Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಆರೋಗ್ಯ ವರ್ಧಿಸಲು ಏಳು ಅಗ್ಗದ ಉಪಾಯಗಳು
ಆರೋಗ್ಯವೇ ಭಾಗ್ಯ ಎಂಬ ಸತ್ಯ ನಮ್ಮೆಲ್ಲರಿಗೂ ತಿಳಿದೇ ಇದೆ. ನಮ್ಮ ಹತ್ತಿರ ಏನೇ ಇರಲಿ ಆರೋಗ್ಯವಿಲ್ಲವೆಂದರೆ ಜೀವನಪರ್ಯಾಂತ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಕೆಲವರ ಅಭಿಪ್ರಾಯ ಒಳ್ಳೆಯ ಆಹಾರವೇ ಆರೋಗ್ಯ ಎಂದು. ಆಹಾರವು ಮುಖ್ಯ ಆದರೆ ಆಹಾರ ಮಾತ್ರವಲ್ಲದೆ ನಾನಾ ವಿಷಯಗಳು ಆರೋಗ್ಯವನ್ನು ನೀಡುತ್ತದೆ. ಜನರು ಆರೋಗ್ಯದ ಮೇಲೆ ಕಾಳಜಿ ಇಟ್ಟರೂ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಆರೋಗ್ಯವನ್ನು ಮರೆತು ಐಶ್ವರ್ಯವೇ ಅನಾರೋಗ್ಯಕ್ಕೆ ಕಾರಣ ಎಂದು ದೂರಿಡುತ್ತಾರೆ.
ನಿಮ್ಮ ಆರೋಗ್ಯ ಮತ್ತು ಹಣದ ಬಗ್ಗೆ ಚಿಂತೆ ಬೇಡ. ಇಲ್ಲಿದೆ ನಿಮ್ಮ ಆರೋಗ್ಯ ವರ್ಧಿಸಲು ಏಳು ಉಪಾಯಗಳು. ಇವು 10 ರೂಪಾಯಿಗಳಷ್ಟು ಸಹ ಖರ್ಚಾಗದ ಉಪಾಯಗಳು. ಆರೋಗ್ಯ ಮತ್ತು ಹಣ ಕಾಪಾಡಲು ಉತ್ತಮ ಉಪಾಯ.

1. ಅಡುಗೆಮನೆ ದಾರದ ಉಂಡೆ
ದೇಹಸ್ಥಿತಿ ಸುಧಾರಿಸುವ ಹಾಗು ಬೆನ್ನು ನೋವಿಗೆ ಪರಿಹಾರಕ್ಕಾಗಿ ಪ್ರತಿ ಮುಂಜಾನೆ ನೇರವಾಗಿ ನಿಂತು ಹೊಟ್ಟೆಯನ್ನು ಆದಷ್ಟು ಒಳಗೆ ಎಳೆದುಕೊಳ್ಳಿ. ಈಗ ಅರ್ಧದಷ್ಟು ಮಾತ್ರ ಹೊಟ್ಟೆಯನ್ನು ಹೊರಗೆಬಿಡಿ. ದಾರವನ್ನು ಹೊಟ್ಟೆಯ ಸುತ್ತಲು ಬಟ್ಟೆಗಳ ಒಳಗೆ ಕಟ್ಟಿ ದಿನವಿಡೀ ಇಡಿ. ಇದು ದಿನವಿಡೀ ನಿರಂತರವಾಗಿ ನಿಮಗೆ ಉದರದ ಸ್ನಾಯುಗಳ ವ್ಯಾಯಾಮ ಮಾಡಲು ಜ್ಞಾಪಿಸುವುದು. ಇದರಿಂದ ನಿಮ್ಮ ಸ್ನಾಯುಗಳು ದೃಢವಾಗಿ ಬೆನ್ನು ನೋವಿಗೆ ಪರಿಹಾರ ನೀಡುವುದು ಹಾಗು ದೇಹಸ್ಥಿತಿಯನ್ನೂ ಸಹ ಸುಧಾರಿಸುವುದು.

2. ಎರಡು ಮೊಟ್ಟೆಗಳು : ಮಧ್ಯಾಹ್ನಊಟದವರಗೆ ತೃಪ್ತಿಯಿಂದಿರಲು
ಮುಂಜಾನೆಯ ಆಹಾರದಲ್ಲಿ ಮೊಟ್ಟೆಗಳನ್ನು ಸೇವಿಸಿದರೆ ಕ್ಯಾಲೋರಿ ಸೇವನೆ ಶೇಕಡ 18 % ರಷ್ಟು ಕಡಿಮೆಯಾಗುವುದು ಎಂದು ಅಧ್ಯಯನಗಳು ತಿಳಿಸಿವೆ. ಏಕೆಂದರೆ ಮೊಟ್ಟೆಗಳು ನಿಮನ್ನು ದೀರ್ಘ ಕಾಲ ಹೊಟ್ಟೆ ಹಸಿವನ್ನು ನಿಯಂತ್ರಿಸುತ್ತದೆ. ಇದರಿಂದ ಹೆಚ್ಚು ತಿನ್ನುವುದು ತಪ್ಪುತ್ತದೆ.

3. ಪುದೀನಾ ಎಲೆಗಳು : ವಾಯು ತಡೆಗಟ್ಟಲು
ಪುದೀನಾ ಸೇವನೆಯಿಂದ ಹೊಟ್ಟೆಯ ಉರಿ ಶಮನವಾಗಿ ಜೀರ್ಣ ಶಕ್ತಿ ಹೆಚ್ಚಿಸುತ್ತದೆ ಎನ್ನುವುದು ತಜ್ಞರು ಅಭಿಪ್ರಾಯ. ಇದಲ್ಲದೆ ಪುದೀನಾ ಬಾಯಿಯನ್ನು ಸ್ವಚ್ಛಪಡಿಸುತ್ತದೆ ಹಾಗೂ ಕೆಟ್ಟ ರುಚಿಯನ್ನು ಹೋಗಲಾಡಿಸುತ್ತದೆ. ಕೆಲವು ಪುದೀನಾ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿಯುವುದು ಒಳ್ಳೆಯದು.

4. ಸಕ್ಕರೆ ರಹಿತ ಚೂಯಿಂಗ್ ಗಮ್
ಸಕ್ಕರೆ ರಹಿತ ಚೂಯಿಂಗ್ ಗಮ್ : ಎದೆಉರಿ ಕಡಿಮೆ ಮಾಡಲು ಹಾಗು ಏಕಾಗ್ರತೆ ಹೆಚ್ಚಿಸಲು
ವಿಜ್ಞಾನಿಗಳ ಪ್ರಕಾರ ಚೂಯಿಂಗ್ ಗಮ್ ನಿಂದ ಎಂಜಲು ಹೆಚ್ಚಾಗಿ ಜೀರ್ಣಕ್ಕಾಗಿ ಸಹಾಯ ಮಾಡುವ ಆಮ್ಲವನ್ನು ಕಡಿಮೆ ಮಾಡಿ ದ್ರವಗಳನ್ನು ಹೊಟ್ಟೆಯ ಒಳಗೆ ಮತ್ತೆ ಬರುವಂತೆ ಮಾದುತ್ತದೆ. 'ಜರ್ನಲ್ ಆಫ್ ಡೆಂಟಲ್ ರಿಸರ್ಚ್' ನ ಅಧ್ಯಯನ ಜನರಿಗೆ ಎದೆ ಉರಿ ಬರುವಂತಹ ಆಹಾರ ಸೀವಿಸಿದನಂತರ ಚೂಯಿಂಗ್ ಗಮ್ ಅರ್ಧ ಘಂಟೆ ಅಗಿಯಲು ಹೇಳಿದರು. ಗಮ್ ನಿಂದ ಏಕಾಗ್ರತೆಯಿಂದ ದೀರ್ಘಕಾಲ ಕಾರ್ಯವಹಿಸಲು ಸಹಾಯವಾಯಿತು ಎಂದು ಕಾರ್ಡಿಫ್ಫ್ ವಿಶ್ವವಿದ್ಯಾಯಲದ ಸಂಶೋಧಕರು 'ಬ್ರಿಟಿಷ್ ಜರ್ನಲ್ ಆಫ್ ಸೈಕಾಲಜಿ'ದಲ್ಲಿ ಪ್ರಕಟಿಸಿದ್ದಾರೆ.

5. ಟೆನ್ನಿಸ್ ಚೆಂಡು : ಸ್ನಾಯು ಸೆಳೆತ ತಡೆಯಲು
ಟೆನ್ನಿಸ್ ಚೆಂಡುಗಳು ಅಥವಾ ಆಲೂಗಡ್ಡೆ ಸಹ ಗಟ್ಟಿ ಅಂಡುಗಳಿಗೆ ಒತ್ತಡ ಕೊಡಲು ಉಪಯೋಗಿಸಬಹುದು. ಇದರಿಂದ ಸ್ನಾಯು ಸೆಳೆತದಿಂದ ಉಂಟಾದ ನೋವು ನಿವಾರಣೆಯಾಗುವುದು.ಗೋಡೆಯ ಬದಿಯಲ್ಲಿ ನಿಂತುಕೊಂಡು ಅಥವಾ ಅದರ ಮೇಲೆ ಕುಳಿತು ತೊಂದರೆ ಉಂಟಾಗಿರುವ ಜಾಗದ ಮೇಲೆ ಒತ್ತಡ ಕೊಡಬಹುದು. ಸ್ನಾಯು ಮೇಲೆ ಅದುಮಿದಾಗ, ಚೆಂಡಿನ ಸಹಯಾದಿಂದ ನಿಮ್ಮ ಸ್ನಾಯುಗಳ ಎಳೆತವಾಗುತ್ತದೆ. ಇದರಿಂದ ಸ್ನಾಯುವಿನ ಸೆಳೆತ ನಿವಾರಣೆಯಾಗುತ್ತದೆ.

6. ಎಪ್ಸೊಂ ಉಪ್ಪು : ಹೊಟ್ಟೆ ಕರಗಿಸುವುದಕ್ಕಾಗಿ
ಎಪ್ಸೊಂ ಲವಣದಲ್ಲಿ ಹೆಚ್ಚು ಮೆಗ್ನೀಷಿಯಂ ಇರುವುದರಿಂದ ನೊಂದಿರುವ, ಆಯಾಸವಾದ ಸ್ನಾಯುಗಳಿಗೆ ಉತ್ತಮ. ಅಲ್ಲದೆ ಹೊಟ್ಟೆಯೂ ಕರಗುವುದು.

7. ಅಂಗೈಯಷ್ಟು ಬಾದಾಮಿಗಳು : ಕೊಲೆಸ್ಟ್ರಾಲ್ ಕಡಿಮೆ ಮಾಡಲು
ಬಾದಾಮಿಗಳಲ್ಲಿ ಪ್ರೊಟೀನ್ ಅಂಶ ಹಾಗೂ ಮೊನೊ ಸ್ಯಾಚುರೇಟ್ಡ್ ಕೊಬ್ಬಿನಾಂಶ ಹೆಚ್ಚಿರುತ್ತದೆ. ಇತರ ಕಾಯಿಗಳಿಗಿಂತ ಬಾದಾಮಿಯಲ್ಲಿ ಏಳು ಮುಖ್ಯವಾದ ಪೌಷ್ಟಿಕ ಅಂಶಗಳು ಇರುತ್ತದೆ. ಅವು ನಾರಿನಂಶ, ಮೆಗ್ನೀಷಿಯಂ, ಪ್ರೊಟೀನ್, ಪೊಟ್ಯಾಷಿಯಂ, ತಾಮ್ರ ಹಾಗು ವಿಟಮಿನ್ ಇ.



Click it and Unblock the Notifications