Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವ ಆಹಾರಗಳು
ನಾವು ಅನೇಕ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಲೇಖನಗಳಲ್ಲಿ antioxidants ಇರುವ ಆಹಾರಗಳನ್ನು ತಿನ್ನಿ ಎಂದು ಹೇಳಿರುವುದನ್ನು ನೀವು ಗಮನಿಸಿರಬಹುದು.
Antioxidants (ಸ್ವಾಭಾವಿಕ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವ ರಾಸಾಯನಿಕ ವಸ್ತು) ದೇಹದ ಆರೋಗ್ಯಕ್ಕೆ ಅಗತ್ಯವಾದ ರಾಸಾಯನಿಕವಸ್ತು. ಈ ಅಂಶ ಅಧಿಕವಿರುವ ಆಹಾರವನ್ನು ತಿನ್ನುವುದರಿಂದ ಟೈಪ್ 2 ಮಧುಮೇಹ, ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳು ಬರದಂತೆ ತಡೆಯುತ್ತದೆ.
ಕಲೆರಹಿತ ತ್ವಚೆ ಬೇಕೆನ್ನುವವರು ಕೂಡ antioxidants ಅಧಿಕವಿರುವ ಆಹಾರವನ್ನು ತಿನ್ನಬೇಕು. ಸುಸ್ತನ್ನು ಹೋಗಲಾಡಿಸುವಲ್ಲಿ ಕೂಡ ಈ antioxidants ಸಹಾಯ ಮಾಡುತ್ತದೆ.
ಈ ಆರೋಗ್ಯಕರ ರಾಸಾಯನಿಕವನ್ನು ಹೊಂದಿರುವ ಆಹಾರಗಳಾವುವು ಎಂದು ನೋಡೋಣ ಬನ್ನಿ:

ಎಲೆಕೋಸು
ಇದರಲ್ಲಿ antioxidants ಮಾತ್ರವಲ್ಲದೆ ನಾರಿನಂಶ, ವಿಟಮಿನ್ಸ್ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಬೀಟ್ ರೂಟ್
ಇದು ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ರಕ್ತ ಹೀನತೆ ಸಮಸ್ಯೆ ಇರುವವರರು ದಿನಾ ಬೀಟ್ ರೂಟ್ ತಿಂದು ದೇಹದಲ್ಲಿ ರಕ್ತ ಕಣಗಳನ್ನು ಹೆಚ್ಚಿಸಬಹುದು

ಬ್ರೊಕೋಲಿ
ಇದರಲ್ಲಿ ಕೂಡ antioxidants ಇದ್ದು ಈ ತರಕಾರಿ ಅನೇಕ ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ.

ಬೆಳ್ಳುಳ್ಳಿ
ಬೆಳ್ಳುಳ್ಳಿ ತಿನ್ನುವುದರಿಂದ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿಕೊಳ್ಳಬಹುದು.

ದುಂಡು ಮೆಣಸಿನಕಾಯಿ
ದುಂಡು ಮೆಣಸಿನಕಾಯಿ ವಿಟಮಿನ್ ಸಿ ಮತ್ತು antioxidants ಅಂಶವಿರುವ ಆರೋಗ್ಯ ಹೆಚ್ಚಿಸುವ ತರಕಾರಿಯಾಗಿದೆ.

ಬೀನ್ಸ್
ಎಲ್ಲಾ ರೀತಿಯ ಬೀನ್ಸ್ ನಲ್ಲಿ antioxidants ಅಂಶ ಅಧಿಕವಿರುತ್ತದೆ.

ಬೆರ್ರಿ
ಇದು ಕೂಡ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತವೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ.

ಸೇಬು
ಸೇಬಿನಲ್ಲಿ ಪಾಲಿಫಿನೋಲಿಕ್ಸ್ ಎಂಬ antioxidants ಇದ್ದು, ಇದು ದೇಹದಲ್ಲಿರುವ ಕೆಟ್ಟ ರಾಸಾಯನಿಕಗಳನ್ನು ಹೊರಹಾಕುತ್ತದೆ.

ಬೆಣ್ಣೆ ಹಣ್ಣು
ಈ ಹಣ್ಣಿನಲ್ಲಿ ವಿಟಮಿನ್ ಎ, ಸಿ, ಇ ಇರುವುದರಿಂದ ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆ ಸೌಂದರ್ಯಕ್ಕೂ ಒಳ್ಳೆಯದು.

ಟೊಮೆಟೊ
ಟೊಮೆಟೊ ಕೂಡ ಆರೋಗ್ಯ ವೃದ್ಧಿಸುವ ತರಕಾರಿಯಾಗಿದೆ. ದೇಹದಲ್ಲಿರುವ ಅಧಿಕ ಕೊಬ್ಬನ್ನು ಕರಗಿಸಲು ಬಯಸುವವರು ಇದನ್ನು ತಿನ್ನಬಹುದು.

ದಾಳಿಂಬೆ
ದಾಳಿಂಬೆಯಲ್ಲಿ ಕೂಡ antioxidants ಅಧಿಕವಿರುವುದರಿಂದ ಇದನ್ನು ತಿಂದರೆ ಹಲ್ಲುಗಳಿಗೆ ಒಳ್ಳೆಯದು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ದೇಹದಲ್ಲಿ ಶಕ್ತಿಯನ್ನು ತುಂಬುತ್ತದೆ.

ಕಿವಿ ಹಣ್ಣು
ಕಿವಿ ಹಣ್ಣು ಅನೇಕ ಆರೋಗ್ಯಕರ ಗುಣವನ್ನು ಹೊಂದಿರುವಂತಹ ಹಣ್ಣಾಗಿದೆ. ಇದನ್ನು ತಿನ್ನುವುದರಿಂದ ಕೀರ್ಣಕ್ರಿಯೆಗೆ ಸಹಕಾರಿ ಮತ್ತು ದೇಹದಲ್ಲಿರುವ ಕಲ್ಮಶಗಳನ್ನು ಹೊರ ಹಾಕುತ್ತದೆ.

ಕಿತ್ತಳೆ
ಕಿತ್ತಳೆಯಲ್ಲಿ ವಿಟಮಿನ್ ಸಿ ಇದ್ದು ಆರೋಗ್ಯ ಹೆಚ್ಚಿಸುತ್ತದೆ, antioxidants ದೇಹದಲ್ಲಿರುವ ಕಲ್ಮಶವನ್ನು ಹೊರಹಾಕುತ್ತದೆ.



Click it and Unblock the Notifications