Latest Updates
-
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ!
ಮೂರ್ಛೆರೋಗಕ್ಕೆ ಇಲ್ಲಿದೆ ಮನೆ ಮದ್ದು
ಮೂರ್ಛೆರೋಗ ಮೆದುಳಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಮೆದುಳಿನ ನರಗಳು ತಪ್ಪಾದ ಸಂದೇಶವನ್ನು ಕಳುಹಿಸಿ ಅದು ದೇಹದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಮೂಡ್ ಬದಲಾಗುತ್ತದೆ, ಪ್ರಜ್ಞೆ ತಪ್ಪುವುದು, ದೇಹದ ಕಾರ್ಯಗಳು ನಿಧಾನವಾಗುವುದು.
ಮೂರ್ಛೆರೋಗ ಚಿಕ್ಕ ಮಕ್ಕಳಲ್ಲಿ ಕಂಡು ಬರಬಹುದು, ದೊಡ್ಡವರಲ್ಲಿಯೂ ಕಂಡು ಬರಬಹುದು. ದೇಹದ ನರಗಳ ಕಾರ್ಯವನ್ನು ನಿರ್ವಹಿಸಲು ಮೆದುಳು ಸಂದೇಶವನ್ನು ಕಳುಹಿಸುತ್ತದೆ. ಮೆದುಳು ಸಂದೇಶ ಕಳುಹಿಸದಿದ್ದಾಗ ಈ ರಿತಿಯ ಮೂರ್ಛೆರೋಗ ಕಂಡು ಬರುವುದು.
ಮೂರ್ಛೆರೋಗ ಉಂಟಾದಾಗ ಕೆಲವರು ಮೂತ್ರವಿಸರ್ಜನೆ ಮಾಡಿ ಬಿಡುತ್ತಾರೆ. ಬಾಯಿಯಲ್ಲಿ ಜೊಲ್ಲು ಬರಲಾರಂಭಿಸುತ್ತದೆ. ಈ ಸಮಯದಲ್ಲಿ ಕೀ ಅವರ ಕೈಗೆ ಕೊಟ್ಟರೆ ಚೇತರಿಸಿಕೊಳ್ಳುತ್ತಾರೆ. ವ್ಯಕ್ತಿ ಮೂರ್ಛೆ ತಪ್ಪಿ ಬಿದ್ದಾಗ ಜನರು ಸುತ್ತುವರೆದು ಅವರಿಗೆ ಗಾಳಿ ಸಿಗದಂತೆ ಮಾಡಬಾರದು, ಗುಂಪು ಸೇರಿದ ಜನರನ್ನು ದೂರ ಮಾಡಿ ಗಾಳಿಯಾಡಲು ಅವಕಾಶ ಮಾಡಿಕೊಡಬೇಕು, ಅವರು ಬಿಗಿಯಾದ ಡ್ರೆಸ್ ಧರಿಸಿದ್ದರೆ ಅದನ್ನು ಸ್ವಲ್ಪ ಸಡಿಲ ಮಾಡಿ, ಅವರ ಪಾದಗಳನ್ನು ಉಜ್ಜಿದರೆ ಬೇಗನೆ ಚೇತರಿಸಿಕೊಳ್ಳುತ್ತಾರೆ.
ಮೂರ್ಛೆರೋಗ ಇರುವವರು ಆರ್ಯುವೇದದ ಔಷಧಿ ಬಳಸಿದರೆ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಮೂರ್ಛೆರೋಗಕ್ಕೆ ಇಲ್ಲಿ ಕೆಲವು ಮನೆ ಮದ್ದು ನೀಡಿದ್ದೇವೆ ನೋಡಿ:

ಎಪ್ಸೋಮ್ ಸಾಲ್ಟ್(Epsom salt)
ದೇಹದಲ್ಲಿ ಮ್ಯಾಗ್ನಿಷಿಯಂ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಎಪ್ಟೋಮ್ ಉಪ್ಪಿನಲ್ಲಿ ಮ್ಯಾಗ್ನಿಷಿಯಂ ಇದ್ದು ಇದು ಮೆದುಳು ನರಗಳಿಗೆ ಎಲೆಕ್ಟ್ರಿಕಲ್ ಸಂದೇಶ ಕಳುಹಿಸುವಂತೆ ಮಾಡಿ, ನರಗಳು ತನ್ನ ಕಾರ್ಯಗಳನ್ನು ಸರಿಯಾದ ನಿರ್ವಹಿಸಲು ಸಹಾಯ ಮಾಡುವುದು.

ಎಳನೀರು
ಎಳನೀರು ಕೂಡ ಮೂರ್ಛೆರೋಗಕ್ಕೆ ಉತ್ತಮವಾದ ಮನೆ ಮದ್ದಾಗಿದೆ. ದೇಹದಲ್ಲಿ ನೀರಿನಂಶ ಇರುವವರು ತಪ್ಪದೆ ಎಳನೀರು ಕುಡಿಯುವುದು ಒಳ್ಳೆಯದು.

ನೀರು ಮತ್ತು ಜ್ಯೂಸ್
ಸಾಕಷ್ಟು ನೀರು ಮತ್ತು ಜ್ಯೂಸ್ ಕುಡಿಯಬೇಕು. ಅದರಲ್ಲೂ ಬೂದು ಕುಂಬಳಕಾಯಿ ಜ್ಯೂಸ್ ಮೂರ್ಛೆರೋಗ ತಡೆಯಲು ಸೂಕ್ತವಾದ ಮನೆಮದ್ದು.

ಬೂದು ಕುಂಬಳಕಾಯಿಯ ರಸ
ಬೂದು ಕುಂಬಳ ಕಾಯಿಯ ರಸವನ್ನು ಹಿಂಡಿ, ಆ ರಸಕ್ಕೆ liquorice powder(ಜ್ಯೇಷ್ಠ ಮಧುವಿನ ಬೇರಿನ ರಸದಿಂದ ತಯಾರಿಸಿದ ಕಪ್ಪು ಪದಾರ್ಥ) ಸೇರಿಸಿ ಪ್ರತೀದಿನ ಕುಡಿಯಬೇಕು. ಈ ರೀತಿ ಮಾಡಿದರೆ ಮೂರ್ಛೆರೋಗ ಗುಣಮುಖವಾಗುವುದು.

ಹಾಲು
ಪ್ರತೀದಿನ ಹಾಲು ಕುಡಿಯಿರಿ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಕೂಡ ಮೂರ್ಛೆರೋಗ ತರಬಹುದು.

ಬೆಳ್ಳುಳ್ಳಿ
ಬೆಳ್ಳುಳ್ಳಿ ಮೂರ್ಛೆರೋಗವನ್ನು ಒಳಗೊಂಡು ಇತರ ಅನೇಕ ಕಾಯಿಲೆಗಳನ್ನು ಗುಣ ಪಡಿಸುವಲ್ಲಿ ತುಂಬಾ ಪರಿಣಾಮಕಾರಿ. ಹಾಲನ್ನು ಕುದಿಸಿ, ಅದರಲ್ಲಿ ಜಜ್ಜಿದ ಬೆಳ್ಳುಳ್ಳಿ ಹಾಕಿ ಕುಡಿದರೆ ಆಗಾಗ ಮೂರ್ಛೆತಪ್ಪಿ ಬೀಳುವುದಿಲ್ಲ.

ತೆಂಗಿನೆಣ್ಣೆ
ತೆಂಗಿನೆಣ್ಣೆಯನ್ನು ಆಹಾರದ ಜೊತೆ ಹಾಕಿ ತಿನ್ನುವುದು ಕೂಡ ಮೂರ್ಛೆರೋಗ ಬರದಂತೆ ತಡೆಯುವಲ್ಲಿ ಸಹಕಾರಿ.

ತ್ರಿಫಲಾ ಚೂರ್ಣ
ಮೂರ್ಛೆರೋಗ ತಡೆಯಲು ಸರಿಯಾದ ಜೀರ್ಣಕ್ರಿಯೆ ಕೂಡ ಸಹಕಾರಿ. ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಅರ್ಧ ಚಮಚ ತ್ರಿಫಲಾ ಚೂರ್ಣವನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿಯುವುದು ಒಳ್ಳೆಯದು.

ಬ್ರಾಹ್ಮೀ ಎಲೆ
ಒಂದು ಗ್ಲಾಸ್ ಹಾಲು ಕುಡಿದ ಬಳಿಕ ಬ್ರಾಹ್ಮೀ ಎಲೆಯನ್ನು ತಿನ್ನುವುದು ಕೂಡ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.



Click it and Unblock the Notifications