Latest Updates
-
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್?
ಬ್ರೆಡ್ ಹೆಚ್ಚಾಗಿ ತಿನ್ನುವುದನ್ನು ಇಂದೇ ನಿಲ್ಲಿಸಿ!
ದಿನನಿತ್ಯದ ಜಂಜಾಟದಲ್ಲಿ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವಾಗ ಪ್ರತಿ ದಿನ ಬೆಳಗಿನ ತಿಂಡಿ ಮಾಡಲು ಸಮಯವಿರುವುದಿಲ್ಲ. ಸುಲಭದಲ್ಲಿ ಮಾಡಬಹುದಾದ ತಿಂಡಿ ಉಪ್ಪಿಟ್ಟು ಅನ್ನುವ ಕಾಲ ಹೋಯಿತು, ಕೇವಲ ಹತ್ತೇ ನಿಮಿಷದಲ್ಲಿ ತಯಾರಿಸಬಹುದಾದ ಸ್ಯಾಂಡ್ ವಿಚ್ ನಮಗೆ ತುಂಬಾ ಪ್ರಿಯವಾಗುವುದು. ಅಲ್ಲದೆ ಸ್ಯಾಂಡ್ ವಿಚ್ ಅನ್ನುವ ಪಾಸ್ಟ್ ಫುಡ್ ತಿಂದಾಗ ಬೇಗನೆ ಹೊಟ್ಟೆ ತುಂಬುವುದರಿಂದ ಸಂಜೆ ಸ್ನ್ಯಾಕ್ಸ್ ಗೂ ಕೂಡ ಇದನ್ನೇ ತಿನ್ನುವ ಎಷ್ಟೋ ಜನರು ಇದ್ದಾರೆ.
ಆದರೆ ಬ್ರೆಡ್ ಪದಾರ್ಥಗಳನ್ನು ತಿನ್ನುವುದು ಕೂಡ ಆರೋಗ್ಯಕ್ಕೆ ಸೂಕ್ತವಲ್ಲ ಎಂದು ಎಷ್ಟೋ ಭಾರಿ ಗಮನಿಸಿರುವುದೇ ಇಲ್ಲ. ಆದ್ದರಿಂದ ಅದರಿಂದಾಗುವ ಆರೋಗ್ಯದ ತೊಂದರೆ ಬಗ್ಗೆ ಮೊದಲು ತಿಳಿದುಕೊಳ್ಳುವುದು ಸೂಕ್ತ.

1.ಬ್ರೆಡ್ ನಲ್ಲಿ ಪೋಷಕಾಂಶಗಳು ಹೆಚ್ಚು ಇರುವುದಿಲ್ಲ
ಯಾವ ಬ್ರೆಡ್ ಬೇಕಾದರೂ ಆಗಿರಲಿ ಅದರಲ್ಲಿ ಹೆಚ್ಚು ಪೋಷಕಾಂಶ ಇರುವುದಿಲ್ಲ.ನಿಮಗೆ ಏನಾದರು ತಿನ್ನಬೇಕು ಎನಿಸಿದಾಗ ಅದರಲ್ಲಿ ವಿಟಮಿನ್ ಮತ್ತು ಪ್ರೋಟಿನ್ ನ ಅಂಶ ಇರಬೇಕು.ಬ್ರೆಡ್ ನಲ್ಲಿ ಇವ್ಯಾವುದು ದೊರೆಯುವುದಿಲ್ಲ.ಇದರಲ್ಲಿ ನಾರಿನಂಶ ಕೂಡ ಇರುವುದಿಲ್ಲ.ಆದರೂ ನಿಮಗೆ ಬ್ರೆಡ್ ಬೇಕೇ ಬೇಕು ಎಂದೆನಿಸಿದಲ್ಲಿ ಧಾನ್ಯದ ಬ್ರೆಡ್ ಮತ್ತು ಬ್ರೌನ್ ಬ್ರೆಡ್ ಅನ್ನು ತಿನ್ನಿ ಅದರಲ್ಲಿ ಸ್ವಲ್ಪ ಮಟ್ಟಿಗೆ ಪೋಷಕಾಂಶ ಇರುತ್ತದೆ.

2.ಸೋಡಿಯಂ ಅಂಶ ಹೆಚ್ಚಿರುತ್ತದೆ
ಬ್ರೆಡ್ ನಲ್ಲಿ ಸೋಡಿಯಂ ಅಂಶ ಅತಿ ಹೆಚ್ಚು ಇರುತ್ತದೆ ಇದರಿಂದ ರಕ್ತದ ಒತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು.ನೀವು ಪ್ರತಿ ದಿನ ಬೆಳಗಿನ ತಿಂಡಿಗೆ ಬ್ರೆಡ್ ತಿಂದರೆ ನಿಮ್ಮ ದೇಹಕ್ಕೆ ಅಧಿಕ ಉಪ್ಪನ್ನು ನೀಡುತ್ತಿದ್ದೀರಿ ಎಂದರ್ಥ.

ಹೃದಯ ಕಾಯಿಲೆ ಹೆಚ್ಚುವುದು
ಸ್ಯಾಂಡ್ ವಿಚ್ ,ಬರ್ಗರ್ ಮತ್ತು ಹಾಟ್ ಡಾಗ್ ಗಳಲ್ಲಿ ಇರುವ ಬ್ರೆಡ್ ಹೃದಯ ಕಾಯಿಲೆಯನ್ನು ಹೆಚ್ಚಿಸುತ್ತದೆ ಏನ್ನಲಾಗಿದೆ.

3.ದೇಹದ ತೂಕ ಹೆಚ್ಚಿಸುತ್ತದೆ
ಬ್ರೆಡ್ ನಲ್ಲಿ ಕ್ಯಾಲೋರಿ ಕಡಿಮೆ ಇದ್ದರೂ ಕೂಡ ಪ್ರತಿದಿನ ಬೆಳಿಗ್ಗೆ ಬ್ರೆಡ್ ತಿನ್ನುವುದರಿಂದ ದೇಹದ ತೂಕ ಹೆಚ್ಚುತ್ತದೆ.ಇದನ್ನು ಕೇಕ್ ಮತ್ತು ಬರ್ಗರ್ ನಲ್ಲಿ ತಿಂದಾಗ ಅಧಿಕ ಸಕ್ಕರೆ ಅಂಶ ಮತ್ತು ಕ್ಯಾಲೋರಿ ದೇಹಕ್ಕೆ ಸೇರುತ್ತದೆ.

4.ಹಸಿವನ್ನು ನೀಗಿಸುವುದಿಲ್ಲ
ಬ್ರೌನ್ ಬ್ರೆಡ್ ಮತ್ತು ವೈಟ್ ಬ್ರೆಡ್ ಗೆ ಹೋಲಿಸಿದರೆ ವೈಟ್ ಬ್ರೆಡ್ ಚನ್ನಾಗಿರುತ್ತದೆ, ಆದರೆ ಇದು ಹಸಿವನ್ನು ನೀಗಿಸುವುದಿಲ್ಲ,ಹೊಟ್ಟೆ ತುಂಬಿದಂತೆಯೇ ಅನ್ನಿಸುವುದಿಲ್ಲ.ಇದರಲ್ಲಿ ಕಾರ್ಬೋ ಹೆಚ್ಚಿದ್ದರೂ ಪೋಷಕಾಂಶ ಕಡಿಮೆ ಇರುತ್ತದೆ.

5.ಗ್ಲೂಟನ್ ತೊಂದರೆಗಳು ಕಾಣಿಸಿಕೊಳ್ಳಬಹುದು
ಗ್ಲೂಟನ್ ಅಂಶ ಹೆಚ್ಚಿರುವ ಆಹಾರ ಸೇವಿಸಿದರೆ ಉದರದ ತೊಂದರೆಗಳು ಕಾಣಿಸಿಕೊಳ್ಳುತ್ತದೆ.ಆದ್ದರಿಂದ ಹೆಚ್ಚಿನ ಜನರಿಗೆ ಬ್ರೆಡ್ ತಿಂದ ನಂತರ ಹೊಟ್ಟೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಹೊಟ್ಟೆ ನೋವು ಬರಬಹುದು
ಇದು ಎಲ್ಲರಿಗೂ ಕಾಣಿಸಿಕೊಳ್ಳದೆ ಇರಬಹುದು ಆದರೆ ಯಾರಿಗೆ ಈ ರೀತಿ ಉದರದ ಸಮಸ್ಯೆ ಕಂಡು ಬರುತ್ತದೋ ಅವರು ಬ್ರೆಡ್ ತಿನ್ನುವುದನ್ನು ಬಿಡಬೇಕು.

6.ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿರುತ್ತದೆ
ಬ್ರೆಡ್ ಮಾಡಲು ಉಪಯೋಗಿಸುವ ಸಾಕಷ್ಟು ಪದಾರ್ಥಗಳಲ್ಲಿ ಅಧಿಕ ಪ್ರಮಾಣದ ಕಾರ್ಬೋಹೈಡ್ರೇಟ್ ಅಂಶವಿರುತ್ತದೆ.ಕಾರ್ಬೋಹೈಡ್ರೇಟ್ ಅನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಿದರೆ ನಿಮ್ಮ ದೇಹಕ್ಕೆ ಉಪಯೋಗವಿದೆ ಆದರೆ ಅಧಿಕ ಪ್ರಮಾಣದಲ್ಲಿ ಸೇವಿಸಿದಾಗ ದೇಹಕ್ಕೆ ಹಾನಿ ಆಗುತ್ತದೆ.ಹೆಚ್ಚು ಕಾರ್ಬೋಹೈಡ್ರೇಟ್ ದೇಹಕ್ಕೆ ಸೇರಿದರೆ ಮೆದುಳಿನ ತೊಂದರೆ ಕಂಡು ಬರುತ್ತದೆ.

ಮಿದುಳಿನ ಹಾನಿ ಉಂಟಾಗಬಹುದು
ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚು ಮತ್ತು ಕೆಲವೊಮ್ಮೆ ಅತಿ ಕಡಿಮೆ ಕೂಡ ಆಗಬಹುದು.ಇದರಿಂದ ಹೃದಯಾಘಾತ,ಮಧುಮೇಹ, ಮಿದುಳಿನ ಹಾನಿ ಕೂಡ ಆಗಬಹುದು.



Click it and Unblock the Notifications
