Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಸೂರ್ಯಾಘಾತಕ್ಕೆ (ಸನ್ ಸ್ಟ್ರೋಕ್) ಮನೆಮದ್ದು
ಸೂರ್ಯಾಘಾತ ಎಂದು ಕೇಳಿದ್ದೀರಾ? ಬಿಸಿಲಿನ ತಾಪ ಹೆಚ್ಚಾಗಿ ಜನರು ಮೃತ ಪಟ್ಟ ಸುದ್ಧಿಯನ್ನು ನೀವು ಕೇಳಿರಬಹುದು. ಇದು ಸೂರ್ಯಾಘಾತದಿಂದ ಉಂಟಾಗುವುದು. ವಾತಾವರಣ ತುಂಬಾ ಬಿಸಿಯಿದ್ದಾಗ ಸನ್ ಸ್ಟ್ರೋಕ್ ಅಥವಾ ಸೂರ್ಯಾಘಾತವಾಗುವುದು, ಅಂದರೆ ದೇಹದ ಉಷ್ಣತೆ ಹೆಚ್ಚಿ ವ್ಯಕ್ತಿ ಕೋಮಾಕ್ಕೆ ಹೋಗಬಹುದು. ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಸಾವು ಕೂಡ ಬರಬಹುದು.
ತುಂಬಾ ಬಿಸಿಲಿನಲ್ಲಿ ಓಡಾಡಿದರೆ ದೇಹದ ಉಷ್ಣತೆ 40 ಡಿಗ್ರಿ ಸೆ. ಗಿಂತ ಅಧಿಕವಾದರೆ ಸುಸ್ತು, ತಲೆಸುತ್ತು, ವಾಂತಿ ಮುಂತಾದ ಸಮಸ್ಯೆಗಳು ಕಂಡು ಬರುವುದು. ಇದು ಸೂರ್ಯಾಘಾತದ ಲಕ್ಷಣಗಳಾಗಿವೆ. ಮದ್ಯಪಾನ, ಸಾಕಷ್ಟು ನೀರು ಕುಡಿಯದಿರುವುದು, ಜ್ವರ ಇದ್ದಾಗ ಕೆಲಸ ಮಾಡುವುದು ಮಾಡಿದರೆ ಹೃದಯಾಘಾತ, ಸೂರ್ಯಾಘಾತ ಮುಂತಾದ ಸಮಸ್ಯೆ ಉಂಟಾಗುವುದು.
ಇಲ್ಲಿ ನಾವು ಸೂರ್ಯಾಘಾತದಿಂದ ಪಾರಾಗಲು ಕೆಲ ಮನೆಮದ್ದು ನೀಡಿದ್ದೇವೆ ನೋಡಿ:

ಈರುಳ್ಳಿ
ಉಷ್ಣವನ್ನು ಹೀರಿಕೊಳ್ಳುವಲ್ಲಿ ಈರುಳ್ಳಿ ತುಂಬಾ ಸಹಾಯಕಾರಿ. ಬಿಳಿ ಈರುಳ್ಳಿಯನ್ನು ಜೇಬಿನಲ್ಲಿಟ್ಟರೆ ಇದು ದೇಹದ ಉಷ್ಣತೆ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಸನ್ ಸ್ಟ್ರೋಕ್ ಉಂಟಾದರೆ ಈರುಳ್ಳಿಯನ್ನು ಪೇಸ್ಟ್ ಮಾಡಿ ಹಚ್ಚಿದರೆ ಬೇಗನೆ ಗುಣಮುಖವಾಗುವುದು.

ಮೆಂತೆ ಎಲೆ
ಮೆಂತೆ ಎಲೆ ಸನ್ ಸ್ಟ್ರೋಕ್ ಗೆ ಸೂಪರ್ ಮನೆಮದ್ದಾಗಿದೆ. ದೇಹದ ಉಷ್ಣತೆ ಹೆಚ್ಛಾದರೆ ಮೆಂತೆ ಎಲೆಯನ್ನು ಒಣಗಿಸಿ ಅದನ್ನು ಮಾಡಿ, ತಣ್ಣೀರಿನಲ್ಲಿ ಹಾಕಿಟ್ಟು, ನಂತರ ಕೈಯಿಂದ ಹಿಸುಕಿ ಜೇನು ಸೇರಿಸಿ ರೋಗಿಗೆ ಕೊಡಬೇಕು. ಈ ರೀತಿ ಪ್ರತೀ 2 ಗಂಟೆಗೊಮ್ಮೆ ಕೊಟ್ಟರೆ ಅಪಾಯದಿಂದ ಪಾರಾಗಬಹುದು.

ಮಜ್ಜಿಗೆ
ದೇಹದ ಉಷ್ಣತೆಯನ್ನು ಕಮ್ಮಿ ಮಾಡಲು ದಿನದಲ್ಲಿ 3-4 ಲೋಟ ಮಜ್ಜಿಗೆ ಕುಡಿಯುವುದು ಒಳ್ಳೆಯದು.

ಹಣ್ಣುಗಳು
ದೇಹವನ್ನು ತಂಪಾಗಿಡುವ ಹಣ್ಣುಗಳನ್ನು, ನೀರಿನಂಶ ಅಧಿಕವಿರುವ ತರಕಾರಿಗಳನ್ನು ತಿನ್ನುವುದು ಒಳ್ಳೆಯದು.

ಕಾಯಿ ಮಾವಿನಕಾಯಿ
ಕಾಯಿ ಮಾವಿನಕಾಯಿಗೆ ರೋಸ್ಟ್ ಮಾಡಿದ ಜೀರಿಗೆ, ಬ್ಲ್ಯಾಕ್ ಸಾಲ್ಟ್, ಸ್ವಲ್ಪ ಕರಿ ಮೆಣಸಿನ ಪುಡಿ, ಸಕ್ಕರೆ ಹಾಕಿ ಬೇಯಿಸಿ, ಆ ನೀರು ಕುಡಿಯುವುದು ಒಳ್ಳೆಯದು. ಇದನ್ನು ಸನ್ ಸ್ಟ್ರೋಕ್ ಬಂದಾಗ ಮಾತ್ರವಲ್ಲ, ಸನ್ ಸ್ಟ್ರೋಕ್ ಬರದಂತೆ ತಡೆಯಲು ಕುಡಿಯುವುದು ಒಳ್ಳೆಯದು.

ಹುಣಸೆ ಬೀಜ
ಹುಣಸೆ ಬೀಜ ಸೂರ್ಯಾಘಾತ ತಡೆಯುವಲ್ಲಿ ತುಂಬಾ ಸಹಕಾರಿಯಾಗಿದೆ. ಹುಣಸೆ ಹಣ್ಣಿನ ಬೀಜವನ್ನು ಸ್ವಲ್ಪ ಸಕ್ಕರೆ ಮತ್ತು ನೀರು ಹಾಕಿ ಗ್ರೈಂಡ್ ಮಾಡಿ ಕುಡಿಯುವುದು ಒಳ್ಳೆಯದು.

ನೀರು
ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯದಿದ್ದರೆ ಅನೇಕ ಅನಾರೋಗ್ಯಕರ ಸಂಬಂಧಗಳು ಎದುರಾಗುವುದು. ಆದ್ದರಿಂದ ನೀರು, ಜ್ಯೂಸ್ ಇವುಗಳನ್ನು ಕುಡಿಯಲು ಮರೆಯಬೇಡಿ.



Click it and Unblock the Notifications