Latest Updates
-
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು!
ಲೈಂಗಿಕ ಶಕ್ತಿ ಹೆಚ್ಚಿಸಲು ಡಯಟ್ ಟಿಪ್ಸ್
ಲೈಂಗಿಕ ಜೀವನದ ಬಗ್ಗೆ ಮಾತನಾಡಲು ಮುಜುಗರ ಪಡುತ್ತೇವೆ. ಆದರೆ ದಾಂಪತ್ಯ ಜೀವನದಲ್ಲಿ ದಂಪತಿಗಳ ನಡುವೆ ಲೈಂಗಿಕ ತೃಪ್ತಿ ಇದ್ದರೆ ಮಾತ್ರ ಅವರಿಬ್ಬರ ನಡುವೆ ಅನುಬಂಧ ಮತ್ತಷ್ಟು ಹೆಚ್ಚಾಗುವುದು. ಲೈಂಗಿಕ ಅತೃಪ್ತಿ ಗಂಡ-ಹೆಂಡತಿಯ ನಡುವೆ ವಿರಸ ತಂದು ವಿಚ್ಛೇದನ, ಅನೈತಿಕ ಸಂಬಂಧಕ್ಕೆ ಕಾರಣವಾಗುತ್ತದೆ.
ಲೈಂಗಿಕ ನಿಶ್ಯಕ್ತಿಯನ್ನು ಹೋಗಲಾಡಿಸುವಲ್ಲಿ ಕೆಲವೊಂದು ಆಹಾರಗಳು ಹಾಗೂ ಯೋಗ ಸಹಾಯ ಮಾಡುತ್ತದೆ. ಇಲ್ಲಿ ನಾವು ಕೆಲವು ಆಹಾರಗಳ ಪಟ್ಟಿ ನೀಡಿದ್ದೇವೆ. ಇವು ಲೈಂಗಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿವೆ:

ಸ್ಟ್ರಾಬೆರಿ
ಸ್ಟ್ರಾಬೆರಿ ಎಲ್ಲಾ ರೀತಿಯಲ್ಲೂ ಶರೀರಕ್ಕೆ ಒಳ್ಳೆಯದು. ಲೈಂಗಿಕ ಸಮಸ್ಯೆ ಇರುವವರು ಇದರ ಜ್ಯೂಸ್ ಅನ್ನು ಪ್ರತಿನಿತ್ಯ ಕುಡಿದರೆ ಪ್ರಯೋಜನವನ್ನು ಪಡೆಯಬಹುದು.

ಪಾಲಾಕ್ ಸೊಪ್ಪು
ಈ ಆಹಾರದಲ್ಲಿ ವಿಟಮಿನ್ ಹಾಗೂ ಖನಿಜಾಂಶಗಳು ಅಧಿಕವಿರುವುದರಿಂದ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಶತಾವರಿ(Asparagus)
ಲೈಂಗಿಕ ಶಕ್ತಿ ಹೆಚ್ಚಿಸುವ ಆಹಾರಕ್ರಮದಲ್ಲಿ ಶತಾವರಿ ಸೇರಿಸಲು ಮರೆಯಬಾರದು. ಇದನ್ನು ಬೇಯಿಸಿ, ಚೀಸ್ ಜೊತೆ ತಿನ್ನಿ.

ಓಟ್ ಮೀಲ್ಸ್
ಓಟ್ ಮೀಲ್ಸ್ ಪುರುಷರಲ್ಲಿ ಟೆಸ್ಟೋಸ್ಟಿರೋನೆ (testosterone) ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ. ಇದರಿಂದ ಲೈಂಗಿಕ ಶಕ್ತಿ ಹೆಚ್ಚುವುದು. ಅಧಿಕ ತೂಕವಿದ್ದರೂ ಲೈಂಗಿಕ ನಿಶ್ಯಕ್ತಿ ಉಂಟಾಗುವುದು. ಓಟ್ಸ್ ದೇಹದ ತೂಕವನ್ನೂ ಕಮ್ಮಿ ಮಾಡುತ್ತದೆ.

ಮೃದ್ವಂಗಿಗಳು
ಈ ಆಹಾರದಲ್ಲಿ ಸತುವಿರುವುದರಿಂದ ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುವಂತೆ ಮಾಡುತ್ತದೆ.

ಕೆಂಪು ವೈನ್
ಕೆಂಪು ವೈನ್ ಕೂಡ ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಡಾರ್ಕ್ ಚಾಕಲೇಟ್
ಇದರಲ್ಲಿ phenylethylamine ಇದ್ದು ನಿಮ್ಮನ್ನು ಖುಷಿಯಾಗಿಡುತ್ತದೆ. ಲೈಂಗಿಕ ಶಕ್ತಿ ಹೆಚ್ಚಿಸಲು ಇತರ ಮಾರ್ಗಗಳನ್ನು ತಿಳಿಯಲು ಮುಂದೆ ಓದಿ:

Seated forward bend yoga
ಈ ಯೋಗಾಸಾನ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚು ಮಾಡುತ್ತದೆ.

Lotus Pose
ಈ ರೀತಿಯ ಯೋಗ ಪೋಸ್ ಸೊಂಟದ ಕೆಳಗೆ ಬಲವನ್ನು ನೀಡುತ್ತದೆ. ಇದನ್ನು ಮಹಿಳೆಯರು ಮಾಡುವುದರಿಂದ ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ಹೋಗಲಾಡಿಸಬಹುದು.

ಲೈಂಗಿಕಕ್ರಿಯೆ
ಹೆಚ್ಚು ಲೈಂಗಿಕಕ್ರಿಯೆ ನಡೆಸಿದಂತೆ ಲೈಂಗಿಕ ಸಾಮರ್ಥ್ಯ ಹೆಚ್ಚಾಗುವುದು.



Click it and Unblock the Notifications
