Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಹುಳಿ ತೇಗನ್ನು ತಡೆಯಬೇಕೆ? ಇಲ್ಲಿದೆ ಟಿಪ್ಸ್
ಬಾಯಿಯಲ್ಲಿ ಕಹಿ ನೀರು ಅಥವಾ ಹುಳಿ ತೇಗು ಬರುತ್ತಿದ್ದರೆ ಹೆಚ್ಚಿನವರು ಅಸಿಡಿಟಿ ಎಂದು ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಅಸಿಡಿಟಿಯ ಲಕ್ಷಣಗಳು ಈ ಪಿತ್ತರಸ ಬೈಲ್ ರಿಫ್ಲೆಕ್ಸ್ ಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ.
ಈ ರೀತಿ ಕಹಿ ನೀರು ಬಂದಾಗ ಆ ನೀರು ಸ್ವಲ್ಪ ಹಳದಿ ಮಿಶ್ರಿತ ಕಪ್ಪು ಬಣ್ಣದಲ್ಲಿರುತ್ತದೆ ಹಾಗೂ ಈ ನೀರು ಬಂದಾಗ ಬಾಯಿ ಕಹಿಯಾಗುವುದು. ಇದನ್ನು ಔಷಧಿ ತೆಗೆದರೆ ಗುಣಮುಖವಾಗುವುದು. ಆದರೆ ಅದರ ಜೊತೆ ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತಂದರೆ ಮಾತ್ರ ಆ ಸಮಸ್ಯೆಯಿಂದ ಗುಣ ಮುಖವಾಗಲು ಸಾಧ್ಯ.
ಇಲ್ಲಿ ಬೈಲ್ ರಿಫ್ಲೆಕ್ಸ್ ಸಮಸ್ಯೆಯಿಂದ ಹೊರ ಬರಲು ನಿಮ್ಮ ಜೀವನ ಶೈಲಿಯಲ್ಲಿ ಮಾಡಬೇಕಾದ ಬದಲಾವಣೆಗಳಾವುವು ಎಂಬುದನ್ನು ಹೆಳಿದ್ದೇವೆ ನೋಡಿ:

ಮದ್ಯಪಾನ ಮಾಡಿದರೆ ಈ ಸಮಸ್ಯೆಯಿಂದ ಗುಣ ಮುಖವಾಗಲು ಸಾಧ್ಯತೆ ಇಲ್ಲ
ಬಾಯಿಯಲ್ಲಿ ಬರುತ್ತಿರುವ ಕಹಿ ನೀರನ್ನು ತಡೆಯಬೇಕೆಂದರೆ ಮದ್ಯಪಾನವನ್ನು ತ್ಯಾಗ ಮಾಡಲೇಬೇಕು. ಇಲ್ಲದಿದ್ದರೆ ಬೈಲ್ ರಿಫ್ಲೆಕ್ಸ್ ಗೆ ಔಷಧಿ ತೆಗೆದುಕೊಂಡರೂ ಯಾವುದೇ ಪ್ರಯೋಜನ ದೊರೆಯುವುದಿಲ್ಲ.

ಊಟ ಮಾಡುವಾಗ ಸರಿಯಾದ ಭಂಗಿಯಲ್ಲಿ ಕೂತು ತಿನ್ನಿ
ಕೆಲವರಿಗೆ ಬಿದ್ದುಕೊಂಡು, ಟಿವಿ ನೋಡಿಕೊಂಡು ತಿನ್ನುವ ಅಭ್ಯಾಸವಿರುತ್ತದೆ. ಈ ರೀತಿ ಊಟ ಮಾಡಿದರೆ ಪಿತ್ತರಸ ಬಾಯಿಗೆ ಬರುವುದು. ಆದ್ದರಿಂದ ಊಟ ಮಾಡುವಾಗ ನೇರವಾಗಿ ಕೂತು ಊಟ ಮಾಡಿ.

ಧೂಮಪಾನವನ್ನೂ ತ್ಯಾಗ ಮಾಡಬೇಕು
ಧೂಮಪಾನ ಮಾಡಿದಾಗ ಬಾಯಿ ಡ್ರೈಯಾಗುವುದು, ಇದರಿಂದ ಕಹಿ ತೇಗು ಬರುವುದು. ಆದ್ದರಿಂದ ಬಾಯಿಯಲ್ಲಿ ಎಂಜಲು ಉತ್ಪತ್ತಿ ಕಡಿಮೆಯಾಗದಿರಲು ತುಂಬಾ ನೀರು ಕುಡಿಯಿರಿ.

ಗ್ಯಾಸ್ ಉತ್ಪತ್ತಿ ಮಾಡುವ ಆಹಾರ ತಿನ್ನಬೇಡಿ
ಗ್ಯಾಸ್ ಉತ್ಪತ್ತಿ ಮಾಡುವಂತಹ ಆಹಾರಗಳನ್ನು ತಿನ್ನಬೇಡಿ. ಕ್ಯಾಬೇಜ್, ಮೂಲಂಗಿ, ಆಲೂಗಡ್ಡೆ, ಕಡಲೆ, ಬಟಾಣಿ ಇವೆಲ್ಲಾ ಗ್ಯಾಸ್ ಉತ್ಪತ್ತಿ ಮಾಡುವ ಆಹಾರಗಳಾಗಿವೆ.

ಅಧಿಕ ತೂಕವನ್ನು ಕಡಿಮೆ ಮಾಡುವತ್ತ ಗಮನ ಹರಿಸಿ
ಅಧಿಕ ತೂಕದಿಂದ ಬರೀ ಅನಾನುಕೂಲವೇ . ಆದ್ದರಿಂದ ಮೈ ತೂಕ ಕಮ್ಮಿ ಮಾಡುವತ್ತ ಗಮನ ಹರಿಸಿ.

ಆಹಾರವನ್ನು ಸ್ವಲ್ಪ-ಸ್ವಲ್ಪವಾಗಿ ತಿನ್ನಿ
ಹೊಟ್ಟೆ ತುಂಬಾ ತಿನ್ನುವ ಬದಲು, ಆಹಾರವನ್ನು ಸ್ವಲ್ಪ-ಸ್ವಲ್ಪವಾಗಿ ಆಗಾಗ ತಿನ್ನುವುದು ಒಳ್ಖೆಯದು. ಇದರಿಂದ ಮೈ ತೂಕವೂ ಹೆಚ್ಚುವುದಿಲ್ಲ, ಆರೋಗ್ಯಕ್ಕೂ ಒಳ್ಳೆಯದು.

ಕರಿದ ಪದಾರ್ಥಗಳಿಂದ ದೂರವಿರಿ
ಜಂಕ್ ಫುಡ್ಸ್ ಮತ್ತು ಫ್ರೈ ಮಾಡಿದ ಪದಾರ್ಥಗಳು ಬಾಯಿಗೆ ರುಚಿಕರ ಅನಿಸಿದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಆಹಾರಗಳು ಬೈಲ್ ರಿಫ್ಲೆಕ್ಸ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.

ತಂಪು ಪಾನೀಯಾಗಳಿಂದ ದೂರವಿಡಿ
ಸೋಡಾ, ತಂಪು ಪಾನೀಯಾಗಳು ಬೈಲ್ ರಿಫ್ಲೆಕ್ಸ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಆದ್ದರಿಂದ ಕಾರ್ಬೋಹೈಡ್ರೇಟ್ ಪಾನೀಯಾಗಳನ್ನು ಕುಡಿಯುವುದನ್ನು ಕಮ್ಮಿ ಮಾಡಿ.

ಎತ್ತರದ ತಲೆ ದಿಂಬು ಇಟ್ಟು ಮಲಗುವುದು
ಎತ್ತರದ ತಲೆ ದಿಂಬು ಇಟ್ಟು ಮಲಗಿದಾಗ ನಿಮ್ಮ ದೇಹದ ಅರ್ಧ ಭಾಗ ಎತ್ತರದಲ್ಲಿರುತ್ತದೆ. ಈ ವಿಧಾನದಿಂದ ಮಲಗಿದಾಗ ಬಾಯಿಯಲ್ಲಿ ಕಹಿ ನೀರು ಬರುವುದನ್ನು ತಡೆಯಬಹುದು.

ಒತ್ತಡ!!
ಒತ್ತಡ ತರುವ ಸಮಸ್ಯೆಗಳನ್ನು ನೋಡುವಾಗ ಭಯವಾಗುವುದು. ಆದರೆ ಒತ್ತಡದ ಬದುಕಿನಿಂದ ಯಾರೂ ಹೊರತಲ್ಲ, ಒತ್ತಡವನ್ನು ಕಡಿಮೆ ಮಾಡುವ ವಿಧಾನವನ್ನು ಕಂಡು ಕೊಳ್ಳುವುದೇ ನಮ್ಮ ಮುಂದೆ ಇರುವ ಮಾರ್ಗ.



Click it and Unblock the Notifications