Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬಾಯಿ ಹುಣ್ಣಿಗೆ ಕಾರಣ ಮತ್ತು ಮನೆಮದ್ದು
ಬಾಯಿಯಲ್ಲಿ ಹುಣ್ಣು ಕೆಲವರಿಗೆ ಆಗಾಗ ಕಾಣಿಸಿಕೊಳ್ಳುತ್ತದೆ. ಮತ್ತೆ ಕೆಲವರಿಗೆ ಅಪರೂಪಕ್ಕೆ ಕಾಣಿಸಿಕೊಳ್ಳುತ್ತದೆ. ಬಾಯಿ ಹುಣ್ಣಿನ ನೋವಿನ ಅನುಭವವಿಲ್ಲದವರು ಬಹುಶ ಯಾರೂ ಇರಲಾರರು. ಇದು ಬಂದರೆ ದೊಡ್ಡ ಸಮಸ್ಯೆಯೆಂದರೆ ಉಪ್ಪು, ಹುಳಿ, ಖಾರವಿರುವ ಆಹಾರವನ್ನು ಬಾಯಿಗೆ ತಾಗಿಸಿದರೆ ಸಾಕು ತುಂಬಾ ಉರಿಯಾಗುವುದು. ಅಲ್ಲದೆ ಇದು ತುಂಬಾ ನೋಯುವುದರಿಂದ(ನೋವಾಗುವುದರಿಂದ) ಮಾತನಾಡುವುದು ಕೂಡ ಕಷ್ಟವಾಗುವುದು.
ಬಾಯಿಹುಣ್ಣು ಬಂದಾಗ ಅದನ್ನು ಬೇಗನೆ ಗುಣಡಿಸದಿದ್ದರೆ ಬಾಯಿ ಹುಣ್ಣು ಅಧಿಕವಾಗುವುದು. ಇದಕ್ಕಾಗಿ ವೈದ್ಯರ ಬಳಿ ಹೋಗುವ ಅಗತ್ಯವಿಲ್ಲ. ಮನೆ ಮದ್ದಿನಿಂದಲೇ ಗುಣಪಡಿಸಬಹುದು. ಇಲ್ಲಿ ನಾವು ಬಾಯಿ ಹುಣ್ಣಿಗೆ ಪ್ರಮುಖ ಕಾರಣ ಮತ್ತು ಗುಣ ಪಡಿಸುವ ಮನೆ ಮದ್ದಿನ ಬಗ್ಗೆ ವಿವರವಾಗಿ ಹೇಳಿದ್ದೇವೆ ನೋಡಿ:

ಬಾಯಿ ಕಚ್ಚುವುದರಿಂದ
ಕೆಲವೊಮ್ಮೆ ಗೊತ್ತಿಲ್ಲದೆಯೇ ಬಾಯಿಯನ್ನು ಕಚ್ಚುತ್ತೇವೆ. ಹೀಗೆ ಕಚ್ಚಿದಾಗ ಬಾಯಿಯ ಒಳ ಭಾಗದ ತ್ವಚೆಗೆ ಗಾಯವಾಗಿ ಬಾಯಿ ಹುಣ್ಣು ಉಂಟಾಗುವುದು.

ಖಾರದ ಆಹಾರಗಳನ್ನು ತಿನ್ನುವುದರಿಂದ
ಹೆಚ್ಚು ಖಾರವಿರುವ ಆಹಾರಗಳನ್ನು ತಿಂದರೆ ಬಾಯಿ ಹುಣ್ಣು ಉಂಟಾಗುವುದು. ಆಗಾಗ ಬಾಯಿ ಹುಣ್ಣಿನ ಸಮಸ್ಯೆ ಉಂಟಾಗುತ್ತಿದ್ದರೆ ಖಾರ ತಿನ್ನುವುದನ್ನು ಕಮ್ಮಿ ಮಾಡಿ.

ಬ್ರೆಷ್ ತಾಗಿದಾಗ
ಕೆಲವೊಮ್ಮೆ ಹಲ್ಲುಜ್ಜುವಾಗ ಬ್ರೆಷ್ ತಾಗಿ ಬಾಯಿಯ ಒಳ ತ್ವಚೆಗೆ ಗಾಯವಾಗಿ ಬಾಯಿ ಹುಣ್ಣು ಉಂಟಾಗುವುದು.

ಹರ್ಪೆಸ್(herpes)
ಹರ್ಪೆಸ್ ಅನ್ನುವುದು ಒಂದು ವೈರಲ್ ಸೋಂಕು. ಈ ಸೋಂಕು ಆದಾಗ ಕೂಡ ಬಾಯಿ ಹುಣ್ಣು ಉಂಟಾಗುವುದು.

ಬಿಸಿ-ಬಿಸಿಯಾದ ಆಹಾರ
ಹಬೆಯಾಡುತ್ತಿರುವ ಬಿಸಿ-ಬಿಸಿಯಾದ ಆಹಾರವನ್ನು ತಿಂದಾಗ ಕೆಲವರಿಗೆ ಬಾಯಿ ಹುಣ್ಣು ಉಂಟಾಗುವುದು.

ಮೌತ್ ವಾಶ್
ಕೆಲವೊಂದು ಕೆಮಿಕಲ್ ತ್ವಚೆ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರಿಂದರಿಂದ ಬಾಯಿ ಹುಣ್ಣು ಉಂಟಾಗುವುದು. ಉದಾಹರಣೆಗೆ ಮೌತ್ ವಾಶ್ ನಲ್ಲಿ ಕೆಮಿಕಲ್ ತುಂಬಾ ಸ್ಟ್ರಾಂಗ್ ಆಗಿದ್ದರೆ ಬಾಯಿ ಹುಣ್ಣು ಉಂಟಾಗುವುದು.

ಧೂಮಪಾನ
ಧೂಮಪಾನಿಗಳಲ್ಲಿ ಸಾಮಾನ್ಯವಾಗಿ ಕಾಣಿಸುವ ಸಮಸ್ಯೆ ಇದಾಗಿದೆ. ಇದು ಆಗಾಗ ಕಂಡು ಬರುತ್ತಿದ್ದರೆ ಎಚ್ಚರ, ಏಕೆಂದರೆ ಬಾಯಿ ಕ್ಯಾನ್ಸರ್ ನ ಮೊದಲ ಹಂತ ಇದಾಗಿದೆ.

ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು
ಬಾಯಿ ಹುಣ್ಣು ಬಂದಾಗ ಉಪ್ಪು ನೀರಿನಲ್ಲಿ ಬಾಯಿಯನ್ನು ಮುಕ್ಕಳಿಸಿದರೆ ಸ್ವಲ್ಪ ಉರಿ ಅನಿಸಿದರೂ ಗಾಯ ಬೇಗನೆ ಗುಣಮುಖವಾಗುವುದು.

ಬಸಳೆ ಸೊಪ್ಪು
ತುಂಬಾ ಒಳ್ಳೆಯ ಮನೆ ಮದ್ದು ಇದು. ಬಾಯಿ ಹುಣ್ಣು ಬಂದಾಗ ಬಸಳೆ ಸೊಪ್ಪನ್ನು ಜಗಿದು ಉಗಿಯಿರಿ. ಇದರಿಂದ ಬಾಯಿ ಹುಣ್ಣು ಬೇಗನೆ ಕಡಿಮೆಯಾಗುವುದು.

ಎಳನೀರು
ಎಳನೀರು ಕುಡಿಯುವುದು ಬಾಯಿ ಹುಣ್ಣು ಕಡಿಮೆ ಮಾಡುವಲ್ಲಿ ಸಹಕಾರಿ. ಖಾರ ತಿಂದು ಬಾಯಿ ಹುಣ್ಣಾಗಿದ್ದರೆ ದಿನದಲ್ಲಿ 2 ಎಳನೀರು ಕುಡಿಯಿರಿ. ಬೇಗನೆ ಗುಣಮುಖವಾಗುವಿರಿ.



Click it and Unblock the Notifications
