Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಸ್ತ್ರೀಯರ ಗುಪ್ತ ಸಮಸ್ಯೆಗಳಿಗೆ ಪರಿಹಾರ
ನಮ್ಮ ದೇಹವನ್ನು ಸ್ವಚ್ಛವಾಗಿಡದಿದ್ದರೆ ದುರ್ವಾಸನೆ ಬೀರುತ್ತದೆ. ಮತ್ತೆ ಕೆಲವರಿಗೆ ದೇಹವನ್ನು ಸ್ವಚ್ಛವಾಗಿಟ್ಟರೂ ಗುಪ್ತಾಂಗಗಳು ದುರ್ವಾಸನೆಯನ್ನು ಬೀರುತ್ತದೆ. ಈ ರೀತಿಯ ದುರ್ವಾಸನೆ ತುಂಬಾ ಮುಜುಗರವನ್ನು ತರುವಂತಹ ಸಮಸ್ಯೆಯಾಗಿದೆ. ಈ ರೀತಿಯ ಸಮಸ್ಯೆ ಇದ್ದರೆ ವೈದ್ಯರನ್ನು ಕಂಡು ಸಲಹೆ ಪಡೆಯಲು ಕೆಲವರಿಗೆ ಹಿಂಜರಿಕೆ.
ಗುಪ್ತಾಂಗಗಳು ದುರ್ವಾಸನೆಯನ್ನು ಬೀರಲು ಅನೇಕ ಕಾರಣಗಳಿರುತ್ತವೆ. ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ಅಥವಾ ನಿಮ್ಮ ದೇಹದಲ್ಲಿ pH ಪ್ರಮಾಣದಲ್ಲಿ ವ್ಯತ್ಯಾಸ ಉಂಟಾದರೆ, ಕೆಲವರಿಗೆ ಮುಟ್ಟಿನ ಸಮಯದಲ್ಲಿ ಗುಪ್ತಾಂಗಗಳು ತುಂಬಾ ಕೆಟ್ಟ ವಾಸನೆಯನ್ನು ಬೀರುತ್ತದೆ. ಆದ್ದರಿಂದ ಗುಪ್ತಾಂಗ ವಾಸನೆ ಬೀರುತ್ತಿದ್ದರೆ ವೈದ್ಯರನ್ನು ಕಾಣುವುದು ಒಳ್ಳೆಯದು ಅಲ್ಲದೆ ಈ ಕೆಳಗಿನ ಸಲಹೆಗಳು ಕೂಡ ಗುಪ್ತಾಂಗ ವಾಸನೆಯನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ:

ಸ್ವಚ್ಛತೆ
ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಆ ಭಾಗವನ್ನು ಚೆನ್ನಾಗಿ ತೊಳೆಯಬೇಕು. ಮೂತ್ರವಿಸರ್ಜನೆಗೆ ಹೋದಾಗ ಗುಪ್ತಾಂಗವನ್ನು ತೊಳೆದು ಬರಬೇಕು. ಈ ರೀತಿ ಮಾಡುವುದರಿಂದ ಕೆಟ್ಟ ವಾಸನೆ ಬರುವುದನ್ನು ಕಡಿಮೆ ಮಾಡಬಹುದು.
ಅತೀಯಾದ ಶುಚಿತ್ವ ಕೂಡ ಒಳ್ಳೆಯದಲ್ಲ
ಅತೀಯಾಗಿ ಶುಚಿತ್ವದ ಕಡೆ ಗಮನ ಕೊಡುವುದು ಕೂಡ ಒಳ್ಳೆಯದಲ್ಲ. ಆಗಾಗ ತೊಳೆಯುವುದರಿಂದ ಜನನೇಂದ್ರೀಯದಲ್ಲಿರುವ pH ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಿ ಮೈ ದುರ್ವಾಸನೆ ಬೀರಲಾರಂಭಿಸುತ್ತದೆ.
ಕಾಟನ್ ಒಳ ಉಡುಪು ಧರಿಸಿ
ಪ್ಯಾಂಟಿ ಲೈನರ್ ಬಳಸಿದರೆ ದುರ್ವಾಸನೆ ಬೀರುವುದನ್ನು ತಡೆಯಬಹುದು. ಕಾಟನ್ ಒಳ ಉಡುಪನ್ನು ಧರಿಸಿ.
ಆಪಲ್ ಸೈಡರ್ ವಿನಿಗರ್
ಒಂದು ಬಕೆಟ್ ಗೆ 1-2 ಚಮಚ ಆಪಲ್ ಸೈಡರ್ ವಿನಿಗರ್ ಹಾಕಿ ಆ ಭಾಗವನ್ನು ಸ್ವಚ್ಛ ಮಾಡಿದರೆ ಗುಪ್ತಾಂಗ ಕೆಟ್ಟ ವಾಸನೆಯನ್ನು ಬೀರುವುದನ್ನು ತಡೆಗಟ್ಟಬಹುದು.
ಮೊಸರು ಕುಡಿಯಿರಿ
ಮೊಸರು ದೇಹದಲ್ಲಿ pH ಪ್ರಮಾಣವನ್ನು ಸರಿಯಾದ ರೀತಿಯಲ್ಲಿ ಇಡುವಲ್ಲಿ ಸಹಕಾರಿಯಾಗಿದೆ. ಮೊಸರಿಗೆ ಸಕ್ಕರೆ ಅಥವಾ ಉಪ್ಪು ಹಾಕದೆ ಹಾಗೇ ತಿನ್ನಿ.
ನೆಲ್ಲಿಕಾಯಿ
ನೆಲ್ಲಿಕಾಯಿ ರಕ್ತವನ್ನು ಶುದ್ಧೀಕರಿಸುತ್ತದೆ ಹಾಗೂ ದುರ್ನಾತ ಬೀರುವುದನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
