Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
10 ಸಾಮಾನ್ಯ ಕಾಯಿಲೆಗಳಿಗೆ ಸೂಕ್ತ ಆಯುರ್ವೇದ ಚಿಕಿತ್ಸೆ
ಆಯುರ್ವೇದ ಎಂಬ ಚಿಕಿತ್ಸೆ ವಿಧಾನವೂ, ವೈಜ್ಞಾನಿಕ ಚಿಕಿತ್ಸೆಯ ಅನುಕೂಲವಿರುವ ಈ ಕಾಲದಲ್ಲೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ ಎಂದರೆ ಅದಕ್ಕೆ ಕಾರಣ ಆಯುರ್ವೇದ ಚಿಕಿತ್ಸೆ ನೀಡುತ್ತಿರುವ ಫಲ. ಆಯುರ್ವೇದ ಚಿಕಿತ್ಸೆಯಲ್ಲಿ ನಮ್ಮ ಕಾಯಿಲೆಗಳು ಗುಣಮುಖವಾಗಲು ಸ್ವಲ್ಪ ಸಮಯ ಹಿಡಿದರೂ ಯಾವುದೇ ಅಡ್ಡ ಪರಿಣಾಮವಿಲ್ಲದೆ ಗುಣಮುಖವಾಗುವುದು, ಅಲ್ಲದೆ ಇಲ್ಲಿ ಬಳಸುವ ಚಿಕಿತ್ಸೆ ವಿಧಾನವು ನೈಸರ್ಗಿಕವಾದದು.
ನಮ್ಮನ್ನು ಕಾಡುವ ಕೆಲ ಸಾಮಾನ್ಯ ಕಾಯಿಲೆಗಳನ್ನು ಆಯುರ್ವೇದ ಚಿಕಿತ್ಸೆ ವಿಧಾನಗಳನ್ನು ಅರಿತುಕೊಂಡರೆ ಸ್ವ ಚಿಕಿತ್ಸೆ ಮಾಡಿ ಗುಣಪಡಿಸಬಹುದು. ಇಲ್ಲಿ ನಾವು ಸಾಮಾನ್ಯವಾಗಿ ನಮ್ಮನ್ನು ಕಾಡುವ ಶೀತ, ಸ್ನಾಯು ಸೆಳೆತ, ಸಂಧಿವಾತ ಮೊಡವೆ ಹಾಗು ಮಧುಮೇಹದಂತಹ ದೊಡ್ಡ ಸಮಸ್ಯೆಗಳನ್ನು ನೈಸರ್ಗಿಕ ವಿಧಾನದಿಂದ ಹೇಗೆ ಗುಣಪಡಿಸಬಹುದು ಎಂಬುದನ್ನು ವಿವರಿಸಿದ್ದೇವೆ ನೋಡಿ:

ಮೊಡವೆ
ಹದಿಹರೆಯದವರಿಗೆ ಕಾಡುವ ದುಃಸ್ವಪ್ನವೆಂದೇ ಇದನ್ನು ಹೇಳಬಹುದು. ಈ ಮೊಡವೆ ಸಮಸ್ಯೆಯನ್ನು 2 ಬೆಳ್ಳುಳ್ಳಿ ಎಸಳನ್ನು ಜಜ್ಜಿ, ಮೊಸರಿನ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಹೋಗಲಾಡಿಸಬಹುದು. ಈ ಪೇಸ್ಟ್ ಹಚ್ಚಿ 5 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರೀತಿ ಪ್ರತೀದಿನ ಮಾಡುತ್ತಾ ಬಂದರೆ ಮೊಡವೆ ಕಡಿಮೆಯಾಗುವುದು.

ಕೂದಲು ಉದುರುವುದು
ಕೂದಲು ಉದುರುವುದನ್ನು ತಡೆಗಟ್ಟಲು ಆಯುರ್ವೇದದಲ್ಲಿ ಬಳಸುವ 3 ಪ್ರಮುಖ ವಸ್ತುಗಳೆಂದರೆ ತೆಂಗಿನೆಣ್ಣೆ, ಭೃಂಗ ತೈಲ ಮತ್ತು ರೋಸ್ ಮೆರಿ ಎಣ್ಣೆ. ಈ ಮೂರು ಎಣ್ಣೆಯನ್ನು ಬಳಸಿದರೆ ಕೂದಲಿನ ಗುಣಮಟ್ಟ ಹೆಚ್ಚುವುದು.

ಮಧುಮೇಹ
ನೆಲ್ಲಿಕಾಯಿ ಜ್ಯೂಸ್ ಅನ್ನು, ಹಾಗಲಕಾಯಿ ಜ್ಯೂಸ್ ಜೊತೆ ಮಿಕ್ಸ್ ಮಾಡಿ ಪ್ರತೀದಿನ ಕುಡಿಯುವುದರಿಂದ ಯಾವುದೇ ಇನ್ಸುಲಿನ್ ಸಹಾಯವಿಲ್ಲದೆ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

ಮೈ ತೂಕ ಕಳೆದುಕೊಳ್ಳಲು
ಮೈ ತೂಕವನ್ನು ಕಮ್ಮಿ ಮಾಡಲು ಅನೇಕ ಚೂರ್ಣಗಳಿವೆ. ನೀವು ಟ್ರೈ ಮಾಡಬಹುದಾದ ಸುಲಭವಾದ ವಿಧಾನವೆಂದರೆ ಬಿಸಿನೀರಿಗೆ ನಿಂಬೆ ರಸವನ್ನು ಮಿಕ್ಸ್ ಮಾಡಿ, ಜೇನು ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು, ಈ ರೀತಿ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ.

ಸಂಧಿವಾತಕ್ಕೆ
1 ಕಪ್ ಸಾಸಿವೆ ಎಣ್ಣೆಗೆ 10 ಗ್ರಾಂ ಕರ್ಪೂರ ಹಾಕಿ, ಕರ್ಪೂರ ಚೆನ್ನಾಗಿ ಕರಗುವವರೆಗೆ ಎಣ್ಣೆಯನ್ನು ಕುದಿಸಿ, ನಂತರ ಆ ಎಣ್ಣೆಯಿಂದ ನೋವು ಇರುವ ಕಡೆ ಉಜ್ಜಿದರೆ ನೋವು ಕಮ್ಮಿಯಾಗುವುದು.
ಅದಲ್ಲದೆ ಹಸಿ ಆಲೂಗಡ್ಡೆಯನ್ನು ಕತ್ತರಿಸಿ ತಣ್ಣೀರಿನಲ್ಲಿ ಹಾಕಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿದರೆ ಸಂಧಿವಾತ ಕಡಿಮೆಯಾಗುವುದು.

ಅಲರ್ಜಿ
ಒಂದು ಲೋಟ ಹಾಲಿಗೆ ಸ್ವಲ್ಪ ಅರಿಶಿಣ ಪುಡಿ, ಮತ್ತು ಕರಿ ಮೆಣಸಿನ ಪುಡಿ ಹಾಕಿ ಕುದಿಸಿ ಬೆಳಗ್ಗೆ ಮತ್ತು ಸಂಜೆ ಕುಡಿದರೆ ಅಲರ್ಜಿ ಸಮಸ್ಯೆ ನಿವಾರಣೆಯಾಗುವುದು.

ಅಸಿಡಿಟಿ
ಸ್ವಲ್ಪ ಚಕ್ಕೆಯನ್ನು ಪೇಸ್ಟ್ ಮಾಡಿ ಅದನ್ನು 250ml ನೀರಿಗೆ ಹಾಕಿ ಕುದಿಸಬೇಕು, ನಂತರ ಆ ನೀರನ್ನು ಕುಡಿದರೆ ಅಸಿಡಿಟಿ ಸಮಸ್ಯೆ ಕಡಿಮೆಯಾಗುವುದು.
ಮತ್ತೊಂದು ವಿಧಾನವೆಂದರೆ ತುಳಸಿ ಎಲೆಯನ್ನು ತಿನ್ನುವುದು.

ಅಸಿಡಿಟಿ
ಒಂದು ಲೋಟ ತಣ್ಣನೆಯ ಹಾಲು ಕುಡಿಯುವುದರಿಂದಲೂ ಅಸಿಡಿಟಿ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಆದರೆ ಈ ವಿಧಾನ ಪಾಲಿಸುವಾಗ ಖಾರ ಮತ್ತು ಎಣ್ಣೆಯಂಶ ಅಧಿಕವಿರುವ ಆಹಾರಗಳನ್ನು ತಿನ್ನದಂತೆ ಎಚ್ಚರವಹಿಸಿ.

ಅಸ್ತಮಾ
ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿ ಅದನ್ನು10-15 ಹನಿ ನೀರಿನ ಜೊತೆ ಹಾಕಿ ಮಿಕ್ಸ್ ಮಾಡಿ ಕುಡಿಯುವುದರಿಂದ ಅಸ್ತಮಾವನ್ನು ನಿಯಂತ್ರಣದಲ್ಲಿಡಬಹುದು.
ಮತ್ತೊಂದು ವಿಧಾನವೆಂದರೆ 1 ಚಮಚ ಈರುಳ್ಳಿ ರಸವನ್ನು 1 ಚಮಚ ಜೇನಿನ ಜೊತೆ ಮಿಶ್ರಣ ಮಾಡಿ ಎರಡು ಕರಿ ಮೆಣಸನ್ನು ಪುಡಿ ಮಾಡಿ ಹಾಕಿ ಕುಡಿದರೆ ಅಸ್ತಮಾ ಕಡಿಮೆಯಾಗುವುದು.

ಕಲೆ ರಹಿತ ತ್ವಚೆಗಾಗಿ
ಸುಂದರವಾದ ತ್ವಚೆ ಬೇಕೆಂದು ಬಯಸುವವರು ಅರಿಶಿಣ, ಕಹಿ ಬೇವಿನ ಎಲೆ ಮತ್ತು ನೆಲ್ಲಿಕಾಯಿಯನ್ನು ಹಾಕಿ ಪೇಸ್ಟ್ ಮಾಡಿ ಅದನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು.

ಮಲಬದ್ಧತೆ ಸಮಸ್ಯೆಯಿಂದ ಹೊರಬರಲು
ಮಲಗುವ ಮುಂಚೆ ಬಿಸಿ ನೀರಿಗೆ ಸ್ವಲ್ಪ ಜೇನು ಹಾಕಿ ಕುಡಿಯಿರಿ, ಬೆಳಗ್ಗೆ ಒಂದು ಸೇಬನ್ನು ಚಾಕ್ ನಿಂದ ಕತ್ತರಿಸದೆ ಬಾಯಿಯಿಂದ ಕಚ್ಚಿ ತಿನ್ನಿ. ಈ ವಿಧಾನ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.



Click it and Unblock the Notifications
