಸರಿ ಊಟ ಮಾಡುವುದು

ವೈದ್ಯರ ಪ್ರಕಾರ ಪ್ರೊಟೀನ್ ಅಂಶವಿರುವ ಆಹಾರವನ್ನು ಸಾಯಂಕಾಲ 3-4 ಗಂಟೆಗಳ ಒಳಗೆ ಸೇವಿಸಬೇಕು. ಇಷ್ಟೊತ್ತಿಗೆ ತಿಂದರೆ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ದೇಹದಲ್ಲಿ ಸಕ್ಕರೆ ಅಂಶವನ್ನು ಸಮತೋಲದಲ್ಲಿ ಇಟ್ಟಷ್ಟೂ ದೇಹವು ಫಿಟ್ ಆಗಿ ಇರುತ್ತದೆ.

2. ಹಸಿರು ಸೊಪ್ಪುಗಳು

2. ಹಸಿರು ಸೊಪ್ಪುಗಳು

ಬ್ರೊಕೋಲಿ, ಬೀನ್ಸ್ ಹೀಗೆ ವಿಟಮಿನ್ ಎ, ಸಿ, ಕೆ ಇರುವ ಆಹಾರಗಳನ್ನು ಹೆಚ್ಚಾಗಿ ತಿಂದರೆ ತಿನ್ನಿ. ಈ ಆಹಾರಗಳು ತಿಂದರೆ ಸುಲಭದಲ್ಲಿ ಜೀರ್ಣವಾಗುವುದರಿಂದ ಹೊಟ್ಟೆ ಬೊಜ್ಜು ಬರುವುದಿಲ್ಲ. ಆಲೀವ್ ಎಣ್ಣೆಯನ್ನು ಅಡುಗೆಗೆ ಬಳಸಿದರೆ ಹೊಟ್ಟೆಯ ಬೊಜ್ಜುನ ಕರಗಿಸಲು ಸಹಕಾರಿಯಾಗಿದೆ.

3. ದವಸ ಧ್ಯಾನ್ಯಗಳು

3. ದವಸ ಧ್ಯಾನ್ಯಗಳು

ತುಂಬಾ ಪಾಲಿಷ್ ಮಾಡಿದ ಅಕ್ಕಿಯಿಂದ ತಯಾರಿಸಿದ ಆಹಾರಕ್ಕಿಂತ ಕೆಂಪಕ್ಕಿಯಿಂದ ತಯಾರಿಸಿದ ಆಹಾರಗಳನ್ನು ಸೇವಿಸಿ. ದವಸ ಧಾನ್ಯಗಳಿರುವ ಆಹಾರ ಹೆಚ್ಚಾಗಿ ಸೇವಿಸುವುದರಿಂದ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಈ ದವಸ ಧಾನ್ಯಗಳು ಹೊಟ್ಟೆಯಲ್ಲಿ ಬೊಜ್ಜು ಕರಗಿಸಲು ಅವಕಾಶ ಕೊಡುವುದಿಲ್ಲ.

4. ಕೊಬ್ಬಿನಂಶವಿಲ್ಲದ ಮೊಸರು

4. ಕೊಬ್ಬಿನಂಶವಿಲ್ಲದ ಮೊಸರು

ಮೊಸರು ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ. ಇದನ್ನು ಕುಡಿದರೆ ಗ್ಯಾಸ್ ಸಮಸ್ಯೆ, ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಿ ಹೊಟ್ಟೆ ದಪ್ಪ ಕಾಣದಂತೆ ಮಾಡುತ್ತದೆ.

 ಸಾಕಷ್ಟು ನೀರು ಕುಡಿಯಬೇಕು

ಸಾಕಷ್ಟು ನೀರು ಕುಡಿಯಬೇಕು

ಇದು ದೇಹದಲ್ಲಿ ತೇವಾಂಶವನ್ನು ಕಾಪಾಡಿ ದೇಹದಲ್ಲಿರುವ ಕಷ್ಮಲಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

6. ಮೆಂತೆ

6. ಮೆಂತೆ

ಒಂದು ಚಮಚ ಮೆಂತೆ ಕಾಳನ್ನು ಒಂದು ರಾತ್ರಿ ನೆನೆ ಹಾಕಬೇಕು. ಇದನ್ನು ಬೆಳಗ್ಗೆ ಬಿಸಿನೀರಿನಲ್ಲಿ ಹಾಕಿ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಈ ರೀತಿ ತಿಂದರೆ ಹೊಟ್ಟೆ ಶುದ್ಧಿಯಾಗುತ್ತದೆ. ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ. ಅಲ್ಲದೆ ದೇಹದಲ್ಲಿರುವ ಆಧಿಕ ಕೊಬ್ಬನ್ನು ಕರಗಿಸುತ್ತದೆ.

* ಮೆಂತೆ ಪುಡಿಯನ್ನು ಕಂದು ಬಣ್ಣ ಬರುವವರೆಗೆ ಹುರಿದು ಪುಡಿ ಮಾಡಬೇಕು. ಅದನ್ನು ಮೊಸರು ಜೊತೆ ಮಿಶ್ರ ಮಾಡಿ ತಿನ್ನಬಹುದು.

* ಹೊಟ್ಟೆ ಬೊಜ್ಜನ್ನು ನಿಯಂತ್ರಿಸಲು ಬ್ಲಾಕ್ ಟೀ ಮಾಡಿ ಅದರಲ್ಲಿ ಸ್ವಲ್ಪ ಮೆಂತೆ ಪುಡಿ ಹಾಕಿ ಕುಡಿದರೆ ಬೊಜ್ಜು ಹೊಟ್ಟೆ ಬರುವುದಿಲ್ಲ.

7. ಗೋಧಿ ಹುಲ್ಲು

7. ಗೋಧಿ ಹುಲ್ಲು

ಜ್ಯೂಸ್ ನಂತೆ ಕುಡಿಯಬಹುದಾದ ಈ ಗೋಧಿ ಹುಲ್ಲಿನ ರಸದಲ್ಲಿ ಅಧಿಕವಾದ ನಾರಿನಂಶವಿದೆ. ಈ ನಾರಿನಂಶ ದೇಹದಲ್ಲಿ ಬೊಜ್ಜು ಮನೆಮಾಡದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಕಬ್ಬಿಣಾಂಶ, ಪ್ರೊಟೀನ್ ಕೂಡ ಇದೆ. ಪಾಲಾಕ್ ಸೊಪ್ಪು ಮತ್ತು ಮೊಳಕೆ ಕಾಳಿಗಿಂತ ಹೆಚ್ಚಿನ ಪ್ರಯೋಜನವನ್ನು ಗೋಧಿ ಹುಲ್ಲಿನಿಂದ ಪಡೆದುಕೊಳ್ಳಬಹುದು.

8. ಗ್ರೀನ್ ಟೀ

8. ಗ್ರೀನ್ ಟೀ

ಗ್ರೀನ್ ಟೀ ಕುಡಿಯುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣ ಪರಿಣಾಮಕಾರಿಯಾಗಿ ಸಾಧ್ಯವಿದೆ. ದಿನನಿತ್ಯ 2 ಕಪ್ ಗ್ರೀನ್ ಟೀ ಕುಡಿದರೆ ಟೀಯಲ್ಲಿನ ಆಂಟಿಯಾಕ್ಸಿಡಂಟ್ ನಿಮ್ಮನ್ನು ಫಿಟ್ ಮತ್ತು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ.

9. ಸೋರೆ ಕಾಯಿ

9. ಸೋರೆ ಕಾಯಿ

ಸೋರೆಕಾಯಿಯಲ್ಲಿ ಕಡಿಮೆ ಕ್ಯಾಲೊರಿ ಇರುವುದರಿಂದ ಈ ತರಕಾರಿಗೆ ಹೆಚ್ಚು ಪ್ರಾಮುಖ್ಯತೆಯಿದೆ. ಸೋರೆಕಾಯಿಯಲ್ಲಿ ಫೈಬರ್ ಮತ್ತು ನೀರಿನಂಶ ಹೆಚ್ಚಿದೆ. ಸೋರೆಕಾಯಿ ಜ್ಯೂಸನ್ನು ಬೆಳಗ್ಗಿನ ಜಾವ ಸೇವಿಸಿದರೆ ಹೆಚ್ಚು ಉಪಯೋಗ ಹೊಂದಬಹುದು. ಇದರಲ್ಲಿನ ಫೈಬರ್ ಅಂಶ ದೇಹದಲ್ಲಿ ಬೊಜ್ಜು ಉಳಿಯದಂತೆ ತಡೆಯುತ್ತದೆ.

10. ಬೂದುಗುಂಬಳಕಾಯಿ

10. ಬೂದುಗುಂಬಳಕಾಯಿ

ಬೂದುಗುಂಬಳಕಾಯಿ ತೂಕವನ್ನು ಬೇಗ ಇಳಿಸುತ್ತೆ. ಇದರಲ್ಲಿ ಅನೇಕ ರೀತಿಯ ಪೋಷಕಾಂಶ ಮತ್ತು ಔಷಧೀಯ ಗುಣಗಳೂ ಇದೆ. ಬೂದುಗುಂಬಳ ಬೀಜ ಮತ್ತು ತಿರುಳಿನಲ್ಲಿ ಆರೋಗ್ಯಕ್ಕೆ ಅನುವಾಗುವ ಅಂಶಗಳಿದೆ. ಬೂದುಗುಂಬಳಕಾಯಿಯನ್ನು ಸೇವಿಸುವುದರಿಂದ ಹೊಟ್ಟೆ ತುಂಬುವುದಷ್ಟೇ ಅಲ್ಲ, ದೇಹದಲ್ಲಿ ನೀರಿನಂಶ ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ.

11. ವಿನಿಗರ್

11. ವಿನಿಗರ್

ಒಂದು ಅಥವಾ 2 ಚಮಚ ಆಪಲ್ ಸೈಡರ್ ವಿನಿಗರ್ ಅನ್ನು 12-15 ದಿನಗವರೆಗೆ ಸೇವಿಸಿದರೆ ದೇಹದ ತೂಕ ಕಡಿಮೆಯಾಗುವುದು. ಇದರಲ್ಲಿ acetic ಆಸಿಡ್ ಇದ್ದು ದೇಹದಲ್ಲಿರುವ ಕೊಬ್ಬನ್ನು ಕರಗಿಸಿ ತೆಳ್ಳಗೆ ಮಾಡಲು ಸಹಕಾರಿಯಾಗಿದೆ.

12. ವ್ಯಾಯಾಮ

12. ವ್ಯಾಯಾಮ

ಸೈಕಲ್ ತುಳಿಯುವುದು ತುಂಬಾ ಒಳ್ಳೆಯ ವ್ಯಾಯಾಮವಾಗಿದ್ದು ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ದಿನಾ ಅರ್ಧ ಗಂಟೆ ಸೈಕಲ್ ತುಳಿದರೆ ದೇಹದ ತೂಕ ಕಡಿಮೆಯಾಗುವುದಲ್ಲದೆ, ಸ್ನಾಯುಗಳು ಬಲವಾಗುತ್ತದೆ, ಹೃದಯದ ಸ್ವಾಸ್ಥ್ಯಕ್ಕೂ ಒಳ್ಳೆಯದು.

ಬೇಗನೆ ಹೊಟ್ಟೆ ಕರಗಿಸಬೇಕೆಂದು ಬಯಸುವವರು ಸಿಟ್ ಅಪ್ ಅಂದರೆ ಕೂತು ಏಳುವ ವ್ಯಾಯಾಮ ಮಾಡಿದರೆ ಒಳ್ಳೆಯದು. ಇದನ್ನು ಮಾಡಲು ಮೆಷಿನ್‌ಗಳನ್ನು (ಯಂತ್ರಗಳನ್ನು) ಕೊಳ್ಳಬಹುದು, ಈ ರೀತಿ ಕೊಳ್ಳುವಾಗ ಆ ಮೆಷಿನ್ ನಿಮಗೆ ವ್ಯಾಯಾಮ ಮಾಡಲು ಆರಾಮದಾಯವಾಗಿದೆಯೆ (ಕಂಫರ್ಟ್ ಆಗಿದೆಯೆ) ಎಂದು ನೋಡಿ ಕೊಳ್ಳಬೇಕು.

13. ಕೂರುವ ಭಂಗಿ

13. ಕೂರುವ ಭಂಗಿ

ಹೀಗೆಲ್ಲಾ ಕಂಪ್ಯೂಟರ್ ನ ಎದುರುಗಡೆ ತುಂಬಾ ಹೊತ್ತು ಕೂತು ಕೆಲಸ ಮಾಡುವುದರಿಂದ ಹೊಟ್ಟೆ ಬರಲಾರಂಭಿಸುತ್ತದೆ. ಆದ್ದರಿಂದ ಕೂರುವಾಗ ನೇರವಾಗಿ ಕೂರಬೇಕು, ಸಮಯ ಸಿಕ್ಕಿದಾಗ ದೀರ್ಘ ಉಸಿರನ್ನು ತೆಗೆದು ಬಿಡುವ ವ್ಯಾಯಾಮ ಮಾಡುತ್ತಿರಬೇಕು . ಹೀಗೆ ಮಾಡಿ ದೇಹಕ್ಕೆ ಸುಂದರ ಆಕಾರವನ್ನು ನೀಡಬಹುದು.

X
Desktop Bottom Promotion