Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ನಿದ್ದೆಗೆ ಭಂಗ ತರುವ ಒಳ್ಳೆಯ ಅಭ್ಯಾಸಗಳು!
ಮನುಷ್ಯನಿಗೆ ಒಳ್ಳೆಯ ಹಾಗೂ ಕೆಟ್ಟ ಅಭ್ಯಾಸಗಳು ಇದ್ದೇ ಇರುತ್ತಿದೆ. ಕೆಟ್ಟ ಅಭ್ಯಾಸಗಳಿಂದ ಮನಸ್ಸು ಮಾಡಿದರೆ ದೂರವಿಡಬಹುದು. ಆದರೆ ನಾವು ಒಳ್ಳೆಯದೆಂದು ಭಾವಿಸಿರುವ ಅನೇಕ ಅಭ್ಯಾಸಗಳನ್ನು ತಪ್ಪಾದ ಸಮಯದಲ್ಲಿ ಮಾಡಿದರೆ ಅದರಿಂದ ಆರೋಗ್ಯಕ್ಕೆ ಅಪಾಯ ತರಬಹುದು! ಉದಾಹರಣೆಗೆ ಓದುವುದು ಒಳ್ಳೆಯ ಅಭ್ಯಾಸ, ಆದರೆ ಮಲಗುವ ಬುಕ್ ಕೈಯಲ್ಲಿ ಹಿಡಿಯುವುದು ಒಳ್ಳೆಯ ಅಭ್ಯಾಸವಲ್ಲ.
ಮಲಗುವ ಮನಸ್ಸು ಶಾಂತ ರೀತಿಯಲ್ಲಿರಬೇಕು, ಆಗ ಸುಖವಾದ ನಿದ್ದೆ ಬರುತ್ತದೆ. ಮಲಗುವ ಮುನ್ನ ಉಸಿರಾಟದ ವ್ಯಾಯಾಮ ಮಾಡಿ ಮಲಗಿದರೆ ನಿದ್ರಾ ದೇವತೆ ನಿಮ್ಮನ್ನು ಆಲಂಗಿಸುವಳು. ಸುಖವಾದ ನಿದ್ದೆ ಮಾಡಬೇಕೆಂದು ಬಯಸುವುದಾದರೆ ಮಲಗುವ ಮುನ್ನ ಈ ಕಾರ್ಯಗಳನ್ನು ಮಾಡಬಾರದು.

ಪುಸ್ತಕ ಓದುವುದು
ಹೆಚ್ಚಿನವರಿಗೆ ಬುಕ್ ಓದಿ ಮಲಗುವ ಅಭ್ಯಾಸವಿರುತ್ತದೆ. ಬುಕ್ ಓದಿ ಮಗಿದರೆ ಬೇಗೆ ನಿದ್ದೆ ಬರುತ್ತದೆ ಅನ್ನುತ್ತಾರೆ. ಆದರೆ ಇದರ ಬಗ್ಗೆ ನಡೆಸಿದ ಅನೇಕ ಸಂಶೋಧನೆಗಳಿಂದ ಬುಕ್ ಓದಿದರೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ ಎಂದು ತಿಳಿದು ಬಂದಿದೆ.

ಸಂಗೀತ ಕೇಳುವುದು
ಮಲಗುವ ಮುನ್ನ ದೊಡ್ಡ ಶಬ್ದದಲ್ಲಿ ಸಂಗೀತವನ್ನು ಕೇಳಿ ಮಲಗುವ ಅಭ್ಯಾಸವಿರುತ್ತದೆ, ಅದು ಒಳ್ಳೆಯದಲ್ಲ. ಸುಖ ನಿದ್ದೆ ಪಡೆಯಲು ಮಲಗಲು ಅರ್ಧ ಗಂಟೆ ಇರುವಾಗ ಹಾಡು ಕೇಳಬೇಡಿ.

ಟಿವಿ ನೋಡುವುದು
ಮಲಗುವ ಮುನ್ನ ಟಿವಿ ನೋಡಿದರೆ ನಿಮ್ಮ ಕಣ್ಣು ತುಂಬಾ ಬಳಲುತ್ತದೆ, ಸುಖ ನಿದ್ದೆಗೆ ಕಣ್ಣಿಗೆ ವಿಶ್ರಾಂತಿ ಅಗತ್ಯ. ಅದಲ್ಲದೆ ಟಿವಿಯಲ್ಲಿ ಭಯಾನಕ ದೃಶ್ಯಗಳನ್ನು ನೋಡಿ ಮಲಗಿದರೆ ಮಧ್ಯದಲ್ಲಿ ಎಚ್ಚರವಾಗಬಹುದು. ಆದ್ದರಿಂದ ಮಲಗುವ ಟಿವಿ ನೋಡದಿರುವುದು ಒಳ್ಳೆಯದು.

ಲ್ಯಾಪ್ ಟಾಪ್ ಬಳಕೆ ಮಾಡುವುದು
ಮಲಗುವಾಗಲೂ ಕಂಪ್ಯೂಟರ್ ಹಿಡಿದು ಕೆಲಸ ಮಾಡುತ್ತಿದ್ದರೆ ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗುವುದು. ಮಲಗುವಾಗ ನೆಮ್ಮದಿಯಾಗಿ ಮಲಗಿ, ಕೆಲಸದ ಒತ್ತಡವನ್ನು ಬೆಡ್ ರೂಂಗೆ ತರಬೇಡಿ.ಮದುವೆಯಾದವರು ಮಲಗುವಾಗಲೂ ಲ್ಯಾಪ್ ಟಾಪ್ ಹಿಡಿದುಕೊಂಡು ಕೂತರೆ ನಿಮ್ಮ ಸಂಗಾತಿಗೆ ಅದು ಇಷ್ಟವಾಗದೆ ನಿಮ್ಮ ನಡುವೆ ಜಗಳ ಉಂಟಾಗಬಹುದು.

ವೀಡಿಯೋಗೇಮ್ಸ್
ಮಲಗುವಾಗ ವೀಡಿಯೋಗೇಮ್ ಆಡುತ್ತಾ ಇದ್ದರೆ ರಾತ್ರಿ ಮಲಗಲು ತುಂಬಾ ಹೊತ್ತಾಗುವುದು, ಇದರಿಂದ ನಿದ್ದೆ ಕಡಿಮೆಯಾಗುವುದು. ಆದ್ದರಿಂದ ಮಲಗುವ ಮುನ್ನ ವೀಡಿಯೋ ಗೇಮ್ ಆಡಬೇಡಿ.

ವ್ಯಾಯಾಮ
ದಿನದಲ್ಲಿ ಸಮಯ ಸಿಗಲಿಲ್ಲ ಎಂದು ಮಲಗುವಾಗ ವ್ಯಾಯಾಮ ಮಾಡುವುದು ಒಳ್ಳೆಯದಲ್ಲ. ಮಲಗುವ ಮುನ್ನ ವ್ಯಾಯಾಮ ಮಾಡಿದರೆ ಮಧ್ಯ ರಾತ್ರಿಯಲ್ಲಿ ಹೊಟ್ಟೆ ಹಸಿವು ಉಂಟಾಗುವುದು, ನಿದ್ದೆಯಿಂದ ಆಗಾಗ ಎಚ್ಚರಾಗುವಿರಿ.

ಲೈಟ್
ಬೆಡ್ ರೂಂನಲ್ಲಿ ಮಂದ ಬೆಳಕಿರಬೇಕು. ಪ್ರಕಾಶಮಾನವಾದ ಬೆಳಕಿದ್ದರೆ ನಿದ್ದೆಗೆ ಭಂಗ ಉಂಟಾಗುವುದು.

ಕಾಫಿ
ಮಲಗುವ ಮುನ್ನ ಕಾಫಿ ಕುಡಿದರೆ ರಾತ್ರಿ ತುಂಬಾ ಹೊತ್ತಿನವರೆಗೆ ನಿದ್ದೆ ನಿಮ್ಮ ಬಳಿ ಸುಳಿಯುವುದಿಲ್ಲ.

ನೀರು
ಮಲಗುವ ಮುನ್ನ ತುಂಬಾ ನೀರು ಕುಡಿದು ಮಲಗಬೇಡಿ. ತುಂಬಾ ನೀರು ಕುಡಿದರೆ ಆಗಾಗ ಟಾಯ್ಲೆಟ್ ಗೆ ಹೋಗಬೇಕೆನಿಸುತ್ತದೆ, ಇದರಿಂದ ಕೂಡ ನಿದ್ದೆಗೆ ಭಂಗ ಉಂಟಾಗುತ್ತದೆ.



Click it and Unblock the Notifications











