Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ಈ ಫುಡ್ಸ್ ಕಾಂಬಿನೇಷನ್ ನಿಮ್ಮನ್ನು ತೆಳ್ಳಗಾಗಿಸುತ್ತದೆ
ಆಹಾರವು ನಮ್ಮ ದೇಹದ ತೂಕವನ್ನು ಹೆಚ್ಚಿಸುವಲ್ಲಿ ಮತ್ತು ಕಡಿಮೆ ಮಾಡುವಲ್ಲಿ ಬಹು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಕೆಲವು ಆಹಾರಗಳು ನಿಮ್ಮ ತೂಕಕ್ಕೆ ಟನ್ ಸೇರಿಸಿದರೆ, ಕೆಲವು ಆಹಾರಗಳು ನಿಮಗೆ ತೂಕವನ್ನು ಕಳೆದುಕೊಳ್ಳುವಲ್ಲಿ ಸಹಾಯವನ್ನು ಮಾಡುತ್ತವೆ. ಕೇವಲ ತೂಕ ನಷ್ಟಕ್ಕೆ ಮಾತ್ರವಲ್ಲ. ಅವು ನಿಮ್ಮ ಪ್ರತಿರೋಧ ಶಕ್ತಿ, ಚರ್ಮ ರಕ್ಷಣೆ ಮುಂತಾದ ಅಂಶಗಳ ವೃದ್ಧಿಗೂ ಸಹಾಯ ಮಾಡುತ್ತದೆ.
ಈ ಕೆಳಗೆ ಒಟ್ಟು ಒಂಭತ್ತು ಆಹಾರ ಸಂಯೋಜನೆಗಳನ್ನು ನೀಡಲಾಗಿದ್ದು, ಇವುಗಳು ದೇಹದ ಸದೃಢ ಆರೋಗ್ಯ ಮತ್ತು ಆಕಾರಕ್ಕೆ ಖಂಡಿತವಾಗಿಯೂ ತುಂಬಾ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತವೆ. ಈ ಆಹಾರ ಸಂಯೋಜನೆಗಳು ಖಂಡಿತವಾಗಿಯೂ ನಿಮ್ಮ ದೇಹ ಮತ್ತು ಚರ್ಮದ ಮೇಲೆ ಧನಾತ್ಮಕವಾದ ಪರಿಣಾಮವನ್ನು ಬೀರಿ, ನಿಮ್ಮನ್ನು ಆರೋಗ್ಯಶಾಲಿಯನ್ನಾಗಿ ಮಾಡುತ್ತವೆ.
ಈ ಎಲ್ಲ ಆಹಾರಗಳು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಆಹಾರ ಪದ್ಧತಿಯ ಭಾಗವಾಗಿವೆ. ಆದ್ದರಿಂದ ಈ ಆಹಾರ ಸಂಯೋಜನೆಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡು ಒಂದು ಪರಿಣಾಮಕಾರಿಯಾದ ಫಲಿತಾಂಶವನ್ನು ಪಡೆಯಿರಿ.

ನಿಮಗೆ ಆಗುವ ಲಾಭ: ದೃಢ ಚರ್ಮ
ನೀವು ದೃಢ ಮತ್ತು ಒಳ್ಳೆಯ ಚರ್ಮವನ್ನು ಹೊಂದಲು ಮುಖಕ್ಕೆ ಹಲವು ಸೌಂದರ್ಯವರ್ಧಕ ಉತ್ಪನ್ನಗಳನ್ನು ಲೇಪಿಸುವ ಅವಶ್ಯಕತೆ ಇಲ್ಲ. ಇದಕ್ಕೆ ನೀವು ಮಾಡಬೇಕಾದದು ಇಷ್ಟೇ. ಮೊಟ್ಟೆ ಮತ್ತು ಮಾವಿನ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿ. ಮೊಟ್ಟೆಯನ್ನು ದಿನವೂ ಸೇವಿಸಿದರೆ ಮಾವಿನ ಹಣ್ಣನ್ನು ಅದರ ಋತುಮಾನದಲ್ಲಿ ಸೇವಿಸಿ . ಮೊಟ್ಟೆಯಲ್ಲಿ ನೈಸರ್ಗಿಕವಾದ ಅಮೈನೋ ಆಸಿಡ್ ತುಂಬಾ ಹೇರಳವಾಗಿರುತ್ತವೆ. ಇದು ಚರ್ಮದ ಕೊಲೆಜಿನ್ ರಚನೆಗೆ ಅತ್ಯಗತ್ಯ ಮತ್ತು ಮಾವಿನ ಹಣ್ಣಿನಲ್ಲಿ ವಿಟಾಮಿನ್ ಸಿ ಹೇರಳವಾಗಿದ್ದು ಇದು ಆಸಿಡ್ ಗಳೊಂದಿಗೆ ಕಾರ್ಯ ನಿರ್ವಹಿಸಿ ಕೊಲೆಜಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ದೇಹದಲ್ಲಿರುವ ಶಕ್ತಿಯನ್ನು ಮರು ಹೆಚ್ಚಿಸಿ, ಚರ್ಮದ ಸೊಬಗು ಇನ್ನು ಸುಂದರವಾಗುವಂತೆ ಮಾಡುತ್ತದೆ.
ಇದನ್ನು ಸರಿಯಾಗಿ ಮಾಡಿ: ನಿಮ್ಮ ಮುಂದಿನ ಬೆಳಗಿನ ಉಪಹಾರಕ್ಕೆ ಉತ್ತೇಜನವನ್ನು ನೀಡಲು, ಬೆಳಗಿನ ಉಪಹಾರವಾಗಿ ನೀವು ಎರಡು ಬೇಯಿಸಿದ ಮೊಟ್ಟೆಗಳನ್ನು , ಅದರ ಜೊತೆಗೆ ಒಂದು ಕಪ್ ತಾಜಾ ಮಾವಿನ ಹಣ್ಣಿನ ತುಂಡುಗಳನ್ನು ಸೇವಿಸಿ. ಇದು ನಿಮ್ಮ ದೇಹಕ್ಕೆ ಒಂದು ಸಂಪೂರ್ಣ ದಿನಕ್ಕೆ ಬೇಕಾದ ಶಕ್ತಿಯನ್ನು ಮತ್ತು ವಿಟಾಮಿನ್ ಸಿ ಯನ್ನು ಪೂರೈಸುತ್ತದೆ.

ನಿಮಗೆ ಆಗುವ ಲಾಭ: ಉತ್ತಮ ಪ್ರತಿರೋಧಕ ಶಕ್ತಿ
ನೀವು ಈ ಆಹಾರಗಳನ್ನು ತರಕಾರಿಗಳ ಮಾರುಕಟ್ಟೆಯಲ್ಲಿ ನೋಡಿಯೇ ನೋಡಿರುತ್ತೀರಿ. ಇವುಗಳು ಸ್ವಲ್ಪ ಮಟ್ಟಿಗೆ ದುಬಾರಿಯು ಹೌದು. ಆದರೆ ಇವುಗಳನ್ನು ಕೊಂಡು ಕೊಳ್ಳಲು ಕೆಲವು ಅತ್ಯುತ್ತಮ ಕಾರಣಗಳಿವೆ. ನೀವು ಇವುಗಳನ್ನು ದಿನವೂ ಸೇವಿಸಿದರೆ ನಿಮ್ಮ ದೇಹದಲ್ಲಿ ಉತ್ತಮ ಪ್ರತಿರೋಧಕ ಶಕ್ತಿ ವೃದ್ಧಿ ಆಗುತ್ತದೆ. ದೇಹದಲ್ಲಿ ಕಬ್ಬಿಣದ ಅಂಶವು ಹೆಚ್ಚಾಗುತ್ತದೆ. ಅಲಸಂದೆ ಕಾಳುಗಳಲ್ಲಿ ಕಬ್ಬಿಣದ ಅಂಶವು ತುಂಬಾ ಗಟ್ಟಿಯಾಗಿರುತ್ತದೆ. ಇದನ್ನು ದೇಹ ಜೀರ್ಣಿಸಿಕೊಳ್ಳುವುದು ಕಷ್ಟ. ಆದ್ದರಿಂದ ಇದಕ್ಕೆ ವಿಟಾಮಿನ್ ಸಿ ಇರುವ ಸ್ವಲ್ಪ ಕೆಂಪು ಮೆಣಸಿನ ಪುಡಿಯನ್ನು ಮಿಶ್ರಣ ಮಾಡಿದರೆ ಆಗ ಕಬ್ಬಿಣದ ಅಂಶವು ಸರಳಗೊಂಡು ದೇಹಕ್ಕೆ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.

ನಿಮಗೆ ಆಗುವ ಲಾಭ: ರೋಗಗಳಿಂದ ಉತ್ತಮ ರಕ್ಷಣೆ
ಟೊಮೆಟೊಗಳು ದೇಹದಲ್ಲಿ ನಾಲ್ಕು ಪ್ರಮುಖ ಕಾರೋಟಿನೈಡ್ ಗಳನ್ನು, ಜೊತೆಗೆ ಮೂರು ಪ್ರಬಲ ಉತ್ಕರ್ಷಣ ನಿರೋಧಕಗಳನ್ನು ಉತ್ತೇಜನಗೊಳಿಸುತ್ತವೆ. ಇದು ನಿಮಗೆ ಕ್ಯಾನ್ಸರ್ ಮತ್ತು ಹೃದಯ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ರಕ್ಷಣಾತ್ಮಕ ರಾಸಾಯನಿಕಗಳನ್ನು ಸ್ವಲ್ಪ ಆಲಿವ್ ತೈಲದೊಂದಿಗೆ ಸೇವಿಸಿದರೆ ಒಳ್ಳೆಯದು. ಇದು ಟೊಮೆಟೊ ಆಹಾರವು ಸರಿಯಾಗಿ ಜೀರ್ಣವಾಗಲು ಮತ್ತು ಶಕ್ತಿಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ. ಆಲಿವ್ ತೈಲದಲ್ಲಿ ಉತ್ತಮ ಆರೋಗ್ಯಕರ ಏಕ ಪರ್ಯಾಪ್ತ ಕೊಬ್ಬುಗಳು ಇರುತ್ತವೆ.
ಇದನ್ನು ಸರಿಯಾಗಿ ಮಾಡಿ _ ಟೊಮೆಟೊದ ಮೇಲಿನ ಪದರ ಅಥವಾ ಚರ್ಮದಲ್ಲಿ ಉತ್ತಮ ಸಸ್ಯ ರಾಸಾಯನಿಕಗಳಿವೆ. ಅದನ್ನು ಹಾಗೆಯೇ ಉಳಿಸಿಕೊಳ್ಳಿ. ಆಲಿವ್ ತೈಲವು ಸಂಸ್ಕರಣೆಗೊಂಡಿದ್ದರಿಂದ ಇದು ಅತ್ಯುತ್ತಮ ಅನುಕೂಲಕರ ಸಂಯುಕ್ತಗಳನ್ನು ಒಳಗೊಂಡಿದೆ. ಇದನ್ನು ಶಾಖದಿಂದ ದೂರವಿಡಿ. ಉತ್ತಮ ಗಾಳಿ ಮತ್ತು ಬೆಳಕು ಬರುವ ಸ್ಥಳದಲ್ಲಿ ಇದನ್ನು ಸಂಗ್ರಹಿಸಿ. ಆಗ ಇದಕ್ಕೆ ಕೆಟ್ಟ ವಾಸನೆ ಹಿಡಿಯುವುದನ್ನು ತಡೆಯಬಹುದು.

ನಿಮಗೆ ಆಗುವ ಲಾಭ: ಕ್ಯಾನ್ಸರ್ ವಿರುದ್ಧ ರಕ್ಷಣೆ
ಈ ಎರಡು ಆಹಾರಗಳು ವೈಯಕ್ತಿಕವಾಗಿ ಕ್ಯಾನ್ಸರ್ ವಿರುದ್ಧ ಹೋರಾಡುವ ಆಹಾರಗಳು ಎಂದೇ ಪ್ರಸಿದ್ಧಿಯನ್ನು ಪಡೆದಿವೆ. ಆದರೆ ಸಂಶೋಧನೆಗಳು ಈ ಎರಡು ಆಹಾರವನ್ನು ಮಿಶ್ರಣ ಮಾಡಿದರೆ ಇನ್ನು ಅತ್ಯುತ್ತಮ ಕ್ಯಾನ್ಸರ್ ವಿರುದ್ಧ ಹೋರಾಡುವ ಆಹಾರ ಗುಣಗಳನ್ನು ಪಡೆಯುತ್ತವೆ ಎಂದು ಹೇಳುತ್ತವೆ. ಟೊಮೆಟೊ ಅಥವಾ ಬ್ರೊಕೋಲಿಯನ್ನು ಮಿಶ್ರಣ ಮಾಡಿ ಆಹಾರವನ್ನು ತಯಾರಿಸಿ ಸೇವಿಸಿದರೆ ಅದರಿಂದ ಆಗುವ ಲಾಭ ಅಷ್ಟಿಷ್ಟಲ್ಲ. ಇದರಿಂದ ಕ್ಯಾನ್ಸರ್ ಪ್ರೊಸ್ಟ್ರೇಟ್ ಗೆಡ್ಡೆಗಳ ಬೆಳವಣಿಗೆ ನಿಧಾನವಾಗುತ್ತದೆ. ಮತ್ತು ಪರಿಣಾಮಕಾರಿಯಾದ ಆರೋಗ್ಯ ಬದಲಾವಣೆ ದೇಹದಲ್ಲಿ ಉಂಟಾಗುತ್ತದೆ ಎಂದು ವಿಜ್ಞಾನಿಗಳು ಖಚಿತವಾಗಿ ಹೇಳುತ್ತಾರೆ.
ಇದನ್ನು ಸರಿಯಾಗಿ ಮಾಡಿ: ಪಿಜ್ಜಾ ಜೊತೆಗೆ , ಒಂದೂವರೆ ಕಪ್ ಬ್ರೊಕೋಲಿಯನ್ನು ಅರ್ಧ ಕಪ ತಾಜಾ ಟೊಮೆಟೊ ತುಂಡುಗಳೊಂದಿಗೆ ಮಿಶ್ರಣ ಮಾಡಿ ಸೇವಿಸಿ.

ನಿಮಗೆ ಆಗುವ ಲಾಭ: ಉತ್ತಮ ಆರೋಗ್ಯಕರ ಹೃದಯ
ಒಟ್ಸ್ಅವೆಂತ್ರಮೇಡ್ (avenanthramides) ಮತ್ತು ಫಿನಾಲಿಕ್ (phenolic)ಆಮ್ಲದಂತಹ ಎರಡು ಪ್ರಮುಖ ಸಸ್ಯ ರಾಸಾಯನಿಕಗಳನ್ನು ಒಳಗೊಂಡಿದೆ. ಇವುಗಳು ಕೆಟ್ಟ ಕೊಲೆಸ್ಟ್ರಾಲ್ ಹಾನಿಕಾರಕ ಪರಿಣಾಮಗಳನ್ನು ಕಡಿಮೆಗೊಳಿಸಲು ವಿಟಾಮಿನ್ ಸಿ ಯೊಂದಿಗೆ ಕಾರ್ಯ ನಿರ್ವಹಿಸುತ್ತವೆ.

ನಿಮಗೆ ಆಗುವ ಲಾಭ: ಉತ್ತಮ ಆರೋಗ್ಯಕರ ಹೃದಯ
ಗ್ರೀನ್ ಟೀಯಲ್ಲಿ ಕ್ಯಾಟ್ಚಿನ್ಸ್ (catechin)ಎಂಬ ಪ್ರಬಲ ಉತ್ಕರ್ಷಣ ನಿರೋಧಕಗಳು ತುಂಬಾ ಹೇರಳವಾಗಿವೆ. ಇದು ಹೃದಯದ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ. ಏನೇ ಇರಲಿ ಒಂದು ಆಧ್ಯಯನದ ಪ್ರಕಾರ ಮನುಷ್ಯನ ದೇಹವು ಈ ಸಂಯುಕ್ತಗಳ ಶೇಕಡ 20 ರಷ್ಟು ಮಾತ್ರ ಹೀರಿಕೊಳ್ಳಲು ಸಮರ್ಥವಾಗಿದೆ. ಈ ಗ್ರೀನ್ ಟೀ ಗೆ ನಿಂಬೆ ರಸವನ್ನು ಸೇರಿಸಿದರೆ, ಆಗ ಕ್ಯಾಟ್ಚೀನ್ಸ್ ಪ್ರಮಾಣವು ಶೇಕಡ 80 ರಷ್ಟು ಹೆಚ್ಚಾಗುತ್ತದೆ.
ಇದನ್ನು ಸರಿಯಾಗಿ ಮಾಡಿ: ನೀವು ಒಂದು ಕಪ : ಗ್ರೀನ್ ಟಿ ಯನ್ನು ಕುದಿಸಿದ ನಂತರ ಅದಕ್ಕೆ ಒಂದು ಪೂರ್ಣ ನಿಂಬೆ ರಸವನ್ನು ಹಿಂಡಿ. ನಂತರ ಅದನ್ನು ಸೇವಿಸಿ.

ನಿಮಗೆ ಆಗುವ ಲಾಭ: ಹೆಚ್ಚುವರಿ ಶಕ್ತಿ ಮತ್ತು ಶೀಘ್ರ ತೂಕ ಇಳಿಕೆ
ನಿಮ್ಮ ಧಾನ್ಯಗಳ ಹುರಿದ ಆಹಾರ ಮೇಲೆ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸುವುದರಿಂದ ಅನೇಕ ಲಾಭಗಳು ಉಂಟಾಗುತ್ತವೆ. ಇದು ನಿಮ್ಮ ರಕ್ತದ ಸಕ್ಕರೆ ಪ್ರಮಾಣವನ್ನು ಆರೋಗ್ಯಕರ ಮಟ್ಟದಲ್ಲಿ ಇಡಲು ಸಹಾಯ ಮಾಡುತ್ತದೆ. ನಿಮ್ಮ ಶಕ್ತಿಯನ್ನು ಹೆಚ್ಚಿಸಿ, ಹಸಿವೆಯ ಪ್ರಮಾಣವನ್ನು ಉತ್ತಮಗೊಳಿಸುತ್ತದೆ. ದಾಲ್ಚಿನ್ನಿಯು ನಮ್ಮ ದೇಹದ ಆರೋಗ್ಯದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಆಹಾರದ ನಂತರ ನಮ್ಮ ದೇಹದ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಇದನ್ನು ಸರಿಯಾಗಿ ಮಾಡಿ: ಟ್ರಾನ್ಸ್ ಮಾರ್ಗರೈನ್ ಉಳ್ಳ ಒಂದು ಸಂಪೂರ್ಣ ಧಾನ್ಯಗಳ ಹುರಿದ ಆಹಾರ ತೆಗೆದುಕೊಳ್ಳಿ, ಅದಕ್ಕೆ ಒಂದು ಟೀ ಚಮಚದಷ್ಟು ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಸೇವಿಸಿ.

ನಿಮಗೆ ಆಗುವ ಲಾಭ: ಸಂಪೂರ್ಣ ದೇಹದ ರಕ್ಷಣೆ
ಈ ಎರಡು ಸಸ್ಯಾಹಾರಿಗಳು ತುಂಬಾ ಹೇರಳ ಪ್ರಮಾಣದ ರಂಜಕದ ಸಂಯುಕ್ತಗಳನ್ನು ಮತ್ತು ಆರೋಗ್ಯಕರ ಹೃದಯಕ್ಕೆ ಅನುಕೂಲಕರವಾದ ಸಸ್ಯ ರಾಸಾಯನಿಕಗಳನ್ನು ಒಳಗೊಂಡಿವೆ.
ಇದನ್ನು ಸರಿಯಾಗಿ ಮಾಡಿ: ಬಹುತೇಕ ಭಾರತೀಯ ಆಹಾರಗಳಲ್ಲಿ ಇವೆರಡರ ಮಿಶ್ರಣವನ್ನು ನೋಡಬಹುದು. ನಿಮಗೆ ಇನ್ನು ಬೇರೆ ರುಚಿ ಬೇಕೆನಿಸಿದರೆ ಇದನ್ನು ನೀವು ಸೂಪ್ ಮತ್ತು ಸಾಸ್ ಗಳೊಂದಿಗೆ ಮಿಶ್ರಣ ಮಾಡಿ ಸೇವಿಸಬಹುದು.

ನಿಮಗೆ ಆಗುವ ಲಾಭ: ಒಂದು ಕೃಶವಾದ ಆರೋಗ್ಯಕರ ಸೊಂಟವನ್ನು ಪಡೆಯಲು
ನೀವು ಈಗ ಕ್ರ್ಯಾಶ್ ಡಯಟಿಂಗ್ ಆಹಾರ ಪದ್ಧತಿಯನ್ನು ಮರೆತು ಬಿಡಿ. ನೀವು ಈಗ ನಿಮ್ಮ ಮುಂದಿನ ಆಹಾರವನ್ನು ಸೇವಿಸಿದ ನಂತರ ಒಂದು ಒಂದು ಕಪ್ ಹಸಿರು ಚಹಾಗೆ ಸ್ವಲ್ಪ ಕರಿ ಮೆಣಸಿನ ಪುಡಿಯನ್ನು ಸೇರಿಸಿ. ನಂತರ ಅದನ್ನು ಸೇವಿಸಿ. ಈ ಸಂಯೋಜನೆಯು ದೇಹದಲ್ಲಿ ಇಜಿಸಿಜಿ ಹೀರುವಿಕೆಯನ್ನು ಹೆಚ್ಚಿಸುತ್ತದೆ. ಹಸಿರು ಚಹಾ ಪ್ರಬಲವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ಕ್ಯಾಲೋರಿಗಳನ್ನು ಶೇಕಡ 130 ರಷ್ಟು ತ್ವರಿತವಾಗಿ ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ ಹಸಿರು ಚಹಾದಲ್ಲಿರುವ ಸಂಯುಕ್ತಗಳು ಹಾರ್ಮೋನ್ ಗಳ ಮೇಲೆ ಪರಿಣಾಮವನ್ನು ಬೀರುತ್ತವೆ. ಮತ್ತು ಹಸಿವು ಮತ್ತು ಉಬ್ಬುವಿಕೆಯನ್ನು ನಿಯಮಿತವಾಗಿ ನಿಯಂತ್ರಿಸುತ್ತವೆ.
ಇದನ್ನು ಸರಿಯಾಗಿ ಮಾಡಿ:ಒಂದು ಅಧ್ಯಯನವು ಅರ್ಧ ಟೀ ಚಮಚದಷ್ಟು ಕರಿ ಮೆಣಸು , ಹಸಿರು ಚಹಾದಲ್ಲಿರುವ ಅನುಕೂಲಕರ ಸಂಯುಕ್ತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸುಲಭವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸುತ್ತದೆ.



Click it and Unblock the Notifications











