ಪರಿಣಾಮಕಾರಿಯಾದ ಹ್ಯಾಂಗ್ ಓವರ್ ನಿವಾರಕಗಳು

By Super

ಕುಡಿಯುವುದು ಇಷ್ಟ ಆದರೆ ಮರುದಿನದ ಹ್ಯಾಂಗ್ ಓವರ್ ಯಾರಿಗೆ ಬೇಕು. ಕುಡಿಯುವಾಗ ಇದೆಲ್ಲದರ ಪರಿವೆ ಇರುವುದಿಲ್ಲ. ಆದರೆ ಕುಡಿದ ನಂತರದ ಒಂದು ದಿನವೆಲ್ಲಾ ವ್ಯರ್ಥವಾಗಿಬಿಡುತ್ತದೆ. ಸರಿಯಾಗಿ ಕೆಲಸ ಮಾಡಲಾಗುವುದಿಲ್ಲ ಇತ್ಯಾದಿ ಸಮಸ್ಯೆಗಳು ನಿಮಗೂ ಇರಬಹುದು. ಯಾರೋ ಹೇಳಿದ ಹ್ಯಾಂಗ್ ಓವರ್ ನಿವಾರಕವನ್ನು ಪ್ರಯತ್ನಿಸಿ ಸೋತು ಹೋಗಿರಬಹುದು. ಆದರೆ ಎಲ್ಲವೂ ಹೀಗೆ ಅಲ್ಲ. ಎಲ್ಲರಿಗೂ ಪರಿಣಾಮ ನೀಡುವ ಕೆಲವೊಂದು ಪರಿಹಾರಗಳು ಇಲ್ಲಿವೆ.

ನೀವು ಅಪರೂಪಕ್ಕೊಮ್ಮೆ ಮದ್ಯಪಾನ ಮಾಡುವವರಾಗಬಹುದು, ಮದ್ಯಪಾನ ಹೇಗಿರುತ್ತದೆ ಎಂಬ ಕುತೂಹಲಕ್ಕಾಗಿ ಕುಡಿಯಬಹುದು ಅಥವಾ ನಿಯಮಿತವಾಗಿ ಕುಡಿಯುವ ಅಭ್ಯಾಸ ಹೊಂದಿರಬಹುದು. ಅಮಲೇರುವುದು (ಹ್ಯಾಂಗ್ ಓವರ್) ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ.

ಕೆಲವೊಮ್ಮೆ ಈ ಹ್ಯಾಂಗ್ ಓವರ್ ಬಹಳ ಅಸಹ್ಯವಾಗಿರುತ್ತದೆ. ನಿಮ್ಮ ಇಡಿ ದಿನ ಕೆಲಸಗಳನ್ನು ಇದು ಹಾಳು ಮಾಡಬಹುದು ಅಥವಾ ಇನ್ನೂ ಹೆಚ್ಚು ಪರಿಣಾಮ ಬೀರಬಹುದು ಇವೆಲ್ಲವೂ ನೀವು ಎಷ್ಟರ ಮಟ್ಟಿಗೆ ಈ ಅಮಲನ್ನು ಸಹಿಸಿಕೊಳ್ಳಲು ಸಾಧ್ಯ ಎನ್ನುವುದರ ಮೇಲೆ ಅವಲಂಬಿತವಾಗಿದೆ. ನಿಮಗೆ ಗೊತ್ತಿಲ್ಲದ ಯಾವುದೋ ಒಂದು ಹ್ಯಾಂಗ್ ಓವರ್ ನಿವಾರಕವನ್ನು ಪ್ರಯತ್ನಿಸುವ ಬದಲು, ಪ್ರಯತ್ನಿಸಿ ಮತ್ತಷ್ಟು ತೊಂದರೆ ಪಟ್ಟುಕೊಳ್ಳುವ ಬದಲು ನೀವು ಮನೆಯಲ್ಲೇ ಮಾಡಬಹುದಾದ ಕೆಲವನ್ನು ನೀವು ಪ್ರಯತ್ನಿಸಬಹುದು. ಅವುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1.ವಿಟಮಿನ್ ಪೇಯಗಳು ಅಮಲು ನಿವಾರಕಗಳು

1.ವಿಟಮಿನ್ ಪೇಯಗಳು ಅಮಲು ನಿವಾರಕಗಳು

ಇಂದು ವಿಟಮಿನ್ ಪೇಯಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗಿವೆ. ಇವುಗಳನ್ನು ನೀವು ಮನೆಯಲ್ಲೇ ಫ್ರಿಜ್ ಇದ್ದರೆ ತಂದಿಡಬಹುದು. ವಿಟಮಿನ್ ಪೇಯಗಳು ನೀರಿನಲ್ಲಿ ಕರಗುವ ಕೆಲವು ವಿಟಮಿನ್ ಗಳಾದ ಬಿ ಮತ್ತು ಸಿ ಗಳಿಂದ ಮಾಡಲಾಗಿರುತ್ತದೆ. ಇವುಗಳು ಹ್ಯಾಂಗ್ ಓವರ್ ಅನ್ನು ಕಡಿಮೆ ಮಾಡುತ್ತವೆ. ಆದರೆ ನೀವು ಸೇವಿಸುವ ವಿಟಮಿನ್ ಪಾನೀಯ ಹೆಚ್ಚಿನ ಪ್ರಮಾಣದ ಸಕ್ಕರೆಯ ಅಂಶವನ್ನು ಹೊಂದಿಲ್ಲ ಎಂಬುದನ್ನು ಖಾತ್ರಿ ಮಾಡಿ. ಪುನರ್ಜಲೀಕರಣದ ಸಲುವಾಗಿ ನೀವು ಆ ವಿಟಮಿನ್ ಪಾನೀಯವನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಸೇವಿಸಬಹುದು.

2. ಕಿತ್ತಳೆ ಪಾನೀಯ, ಮೊಟ್ಟೆ ಮತ್ತು ತರಕಾರಿಗಳಿಗೆ ಹ್ಯಾಂಗ್ ಓವರ್ ಮಾಯ

2. ಕಿತ್ತಳೆ ಪಾನೀಯ, ಮೊಟ್ಟೆ ಮತ್ತು ತರಕಾರಿಗಳಿಗೆ ಹ್ಯಾಂಗ್ ಓವರ್ ಮಾಯ

ಅಮಲನ್ನು ನಿವಾರಿಸಲು ಕಿತ್ತಳೆ ಪಾನೀಯ ಅತ್ಯಂತ ಸುಲಭವಾದ ಒಂದು ಸಾಧನವಾಗಿದೆ. ಇದು ಪುನರ್ಜಲೀಕರಣದ ಜೊತೆಗೆ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಹೊಂದಿರುತ್ತದೆ. ಹಾಗೂ ಅಮಲನ್ನು ನಿವಾರಿಸುತ್ತದೆ. ನೀವಿದನ್ನು ಬೇಯಿಸಿದ ಮೊಟ್ಟೆ ಹಾಗೂ ಸ್ವಲ್ಪ ಕಾಯಿಸಿದ ಬ್ರೆಡ್ ನೊಂದಿಗೆ ಸೇರಿಸಿಯೂ ಸೇವಿಸಬಹುದಾಗಿದೆ.

3. ಪ್ರತ್ಯಾಮ್ಲಗಳು ಹ್ಯಾಂಗ್ ಓವರ್ ಗೆ ರಾಮ ಬಾಣ

3. ಪ್ರತ್ಯಾಮ್ಲಗಳು ಹ್ಯಾಂಗ್ ಓವರ್ ಗೆ ರಾಮ ಬಾಣ

ನೀವು ಸುಲಭವಾಗಿ ಗಳಿಸಬಹುದಾದಂತಹ ಯಾವುದೇ ಒಂದು ಪ್ರತ್ಯಾಮ್ಲವನ್ನು ನೀರಿನ ಜೊತೆ ಸೇರಿಸಿ ಸೇವಿಸಿ. ಇದು ಹ್ಯಾಂಗ್ ಓವರ್ ನಿಂದಾಗುವ ಮೈ ಕೈ ನೋವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಪ್ರತ್ಯಾಮ್ಲಗಳು ಸ್ವಲ್ಪ ಪ್ರಮಾಣದ ಸೋಡಿಯಂ ಬೈ ಕಾರ್ಬೋನೇಟ್ ಗಳನ್ನು ಹೊಂದಿರುತ್ತದೆ ಹಾಗೂ ಇದು ಹೆಚ್ಚಿನ ಮದ್ಯಪಾನದಿಂದಾಗುವ ಆಸಿಡಿಟಿಯನ್ನು ಕಡಿಮೆ ಮಾಡುತ್ತದೆ.

4. ಒಂದು ಕಪ್ ಕಾಫಿ ಹ್ಯಾಂಗ್ ಓವರ್ ದೂರ

4. ಒಂದು ಕಪ್ ಕಾಫಿ ಹ್ಯಾಂಗ್ ಓವರ್ ದೂರ

ಇನ್ನೊಂದು ಜಗದ್ವಿಖ್ಯಾತ ಹ್ಯಾಂಗ್ ಓವರ್ ನಿವಾರಕ ಎಂದರೆ ಒಂದು ಕಪ್ ಸ್ಟ್ರಾಂಗ್ ಕಾಫಿ. ಒಂದೇ ಬಾರಿ ದೊಡ್ಡ ಕಪ್ ಕಾಫಿ ಕುಡಿಯುವ ಬದಲು ದಿನದಲ್ಲಿ ಆಗಾಗ ಸಣ್ಣ ಸಣ್ಣ ಕಪ್ ಕುಡಿಯಿರಿ. ಕಾಫಿ ಸೇವನೆ ಆಲಸ್ಯವನ್ನು ಕಡಿಮೆ ಮಾಡಿ ತಲೆನೋವನ್ನು ಕಡಿಮೆ ಮಾಡುವುದರ ಜೊತೆಗೆ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಇದು ಮದ್ಯಪಾನನಿಂದಾದ ಅಮಲನ್ನು ಕಡಿಮೆ ಮಾಡುವಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ.

5. ಕೃತಕ ಪುನರ್ಜಲೀಕಾರಕಗಳು ಹ್ಯಾಂಗ್ ಓವರ್ ಗೆ ಔಷಧಿ

5. ಕೃತಕ ಪುನರ್ಜಲೀಕಾರಕಗಳು ಹ್ಯಾಂಗ್ ಓವರ್ ಗೆ ಔಷಧಿ

ಗ್ಲೂಕೋಸ್ ನಿರ್ಜಲೀಕರಣ ಹೆಚ್ಚಾಗಿರುವ ಮಕ್ಕಳಿಗೆ ಪುನರ್ಜಲೀಕರಣಕ್ಕೆ ಸೂಚಿಸಲಾದ ಕೆಲವು ಔಷಧಗಳಾಗಿವೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಎಲೆಕ್ಟೊಲೈಟ್ ಗಳಿರುತ್ತವೆ.ಇದನ್ನು ನೀರಿನಲ್ಲಿ ಕರಗಿಸಿ ದಿನವಿಡಿ ಸ್ವಲ್ಪ ಸ್ವಲ್ಪವೇ ಪ್ರಮಾಣದಲ್ಲಿ ಸೇವಿಸಿ.

6. ನೋವು ವಿವಾರಕಗಳು ಹ್ಯಾಂಗ್ ಓವರ್ ನಿವಾರಕವೂ ಹೌದು

6. ನೋವು ವಿವಾರಕಗಳು ಹ್ಯಾಂಗ್ ಓವರ್ ನಿವಾರಕವೂ ಹೌದು

ಪ್ರತಿಯೊಂದು ಮನೆಯಲ್ಲಿ ಒಂದಲ್ಲ ಒಂದು ಪೈನ್ ಕಿಲ್ಲರ್ ಅಂತೂ ಇದ್ದೇ ಇರುತ್ತದೆ. ಇವು ನೋವು ನಿವಾರಣೆಯ ಜೊತೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಹ್ಯಾಂಗ್ ಓವರ್ ಅನ್ನೂ ಕಡಿಮೆ ಮಾಡುತ್ತವೆ. ಮನೆಗೆ ಮರಳಿದ ತಕ್ಷಣ ಒಂದು ಆಸ್ಪಿರಿನ್ ಅಥವಾ ಒಂದು ಇಬುಪ್ರೊಫೇನ್ ಸೇವಿಸಿ ಅಮಲಿನಿಂದ ಮುಕ್ತಿ ಹೊಂದಿ. ಆದರೆ ನೆನಪಿಡಿ ನೋವು ನಿವಾರಕ ಹೆಚ್ಚು ಸೇವಿಸದಿರಿ.

7. ವ್ಯಾಯಾಮ: ಹ್ಯಾಂಗ್ ಓವರ್ ನಿಂದ ಹೊರಬರುವ ಕಠಿಣವಾದ ಮಾರ್ಗ

7. ವ್ಯಾಯಾಮ: ಹ್ಯಾಂಗ್ ಓವರ್ ನಿಂದ ಹೊರಬರುವ ಕಠಿಣವಾದ ಮಾರ್ಗ

ಇಲ್ಲಿ ವ್ಯಾಯಾಮದ ಅರ್ಥ ಜಿಮ್ ಗೆ ಹೋಗಿ ಕಠಿಣ ತಾಲೀಮು ನಡೆಸುವುದಲ್ಲ. ಓಡುವುದು, ಟ್ರೇಡ್ ಮಿಲ್, ಅಥವಾ ಪುಶ್ ಅಪ್ಸ್ ಮಾಡಿದರೆ ಸಾಕು. ವ್ಯಾಯಾಮದಿಂದ ಬೆವರಿಳಿಸುವುದು ಹಾಗೂ ಇದರ ಜೊತೆಗೆ ಸಕ್ಕರೆ ನೀರು ಅಥವಾ ಇನ್ಯಾವುದೇ ಪುನರ್ಜಲೀಕರಣ ಪಾನೀಯವನ್ನು ಸೇವಿಸಿ.

8. ಶುಂಠಿ ಚಹಾ ಮತ್ತು ಹ್ಯಾಂಗ್ ಓವರ್

8. ಶುಂಠಿ ಚಹಾ ಮತ್ತು ಹ್ಯಾಂಗ್ ಓವರ್

ತಲೆ ನೋವು ಮತ್ತು ಹ್ಯಾಂಗ್ ಓವರ್ ಇವೆರಡರಿಂದಲೂ ಒಟ್ಟಿಗೆ ಮುಕ್ತಿ ಪಡೆಯಲು ಶುಂಠಿಯ ಚಹಾ ರಾಮಬಾಣವಾಗಿದೆ. ಇದು ಮದ್ಯಪಾನವನ್ನು ಸರಿಯಾಗಿ ಜೀರ್ಣವಾಗಿಸಲೂ ಸಹಕಾರಿ, ಇದರ ಮೂಲಕ ಹೊಟ್ಟೆಯಲ್ಲಾಗುವ ಅಹಿತಕರ ಅನುಭವಗಳನ್ನು ಕಡಿಮೆ ಮಾಡುವುದು.

9. ಬಾಳೆಹಣ್ಣು ಸೇವನೆ ಹಾಗೂ ಅಮಲು ಇಳಿಕೆ

9. ಬಾಳೆಹಣ್ಣು ಸೇವನೆ ಹಾಗೂ ಅಮಲು ಇಳಿಕೆ

ಹ್ಯಾಂಗ್ ಓವರ್ ಕಡಿಮೆ ಮಾಡುವುದಕ್ಕಿಂತ ಹೆಚ್ಚಾಗಿ ಇದು ಹ್ಯಾಂಗ್ ಓವರ್ ತಡೆಗೆ ಬಹಳ ಉಪಯುಕ್ತ. ನೀವು ಇಲ್ಲಿ ಸ್ವಲ್ಪ ಮುಂಜಾಗ್ರತೆ ತೆಗೆದುಕೊಳ್ಳಬೇಕು. ಮದ್ಯಪಾನ ಸೇವನೆಗೆ ಮುಂಚಿತವಾಗಿ ಕೆಲವು ಬಾಳೆಹಣ್ಣುಗಳನ್ನು ಸೇವಿಸಬೇಕು. ಬಾಳೆಹಣ್ಣಿನಲ್ಲಿರುವ ಪೊಟಾಷಿಯಂ ಹಾಗೂ ಸಂಕೀರ್ಣ ಕಾರ್ಬೋಹೈಡ್ರೇಟ್ಸ್ ಪುನರ್ಜಲೀಕರಣ ಪ್ರಭಾವವನ್ನು ಹೊಂದಿವೆ.

X
Desktop Bottom Promotion