ಫ್ಲ್ಯಾಕ್ಸ್ ಸೀಡ್ ಮಾತ್ರೆಗಳು ವರ್ಸಸ್ ಮೀನೆಣ್ಣೆ

By ಲೇಖಕ

ಫ್ಲ್ಯಾಕ್ಸ್ ಬೀಜದ ಮಾತ್ರೆಗಳು ಮತ್ತು ಮೀನೆಣ್ಣೆ ಎರಡೂ ಕೂಡ ಒಮೆಗಾ-3 ಹೊಂದಿರುವ ವಸ್ತುಗಳು. ಓಮೆಗಾ-3 ಸಂಶೋಧನಾ ಕೇಂದ್ರದಲ್ಲಿ ನಡೆದ ಸಂಶೋಧನೆಗಳ ಪ್ರಕಾರ ಈ ಕೊಬ್ಬಿನಂಶ ಆರೋಗ್ಯಕರ ಚರ್ಮ, ಕೂದಲು ಮತ್ತು ಉಗರುಗಳ ಬೆಳವಣಿಗೆಗೆ ಸಹಕರಿಸುತ್ತವೆ. ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗೂ ಈ ಕೊಬ್ಬಿನಂಶ ಅತ್ಯಗತ್ಯವಾಗಿದ್ದು ಒಮೆಗಾ-3 ಅಂಶಗಳನ್ನು ಖಿನ್ನತೆಯ ಪರಿಣಾಮಕಾರಿ ಚಿಕಿತ್ಸೆಗೂ ಬಳಸಲಾಗುತ್ತದೆ.

ಫ್ಲ್ಯಾಕ್ಸ್ ಬೀಜದ ಮಾತ್ರೆಗಳಲ್ಲಿ ಒಮೆಗಾ-3 ಅಂಶ ಸಸ್ಯದಿಂದ ಶೇಖರಿಸಲ್ಪಟ್ಟರೆ, ಮೀನೆಣ್ಣೆಯಲ್ಲಿ ಅದರ ಹೆಸರೇ ಸೂಚಿಸುವಂತೆ ಪ್ರಾಣಿ ಮೂಲದಿಂದ ಫ್ಯಾಟಿ ಆ್ಯಸಿಡ್ ಗಳನ್ನು ಸಂಗ್ರಹಿಸಲಾಗುತ್ತದೆ. ಈ ಫಲಿತಾಂಶದಿಂದಾಗಿ, ಈ ಎರಡೂ ವಸ್ತುಗಳು ಉಪಯೋಗವನ್ನೂ ಹೊಂದಿವೆ. ದುಷ್ಪರಿಣಾಮವನ್ನೂ ಹೊಂದಿವೆ.

Flax seed Tablets Vs Fish Oil

ಉಪಯೋಗಗಳು:

ಫ್ಲ್ಯಾಕ್ಸ್ ಸೀಡ್ ಮಾತ್ರೆ ಮತ್ತು ಮೀನೆಣ್ಣೆಯಲ್ಲಿರುವ ಒಮೆಗಾ-3 ಅಂಶಗಳು ರಕ್ತದಲ್ಲಿ ಟ್ರೈ ಗ್ಲಿಸರೈಡ್ ಪ್ರಮಾಣವನ್ನು ಇಳಿಸುತ್ತವೆ ಮತ್ತು ಹೃದಯ ಸಂಬಂಧಿ ಖಾಯಿಲೆಗಳ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಜೊತೆಗೆ ಪಾರ್ಶ್ವವಾಯುವಿನ ಸಾಧ್ಯತೆಯನ್ನೂ ಕಡಿಮೆಗೊಳಿಸುವ ಒಮೆಗಾ-3 ರಕ್ತನಾಳಗಳಲ್ಲಿನ ಗಡ್ಡೆಗಳನ್ನು ನಿಧಾನಗೊಳಿಸಿ ರಕ್ತದೊತ್ತಡವನ್ನು ನಿಭಾಯಿಸುತ್ತದೆ ಮತ್ತು ರಕ್ತನಾಳಗಳ ನೋವಿನಿಂದ ಬರುವ ಸಂಧಿವಾತವನ್ನು ಕಡಿಮೆಗೊಳಿಸುತ್ತದೆ. ಮೆದುಳಿಗೆ ಸಂಬಂಧಪಟ್ಟ ಅಲ್ಜಿಮರ್ ರೋಗ, ಸಕ್ಕರೆಖಾಯಿಲೆ, ಕ್ಯಾನ್ಸರ್ ಅಥವಾ ಜಾಗ್ರತ ಕೊರತೆಯ ಹೈಪರ್ ಆಕ್ಟಿವಿಟಿ ರೋಗವುಳ್ಳವರು ಒಮೆಗಾ-3 ಅಂಶಗಳಿಂದ ಉಪಯೋಗ ಪಡೆದುಕೊಳ್ಳಬಹುದು ಎಂಬುದನ್ನು ಒಮೆಗಾ-3 ಸಂಶೋಧನ ಕೇಂದ್ರದಲ್ಲಿ ನಡೆದ ಸಂಶೋಧನೆಗಳು ತೋರಿಸಿಕೊಟ್ಟಿವೆ.

ಎಎಲ್ಎ, ಇಎಫ್ಎ ಮತ್ತು ಡಿಎಚ್ಎ

ಫ್ಲ್ಯಾಕ್ಸ್ ಸೀಡ್ ನಲ್ಲಿ ಲಭ್ಯವಿರುವ ಒಮೆಗಾ-3 ಫ್ಯಾಟಿ ಆ್ಯಸಿಡ್ ಎಂದರೆ ಆಲ್ಫಾ ಲಿನೋಲೆನಿಕ್ ಕೊಬ್ಬಿನಂಶ ಎಎಲ್ಎ).ಈ ಕೊಬ್ಬು ಲಿವರ್ ನ ಒಳಭಾಗದಲ್ಲಿ ಇಕೋಸಪೆಂಟನಾಯಿಕ್ ಆ್ಯಸಿಡ್(ಇಎಫ್ಎ) ಮತ್ತು ಡೆಕೋಸಹೆಕ್ಸೆನಾಯಿಕ್ ಕೊಬ್ಬಿನಂಶ (ಡಿಎಚ್ಎ) ಆಗಿ ಪರಿವರ್ತನೆಗೊಳ್ಳುತ್ತದೆ. ಈ ಎರಡೂ ಕೊಬ್ಬಿನಂಶ ಗಳು ಜೀವದ ಆರೋಗ್ಯಕ್ಕೆ ಅತಿ ಅಗತ್ಯವಾದವುಗಳು. ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ ನಲ್ಲಿ ಇತ್ತೀಚೆಗೆ ನಡೆದ ಸಂಶೋಧನೆಗಳು ತೋರಿಸಿಕೊಟ್ಟ ಪ್ರಕಾರ ಈ ಕೊಬ್ಬಿನಂಶ ಗಳ ಪರಿವರ್ತನೆ ಮೊದಲಿನ ನಂಬಿಕೆಗಳಿಗಿಂತ ಕಡಿಮೆ ಪ್ರಯೋಜನಕಾರಿ. ಅಧ್ಯಯನಗಳ ಪ್ರಕಾರ ಪಥ್ಯದಲ್ಲಿ ಉತ್ಪತ್ತಿಯಾಗುವ ಇಎಫ್ಎ ಮತ್ತು ಡಿಎಚ್ಎ ಗಳಿಗಿಂತ ಎಎಲ್ಎ ಕಡಿಮೆಯಿರುತ್ತದೆ.

ಮೀನೆಣ್ಣೆ ಇಎಫ್ಎ ಮತ್ತು ಡಿಎಚ್ಎ ಗಳ ನೈಸರ್ಗಿಕ ಸಂಗ್ರಹಮೂಲ. ಮೀನೆಣ್ಣೆಯ ಸೇವನೆಯಿಂದ ದೇಹದಲ್ಲಿ ನೇರವಾಗಿ ಇಎಫ್ಎ ಮತ್ತು ಡಿಎಚ್ಎ ಗಳ ಪರಿಣಾಮ ಬೀರುತ್ತದೆ. ಯಾವುದೇ ಪರಿವರ್ತನೆಯ ಅವಶ್ಯಕತೆಯಿರುವುದಿಲ್ಲ.

ಪಾದರಸದ ಮಲಿನತೆ:

ಸಮುದ್ರದ ಬಹಳಷ್ಟು ಮೀನುಗಳು ಪಾದರಸದ ಮಲಿನತೆಯಿಂದ ಕೂಡಿರುತ್ತವೆ. ಪಾದರಸ ನರಮಂಡಲಗಳಿಗೆ ಹೊಡೆತ ನೀಡಬಲ್ಲದು ಮತ್ತು ಕಿಡ್ನಿಯಿಂದ ಹಿಡಿದು ಅರಿವಿನವರೆಗೂ ಸಮಸ್ಯೆ ತಂದಿಡಬಲ್ಲದು. ಒಮೆಗಾ-3 ಫ್ಯಾಟಿ ಕೊಬ್ಬಿನಂಶ ನ ಮೂಲವಾಗಿ ನೀವು ಮೀನೆಣ್ಣೆಯನ್ನು ಆರಿಸಿಕೊಂಡರೆ ಪಾದರಸ ದೇಹದೊಳಗೆ ಸೇರುವ ಅಪಾಯವೂ ಇದೆ. ಆದರೆ ಫ್ಲ್ಯಾಕ್ಸ್ ಬೀಜದ ಮಾತ್ರೆಗಳು ಪಾದರಸ ಮುಕ್ತವಾಗಿರುತ್ತವೆ.

ದುಷ್ಪರಿಣಾಮಗಳು:

ನೀವು ಸೇವಿಸಿದ ಒಮೆಗಾ-3 ಯ ಪ್ರಮಾಣದಲ್ಲಿ ಹೆಚ್ಚಳವಾದರೆ ರಕ್ತಸ್ರಾವದ ಅಪಾಯದ ಸಾಧ್ಯತೆಯಿದೆ. ಹೀಗಾಗಿಯೇ ಇವುಗಳನ್ನು ತೆಗೆದುಕೊಳ್ಳಲು ಶಿಫಾರಸು ಮಾಡಿದಾಗ ಮುನ್ನೆಚ್ಚರಿಕೆ ಅಗತ್ಯ. ಇದರ ಜೊತೆಗೆ, ಮೀನೆಣ್ಣೆಯಿಂದ ಮೀನಿನ ರುಚಿ ಉಳಿಯಬಹುದು.

ಪರ್ಯಾಯ ಮಾರ್ಗಗಳು:

ಪ್ಲ್ಯಾಕ್ಸ್ ಬೀಜದ ಮಾತ್ರೆ ಮತ್ತು ಮೀನೆಣ್ಣೆಗಳು ಹಿನ್ನಡೆಯನ್ನು ಹೊಂದಿರುವುದರಿಂದ ಇವುಗಳಿಗೆ ಪರ್ಯಾಯವಾಗಿ ಗೋಲ್ಡನ್ ಆಲ್ಗೆಯನ್ನು ತೆಗೆದುಕೊಳ್ಳಬಹುದು. ಇದು ಸಮುದ್ರದಲ್ಲಿಯೇ ಇರುವುದಾದರೂ, ಮೀನೆಣ್ಣೆಯಂತೆ ಪಾದರಸ ಅಂಶ ಇದರಲ್ಲಿರುವುದಿಲ್ಲ. ಕೆಲವು ಕಂಪನಿಗಳು ಗೋಲ್ಡನ್ ಆಲ್ಗೆಯನ್ನು ದೊರಕಿಸಿಕೊಡ್ಡುತ್ತವೆ. ಈ ಆಲ್ಗೆಗಳಿಂದಾಗಿ ಇಎಫ್ಎ ಮತ್ತು ಡಿಎಚ್ಎ ಗಳು ನೇರವಾಗಿ ದೊರೆಯುತ್ತವೆ. ಹೀಗಾಗಿ ಫ್ಲ್ಯಾಕ್ಸ್ ಸೀಡ್ ಮಾತ್ರೆಗಳಿಗಿಂತ ಉತ್ತಮವೆನಿಸುತ್ತದೆ. ಆಲ್ಗೆಗಳಿಂದಾಗಿ ಮುಖ್ಯವಾದ ಇಎಫ್ಎ ಮತ್ತು ಡಿಎಚ್ಎ ಗಳನ್ನು ಪಡೆಯಲು ಎಎಲ್ಎ ಪರಿವರ್ತನೆಯ ಅವಶ್ಯಕತೆಯಿರುವುದಿಲ್ಲ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Saturday, January 12, 2013, 11:02 [IST]
X
Desktop Bottom Promotion