Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಆಫೀಸ್ ಸಮಯದಲ್ಲಿ ಕಾಡುವ ತಲೆನೋವಿಗೆ ಪರಿಹಾರ
ಅಧಿಕ ಕೆಲಸದ ಒತ್ತಡವಿದ್ದರೆ ತಲೆ ನೋವು, ಅಧಿಕ ರಕ್ತದೊತ್ತಡ ಇವೆಲ್ಲಾ ಉಂಟಾಗುವುದು ಸಹಜ. ತಲೆನೋವು ಬರುತ್ತದೆ ಎಂದು ಮ್ಯಾನೇಜ್ ಮೆಂಟ್ ನವರು ನಮಗೆ ಕೆಲಸ ಒತ್ತಡ ಕಡಿಮೆ ಮಾಡುವುದಿಲ್ಲ. ನಾವೇ ನಮ್ಮ ತಲೆ ನೋವಿಗೆ ಏನಾದರೂ ಪರಿಹಾರ ಕಂಡು ಹಿಡಿಯಬೇಕಷ್ಟೇ. ಹಾಗಂತ ಮಾತ್ರೆ ನುಂಗ ಬೇಡಿ.
ಮಾನಸಿಕ ಒತ್ತಡ, ನಿದ್ದೆ ಸರಿಯಾಗಿ ಮಾಡದಿರುವುದು, ಸರಿಯಾಗಿ ತಿನ್ನದೆ ಪೌಷ್ಠಿಕಾಂಶದ ಕೊರತೆಯಿಂದ ಕೂಡ ತಲೆನೋವು ಉಂಟಾಗುತ್ತದೆ. ತಲೆನೋವು ಬಂದರೆ ಯಾವುದೇ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಿಲ್ಲ. ಆಫೀಸ್ ಕೆಲಸಕ್ಕೆ ಅಡ್ಡಿ ಪಡಿಸುವ ತಲೆ ನೋವನ್ನು ಹೋಗಲಾಡಿಸಲು ಸರಳ ಟಿಪ್ಸ್ ನೋಡಿ ಇಲ್ಲಿದೆ.

ನಿಮ್ಮಲ್ಲಿ ನೀವೇ ಚೈತನ್ಯ ತುಂಬಿ
ಸ್ವಲ್ಪ ರೆಸ್ಟ್ ತೆಗೆದುಕೊಳ್ಳದೇ ನಿರಂತರವಾಗಿ ಕೆಲಸ ಮಾಡುತ್ತಿದ್ದರೆ ತಲೆನೋವು ಉಂಟಾಗುತ್ತದೆ. ಎಷ್ಟೇ ಕೆಲಸವಿರಲಿ 2 ಗಂಟೆಗೊಮ್ಮೆ 5 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಿ. ಸಹೋದ್ಯೋಗಿ ಜೊತೆ ಮಾತನಾಡಿ.ಸ್ವಲ್ಪ ಹೊತ್ತು ರಿಲ್ಯಾಕ್ಸ್ ಆಗಿರಿ. ಇದರಿಂದ ಉಳಿದ ಕೆಲಸವನ್ನು ಬೇಗನೆ ಮುಗಿಸಲು ಚೈತನ್ಯ ಬರುತ್ತದೆ. ತುಂಬಾ ಕೆಲಸವಿದೆಯೆಂದು ಒಂದು ನಿಮಿಷ ಕೂಡ ವಿಶ್ರಾಂತಿ ತೆಗೆಯದೆ ಕೆಲಸ ಮಾಡಿದರೆ ತುಂಬಾ ಸುಸ್ತಾಗುವುದು, ಮಾನಸಿಕ ಒತ್ತಡ ಹೆಚ್ಚಾಗುವುದು. ಇದರಿಂದ ಕೆಲಸವನ್ನೂ ಬೇಗನೆ ಮುಗಿಸಲು ಸಾಧ್ಯವಿಲ್ಲ, ತಲೆನೋವು ಕಾಣಿಸಿಕೊಳ್ಳುವುದು.

ತುಂಬಾ ನೀರು ಕುಡಿಯಿರಿ
ಎಷ್ಟೋ ಜನರು ಕೆಲಸದಲ್ಲಿ ಮಗ್ನರಾಗಿ ನೀರು ಕುಡಿಯುವುದೇ ಇಲ್ಲ. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತಲೆನೋವು ಉಂಟಾಗುವುದು. ಕಡಿಮೆ ನೀರು ಕುಡಿದರೆ ನಿದ್ದೆ ಬರುವುದು, ನೀರು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ಕತ್ತನ್ನು ತಿರುಗಿಸಿ
ನಿಮ್ಮ ಕುತ್ತಿಗೆಗೆ ವಿಶ್ರಾಂತಿ ನೀಡಿ. ತಲೆಯನ್ನು ಅಲ್ಲಾಡಿಸದೆ ಕಂಪ್ಯೂಟರ್ ಮಾತ್ರ ನೋಡುತ್ತಾ ಕೆಲಸ ಮಾಡಿದರೆ ತಲೆನೋವು ಕಾಣಿಸಿಕೊಳ್ಳುವುದು, ಕತ್ತನ್ನು ಅತ್ತ-ಇತ್ತ ತಿರುಗಿಸಿ. ಸರಳವಾದ ಕತ್ತಿನ ವ್ಯಾಯಾಮದಿಂದ ಕೂಡ ತಲೆನೋವು ಕಡಿಮೆಯಾಗುತ್ತದೆ.

ಸೂಜಿ ಚಿಕಿತ್ಸೆ
ಆಗಾಗ ತಲೆನೋವು ಬರುತ್ತಾ ಇದ್ದರೆ ಸೂಜಿ ಚಿಕಿತ್ಸೆಯಿಂದ ಕಡಿಮೆ ಮಾಡಬಹುದು. ಇದು ನಮ್ಮಲ್ಲಿರುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಗರ್ಭಿಣಿ ಮಹಿಳೆಯರು ಹಾಗೂ ಇತರ ಆರೋಗ್ಯ ಸಮಸ್ಯೆ ಇರುವವರು ಈ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬಾರದು.

ಟೀ
ತಲೆ ನೋವು ಕಾಣಿಸಿದರೆ ಶುಂಠಿ ಟೀ ಅಥವಾ ಲೆಮನ್ ಟೀ ಕುಡಿದರೆ ತಲೆನೋವು ಕಡಿಮೆಯಾಗುವುದು.

ನಿದ್ದೆ ಕಡಿಮೆಯಾಗಿದ್ದರೆ
ನಿದ್ದೆ ಕಡಿಮೆಯಾಗಿದ್ದರೆ ಕೂಡ ತಲೆನೋವು ಕಾಣಿಸಿಕೊಳ್ಳುತ್ತದೆ, ತೂಕಡಿಕೆ ಬರುತ್ತದೆ. ಆಗ ಒಂದು ಲೋಟ ಕಾಫಿ ಕುಡಿಯಿರಿ, ಸ್ವಲ್ಪ ಚೈತನ್ಯ ಬರುತ್ತದೆ. ಆಫೀಸ್ ಮುಗಿಸಿ ಮನೆಗೆ ಬಂದ ಮೇಲೆ ಬೇಗ ಮಲಗಿ ಚೆನ್ನಾಗಿ ನಿದ್ದೆ ಮಾಡಿ. ಇಷ್ಟು ಮಾಡಿದರೆ ನಿದ್ದೆ ಕಡಿಮೆಯಾಗಿ ಬಂದಂತಹ ತಲೆನೋವಾದರೆ ಕಡಿಮೆಯಾಗುತ್ತದೆ.

ಕೂರುವ ಭಂಗಿ
ಕೂರುವ ಭಂಗಿ ಸೊಂಟನೋವನ್ನು ಮಾತ್ರವಲ್ಲ, ತಲೆನೋವನ್ನೂ ತರುತ್ತದೆ. ಭುಜಗಳ ಮೇಲೆ ಒತ್ತಡ ಬೀಳುವಂತೆ ಕೂತರೆ ತಲೆನೋವು ಉಂಟಾಗುತ್ತದೆ. ಬೆನ್ನಿಗೆ ಸಪೋರ್ಟ್ ಆಗಿರುವ ಚೇರ್ ನಲ್ಲಿ ಕೂರಬೇಕು.



Click it and Unblock the Notifications
