Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ನುಗ್ಗೆಕಾಯಿ ಮಹಿಮೆಗೆ ನುಗ್ಗೆಕಾಯಿಯೇ ಸಾಟಿ
ಸಾಂಬಾರ್ ಮಾಡುವಾಗ ನುಗ್ಗೆ ಕಾಯಿ ಹಾಕಿ ಮಾಡಿದರೆ ರುಚಿ ಹೆಚ್ಚು. ಈ ನುಗ್ಗೆಕಾಯಿಯಲ್ಲಿ ಅನೇಕ ಔಷಧೀಯ ಗುಣಗಳಿವೆ. ಈ ತರಕಾರಿಯಲ್ಲಿ ಹೆಚ್ಚು ಪೋಷಕಾಂಶವಿದ್ದು ಇದರ ಬೀಜ, ನುಗ್ಗೆ ಕಾಯಿ ಸೊಪ್ಪು ಎಲ್ಲವೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ರಕ್ತಹೀನತೆಯಿಂದ ಬಳಲುವವರು ಇದರ ಸೊಪ್ಪನ್ನು ತಿಂದರೆ ದೇಹದಲ್ಲಿ ರಕ್ತ ಹೆಚ್ಚಾಗುವುದು, ಇದು ಕಬ್ಬಿಣದಂಶದ ಕೊರತೆ ಉಂಟಾಗದಂತೆ ಕಾಪಾಡುತ್ತದೆ. ನುಗ್ಗೆಕಾಯಿಯ ಹೂವನ್ನು ಪಲ್ಯ ಮಾಡುತ್ತಾರೆ. ಈ ಹೂ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇನ್ನು ನುಗ್ಗೆಕಾಯಿಯಲ್ಲಿ ಈ ಕೆಳಗಿನ ಔಷಧೀಯ ಗುಣಗಳಿವೆ:

ಶೀತ, ಜ್ವರದ ವಿರುದ್ಧ ಹೋರಾಡುತ್ತದೆ
ಇದರಲ್ಲಿ ವಿಟಮಿನ್ ಸಿ ಅಧಿಕವಿದೆ. ಶೀತ, ಜ್ವರ, ಗಂಟಲು ಕೆರತ ಉಂಟಾದಾಗ ನುಗ್ಗೆ ಕಾಯಿ ಸೂಪ್ ಕುಡಿದರೆ ಸಾಕು ಕಡಿಮೆಯಾಗುವುದು.

ಉಸಿರಾಟದ ತೊಂದರೆ
ಅಸ್ತಮಾ, ಉಸಿರಾಟದಲ್ಲಿ ತೊಂದರೆ ಈ ರೀತಿಯ ಸಮಸ್ಯೆ ಇರುವವರಿಗೆ ನುಗ್ಗೆಕಾಯಿ ಒಳ್ಳೆಯ ಮದ್ದು. ಇದರ ಬೀಜವನ್ನು ತಿನ್ನುವುದು ಕೂಡ ತುಂಬಾ ಒಳ್ಳೆಯದು.

ಮೂಳೆಗಳನ್ನು ಬಲಪಡಿಸುತ್ತದೆ
ಇದರಲ್ಲಿ ಕಬ್ಬಿಣದಂಶ, ಕ್ಯಾಲ್ಸಿಯಂ ಅಧಿಕವಿದ್ದು ಮೂಳೆಗಳನ್ನು ಬಲ ಪಡಿಸುತ್ತದೆ.

ರಕ್ತವನ್ನು ಶುದ್ಧೀಕರಿಸುತ್ತದೆ
ನುಗ್ಗೆಕಾಯಿ ಸೊಪ್ಪನ್ನು ಪೇಸ್ಟ್ ರೀತಿ ಮಾಡಿ ಹಾಲಿನಲ್ಲಿ ಹಾಕಿ ಕುಡಿದರೆ ರಕ್ತ ಶುದ್ಧವಾಗುತ್ತದೆ.

ಗರ್ಭಿಣಿಯರಿಗೆ ಒಳ್ಳೆಯದು
ಗರ್ಭಿಣಿಯರು ಇದನ್ನು ತಿನ್ನುವುದು ಒಳ್ಳೆಯದು. ಗರ್ಭಿಣಿಯಾಗಿದ್ದಾಗ ಕಂಡು ಬರುವ ಸುಸ್ತು, ತಲೆ ಸುತ್ತು ಈ ರೀತಿಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಭ್ರೂಣದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರ ಸೊಪ್ಪನ್ನು ತಿಂದರೆ ಎದೆ ಹಾಲು ಹೆಚ್ಚಾಗುವುದು. ಹಳ್ಳಿ ಕಡೆ ಇದನ್ನು ಎದೆ ಹಾಲನ್ನು ಉತ್ಪಾದಿಸುವ ಮನೆ ಮದ್ದಾಗಿ ಉಪಯೋಗಿಸುತ್ತಾರೆ.

ಸೋಂಕು ಹರಡದಂತೆ ತಡೆಯುತ್ತದೆ
ಇದು ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ. ಇದರ ಹೂವನ್ನು ಸ್ನಾನ ಮಾಡುವ ನೀರಿಗೆ ಹಾಕಿದರೆ ತ್ವಚೆ ಅಲರ್ಜಿಯನ್ನು ಕಡಿಮೆ ಮಾಡಬಹುದು. ಕಜ್ಜಿಯನ್ನು ( fungal skin infections) ಅನ್ನು ಈ ಮದ್ದಿನಿಂದ ಗುಣ ಪಡಿಸಬಹುದು.

ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ
ನುಗ್ಗೆ ಕಾಯಿ ಸೊಪ್ಪಿನ ರಸ ಹಿಂಡಿ ಅದನ್ನು ಜೇನಿನ ಜೊತೆ ಮಿಶ್ರ ಮಾಡಿ ಕುಡಿದು ನಂತರ ಎಳನೀರು ಕುಡಿದರೆ , ಅರಿಶಿಣ ಕಾಮಲೆ, ಕಾಲರಾ( ವಾಂತಿ-ಬೇಧಿ) ಈ ರೀತಿಯ ಕಾಯಿಲೆಗಳು ತಕ್ಷಣ ಗುಣ ಮುಖವಾಗುತ್ತದೆ.

ಲೈಂಗಿಕ ಸಾಮರ್ಥ್ಯ
ಲೈಂಗಿಕ ಸಮಸ್ಯೆಯಿಂದ ಬಳಲುವವರಿಗೂ ಇದು ಉತ್ತಮ ಮನೆ ಮದ್ದಾಗಿದೆ. ನುಗ್ಗೆ ಕಾಯಿಯನ್ನು ತಿಂದರೆ ಲೈಂಗಿಕ ಶಕ್ತಿ ಹೆಚ್ಚುವುದು.



Click it and Unblock the Notifications
