Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಜೋಳದ ರುಚಿ ಮಾತ್ರವಲ್ಲ, ಗುಣದ ಬಗ್ಗೆಯೂ ತಿಳಿದುಕೊಳ್ಳಿ
ಸಂಜೆ ಹೊತ್ತಿನಲ್ಲಿ ಅಡ್ಡಾಡಲು ಹೊರಗಡೆ ಹೋದರೆ ಬೇಯಿಸಿದ ಜೋಳ, ಜೋಳವನ್ನು ಸುಟ್ಟು ಉಪ್ಪು, ಮೆಣಸು ಹಾಕಿ ಮಾರುತ್ತಿರುವವರು ಕಣ್ಣಿಗೆ ಬೀಳುತ್ತದೆ. ಅದನ್ನು ನೋಡುತ್ತಿದ್ದರೆ ಯಾರಿಗಾದರೂ ಅದನ್ನು ತಿನ್ನಬೇಕೆನಿಸುತ್ತದೆ. ಇನ್ನು ಜೋಳದಲ್ಲಿ ಸ್ವಲ್ಪ ಹೈ ಫೈ ಆಗಿರುವ ಸ್ವೀಟ್ ಕಾರ್ನ್ ಅನೇಕ ಫ್ಲೇವರ್ ನಲ್ಲಿ ದೊರೆಯುತ್ತದೆ. ನಾವು ಈ ಸ್ನ್ಯಾಕ್ಸ್ ಅನ್ನು ಟೈಮ್ ಪಾಸ್ ಗೆ ಅಂತ ತಿನ್ನುತ್ತೇವೆ, ಆದರೆ ಇದರಲ್ಲಿ ಅನೇಕ ಆರೋಗ್ಯಕರ ಗುಣಗಳಿವೆ.
ಆ ಗುಣಗಳೇನು ಎಂದು ತಿಳಿದುಕೊಳ್ಳಬೇಕೆ? ಹಾಗಾದರೆ ಮುಂದೆ ಓದಿ:

ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಜೋಳದಲ್ಲಿ ಕ್ಯಾರೋನಾಯ್ಡ್ ಅಂಶವಿರುವುದರಿಂದ ಇದು ಕಣ್ಣಿನಲ್ಲಿ ಪೊರೆ ಬರುವುದನ್ನು ದೃಷ್ಟಿ ದೋಷ ಹಾಳಾಗದಂತೆ ಕಣ್ಣನ್ನು ಸಂರಕ್ಷಣೆ ಮಾಡುತ್ತದೆ.

ಹೃದಯಕ್ಕೆ ಬೇಕಾದ ಅಂಶವಿದೆ
ಜೋಳದಲ್ಲಿ ಹೃದಯಕ್ಕೆ ಬೇಕಾದ ವಿಟಮಿನ್ ಸಿ, ಕ್ಯಾರೋನಾಯ್ಡ್, ಫ್ಲೇವೋನಾಯ್ಡ್ ಇದ್ದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಕ್ಯಾಲೋರಿ ಮತ್ತು ವಿಟಮಿನ್ ಅಧಿಕವಿದೆ
ಇದರಲ್ಲಿ ನರಗಳ ಆರೊಗ್ಯ ಕಾಪಾಡುವ ವಿಟಮಿನ್ಸ್ ಇದೆ ಹಾಗೂ ಕ್ಯಾಲೋರಿ ಅಂಶ ಅಧಿಕವಿದ್ದು, ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಜೋಳದಲ್ಲಿರುವ ಖನಿಜಾಂಶಗಳು
ಜೋಳದಲ್ಲಿ ಕಬ್ಬಿಣದಂಶ, ಸತು, ತಾಮ್ರದಂಶ, ಸತು, ಸೆಲಿನಿಯಮ್, ಮೆಗ್ನಿಷ್ಯಿಯಂ ಇದ್ದು, ದೇಹ ತನ್ನ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಲು ಈ ಎಲ್ಲಾ ಅಂಶಗಳು ಅವಶ್ಯಕ.

ಮಧುಮೇಹಿಗಳಿಗೆ ಬೆಸ್ಟ್ ಆಹಾರ
ಮಧುಮೇಹಿಗಳು ಜೋಳ ತಿನ್ನುವುದರ ಮೂಲಕ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆ ನೋಡಿಕೊಳ್ಳಬಹುದೆಂದು ಅಧ್ಯಯನದಿಂದ ತಿಳಿದು ಬಂದಿದೆ.

ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ
ಜೋಳ ಸ್ತನ ಮತ್ತು ಲಿವರ್ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡಿ, ದೇಹದ ಆರೋಗ್ಯವನ್ನು ಸಂರಕ್ಷಿಸುತ್ತದೆ.

ಜೋಳದ ಎಣ್ಣೆ
ಜೋಳದ ಎಣ್ಣೆ ಬಳಸಿ ಮಸಾಜ್ ಮಾಡಿದರೆ ಮುಖದ ಕಾಂತಿ ಹೆಚ್ಚುವುದು. ಅಲ್ಲದೆ ಈ ವಿಧಾನದಿಂದ ಅಕಾಲಿಕ ನೆರಿಗೆಯನ್ನು ತಡೆಗಟ್ಟಬಹುದು.

ಜೀರ್ಣಕ್ರಿಯೆಗೆ ಒಳ್ಳೆಯದು
ಜೋಳದಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು ಹಾಗೂ ಗರ್ಭಿಣಿಯರು ಇದನ್ನು ತಿನ್ನುವುದರಿಂದ ಅಧಿಕ ಪೋಷಕಾಂಶ ದೊರೆಯುತ್ತದೆ.



Click it and Unblock the Notifications
