ಕ್ಯಾನ್ಸರ್ ಮಹಾಮಾರಿಯನ್ನು ದೂರವಿಡುವ ಮಸಾಲೆಗಳು

By ಲೇಖಕ

ಪ್ರತಿ ಯುದ್ಧವೂ ಹಿಂಸೆಯಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ ಮತ್ತು ಎಲ್ಲಾ ಹೋರಾಟಗಳು ರಕ್ತಪಾತದಲ್ಲಿ ಕೊನೆಗೊಳ್ಳುವುದಿಲ್ಲ.

ಕ್ಯಾನ್ಸರ್ ನಂತಹ ಅಚಲ ರೋಗದ ವಿರೋಧಕ್ಕೆ ನಿಂತಾಗ ನಮ್ಮ ಜೀವನ ಶೈಲಿ,ಸಾಮಾನ್ಯ ಅರೋಗ್ಯ ಪರಿಶೀಲನೆ,ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವನ್ನು ಹೊಂದಿದ ಆಹಾರಗಳು, ದಿನನಿತ್ಯದ ಆಹಾರ ಪದ್ಧತಿ ಇವುಗಳ ಮೇಲೆ ಗಮನವಿರಬೇಕಾದುದರ ಅಗತ್ಯ ಹೆಚ್ಚಿದೆ.

ನಟಿ ಲೀಸಾ ರೇ ಗೆ ಅಪರೂಪದ ಮಲ್ಟಿಪಲ್ ಮೆಲೋಮ ಕ್ಯಾನ್ಸರ್ ಆದಾಗ ಆಕೆ ಹೇಳಿದ ಒಂದೇ ಮಾತು 'ನಾನು ಕ್ಯಾನ್ಸರ್ ಅನ್ನು ಸೋಲಿಸುತ್ತೇನೆ' ಎಂಬುದು.ಅವರಲ್ಲಿದ್ದ ಆ ಧೈರ್ಯ ಆಕೆಯ ರೋಗವನ್ನು ಅರ್ಧದಷ್ಟು ಕಡಿಮೆ ಮಾಡಿತು ಎನ್ನಬಹುದು.ನಾವು ಬಳಸುವ ಆಹಾರದಲ್ಲಿ ಕ್ಯಾನ್ಸರ್ ಅನ್ನು ಗುಣಪಡಿಸಲು ಅಥವಾ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡಲು ಬೇಕಾಗುವ ಗುಣಗಳನ್ನು ಹೊಂದಿದ ಮಸಾಲೆ ಪದಾರ್ಥಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ನಮ್ಮ ಅಜ್ಜಿಯರು ಯಾವುದೇ ಸಮಯದಲ್ಲಿ ಬಿದ್ದು ಮೊಣಕಾಲು ಗಾಯ ಮಾಡಿಕೊಂಡು ಕುಂಟುತ್ತಾ ಅಳುತ್ತಾ ಹೋದಾಗ ಕೇಸರಿ ಮಿಶ್ರಿತ ಹಾಲನ್ನು ನೀಡಲು ಮರೆಯುತ್ತಿರಲಿಲ್ಲ.ಸಣ್ಣ ಪುಟ್ಟ ಗಾಯವಾದಾಗ ಅಥವಾ ಚರ್ಮದ ತುರಿಕೆಯಾದಾಗ ಅರಿಶಿನದ ಪೇಸ್ಟ್ ಮಾಡಿ ಹಚ್ಚುತ್ತಿದ್ದರು.ಅರಿಶಿನ,ಕೇಸರಿ ಮುಂತಾದ ಮಸಾಲೆ ಪದಾರ್ಥಗಳು ಔಷಧೀಯ ಗುಣಗಳನ್ನು ಹೊಂದಿದ್ದು ದೇಹಕ್ಕೆ ಆಕ್ರಮಿಸುವ ಬ್ಯಾಕ್ಟೀರಿಯ,ವೈರಸ್,ಜೀವಾಣು ಇವುಗಳ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿವೆ. ಜೊತೆಗೆ ದೇಹವನ್ನು ಹೆಚ್ಚು ಬಲಯುತವಾಗಿ ಮಾಡುತ್ತದೆ.

ಕ್ಯಾನ್ಸರ್ ಈಗ ಗುಣಪಡಿಸಲಾಗದ ಕಾಯಿಲೆ ಅಲ್ಲ.ಆದರೆ ರೋಗಗಳು ನಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳುವ ಅಗತ್ಯವಿದೆ.ಪ್ರತಿನಿತ್ಯ ಆರೋಗ್ಯಯುತ ಆಹಾರವನ್ನು ತೆಗೆದುಕೊಳ್ಳುವುದು ರೂಡಿಸಿಕೊಂಡರೆ ಕಾಯಿಲೆಗಳಿಂದ ದೂರ ಇರಬಹುದು.ಭಾರತೀಯರು ಅಡುಗೆಗಳಿಗೆ ಬಳಸುವ ಮಸಾಲೆ ಪದಾರ್ಥಗಳಲ್ಲಿ ಸಾಕಷ್ಟು ಆರೋಗ್ಯಯುತ ಅಂಶವಿದೆ ಎನ್ನಲಾಗುತ್ತದೆ.ದಿನನಿತ್ಯದ ಅಡುಗೆಗಳಲ್ಲಿ ಇವುಗಳನ್ನು ಬಳಸುವುದರ ಮೂಲಕ ಕ್ಯಾನ್ಸರ್ ಕಣಗಳು ಹತ್ತಿರ ಸುಳಿಯದಂತೆ ಕಾಪಾಡಬಹುದು.

ಆ ಸಂಬಾರ ಪದಾರ್ಥಗಳ ಮಾಹಿತಿ ಇಲ್ಲಿದೆ.

ಅರಿಶಿಣ

ಅರಿಶಿಣ

ಕ್ಯಾನ್ಸರ್ ರೋಗದ ಜೊತೆ ಹೋರಾಡುವ ವಿಷಯದಲ್ಲಿ ಅರಿಶಿಣವನ್ನು ಮಸಾಲೆಯ ರಾಜ ಎಂದೇ ಹೇಳಬಹುದು,ಜೊತೆಗೆ ಇದು ಆಹಾರ ಪದಾರ್ಥಗಳಿಗೆ ಒಳ್ಳೆಯ ಬಣ್ಣವನ್ನು ಕೂಡ ನೀಡುತ್ತದೆ.ಅರಿಶಿಣದಲ್ಲಿ ಪಾಲಿಫೀನಾಲ್ ಕರ್ಕ್ಯಮಿನ್ ಪ್ರಬಲವಾಗಿ ಇದೆ,ಇದು ಅನೇಕ ರೋಗಗಳಾದ

ಮೆಲನೋಮ, ಸ್ತನ ಕ್ಯಾನ್ಸರ್, ಮೆದುಳಿನ ಟ್ಯೂಮರ್, ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಮತ್ತು ಲ್ಯುಕೆಮಿಯಾ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ.ಈ ಅರಿಶಿನದಲ್ಲಿರುವ ಅಪೋಪ್ ಟಾಸಿಸ್ (ಜೀವಕೋಶಗಳನ್ನು ಕೊಳ್ಳುವ ಗುಣ) ಇತರ ಜೀವ ಕೋಶಗಳ ಬೆಳವಣಿಗೆಗೆ ಯಾವುದೇ ರೀತಿಯ ಅಡ್ಡಿ ತರದೆ ಕ್ಯಾನ್ಸರ್ ಕಣಗಳನ್ನು ಕೊಲ್ಲುತ್ತದೆ.ರೇಡಿಯೋಥೆರಪಿ ಅಥವಾ ಕಿಮೋಥೆರಪಿ ಮಾಡಿದಾಗ ಕ್ಯಾನ್ಸರ್ ಕಣಗಳ ಜೊತೆಗೆ ಇತರ ಜೀವಕೋಶಗಳ ಮೇಲು ಇದರ ಪರಿಣಾಮ ಆಗುವುದರಿಂದ ಅಡ್ಡ ಪರಿಣಾಮ ಉಂಟಾಗುತ್ತದೆ.

ಸೋಂಪು

ಸೋಂಪು

ಉತ್ಕರ್ಷಣ ನಿರೋಧಕ ಮತ್ತು ಫಿಟೋ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಫೆನೆಲ್ (ಸೋಂಪು)ನಲ್ಲಿ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ.ಸೊಂಪುನಲ್ಲಿರುವ ಪ್ರಮುಖ ಘಟಕಗಳು ಕ್ಯಾನ್ಸರ್ ಕಣಗಳ ಆಕ್ರಮಣಕಾರಿ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ.ಕ್ಯಾನ್ಸರ್ ಜೀವಕೋಶ ದ್ವಿಗುಣಗೊಳ್ಳುವುದನ್ನು ಇದು ತಡೆಯುತ್ತದೆ.ಟೊಮೆಟೊ ಮತ್ತು ಸೋಂಪು ಸೂಪ್ ಜೊತೆಗೆ ಬೆಳ್ಳುಳ್ಳಿ ಅಥವಾ ತಾಜಾ ಸಲಾಡ್ ಜೊತೆಗೆ ಊಟದ ಮೊದಲು ತಿಂದರೆ ಆರೋಗ್ಯಕ್ಕೆ ಉತ್ತಮ.ಚೀಸ್ ಜೊತೆಗೆ ಫೆನ್ನೆಲ್ ಉಪಯೋಗಿಸಿದರೆ ಅರೋಗ್ಯಯುತವಾಗಿರಬಹುದು.

ಕೇಸರಿ

ಕೇಸರಿ

ಕೇಸರಿಯಲ್ಲಿರುವ 'ಕ್ರೋಸಿಟಿನ್' ಎಂದು ಕರೆಯಲ್ಪಡುವ ನೈಸರ್ಗಿಕ ಕ್ಯಾರೊಟಿನಾಯ್ಡ್ ಡೈಕಾರ್ಬಾಕ್ಸಿಲಿಕ್ ಆಸಿಡ್ ಕ್ಯಾನ್ಸರ್ ನ ಪ್ರಾಥಮಿಕ ಹಂತದಲ್ಲಿ ಹೋರಾಡುವ ಗುಣ ಹೊಂದಿದೆ.ಇದು ರೋಗದ ಪ್ರಗತಿಯನ್ನು ತಡೆಯುವುದು ಮಾತ್ರವಲ್ಲ ಗಡ್ಡೆಯ ಗಾತ್ರವನ್ನು ಕಡಿಮೆ ಮಾಡುತ್ತದೆ.ಕೇಸರಿ ಬಳಸುವುದರಿಂದ ಅರ್ಧ ಕ್ಯಾನ್ಸರ್ ಗೆ ಸಂಪೂರ್ಣ ವಿರಾಮ ನೀಡಬಹುದು.ಕೇಸರಿ ಅತಿ ದುಬಾರಿಯಾಗಿದ್ದು ಅರ್ಧ ಕಿಲೋಗೆ 250000 ಹೂವಿನ ದಳಗಳು ದೊರೆಯುವುದರಿಂದ ದುಬಾರಿಯಾದರೂ ಇದರ ಉಪಯೋಗ ಅಧಿಕವಿರುವುದರಿಂದ ಇದನ್ನು ಬಳಸುವುದು ಸೂಕ್ತ.ಈ ಕೇಸರಿ ಎಳೆಗಳನ್ನು ವಿವಿಧ ರೀತಿಯಲ್ಲಿ ಉಪಯೋಗಿಸಬಹುದು.

ಜೀರಿಗೆ

ಜೀರಿಗೆ

ಜೀರಿಗೆ ಜೀರ್ಣ ಕ್ರಿಯೆಯನ್ನು ಉತ್ತಮವಾಗಿಸುತ್ತದೆ.ಆದ್ದರಿಂದ ಊಟವಾದ ನಂತರ ಜೀರಿಗೆ ತಿನ್ನಲು ಬಯಸುತ್ತೇವೆ.ಇದರ ಆರೋಗ್ಯದ ಅನುಕೂಲಗಳು ಸಾಕಷ್ಟಿವೆ.ಜೀರಿಗೆಯಲ್ಲಿ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ Thymoquinone ಎಂಬ ಅಂಶವಿದೆ.ಆದ್ದರಿಂದ ಸ್ನಾಕ್ ಗಳನ್ನು ಮಾಡುವಾಗ ಬೇರಬೇರೆ ಎಣ್ಣೆಗಳನ್ನು ಬಳಸುವ ಬದಲು ಜೀರಿಗೆಯನ್ನು ಒಗ್ಗರಣೆಗೆ ಬಳಸಿ ಸಾಸ್,ಬೀನ್ಸ್ ಮತ್ತು ಬ್ರೆಡ್ ಗಳಲ್ಲಿ ಬಳಸಿ ಆಹಾರವನ್ನು ಶ್ರೀಮಂತಗೊಳಿಸುವುದರ ಜೊತೆಗೆ ಆರೋಗ್ಯಕರವಾಗಿಸಿ.ಅನ್ನ ಮತ್ತು ದಾಲ್ ಗೂ ಕೂಡ ಜೀರಿಗೆ ಬಳಸಬಹುದು.

ದಾಲ್ಚಿನ್ನಿ ಚಕ್ಕೆ

ದಾಲ್ಚಿನ್ನಿ ಚಕ್ಕೆ

ಅರ್ಧ ಚಮಚದಷ್ಟು ದಾಲ್ಚಿನ್ನಿ ಪ್ರತಿದಿನ ಉಪಯೋಗಿಸುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು.ನೈಸರ್ಗಿಕ ಆಹಾರ ಸಂರಕ್ಷಣೆಯಾದ ದಾಲ್ಚಿನ್ನಿಯಲ್ಲಿ ಕಬ್ಬಿಣದ ಅಂಶ ಮತ್ತು ಕ್ಯಾಲ್ಸಿಯಂ ಅಂಶ ಇದೆ.ಇದು ಮಾನವನ ದೇಹದಲ್ಲಿ ಗಡ್ಡೆ ಬೆಳೆಯುವುದನ್ನು ತಪ್ಪಿಸುತ್ತದೆ . ದಿನನಿತ್ಯ ಪರಿಣಾಮಕಾರಿಯಾಗಿ ದಾಲ್ಚಿನ್ನಿ ಬಳಸುವ ವಿಧಾನಗಳೆಂದರೆ :

- ದಿನವನ್ನು ದಾಲ್ಚಿನ್ನಿ (ಎಲೆ ಅಥವಾ ಚಕ್ಕೆ ) ಟೀಯೊಂದಿಗೆ ಪ್ರಾರಂಭಿಸಿ.

-ನಿಮ್ಮ ಬೆಳಗಿನ ತಿಂಡಿ ಆರೋಗ್ಯಯುತವಾಗಿರಲು ನೀವು ತಿನ್ನುವ ಆಹಾರಕ್ಕೆ ಒಂದು ಚಮಚ ಚಕ್ಕೆ ಪುಡಿಯನ್ನು ಸೇರಿಸಿ.

-ಕತ್ತರಿಸಿದ ಸೇಬು ಮತ್ತು ವಾಲ್ ನಟ್ ಜೊತೆಗೆ ದಾಲ್ಚಿನ್ನಿ ಪುಡಿಯನ್ನು ಬಳಸಿ.

-ಮಲಗಲು ಹೋಗುವ ಮೊದಲು ಜೇನುತುಪ್ಪ ಮತ್ತು ದಾಲ್ಚಿನ್ನಿ ಯನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ ಆರೋಗ್ಯಯುತವಾಗಿ ಇರಬಹುದು.

Oregano

Oregano

ಪಿಜ್ಜಾ ಮತ್ತು ಪಾಸ್ತಗಳನ್ನು ಅಲಂಕರಿಸಲು ಬಳಸುವ oregano ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಇದರಲ್ಲಿರುವ anti-microbial ಸಂಯುಕ್ತದಿಂದಾಗಿ ಒಂದು ಟೀ ಚಮಚ ಅಜವಾನವನ್ನು ಬಳಸಿದರೆ ಎರಡು ಲೋಟ ಕೆಂಪು ದ್ರಾಕ್ಷಿಗೆ ಸಮಾನವಾಗಿದೆ.ಇದರಲ್ಲಿರುವ 'Quercetin'ಅಂಶವು ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ತಡೆಯುತ್ತದೆ.

ಕಾಳುಮೆಣಸಿನ ಪುಡಿ

ಕಾಳುಮೆಣಸಿನ ಪುಡಿ

ಕಾಳುಮೆಣಸಿನ ಪುಡಿಯಲ್ಲಿ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಗುಣವಿದೆ ಆದರೂ ಅತಿಯಾಗಿ ಇದನ್ನು ಸೇವಿಸಬಾರದು.ಕ್ಯಾಪ್ಸೈಸಿನ್ ಕ್ಯಾನ್ಸರ್ ಜೀವಕೋಶಗಳನ್ನು ನಾಶಪಡಿಸುತ್ತದೆ ಮತ್ತು ಗಣನೀಯವಾಗಿ ರಕ್ತ ಕ್ಯಾನ್ಸರ್ ನ ಜೀವಕೋಶಗಳ ಗಡ್ಡೆಯನ್ನು ಕರಗಿಸುವ ಗುಣ ಹೊಂದಿದೆ.ನಮ್ಮ ನಾಲಿಗೆಗೆ ಖಾರವನ್ನು ನೀಡುವ ಈ ಮೆಣಸಿನ ಪುಡಿ ಕ್ಯಾನ್ಸರ್ ರೋಗವನ್ನು ಕೂಡ ಹೆದರಿಸುತ್ತದೆ ಎನ್ನಬಹುದು.

ಶುಂಠಿ

ಶುಂಠಿ

ಈ ಮಸಾಲೆ ಪದ್ದರ್ಥದಲ್ಲಿ ಇರುವ ಔಷಧೀಯ ಗುಣಗಳು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಮತ್ತು ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ,ಜೊತೆಗೆ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ.ತರಕಾರಿಗಳು,ಮೀನು,ಸಲಾಡ್ ಇವುಗಳೊಂದಿಗೆ ಬಳಸಬಹುದಾದ ಶುಂಠಿ ಆಹಾರ ಪದಾರ್ಥಕ್ಕೆ ಪರಿಮಳವನ್ನು ನೀಡುವುದರ ಜೊತೆಗೆ ಅರೋಗ್ಯ ಕಾಪಾಡುತ್ತದೆ.

ಇತರ ಮಸಾಲೆ ಪದಾರ್ಥಗಳು

ಇತರ ಮಸಾಲೆ ಪದಾರ್ಥಗಳು

ಲವಂಗ, ಸೋಂಪು ಬೀಜ, ತುಳಸಿ, ಬೆಳ್ಳುಳ್ಳಿ, ಸೀಮೆ ಸೋಂಪು, ಮೆಂತ್ಯ, ಸಾಸಿವೆ, ಪುದೀನ ಸೊಪ್ಪು, ರೋಸ್ಮರಿ, ನಿಂಬೆಹಣ್ಣು (ತಾಜಾ ನಿಂಬೆ), ವರ್ಜಿನ್ ಆಲಿವ್, ವಿನೆಗರ್ ಮತ್ತು ಆವಕಾಡೊ ಇವುಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಇತರ ಆಹಾರ ಅಂಶಗಳು.

ಇತರ ಸಲಹೆಗಳು

ಇತರ ಸಲಹೆಗಳು

1.ಸಸ್ಯ ಮೂಲವನ್ನು ಹೊಂದಿರುವ ಹಣ್ಣು, ತರಕಾರಿ, ಕಾಯಿ, ಧಾನ್ಯ ಮತ್ತು ಬೀಜಗಳು ಕ್ಯಾನ್ಸರ್ ಕಣವನ್ನು ತಡೆಯುವ ಸಾವಯುವ ಆಹಾರಗಳು.

2.ನಾರಿನಂಶ ಸೇರಿಸಿ : ಬಿಳಿ ಅಕ್ಕಿಯೊಂದಿಗೆ ಕೆಂಪು ಅಕ್ಕಿಯನ್ನು ಬೆರೆಸಿ ಉಪಯೋಗಿಸಿ.

3.ವೈಟ್ ಬ್ರೆಡ್ ಜೊತೆಗೆ ವ್ಹೋಲ್ ಗ್ರೇನ್ ಬ್ರೆಡ್ ಉಪಯೋಗಿಸಿ.ಪೇಸ್ಟ್ರಿ ಜೊತೆಗೆ ಮಫಿನ್ ಬಳಸಿ.

4.ಸ್ನಾಕ್ ಸಮಯದಲ್ಲಿ ಅಲೂ ಚಿಪ್ಸ್ ನ ಬದಲು ಪಾಪ್ಕಾರ್ನ್ ತಿನ್ನುವುದು ರೂಡಿಸಿಕೊಳ್ಳಿ.

5.ತಾಜಾ ಹಣ್ಣುಗಳನ್ನು ಸಿಪ್ಪೆಯೊಂದಿಗೆ ತಿನ್ನಿ.

ಇತರ ಸಲಹೆಗಳು

ಇತರ ಸಲಹೆಗಳು

6.ಒಮೆಗಾ - 3 ಕೊಬ್ಬಿನಂಶಗಳು ಉರಿಯೂತ ತಡೆಯುತ್ತವೆ.

7.ಸಾಮಾನ್ಯ ಎಣ್ಣೆಯ ಬದಲು ಆಲಿವ್ ಎಣ್ಣೆಯನ್ನು ಬಳಸಿ.

8.ಕೊಬ್ಬಿನಂಶ ಹೆಚ್ಚಿರುವ ಪ್ಯಾಕ್ ಮಾಡಿದ ಅಥವಾ ಕರಿದ ಆಹಾರಗಳನ್ನು ತಿನ್ನುವುದು ಕಡಿಮೆ ಮಾಡಿ.

9.ಸಂಸ್ಕರಿಸಿದ ಉಪ್ಪಿನ ಬದಲು ಸಮುದ್ರ ಉಪ್ಪು ಅಥವಾ ಹಿಮಾಲಯನ್ ಉಪ್ಪನ್ನು ಬಳಸುವುದು ರೂಡಿಸಿಕೊಳ್ಳಿ.

10.ಕ್ಯಾನ್ಸರ್ ರೋಗಿಗಳು - ವೈದ್ಯರ ಸಲಹೆ ಪಡೆಯದೇ ಹೆಚ್ಚು ಅರಿಶಿಣ ಅಥವಾ ಇತರ ಮಸಾಲೆ ಪದಾರ್ಥಗಳನ್ನು ಆಹಾರಕ್ಕೆ ಬೆರೆಸಬೇಡಿ.

X
Desktop Bottom Promotion