Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಜೀರೋ ಫ್ಯಾಟ್ ಆಹಾರ ಸೇವನೆ ಒಳ್ಳೆಯದೇ?
ಕಡಿಮೆ ಕೊಬ್ಬಿನ ಅಂಶವಿರುವ ಆಹಾರವನ್ನು ಸೇವಿಸುವುದು ಅಥವಾ ದಿನನಿತ್ಯದ ಆಹಾರ ಕ್ರಮದಲ್ಲಿ ಕಡಿಮೆ ಕೊಬ್ಬಿನ ಅಂಶವನ್ನು ಬಳಸುವುದು ಇಂದು ಸರ್ವೇಸಾಮಾನ್ಯ. ಇಂದು ಎಲ್ಲರೂ ಕಡಿಮೆ ಪ್ರಮಾಣದಲ್ಲಿ ಕೊಬ್ಬಿನ ಆಹಾರವನ್ನು ಬಳಸಲು ಇಷ್ಟಪಡುತ್ತೇವೆ. ಅದರಲ್ಲೂ ಇನ್ನು ಕೆಲವರು ಅವರ ಆಹಾರವನ್ನು ಸಂಪೂರ್ಣವಾಗಿ ಕೊಬ್ಬುಮುಕ್ತ ಆಹಾರ ಅಂದರೆ ಅವರು ಸೇವಿಸುವ ಆಹಾರದಲ್ಲಿ ಒಂದಿಷ್ಟು ಕೊಬ್ಬಿನ ಅಂಶವೇ ಇಲ್ಲದಂತೆ ನೋಡಿಕೊಳ್ಳುತ್ತಾರೆ! ಇತ್ತೀಚಿನ ದಿನಗಳಲ್ಲಿ ದೇಹದಲ್ಲಿ ಬೊಜ್ಜು ಅಥವಾ ಕೊಬ್ಬು ಕಾಣಿಸಿಕೊಳ್ಳುವುದಕ್ಕೆ ನಮ್ಮ ಆಹಾರಕ್ರಮಗಳೇ ಕಾರಣ ಎಂಬ ಕಾರಣಕ್ಕೆ ಸಾಕಷ್ಟು ಜನರು ಈ ರೀತಿಯ ನೂತನ ಆಹಾರ ಪದ್ಧತಿಯನ್ನು ತಪ್ಪದೇ ಪಾಲಿಸುತ್ತಿದ್ದಾರೆ.
ಕೊಬ್ಬು ಇತ್ತೀಚಿನ ವರ್ಷಗಳಲ್ಲಿ, ಮಾನವನ ದೇಹದಲ್ಲಿ ಕಾಣಿಕೊಳ್ಳುವ, ಅತ್ಯಂತ ಕೆಟ್ಟ ಪರಿಣಾಮ ಬಿರುತ್ತಿರುವ ಸಮಸ್ಯೆಗಳಲ್ಲಿ ಒಂದು. ಆದ್ದರಿಂದ ಇದಕ್ಕೆ ಪರಿಹಾರವೆಂಬಂತೆ ಎಲ್ಲರೂ ಕೊಬ್ಬಿನ ಅಂಶವುಳ್ಳ ಆಹಾರಗಳಿಂದಲೇ ಸಾಕಷ್ಟು ದೂರವುಳಿಯಲು ಪ್ರಯತ್ನಿಸುತ್ತಾರೆ. ಆದರೆ ಈ ರೀತಿ ನಾವು ಸೇವಿಸುವ ಆಹಾರದಲ್ಲಿ ಒಂದಂಶವೂ ಕೊಬ್ಬು ಇಲ್ಲದೇ ಆಹಾರವನ್ನು ಸೇವಿಸುವುದು ಎಷ್ಟರ ಮಟ್ಟಿಗೆ ಸರಿ? ನಿಜವಾಗಲೂ ಇಂಥ ಆಹಾರಗಳು ಆರೋಗ್ಯಕರವೇ? ಬನ್ನಿ, ಇಂಥ ಆಹಾರಗಳ ಪರಿಣಾಮಗಳ ಬಗ್ಗೆ ಕೊಂಚ ಚರ್ಚಿಸೋಣ!

ವಿಟಮಿನ್ ಕೊರತೆ
ಕೊಬ್ಬನ್ನು ಕರಗಿಸಬಲ್ಲ ವಿಟಮಿನ್ ಗಳಾದ ವಿಟಮಿನ್ ಎ, ಡಿ, ಇ ಮತ್ತು ಕೆ ಅಂಶಗಳು ದೇಹದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ದೇಹ ಈ ಅಂಶಗಳನ್ನು ಹೀರಿಕೊಳ್ಳಲು ಕೊಬ್ಬಿನ ಅಂಶ ಅಗತ್ಯ. ನೀವು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕೊಬ್ಬಿನ ಆಹಾರವನ್ನು ಸೇವಿಸುತ್ತ ಹೋದಂತೆ ನಿಮಗೆ ವಿಟಮಿನ್ ಕೊರತೆಯಾಗುವ ಎಲ್ಲಾ ಸಾಧ್ಯತೆಗಳಿವೆ!

ಅಧಿಕ ಕೊಲೆಸ್ಟ್ರಾಲ್ ಮಟ್ಟ
ಕಡಿಮೆ ಕೊಬ್ಬಿನ ಆಹಾರಗಳ ಬಗ್ಗೆ ಸಲಹೆ ನೀಡಬಹುದು. ಆದರೆ ಹೀಗೆ ಅತೀಯಾಗಿ ಕಡಿಮೆ ಕೊಬ್ಬಿನ ಪ್ರಮಾಣದ ಆಹಾರಗಳ ಸೇವನೆ ಏಕಾಪರ್ಯಾಪ್ತ ಕೊಬ್ಬುಗಳು ಮತ್ತು ಒಮೆಗಾ 3 ಕೊಬ್ಬಿನ ಅಂಶಗಳನ್ನು ದೇಹಕ್ಕೆ ಸಿಗದಂತೆ ಮಾಡುತ್ತವೆ. ಇದರಿಂದ ನಿಮ್ಮ HDL ಅಥವಾ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಕುಸಿಯುತ್ತದೆ. ಇದರಿಂದ ಅಧಿಕ ಕೊಲೆಸ್ಟ್ರಾಲ್ ಪ್ರಮಾಣಗಳು ಮತ್ತು ಹೃದಯ ಕಾಯಿಲೆಗೆ ಆಹ್ವಾನ ನೀಡಿದಂತಾಗುತ್ತದೆ!

ಒತ್ತಡ
ಕೊಬ್ಬು, ಹಾರ್ಮೋನುಗಳು ಮತ್ತು ರಾಸಾಯನಿಕಗಳನ್ನು ದೇಹದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಕೊಬ್ಬುಗಳು ನಮ್ಮ ಭಾವಗಳು ವರ್ತನೆಯ ಮೇಲೂ ಪರಿಣಾಮ ಬೀರುತ್ತವೆ. ಒಮೇಗಾ 3 ಕೊರತೆ ಇರುವ ಜನರಿಗೆ ಬೈಪೋಲಾರ್ ಡಿಸಾರ್ಡರ್ , ಸ್ಕಿಜೋಫ್ರೇನಿ ಮೊದಲಾದ ಖಾಯಿಲೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ನಿಮ್ಮ ಸಂತೋಷಕ್ಕಾಗಿ ಸ್ವಲ್ಪ ಕೊಬ್ಬನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ಕ್ಯಾನ್ಸರ್ ಸಾಧ್ಯತೆಗಳು ಬಹಳ
ಕರುಳಿನ ಕ್ಯಾನ್ಸರ್, ಪ್ರಾಸ್ಟೇಟ್ (ಪುರುಷರ ಜನನೇಂದ್ರಿಯ ಕ್ಯಾನ್ಸರ್) ಸ್ತನ ಕ್ಯಾನ್ಸರ್ ಮೊದಲಾದವುಗಳು ಕೊಬ್ಬಿನ ಅಂಶ ದೇಹದಲ್ಲಿ ಅತೀ ಕಡಿಮೆಯಾಗುವುದರಿಂದ ಉದ್ಭವಿಸಬಹುದು.

ಅಧಿಕ ಸಕ್ಕರೆ ಪ್ರಮಾಣ
ಸಾಮಾನ್ಯವಾಗಿ ಕಡಿಮೆ ಕೊಬ್ಬನ್ನು ಹೊಂದಿರುವ ಹೆಚ್ಚಿನ ಉತ್ಪನ್ನಗಳು ಅಧಿಕ ಸಕ್ಕರೆ ಪ್ರಮಾಣವನ್ನು ಹೊಂದಿರುತ್ತವೆ ಮತ್ತು ಕೊಬ್ಬನ್ನು ಕಾರ್ಬೋಹೈಡ್ರೇಟ್ ಆಗಿ ಪರಿವರ್ತಿಸಲು ಕ್ಯಾಲೋರಿಗಳನ್ನು ಸಹ ಕಡಿಮೆ ಮಾಡಲಾಗಿರುತ್ತದೆ.

ಅಗತ್ಯ ಕೊಬ್ಬಿನಂಶ
ಒಟ್ಟು ಕ್ಯಾಲೋರಿಯ ಶೇ 20 ರಷ್ಟು ಕೊಬ್ಬನ್ನು ಸೇವಿಸುವುದು ಅತ್ಯಗತ್ಯ. ಕೊಬ್ಬು ನಮ್ಮ ಜೀವನಕ್ರಮಕ್ಕೆ ಅಗತ್ಯವಾಗಿದ್ದು ಅದನ್ನು ಸಂಪೂರ್ಣವಾಗಿ ನಿರಾಕರಿಸುವುದು ಸರಿಯಲ್ಲ. ಏಕಾಪರ್ಯಾಪ್ತ ಕೊಬ್ಬುಗಳು , ಒಮೆಗಾ 3 ಕೊಬ್ಬಿನ ಆಮ್ಲಗಳನ್ನು ಹೊಂದಿರುವ ಆಹಾರಗಳನ್ನು ಹೆಚ್ಚು ಸೇವಿಸಿ ಮತ್ತು ಸ್ಯಾಚುರೇಟೆಡ್ ಕೊಬ್ಬುಗಳನ್ನು ಕಡಿಮೆ ಮಾಡಿ.

ರೋಗ್ಯಕರ ಕೊಬ್ಬನ್ನು ಅಳವಡಿಸಿಕೊಳ್ಳಲು ನೀವು ರೆಡಿ ತಾನೇ?
ನಿಮ್ಮ ಆಹಾರದಲ್ಲಿ ಕೊಬ್ಬಿನ ಅಂಶವನ್ನು ಕನಿಷ್ಠ 4 ಟೀಸ್ಪೂನ್ ನಷ್ಟಾದರೂ ಸೇರಿಸಿ. ಉತ್ತಮ ಜೀರ್ಣಕ್ರಿಯೆ ಮತ್ತು ಉತ್ತಮ ಹೀರುವಿಕೆ ಗೆ ನಿಮ್ಮ ಅಡುಗೆ ಮಾಡುವಾಗ ಕೊಬ್ಬುನ್ನು ಸೇರಿಸುವುದು ಅತ್ಯಗತ್ಯ. ನಿಯಮಿತ ವ್ಯಾಯಾಮ ಜೊತೆಗೆ ಒಂದು ಸಮತೋಲಿತ ಆಹಾರ ಪದ್ಧತಿ ಆರೋಗ್ಯ ಸಮಸ್ಯೆಗಳಿಂದ ನಿಮ್ಮನ್ನು ದೂರವಿಡಬಲ್ಲದು. ಈಗ ನಿಮ್ಮ ಆಹಾರದಲ್ಲಿ ಆರೋಗ್ಯಕರ ಕೊಬ್ಬನ್ನು ಅಳವಡಿಸಿಕೊಳ್ಳಲು ನೀವು ರೆಡಿ ತಾನೇ?



Click it and Unblock the Notifications