Latest Updates
-
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು!
ನಿದ್ರೆಯ ಕೊರತೆಯೇ? ಕಾರಣಗಳನ್ನು ತಿಳಿದುಕೊಳ್ಳಿ
ಕೆಲವರು ರಾತ್ರಿ ನಿದ್ದೆಯ ಕೊರತೆಯಿಂದಾಗಿ ನಿದ್ರಾಹೀನತೆಯಿಂದ ಬಳಲಿದರೆ ಇನ್ನು ಕೆಲವರು ವಿಪರೀತ ನಿದ್ದೆಯಿಂದಾಗಿ ಕೂಡ ತೊಂದರೆ ಅನುಭವಿಸುತ್ತಾರೆ. ಈ ಪರಿಸ್ಥಿತಿಯ ವಿವಿಧ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ಓದಿ ತಿಳಿದುಕೊಳ್ಳಿ.
ನಿದ್ರಾಹೀನತೆಯು ನಿಮ್ಮ ಶಕ್ತಿ,ಮೂಡ್,ಆರೋಗ್ಯ ಇವುಗಳ ಮೇಲೆ ಅತಿ ಹೆಚ್ಚು ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆ.ದೀರ್ಘಕಾಲದ ನಿದ್ರಾಹೀನತೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.ದಿನನಿತ್ಯದ ಜೀವನದಲ್ಲಿ ಸ್ವಲ್ಪ ಬದಲಾವಣೆ ಮತ್ತು ನಿತ್ಯ ಹವ್ಯಾಸಗಳಿಂದ ನಿದ್ರಾ ರಹಿತ ರಾತ್ರಿಗಳನ್ನು ತಡೆಯಬಹುದು.
ನಿದ್ದೆಮಂಪರಿಗೆ ಕಾರಣಗಳು

1.ಅನಿಯಮಿತ ಕೆಲಸದ ವೇಳೆ
ರಾತ್ರಿಪಾಳಿಯಲ್ಲಿ ಕೆಲಸ ಮಾಡಿ ಬೆಳಿಗ್ಗೆ ಮಲಗುತ್ತಿದ್ದರೆ ನೀವು ಖಚಿತವಾಗಿ ಸಾಮಾನ್ಯ ನಿದ್ರೆಯಿಂದ ದೂರ ಆಗುತ್ತಿದ್ದೀರಿ.ನಿದ್ದೆಯ ಸಮಯದಲ್ಲಿ ವ್ಯತ್ಯಾಸವಾದಾಗ ನಿಮ್ಮ ದೇಹ ಬೇಕಾದ ನಿದ್ದೆಯಿಂದ ವಂಚಿತವಾಗುತ್ತದೆ ಇದರಿಂದಾಗಿ ಇಡೀ ದಿನ ತೂಕಡಿಕೆ ಹೆಚ್ಚುತ್ತದೆ.

2.ಶಾರೀರಿಕ ಚಟುವಟಿಕೆಗಳ ಅನುಪಸ್ಥಿತಿ
ನೀವು ಸೋಮಾರಿಯೇ?ಹೌದು ಎಂದಾದಲ್ಲಿ ವಿಪರೀತ ನಿದ್ದೆಯ ಸಮಸ್ಯೆಯಿದೆ ಎಂದರ್ಥ.ದೇಹಕ್ಕೆ ಬೇಕಾದ ವ್ಯಾಯಮ ಚಟುವಟಿಕೆಗಳು ಸಿಗದಿದ್ದಲ್ಲಿ ಅದು ಚಯಾಪಚಯ ಕ್ರಿಯೆಯನ್ನು ಕ್ರಮೇಣವಾಗಿ ಕಳೆದುಕೊಳ್ಳುತ್ತದೆ. ಪರಿಣಾಮವಾಗಿ ಅತಿ ನಿದ್ರೆ ಮತ್ತು ಮಂಪರು ಪ್ರಾರಂಭವಾಗುತ್ತದೆ.

3.ಮಿತಿಮೀರಿದ ತೂಕ
ಅಧ್ಯಯನದ ಪ್ರಕಾರ ಮಿತಿ ಮೀರಿದ ತೂಕ ಹೊಂದಿದವರೂ ಕೂಡ ಅತಿನಿದ್ರಾ ರೋಗದಿಂದ ಬಳಲುತ್ತಿರುತ್ತಾರೆ. ಅತಿ ತೂಕ ಹೊಂದಿದವರು ಕ್ರಮೇಣ ಚಯಾಪಚಯ ಕ್ರಿಯೆ ಕಡಿಮೆ ಆಗುವುದರ ಪರಿಣಾಮವಾಗಿ ಶಕ್ತಿ ಕುಗ್ಗುತ್ತಾ ಹೋಗುತ್ತದೆ,ಪರಿಣಾಮವಾಗಿ ಸಾಮಾನ್ಯ ಸಮಯದಲ್ಲೂ ಕೂಡ ನಿದ್ದೆ ಬರುತ್ತದೆ.

4.ಸಾಕುಪ್ರಾಣಿಗಳನ್ನು ಹಾಸಿಗೆಯಲ್ಲಿ ಮಲಗಿಸಿಕೊಳ್ಳುವುದು
ಸಾಕಷ್ಟು ಜನರು ಪೆಟ್ಸ್ ಅನ್ನು ತಮ್ಮ ಜೊತೆ ಮಲಗಿಸಿಕೊಳ್ಳುತ್ತಾರೆ ಆದರೆ ಇದರಿಂದ ನಿದ್ದೆ ಬರುವುದು ಕಷ್ಟ ಎಂದು ಪುರಾವೆಗಳು ತಿಳಿಸಿವೆ.
ಮಯೊ ಕ್ಲಿನಿಕ್ ಸ್ಲೀಪ್ ಡಿಸಾರ್ಡರ್ ಸೆಂಟರ್ ಮಾಡಿದ ಸರ್ವೆ ಪ್ರಕಾರ ಶೇಖಡಾ 53 ರಷ್ಟು ಜನರು ತಮ್ಮ ನಿದ್ದೆಗೆ ಪೆಟ್ಸ್ ತೊಂದರೆ ನೀಡುತ್ತವೆ ಎಂದು ತಿಳಿಸಿದ್ದಾರೆ.

5.ಮಧ್ಯಪಾನ ಮತ್ತು ನೈಟ್ ಕ್ಯಾಂಪ್ಸ್
ನಿದ್ರೆ ನಷ್ಟವಾಗಲು ಇದು ಒಂದು ಕಾರಣವೆಂದರೆ ಜನರಿಗೆ ಆಶ್ಚರ್ಯವಾಗಬಹುದು.ಆದರೆ ಮದ್ಯಪಾನಕ್ಕೆ ದೇಹದ ಪ್ರತಿಕ್ರಿಯೆ ನೀವು ಅಂದುಕೊಂಡಿರುವುದಕ್ಕಿಂತ ಹೆಚ್ಚು.
ಮದ್ಯಪಾನ ನಿದ್ರೆಯ ಲಯದ ಮೇಲೆ ಪರಿಣಾಮ ಬೀರುತ್ತದೆ,ಮೊದಲು ಇದು ನಿದ್ರಾಜನಕವಾದರೂ ಸ್ವಲ್ಪ ಸಮಯದ ನಂತರ ರಕ್ತದ ಮತ್ತ ಕಡಿಮೆ ಆದ ನಂತರ ನಿದ್ದೆಯನ್ನು ಹೋಗಲಾಡಿಸುತ್ತದೆ.
ವೈನ್ ನಿದ್ದೆಯಿಂದ ಏಳಿಸದಂತೆ ತಡೆಯಲು ಮಲಗುವ 2-3 ಗಂಟೆಗಳ ಮೊದಲು ಕುಡಿಯುವುದು ನಿಲ್ಲಿಸಿ.

6.ಗುರುತಿಸದ GERD
ಯಾರು GERD- gastroesophageal reflux disorder ಸಮಸ್ಯೆ ಇದೆಯೋ ಅವರು ರಾತ್ರಿ ನಿದ್ದೆಯಲ್ಲಿ ಸಮಸ್ಯೆ ಹೊಂದಿರುತ್ತಾರೆ.ಒಮ್ಮೆ ಮಲಗಿದ ನಂತರ ಆಮ್ಲ,ಅನ್ನನಾಳದಲ್ಲಿ ನೋವು,ಎದೆಉರಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಮಲಗುವಾಗ ದಿಂಬನ್ನು ಮೇಲ್ಮುಖವಾಗಿಸಿ ಮಲಗುವುದು ಸೂಕ್ತ.

7.ಮೆಡಿಸಿನ್,ವಿಟಮಿನ್ಸ್ ಮತ್ತು ಸಪ್ಲಿಮೆಂಟ್ಸ್
ಕದಡಿದ ನಿದ್ರೆಗೆ ಮುಖ್ಯ ಕಾರಣಗಳಲ್ಲಿ ಮೆಡಿಸಿನ್ ಕೂಡ ಒಂದು ಆದರೆ ನೀವು ಅವುಗಳನ್ನು ದೂರುವಂತಿಲ್ಲ, ಸಾಮಾನ್ಯ ಮಾತ್ರೆಗಳಾದ ಅಸ್ತಮಾಕ್ಕೆ ತೆಗೆದುಕೊಳ್ಳುವ ಸ್ತೀರಿಯಾಡ್ಸ್,ಹೃದಯ ತೊಂದರೆ ಅಥವಾ ರಕ್ತದೊತ್ತಡಕ್ಕೆ ಬೀಟಾ-ಬ್ಲೋಕ್ಕರ್ಸ್ ಇವುಗಳು ನಿಮ್ಮನ್ನು ರಾತ್ರಿ ಇಡೀ ನಿದ್ದೆ ಬರದಂತೆ ಮಾಡಬಹುದು.

8.ನೋವು - ಸಣ್ಣ ನೋವು ಕೂಡ ಆಗಿರಬಹುದು
ಯಾವುದಾದರು ನೋವು ನಿದ್ದೆಗೆ ಅಡ್ಡಿ ಉಂಟಾಗಲು ಕಾರಣವಾಗಬಹುದು.ತಲೆನೋವು, ಬೆನ್ನುನೋವು,ಸಂಧಿವಾತ, ಫೈಬ್ರೋಮೇಲೆಜಿಯ,ಋತುಚಕ್ರದ ನೋವುಗಳು ಇವುಗಳೆಲ್ಲ ಸಾಮಾನ್ಯ ಕಾರಣಗಳಾಗಿವೆ.
ಈ ನೋವು ಸಹ ತೀವ್ರ ನಿದ್ರಾಹೀನತೆಗೆ ಕಾರಣವಾಗುತ್ತದೆ ಎಂದು ನಿಮಗೆ ಅನ್ನಿಸದಿರಬಹುದು ವಾಸ್ತವಾಗಿ ಇದು ನಿಮ್ಮನ್ನು ಏಳಿಸುವುದೇ ಇಲ್ಲ.

9.ನಿಮ್ಮ ಜೊತೆಗಾರರು ನಿದ್ರಾ ಅಸ್ವಸ್ಥತೆ ಹೊಂದಿರಬಹುದು
ನಿಮ್ಮ ಜೊತೆಗಾರರು ನಿದ್ರಾ ಅಸ್ವಸ್ಥತೆ ಹೊಂದಿರಬಹುದು- ಇದು ನಿಮ್ಮ ನಿದ್ದೆಯನ್ನೂ ಕೆಡಿಸುತ್ತದೆ.
ನಿಮ್ಮ ಸಂಗಾತಿ ಗೊರಕೆ ಹೊಡೆಯುವುದು, ಒದೆಯುವುದು ಮಾಡಿದಲ್ಲಿ ಇಬಾರಿಗೂ ಸರಿಯಾದ ನಿದ್ರೆ ಇರುವುದಿಲ್ಲ ಎಂದು ಮಿಂಡೆಲ್ ಹೇಳುತ್ತಾರೆ.

10. ಕೋಣೆಯ ತಾಪಮಾನ
ತುಂಬಾ ಬಿಸಿ ಅಥವಾ ತುಂಬಾ ತಂಪಾಗಿರುವ ಮಲಗುವ ಕೋಣೆ,ಧ್ವನಿ ಯಂತ್ರದ ಶಬ್ದಗಳು, ಋತುಬಂಧದ ಸಂದರ್ಭದಲ್ಲಾಗುವ ತೊಂದರೆ ಇವುಗಳು ನಿದ್ದೆಗೆ ತೊಂದರೆ ನೀಡುತ್ತವೆ.

11.ಆತಂಕ ಮತ್ತು ಖಿನ್ನತೆ
ದೀರ್ಘಕಾಲದ ನಿದ್ರಾಹೀನತೆಗೆ ಸಾಮಾನ್ಯವಾದ ಎರಡು ಕಾರಣಗಳು
ಆತಂಕ ಮತ್ತು ಖಿನ್ನತೆಯ ಕಾಯಿಲೆಗಳಿಗೆ ಒಳಗಾಗಿರುವ ಹೆಚ್ಚಿನ ಜನರು ಈ ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಾರೆ.ಅದಕ್ಕಿಂದ ಹೆಚ್ಚು ನಿದ್ರಯ ಅಭಾವ ಖಿನ್ನತೆಯನ್ನು ಮತ್ತು ಆತಂಕದ ಕುರುಹುಗಳನ್ನು ಇನ್ನಷ್ಟು ಬಿಗಡಾಯಿಸಬಹುದು.ನಿಮ್ಮ ನಿದ್ರಾಹೀನತೆ ಆತಂಕ ಮತ್ತು ಖಿನ್ನತೆಯಿಂದಾಗಿದ್ದರೆ ಮಾನಸಿಕ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ಗುಣಪಡಿಸಿಕೊಳ್ಳಬಹುದು.

12. ಹಗಲು ಹೊತ್ತು ಮಲಗಿದರೆ
ದಿನದ ಸಮಯದಲ್ಲಿ ಹಗುರವಾಗಿ ಸ್ವಲ್ಪ ಹೊತ್ತು ಮಲಗುವುದು ರಾತ್ರಿ ನಿದ್ರೆ ಹತ್ತಿರ ಸುಳಿಯದಂತೆ ಮಾಡಬಹುದು.ನಿಮಗೆ ಒಂದು ಸಣ್ಣ ನಿದ್ದೆ ಮಾಡಬೇಕು ಎಂದೆನಿಸಿದಲ್ಲಿ ಮಧ್ಯಾಹ್ನ 3 ಗಂಟೆಯ ಒಳಗೆ ಅರ್ಧಗಂಟೆ ಮಲಗಿ.



Click it and Unblock the Notifications











