Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಆಸಿಡ್ ರಿಫ್ಲೆಕ್ಸ್ ಉಂಟು ಮಾಡುವ ಆಹಾರಗಳು
ಕೆಲವೊಮ್ಮೆ ಹೊಟ್ಟೆಯಲ್ಲಿ ಆಸಿಡ್ ಪ್ರತಿಕೂಲದ ಸಮಸ್ಯೆ ಉಂಟಾಗುತ್ತದೆ. ಈ ರೀತಿಯ ಸಮಸ್ಯೆ ಸಾಮಾನ್ಯವಾಗಿ ಹೆಚ್ಚಿನ ಜನರಲ್ಲಿ ಕಂಡು ಬರುತ್ತದೆ. ಹೊಟ್ಟೆಯಲ್ಲಿ ಆಸಿಡ್, ಅಜೀರ್ಣತೆ ಹೆಚ್ಚಾಗಿ ಅತಿ ತೇಗು, ವಾಂತಿ, ಎದೆ ಉರಿಯೊಂದಿಗೆ ಸೇವಿಸಿದ ಆಹಾರ ವಾಂತಿ ರೂಪದಲ್ಲಿ ಹೊರಬರಲು ಆರಂಭಿಸುತ್ತದೆ. ಇದಕ್ಕೆ ಗ್ಯಾಸ್ಟ್ರೊಸೊಫಾಗಿಯಲ್ ರಿಫ್ಲಕ್ಸ್ ಸಮಸ್ಯೆ (Gastroesophageal reflux disease) ಎನ್ನುತ್ತಾರೆ.
ಪಾಲಾಕ್ , ಮೊಟ್ಟೆಯ ಬಿಳಿ, ಮೆಂತ್ಯೆ, ಎಲೆಕೋಸು, ಹೂಕೋಸು, ಬಾಳೆ ಹಣ್ಣು ಇಂತಹ ಆಹಾರಗಳು ಇರಲಿ. ಇವುಗಳಲ್ಲಿ ಮಿನರಲ್ ಮತ್ತು ಪೋಷಕಾಂಶಗಳು ಹೆಚ್ಚಿರುವುದರಿಂದ ಗ್ಯಾಸ್ ರಿಫ್ಲಕ್ಸ್ ಆಗದಂತೆ ತಡೆಯುತ್ತವೆ.
ಈ ಕೆಳಗಿನ ಆಹಾರಗಳು ಗ್ಯಾಸ್ ರಿಫ್ಲೆಕ್ಸ್ ಉಂಟು ಮಾಡುವುದರಿಂದ ಗ್ಯಾಸ್ ರಿಫ್ಲೆಕ್ಸ್ ಸಮಸ್ಯೆ ಇರುವವರು ಈ ಕೆಳಗಿನ ಆಹಾರಗಳನ್ನು ಮುಟ್ಟಬಾರದು.

ಖಾರ ಆಹಾರಗಳು
ಖಾರ ಆಹಾರವನ್ನು ತಿಂದರೆ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳುವುದು ಹಾಗೂ ಹುಳಿ ತೇಗು ಬರುತ್ತದೆ. ಆದ್ದರಿಂದ ಖಾರ ಪದಾರ್ಥಗಳಿಂದ ದೂರವಿರಿ.

ಚಾಕಲೇಟ್
ಹುಳಿ ತೇಗು ಬರುತ್ತಿದ್ದರೆ ಚಾಕಲೇಟ್ ವಸ್ತುಗಳನ್ನು ಮುಟ್ಟಬೇಡಿ. ಇವು ಹೊಟ್ಟೆಯಲ್ಲಿ ಆಸಿಡ್ ಅನ್ನು ಮತ್ತಷ್ಟು ಹೆಚ್ಚು ಮಾಡುತ್ತವೆ.

ಕಾರ್ಬೋನೇಟಡ್ ಡ್ರಿಂಕ್ಸ್
ಸೋಡಾ, ತಂಪು ಪಾನೀಯಗಳು ಹೊಟ್ಟೆಯನ್ನು ಹಿರಿದಾಗಿಸುತ್ತದೆ, ಇದರಿಂದ ಗ್ಯಾಸ್ ಹೆಚ್ಚು ಉತ್ಪತ್ತಿಯಾಗಿ ತೇಗು ಬರುತ್ತದೆ.

ಕರಿದ ಪದಾರ್ಥಗಳು
ಕರಿದ ಪದಾರ್ಥಗಳನ್ನು ತಿಂದರೆ ಜೀರ್ಣಕ್ರಿಯೆಗೆ ಕಷ್ಟವಾಗುತ್ತದೆ. ಇವು ನಿಧಾನಕ್ಕೆ ಜೀರ್ಣವಾಗುತ್ತದೆ, ಇದರಿಂದ ಗ್ಯಾಸ್ ಉತ್ಪತ್ತಿಯಾಗುತ್ತದೆ.

ಹಾಲು
ಗ್ಯಾಸ್ ರಿಫ್ಲಕ್ಸ್ ಸಮಸ್ಯೆ ಇದ್ದಾಗ ಹಾಲು ಕುಡಿಯಬೇಡಿ. ಊಟದ ನಂತರ ಹಾಲು ಕುಡಿಯುವುದು ಕೂಡ ಒಳ್ಳೆಯದಲ್ಲ. ಊಟಕ್ಕೆ ಮುಂಚೆ ಹಾಲು ಕುಡಿಯಿರಿ.

ಚೀಸ್
ಅಧಿಕ ಚೀಸ್ ಮತ್ತು ಬೆಣ್ಣೆಯಂಶವಿರುವ ಆಹಾರವನ್ನು ತಿಂದರೆ ಗ್ಯಾಸ್ ರಿಫ್ಲೆಕ್ಸ್ ಉಂಟಾಗುತ್ತದೆ.

ಮದ್ಯ
ಮದ್ಯವನ್ನು ಸಿಟ್ರಸ್ ಪಾನೀಯಾಗಳ ಜೊತೆ ಬೆರೆಸಿ ಕುಡಿಯಬೇಡಿ ಹಾಗೂ ಮದ್ಯ ಕುಡಿದ ನಂತರ ಸಿಟ್ರಸ್ ಆಹಾರಗಳನ್ನು ತಿನ್ನಬೇಡಿ. ಮದ್ಯದ ಜೊತೆ ಸಿಟ್ರಸ್ ಆಹಾರ ಸೇರಿದರೆ ಗ್ಯಾಸ್ ರಿಫ್ಲೆಕ್ಸ್ ಉಂಟಾಗುತ್ತದೆ.

ಕಾಫಿ
ಅಧಿಕ ಕಾಫಿ ಕುಡಿಯುವ ಅಭ್ಯಾಸ ಇರುವವರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಕಾಫಿಯನ್ನು ಎರಡು ಲೋಟಕ್ಕಿಂತ ಹೆಚ್ಚು ಕುಡಿಯಬೇಡಿ.

ಸಿಟ್ರಸ್ ಆಹಾರಗಳು
ಸಿಟ್ರಸ್ ಇರುವ ಆಹಾರಗಳನ್ನು ತಿಂದರೆ ಕೂಡ ಕೆಲವರಿಗೆ ಹೊಟ್ಟೆಯಲ್ಲಿ ಆಸಿಡ್ ಉತ್ಪತ್ತಿಯಾಗಿ ಹುಳಿ ತೇಗು ಬರುವುದು. ಹುಳಿ ತೇಗು ಬರುವ ಸಮಸ್ಯೆ ಇರುವವರು ಸಿಟ್ರಸ್ ಇರುವ ಆಹಾರಗಳನ್ನು ದೂರವಿಡುವುದು ಒಳ್ಳೆಯದು.

ಟೊಮೆಟೊ
ಹೊಟ್ಟೆಯಲ್ಲಿ ಆಸಿಡ್ ಸಮಸ್ಯೆ ಇರುವವರು ಟೊಮೆಟೊವನ್ನು ತಿನ್ನಬೇಡಿ.

ಮಿಂಟ್ ಟೀ
ಮಿಂಟ್ ಟೀ ಕುಡಿದರೆ ಹೊಟ್ಟೆಯಲ್ಲಿ ಆಸಿಡ್ ಉತ್ಪತ್ತಿಯಾಗಿ ತೇಗು ಬರುವುದು. ಎದೆ ಉರಿ ಇರುವವರು ಮಿಂಟ್ ಟೀ ಕುಡಿಯಬೇಡಿ.

ಮಾಂಸಾಹಾರ
ಸ್ವಲ್ಪವೇ ಸ್ವಲ್ಪ ಮಾಂಸಾಹಾರದ ಸೇವನೆಯೂ ಇರಬೇಕು. ಬೊಜ್ಜಿನಿಂದ ತುಂಬಿರುವ ಮಾಂಸ ಬೇಡ. ಬಿಳಿ ಮಾಂಸವಾದ ಕೋಳಿ, ಟರ್ಕಿ ಮುಂತಾದುವು ನಿಮ್ಮ ಆಯ್ಕೆಯಲ್ಲಿರಲಿ. ಎಲ್ಲ ಮಾಂಸಕ್ಕಿಂತ ಮೀನಿನ ಮಾಂಸ ಉತ್ತಮ.



Click it and Unblock the Notifications