Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅನಿಯಮಿತ ಮುಟ್ಟಿನ ಸಮಸ್ಯೆಗೆ ಪರಿಹಾರ ಇಲ್ಲಿದೆ
ಇತ್ತೀಚಿಗೆ ಅನಿಯಮಿತ ಮುಟ್ಟು ಹೆಚ್ಚಿನ ಮಹಿಳೆಯರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಾಸದಿಂದ ಆ ರೀತಿ ಉಂಟಾಗುತ್ತದೆ. ಮಹಿಳೆಯರು ಆರೋಗ್ಯವಂತರಾಗಿರಲು ನಿಯಮಿತ ಮುಟ್ಟು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಮುಟ್ಟಿನ ಅಂತರ 28 ದಿನಗಳಿರುತ್ತದೆ. ಆದರೆ ಕೆಲವರಿಗೆ 2-3 ತಿಂಗಳಾದರೂ ಮುಟ್ಟು ಆಗುವುದಿಲ್ಲ. ಈ ರೀತಿಯ ಸಮಸ್ಯೆ ಯುವತಿಯರಲ್ಲಿ ಇದ್ದರೆ ಮುಂದೆ ಮಕ್ಕಳಾಗಲು ಸಮಸ್ಯೆ ಉಂಟಾಗಬಹುದು.
ಆದರೆ ವ್ಯಾಯಾಮ, ಆರೋಗ್ಯಕರ ಜೀವನ ಶೈಲಿ ಮತ್ತು ಡಯಟ್ ಇವುಗಳನ್ನು ನೀವು ಸರಿಯಾದ ರೀತಿಯಲ್ಲಿ ಪಾಲಿಸಿದರೆ ನೀವು ಅನಿಯಮಿತ ಮುಟ್ಟಿನ ಸಮಸ್ಯೆಯಿಂದ ಹೊರಬರಬಹುದು. ನಿಯಮಿತ ಮುಟ್ಟಿಗಾಗಿ ಪ್ರೊಟೀನ್, ವಿಟಮಿನ್ ಮತ್ತು ಒಮೆಗಾ 3 ಇರುವ ಆಹಾರಗಳನ್ನು ಸೇವಿಸಬೇಕು. ಈ ಕೆಳಗಿನ ಆಹಾರಗಳಲ್ಲಿ ವಿಟಮಿನ್, ಪ್ರೊಟೀನ್, ಒಮೆಗಾ 3 ಇರುವುದರಿಂದ ನಿಯಮಿತವಾಗಿ ಮುಟ್ಟು ಬರುವಂತೆ ಮಾಡುವ ಸಾಮಾರ್ಥ್ಯವನ್ನು ಹೊಂದಿವೆ. ಅಲ್ಲದೆ ಈ ಆಹಾರಗಳು ಮುಟ್ಟಿನ ಸಮಯದಲ್ಲಿ ಕಂಡು ಬರುವ ನೋವು ಕೂಡ ಕಡಿಮೆ ಮಾಡುತ್ತವೆ.

ಬ್ರೊಕೋಲಿ
ಬ್ರೊಕೋಲಿಯನ್ನು ಡಯಟ್ ನಲ್ಲಿ ಸೇರಿಸಿದರೆ ಪ್ರತೀ ತಿಂಗಳು ಮುಟ್ಟಾಗುವಂತೆ ಮಾಡುತ್ತದೆ. ಆದ್ದರಿಂದ ಮಹಿಳೆಯರು ಇದನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಿವುದು ಒಳ್ಳೆಯದು.

ಜೀರಿಗೆ
ಪ್ರತೀದಿನ ಜೀರಿಗೆಯನ್ನು ರಾತ್ರಿ ನೆನೆಯಿಟ್ಟು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಈ ರೀತಿ ಮಾಡುವುದರಿಂದ ಮುಟ್ಟು ಸರಿಯಾದ ಸಮಯಕ್ಕೆ ಆಗುತ್ತದೆ.

ಹಸಿರು ತರಕಾರಿಗಳು
ಹಸಿರು ತರಕಾರಿಗಳಲ್ಲಿ ಕಬ್ಬಿಣದಂಶವಿದ್ದು ಇದು ರಕ್ತ ಉತ್ಪತ್ತಿಗೆ ಸಹಾಯ ಮಾಡುತ್ತದೆ. ಪೋಷಕಾಂಶವಿರುವ ತರಕಾರಿಗಳನ್ನು ತಿನ್ನುವುದರಿಂದ ಅನಿಯಮಿತ ಮುಟ್ಟು ಉಂಟಾಗದಂತೆ ತಡೆಯಬಹುದು.

ಬಾದಾಮಿ
ಇದು ಕೂಡ ನಿಯಮಿತವಾಗಿ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಇದನ್ನು ರಾತ್ರಿಯಲ್ಲಿ ನೆನೆಹಾಕಿ ಬೆಳಗ್ಗೆ ತಿನ್ನಿ. ಬಾದಾಮಿ ದೇಹದಲ್ಲಿ ಹಾರ್ಮೋನ್ ಸರಿಯಾದ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.

ಎಳ್ಳು
ಇದನ್ನು ತಿಂದರೆ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಮುಟ್ಟಾಗುವುದು. 28 ದಿನಗಳಾದರೂ ಮುಟ್ಟು ಆಗದಿದ್ದರೆ ಇದನ್ನು ತಿಂದರೆ ಹೆಚ್ಚಿನವರು ಮುಟ್ಟು ಆಗುತ್ತಾರೆ.

ಮೊಸರು
ಮೊಸರನ್ನು ಪ್ರತೀದಿನ ಸೇವಿಸಿ. ಇದು ದೇಹಕ್ಕೆ ಪೋಷಕಾಂಶವನ್ನು ನೀಡುವುದರ ಜೊತೆಗೆ ಮುಟ್ಟು ಕೂಡ ನಿಯಮಿತವಾಗಿ ಆಗುವಂತೆ ನೋಡಿಕೊಳ್ಳುತ್ತದೆ.

ಸೋಯಾ ಹಾಲು
ಸೋಯಾ ಹಾಲಿನಲ್ಲಿ ಕೂಡ ಪೋಷಕಾಂಶಗಳು ಅಧಿಕವಿರುತತ್ದೆ. ಪೋಷಕಾಂಶದ ಕೊರತೆಯಿಂದ ಮುಟ್ಟು ಸರಿಯಾಗಿ ಆಗದವರಿಗೆ ಇದು ಮುಟ್ಟು ಸರಿಯಾಗಿ ಆಗಲು ಸಹಾಯಮಾಡುತ್ತದೆ.

ಮೊಟ್ಟೆ
ಮೊಟ್ಟೆಯ ಬಿಳಿಯಲ್ಲಿ ಪ್ರೊಟೀನ್ ಇದ್ದು ಇದು ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಇದು ಕೂಡ ಅನಿಯಮಿತ ಮುಟ್ಟಿನ ಸಮಸ್ಯೆ ಹೋಗಲಾಡಿಸುವ ಆಹಾರವಾಗಿದೆ.

ದ್ರಾಕ್ಷಿ
ಮುಟ್ಟು ವಿಳಂಬವಾದರೆ ಕಪ್ಪು ದ್ರಾಕ್ಷಿಯ ಜ್ಯೂಸ್ ಕುಡಿದರೆ ಸಾಕು, ಮುಟ್ಟು ಆಗುವುದು.

ಟೋಫು
ಟೋಪುನಲ್ಲಿ ಕೂಡ ಕ್ಯಾಲ್ಸಿಯಂ ಮತ್ತು ವಿಟಮಿನ್ಸ್ ಇದ್ದು ಅನಿಯಮಿತ ಮುಟ್ಟು ಸಮಸ್ಯೆ ಹೋಗಲಾಡಿಸಿ, ನಿಯಮಿತವಾಗಿ ಮುಟ್ಟು ಬರುವಂತೆ ಮಾಡುತ್ತದೆ.

ಮೀನು ಮತ್ತು ಫಿಶ್ ಆಯಿಲ್
ಇವುಗಳಲ್ಲಿ ಒಮೆಗಾ 3 ಅಂಶವಿರುವುದರಿಂದ ಇದು ಗರ್ಭದಲ್ಲಿರುವ ರಕ್ತನಾಳಗಳಿಗೆ ಯಾವುದೆ ರೀತಿಯಲ್ಲಿ ಹಾನಿಯುಂಟಾಗದಂತೆ ತಡೆಯುತ್ತದೆ.



Click it and Unblock the Notifications
