Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗಲ್ಲ ದೃಢವಾಗಿಸಲು ವ್ಯಾಯಾಮಗಳು
ವ್ಯಾಯಾಮದ ವಿಷಯಕ್ಕೆ ಬಂದರೆ ಹೆಚ್ಚಿನ ಪುರುಷರು ಜಿಮ್ ಗೆ ಹೋಗುವುದು ಅಥವಾ ಉದ್ಯಾನದಲ್ಲಿ ಓಡುವುದು ಎಂದು ಭಾವಿಸಿರುತ್ತಾರೆ. ಗಲ್ಲದ ದೃಢ ವ್ಯಾಯಾಮವು ಗಂಭೀರವಾದದ್ದೆಂದು ಭಾವಿಸುವುದಿಲ್ಲ. ಕೆಲವೊಂದು ಮುಖದ ವ್ಯಾಯಾಮಗಳು ಗಲ್ಲ ಮತ್ತು ದವಡೆಯ ರೇಖೆ ಬಲಪಡಿಸುತ್ತದೆ, ಇದು ಕೆನ್ನೆಯಲ್ಲಿರುವ ಸುಕ್ಕು ಮತ್ತು ಇಳಿಬಿದ್ದಿರುವ ಚರ್ಮವನ್ನು ಹೋಗಲಾಡಿಸುತ್ತದೆ. ಗಲ್ಲ ಮತ್ತು ಮುಖದ ಇತರ ವ್ಯಾಯಾಮಗಳಿಂದ ಹಲವಾರು ಲಾಭಗಳಿವೆ. ಇದು ನಿಮಗೆ ವಯಸ್ಸಾಗುವುದನ್ನು ತಡೆಯುತ್ತದೆ ಮತ್ತು ನಿಮ್ಮ ಮುಖವು ಆರೋಗ್ಯಕರ ಹಾಗೂ ತ್ವಚೆಯು ಹೊಳೆಯುವಂತೆ ಮಾಡುತ್ತದೆ.
ದೃಢವಾದ ಗಲ್ಲ ಮತ್ತು ದವಡೆ ಹೊಂದಿರುವುದು ಅತ್ಯಾಕರ್ಷಕ ನೋಟ ಮತ್ತು ನಿಮ್ಮಲ್ಲಿನ ಆರೋಗ್ಯವನ್ನು ಬಿಂಬಿಸುತ್ತದೆ. ಯಾವುದೇ ವ್ಯಕ್ತಿಯನ್ನು ನೀವು ಪರಿಚಯಿಸಿಕೊಳ್ಳುವಾಗ ಅವರು ನಿಮ್ಮ ಮುಖ ನೋಡಿ ತಮ್ಮ ತೀರ್ಪು ನೀಡುತ್ತಾರೆ. ಆರೋಗ್ಯಕರ ಮುಖವು ನಿಮ್ಮನ್ನು ಪ್ರತಿಫಲಿಸುತ್ತದೆ ಮತ್ತು ಆರೋಗ್ಯಕರ ಮುಖವಿದ್ದರೆ ಎದುರಿನ ವ್ಯಕ್ತಿಯನ್ನು ಆಕರ್ಷಿಸಬಹುದು. ಜೋತುಬಿದ್ದ ಗಲ್ಲ ಅಥವಾ ಇಳಿಬಿದ್ದಿರುವ ದವಡೆಯು ನಿಮ್ಮ ವಯಸ್ಸನ್ನು ನೇರವಾಗಿ ತಿಳಿಸುತ್ತದೆ. ಇದು ನಿಮ್ಮ ಅನಾರೋಗ್ಯಕರ ಜೀವನ ಶೈಲಿ ಮತ್ತು ಆರೋಗ್ಯಕರ ಜೀವನದ ಬಗ್ಗೆ ನಿಮ್ಮ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.

ಗಲ್ಲವನ್ನು ದೃಢಗೊಳಿಸುವ ಕೆಲವೊಂದು ವ್ಯಾಯಾಮಗಳು ತುಂಬಾ ಸರಳ ಮತ್ತು ಇದನ್ನು ನಿಮ್ಮ ಕೈಯ ನೆರವಿನೊಂದಿಗೆ ಮಾಡಬಹುದು. ನಿಯಮಿತವಾಗಿ ಮಾಡುವಂತಹ ದೈಹಿಕ ವ್ಯಾಯಾಮದ ಮೊದಲು ಅಥವಾ ಬಳಿಕ ಇದನ್ನು ಮಾಡಬಹುದು. ನಿಮ್ಮ ಮುಖವು ಆಕರ್ಷಕವಾಗಿ ಕಾಣಿಸಬೇಕೆಂದಾದರೆ ಗಲ್ಲ ದೃಢವಾಗುವ ವ್ಯಾಯಾಮ ನಿಯಮಿತವಾಗಿ ಮಾಡಬೇಕು. ಗಲ್ಲದ ದೃಢ ವ್ಯಾಯಾಮ ಮಾಡುವುದರಿಂದ ಮುಖದ ಸ್ನಾಯುಗಳಿಗೆ ಒಳ್ಳೆಯ ಮಸಾಜ್ ಆಗಿ ಅದು ಪುನರ್ಯೌವನಗೊಂಡು ಮುಖವು ಹೊಳೆಯುವಂತೆ ಮಾಡುತ್ತದೆ.
1. ಗಲ್ಲದ ದವಡೆ ಹಿಡಿತದ ವ್ಯಾಯಾಮ
ಈ ವ್ಯಾಯಾಮ ಮಾಡಲು ನೀವು ಕುಳಿತುಕೊಳ್ಳಿ ಅಥವಾ ನಿಂತುಕೊಂಡು ನೇರವಾಗಿ ನೋಡಿ. ನಿಮ್ಮ ತುಟಿಗಳನ್ನು ಮುಚ್ಚಿಡಿ, ವ್ಯಾಯಾಮದ ವೇಳೆ ಬಾಯಿ ತೆರೆಯಬೇಡಿ. ಬಾಯಿಯ ಕೆಳಗೆ ಮತ್ತು ದವಡೆಯ ರೇಖೆಯಲ್ಲಿರುವ ಎಲ್ಲಾ ಸ್ನಾಯುಗಳ ಮೇಲೆ ಒತ್ತಡ ಹಾಕಿ. ನಿಮ್ಮ ತುಟಿ ಅಥವಾ ಮುಖದ ಮೇಲೆ ಸುಕ್ಕು ಬರದಂತೆ ಇದನ್ನು ಮಾಡಿ. ನಿಮ್ಮ ಕೆಳಗಿನ ದವಡೆಯನ್ನು ಸ್ವಲ್ಪ ಮುಂದಕ್ಕೆ ಕೊಂಡುಹೋಗಿ ಸ್ನಾಯುಗಳಿಗೆ ಒತ್ತಡ ಬೀಳುವಂತೆ ಮಾಡಿ. ಹತ್ತು ನಿಮಿಷಗಳ ಕಾಲ ಇದೇ ರೀತಿ ಸ್ನಾಯುಗಳಿಗೆ ಒತ್ತಡ ಹಾಕಿ.
2. ಗಲ್ಲ ಮೇಲೆತ್ತುವುದು
ಗಲ್ಲವನ್ನು ಮೇಲಕ್ಕೆತ್ತಲು ನೀವು ಬೆನ್ನುಮೂಳೆ ನೇರವಾಗಿರುವಂತೆ ಕುಳಿತುಕೊಳ್ಳಿ ಅಥವಾ ನಿಂತುಕೊಳ್ಳಿ. ಮೇಲ್ಛಾವಣಿ ಕಾಣಿಸುವಷ್ಟರ ಮಟ್ಟಿಗೆ ತಲೆಯನ್ನು ಹಿಂದಕ್ಕೆ ಬಾಗಿಸಿ. ತುಟಿಯನ್ನು ತುಂಬಾ ಬಿಗಿಯಾಗಿ ಗಂಟಿಕ್ಕುಕೊಳ್ಳುವಂತೆ ಮಾಡಿ. ಐದು ಎಣಿಸುವ ತನಕ ನಿಮ್ಮ ತುಟಿಯನ್ನು ಅದೇ ರೀತಿಯಲ್ಲಿ ಇಡಿ, ಬಳಿಕ ಬಿಟ್ಟುಬಿಡಿ. ಇದೇ ರೀತಿ 5ರಿಂದ 10 ಸಲ ಮಾಡಿ.
3. ಕತ್ತು ತಿರುಗಿಸುವುದು
ಗಲ್ಲದ ವ್ಯಾಯಾಮವನ್ನು ಎರಡು ಪಟ್ಟು ಹೆಚ್ಚಿಗೆ ಮಾಡಲು ಕತ್ತನ್ನು ತಿರುಗಿಸಿ, ಬೆನ್ನನ್ನು ನೇರವಾಗಿಟ್ಟುಕೊಂಡು ಕುಳಿತು ಅಥವಾ ನಿಂತು ಈ ವ್ಯಾಯಾಮ ಮಾಡಿ. ನೀವು ಉಸಿರು ತೆಗೆದುಕೊಳ್ಳುತ್ತಿರುವಂತೆ ತಲೆಯನ್ನು ಒಂದು ಕಡೆಗೆ ತಿರುಗಿಸಿ ಗಲ್ಲವು ನಿಮ್ಮ ಭುಜಕ್ಕೆ ತಾಗುವಂತಾಗಲಿ. ಒಂದೇ ಕಡೆಗೆ ನೋಡುತ್ತಿರಿ. ಉಸಿರು ಬಿಟ್ಟಾಗ ನಿಮ್ಮ ತಲೆಯನ್ನು ಕೆಳಗೆ ಮಾಡಿ ಅದು ಎದೆಗೆ ತಾಗುವಂತಿರಲಿ. ಮತ್ತೆ ಉಸಿರಾಡಿದಾಗ ನಿಮ್ಮ ತಲೆಯನ್ನು ತಿರುಗಿಸಿ ಇನ್ನೊಂದು ಭುಜಕ್ಕೆ ಗಲ್ಲಕ್ಕೆ ತಾಗುವಂತೆ ಮಾಡಿ.
4. ದವಡೆ ರಿಲೀಸ್
ಬೆನ್ನನ್ನು ನೇರವಾಗಿಟ್ಟುಕೊಂಡು ಕುಳಿತು ಅಥವಾ ನಿಂತು ದವಡೆ ರಿಲೀಸ್ ವ್ಯಾಯಾಮ ಮಾಡಿ. ಮೂಗಿನ ಮೂಲಕ ತುಂಬಾ ದೀರ್ಘವಾಗಿ ಉಸಿರಾಡಿ ಮತ್ತು ಉಸಿರು ಬಿಡಿ, ನಿಮ್ಮ ತುಟಿಗಳು ಗಟ್ಟಿಯಾಗಿ ಮುಚ್ಚಿರಲಿ. ನೀವು ಶ್ವಾಸ ತೆಗೆದುಕೊಳ್ಳುವಾಗ ಮತ್ತು ಬಿಡುವಾಗ ದವಡೆಯನ್ನು ಜಗಿಯುವ ಕ್ರಮದಲ್ಲಿ ತಿರುಗಿಸಿ. ಶ್ವಾಸ ಬಿಟ್ಟ ಬಳಿಕ ನಿಮ್ಮ ಬಾಯಿಯನ್ನು ಎಷ್ಟು ಸಾಧ್ಯವೋ ಅಷ್ಟು ತೆರೆಯಿರಿ. ನಿಮ್ಮ ಬಾಯಿಯಿಂದ ಶ್ವಾಸ ತೆಗೆದುಕೊಂಡು, ಶ್ವಾಸ ಬಿಡಿ ಆಗ ಆಹಾ ಆಹಾ' ಎನ್ನುವ ಶಬ್ದ ಬರುತ್ತಿರಲಿ. ನಿಮ್ಮ ನಾಲಗೆಯ ತುದಿ ಕೆಳಗಿನ ಹಲ್ಲುಗಳ ಹಿಂದೆ ವಿಶ್ರಾಂತಿ ಪಡೆಯಲಿ. ಆಗ ದವಡೆ ಆರಾಮವಾಗಿರಲು ನೆರವಾಗುತ್ತದೆ. ಇದನ್ನು 5-6 ಸಲ ಮಾಡಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು.
5. ಪ್ಲಾತ್ಯಸಮಾ ವ್ಯಾಯಾಮ
ಬೆನ್ನು ನೇರವಾಗಿಟ್ಟುಕೊಂಡು ಕುಳಿತು ಅಥವಾ ನಿಂತುಕೊಂಡು ನಿಮ್ಮ ತುಟಿಗಳನ್ನು ಹಲ್ಲಿನ ಕೆಳಗಡೆ ಎಳೆದುಕೊಳ್ಳಿ ಮತ್ತು ಬಾಯಿಯ ಮೂಲೆಯನ್ನು ಕೆಳಗಡೆ ಮಾಡಿ. ನಿಧಾನವಾಗಿ ನಿಮ್ಮ ಬಾಯಿ ತೆರೆಯಿರಿ ಮತ್ತು ದವಡೆಯ ಸ್ನಾಯುಗಳಿಗೆ ಚಟುವಟಿಕೆ ನೀಡಿ. ನಿಮ್ಮ ತುಟಿಗಳು ನಿಮ್ಮ ಹಲ್ಲಿನ ವಿರುದ್ಧ ಎಳೆದುಕೊಳ್ಳಿ, ಬಾಯಿಯ ಮೂಲೆ ಕೆಳಮುಖವಾಗಿರಲಿ. ಕೆಳಗಿನ ದವಡೆಯನ್ನು 5ರಿಂದ 10 ಸಲ ಅಲುಗಾಡಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
