Latest Updates
-
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು?
ನಿಮ್ಮ ತಲೆನೋವಿಗೆ ಈ ಆಹಾರಗಳು ಕಾರಣವಿರಬಹುದೇ?
ತಲೆನೋವು ಯಾರಿಗೆ, ಯಾವಾಗ ಬೇಕಾದರೂ ಬರಬಹುದು. ತಲೆನೋವಿಗೆ ಕಾರಣಗಳು ಹಲವಾರು ಇರಬಹುದು. ಶೀತ ಆದಾಗ ತಲೆನೋವು ಬರಬಹುದು ಅಥವಾ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾದಾಗ, ಪರಿಸರ ಮಾಲಿನ್ಯದಿಂದ, ತುಂಬಾ ದೂರ ಪ್ರಯಾಣ ಮಾಡಿದಾಗ ಹೀಗೆ ನಾನಾ ಕಾರಣಗಳಿಂದ ತಲೆನೋವು ಬರಬಹುದು. ಅಷ್ಟೆ ಏಕೆ ನಾವು ತಿನ್ನುವ ಕೆಲವೊಂದು ಆಹಾರಗಳು ಕೂಡ ತಲೆ ನೋವಿಗೆ ಪ್ರಮುಖ ಕಾರಣವಾಗಬಹುದು!
ಹೌದು, ಕೆಲವೊಂದು ಆಹಾರಗಳನ್ನು ಹೆಚ್ಚಾಗಿ ತಿಂದಾಗ ಶರೀರದಲ್ಲಿ ಹಾರ್ಮೋನ್ ಗಳ ವ್ಯತ್ಯಾಸದಿಂದಾಗಿ ತಲೆನೋವು ಉಂಟಾಗುತ್ತದೆ. ಉದಾಹರಣೆಗೆ ಕೆಲವರಿಗೆ ಚಾಕಲೇಟ್ ತಿಂದರೆ ತಲೆನೋವು ಕಾಣಿಸಿಕೊಳ್ಳುತ್ತದೆ, ಈ ರೀತಿಯ ಇನ್ನು ಕೆಲವು ಆಹಾರಗಳಿವೆ. ಆದರೆ ಈ ಆಹಾರಗಳನ್ನು ತಿಂದರೆ, ತಿಂದವರಿಗೆಲ್ಲಾ ತಲೆನೋವು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಕೆಲವರಿಗಷ್ಟೇ ಬರುತ್ತದೆ.
ಸಾಮಾನ್ಯವಾಗಿ ಯಾವ ಆಹಾರಗಳನ್ನು ತಿಂದರೆ ತಲೆನೋವು ಬರುತ್ತದೆ ಮತ್ತೆ ಆಹಾರಕ್ರಮದಿಂದ ತಲೆನೋವು ಬರಲು ಕಾರಣವೇನು ಎಂದು ನೋಡೋಣ ಬನ್ನಿ:

ಆಹಾರಕ್ರಮ
ಆಹಾರಕ್ರಮವನ್ನು ಇದ್ದಕ್ಕಿದ್ದ ಹಾಗೇ ಬದಲಾಯಿಸಿದರೆ ತಲೆನೋವು ಕಾಣಿಸಬಹುದು. ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನಂಶವನ್ನು ಮುಟ್ಟದೇ, ತೆಳ್ಳಗಾಗಬೇಕೆಂದು ಕಡಿಮೆ ಕ್ಯಾಲೋರಿಯ ಆಹಾರಗಳನ್ನು ಮಾತ್ರ ತಿನ್ನುವುದು ಮಾಡಿದರೆ ದೇಹದಲ್ಲಿ ಸಕ್ಕರೆಯಂಶ ಕಡಿಮೆಯಾಗಿ ತಲೆನೋವು ಬರುವುದು.

ಕಡಿಮೆ ನೀರು ಕುಡಿದರೆ
ದಿನದಲ್ಲಿ 8-10 ಗ್ಲಾಸ್ ನೀರು ಕುಡಿಯಬೇಕು, ನೀರನ್ನು ಕಮ್ಮಿ ಕುಡಿದರೆ ದೇಹದಲ್ಲಿ ನೀರಿನಂಶ ಕಮ್ಮಿಯಾಗುವುದು, ಇದರಿಂದ ತಲೆನೋವು ಕಾಣಿಸಿಕೊಳ್ಳುವುದು.

ಟೈರಾಮೈನ್ (tyramine)
ಟೈರಾಮೈನ್ ಅನ್ನುವುದು ಒಂದು ಬಗೆಯ ಅಮೈನೋ ಆಮ್ಲ. ಇದು ಮೆದುಳಿನಲ್ಲಿರುವ ಸೆರೋಟೊನಿನ್ ಅನ್ನು ಕಡಿಮೆ ಮಾಡುತ್ತದೆ. ಆಗ ತಲೆನೋವು ಉಂಟಾಗುವುದು. ರೆಡ್ ವೈನ್, ಚೀಸ್, ಚಾಕಲೇಟ್, ಆಲ್ಕೋಹಾಲ್, ಮತ್ತು ಸಂಸ್ಕರಿಸಿದ ಕೆಲವೊಂದು ಮಾಂಸಗಳು ಹೊಟ್ಟೆಯನ್ನು ಸೇರಿದರೆ ತಲೆನೋವು ಬರುವುದು.

ಆಲ್ಕೋಹಾಲ್
ಬೀರ್, ವಿಸ್ಕಿ, ವೈನ್ , ಹೀಗೆ ಯಾವುದೇ ಬಗೆಯ ಮದ್ಯ ಕುಡಿದರೂ ಸೆರೋಟೊನಿನ್ ಕಮ್ಮಿಯಾಗಿ ತಲೆನೋವು ಬರುವುದು.

ಚಾಕಲೇಟ್
ಮೈಗ್ರೇನ್ ಇರುವವರಿಗೆ ಚಾಕಲೇಟ್ ತಿಂದರೆ ತಲೆನೋವು ಬರುವ ಸಾಧ್ಯತೆ ಹೆಚ್ಚು. ಮಾನಸಿಕ ಒತ್ತಡದಲ್ಲಿ ಇದ್ದಾಗ ಚಾಕಲೇಟ್ ತಿಂದರೆ ಒತ್ತಡ ಕಡಿಮೆಯಾಗುವುದು ಆದರೆ ಇದರಲ್ಲಿ ಥೈಯಾಮಿನ್ ಅಂಶ ಇರುವುದರಿಂದ ತಲೆನೋವು ಬರುವ ಸಾಧ್ಯತೆ ಕೂಡ ಇದೆ.

ಕಾಫಿ
ತಲೆನೋವು ಆದಾಗ ಕಮ್ಮಿಯಾಗಲು ಟೀ ಅಥವಾ ಕಾಫಿ ಕುಡಿಯಬೇಕೆಂದು ಅನಿಸುವುದು ಸಹಜ ಅಲ್ಲವೇ? ಆದರೆ ಕೆಲವರಿಗೆ ಕಾಫಿ ಕುಡಿದ ತಕ್ಷಣ ತಲೆನೋವು ಬರುವುದು. ಆದ್ದರಿಂದ ಯಾರಿಗೆ ಕಾಫಿ ಕುಡಿದ ತಕ್ಷಣ ತಲೆನೋವು ಕಾಣಿಸಿಕೊಳ್ಳುತ್ತದೋ ಅವರು ಕಾಫಿ ಕುಡಿಯುವುದನ್ನು ಬಿಡುವುದು ಒಳ್ಳೆಯದು.

ಸಕ್ಕರೆ
ಕೃತಕ ಸಿಹಿ ಇರುವ ಸಿಹಿ ಪದಾರ್ಥಗಳು ಕೂಡ ತಲೆನೋವು ತರಬಹುದು. ಆದ್ದರಿಂದ ಆಗಾಗ ತಲೆನೋವು ಕಾಣಿಸಿಕೊಳ್ಳುತ್ತಿದ್ದರೆ ಈ ಆಹಾರಗಳು ನಿಮ್ಮ ತಲೆ ನೋವಿಗೆ ಕಾರಣವಿರಬಹುದೇ ಅನ್ನುವುದನ್ನು ಪರೀಕ್ಷಿಸಿ. ಪರೀಕ್ಷಿಸುವುದು ಸುಲಭ, ಈ ಆಹಾರಗಳನ್ನು ತಿಂದ ಅಥವಾ ಕುಡಿದ ಬಳಿಕ ತಲೆ ನೋವು ಬಂದರೆ ಆಹಾರಕ್ರಮವೇ ನಿಮ್ಮ ತಲೆ ನೋವಿಗೆ ಕಾರಣವೆಂಬುವುದನ್ನು ತಿಳಿಯಬಹುದು.



Click it and Unblock the Notifications