Latest Updates
-
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ -
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ!
ಅಬ್ಬಾ! ಗೋಧಿ ಹುಲ್ಲು ಇಷ್ಟೊಂದು ಪ್ರಯೋಜನಕಾರಿಯೇ?
ವ್ಹೀಟ್ ಗ್ರಾಸ್ ಆರೋಗ್ಯಕರವಾದ ಮತ್ತು ಚಿಕಿತ್ಸಕ ಗುಣಗಳನ್ನು ಹೊಂದಿದ ಗೋಧಿ ಸಸ್ಯವಾಗಿದೆ.ಇದು 19 ಅಮೈನೋ ಆಮ್ಲ ಮತ್ತು 92 ಖನಿಜಾಂಶಗಳನ್ನು ಹೊಂದಿದ್ದು,ದೇಹಕ್ಕೆ ತನ್ನ ಕೆಲಸವನ್ನು ಉನ್ನತ ಮಟ್ಟದಲ್ಲಿ ನಿರ್ವಹಿಸಲು ಸಹಕರಿಸುತ್ತದೆ.ಇದನ್ನು ಸಾಮಾನ್ಯವಾಗಿ ಬ್ರೆಡ್ ವ್ಹೀಟ್ ಎಂದು ಕರೆಯುತ್ತಾರೆ ಮತ್ತು ಒಂದು ಹಸಿರುಮನೆ ಅಥವಾ ಕೃತಕ ಬೆಳಕಿನ ಮನೆ ಅಡಿಯಲ್ಲಿ ಇದನ್ನು ಬೆಳೆಯಬಹುದು.
ಗೋಧಿ ಹುಲ್ಲಿನ ಪುಡಿಯನ್ನು ಗೋಧಿ ಸಸ್ಯದ ರಸವನ್ನು ತೆಗೆದು ಪಡೆಯುವ ಆರೋಗ್ಯಯುತ ಆಹಾರ ಎನ್ನಬಹುದು.ಈ ಪುಡಿಯನ್ನು ನಿರ್ಜಲೀಕರಣಕ್ಕೆ ಮುನ್ನ ಮೂರು ಅಥವಾ ಹೆಚ್ಚು ತಿಂಗಳು ಮೈದಾನದಲ್ಲಿ ನೈಸರ್ಗಿಕವಾಗಿ ಬೆಳೆದ ಗೋಧಿ ಹುಲ್ಲಿನಿಂದ ತಯಾರಿಸಲಾಗುತ್ತದೆ.
ಈ ಪುಡಿಯ ಅನೇಕ ಆರೋಗ್ಯಕಾರಕ ಗುಣಗಳನ್ನು ಹೊಂದಿರುವುದರ ಹಿಂದಿರುವ ಪ್ರಾಥಮಿಕ ಕಾರಣವೆಂದರೆ ನಿರ್ಜಲೀಕರಣ ಉತ್ಪನ್ನದಲ್ಲಿ ಸಂರಕ್ಷಿಸಲ್ಪಟ್ಟ ಪೋಷಕಾಂಶಗಳ ಜೊತೆಗೆ ಅದರಲ್ಲಿರುವ ಕ್ಲೋರೋಫಿಲ್ ಅಂಶ.ಇದು ಗ್ಲೂಟನ್ ರಹಿತವಾಗಿರುವುದು ಇದರ ಅತ್ಯುತ್ತಮ ಗುಣ ಎನ್ನಬಹುದು.
ಈ ಗೋಧಿ ಹುಲ್ಲಿನ ಪುಡಿಯನ್ನು ಪೋಷಕಾಂಶಯುಕ್ತ ಪಾನೀಯವಾಗಿ ನೀರಿನೊಂದಿಗೆ ಮಿಶ್ರ ಮಾಡಿ ಬಳಸಬಹುದು ಅಥವಾ ಜ್ಯೂಸ್ ಮತ್ತು ಸ್ಮೂದಿ ಜೊತೆಗೆ ಕೂಡ ಬೆರೆಸಿ ಕುಡಿಯಬಹುದು.ಇದರಲ್ಲಿ ಪೌಷ್ಟಿಕಾಂಶಗಳು,ಜೀವಸತ್ವಗಳು,ಖನಿಜಾಂಶಗಳು ಎಲ್ಲವೂ ಹೇರಳವಾಗಿವೆ.
ವ್ಹೀಟ್ ಗ್ರಾಸ್ ಪೌಡರ್ ನಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು:

1.ಜೀರ್ಣ ಕ್ರಿಯೆಗೆ ಸಹಾಯಕ
ಗೋಧಿ ಹುಲ್ಲಿನ ಪುಡಿ ಜೀರ್ಣ ಕ್ರಿಯೆಯನ್ನು ಸರಾಗವಾಗಿ ಆಗುವಂತೆ ಮಾಡುತ್ತದೆ.ವ್ಹೀಟ್ ಗ್ರಾಸ್ ಪುಡಿ ಹುಣ್ಣುಗಳು, ಮಲಬದ್ಧತೆ ಮತ್ತು ಅತಿಸಾರ ಪರಿಹಾರ ಒದಗಿಸುವ ಕೆಲವು ಕ್ಷಾರೀಯ ಖನಿಜಗಳನ್ನು ಒಳಗೊಂಡಿದೆ. ಇದರಲ್ಲಿರುವ ಮ್ಯಾಗ್ನೀಶಿಯಂ ಮಲಬದ್ಧತೆಯನ್ನು ತಡೆಯುವ ಗುಣ ಹೊಂದಿದೆ.

2.ಕೆಂಪು ರಕ್ತ ಜೀವಕೋಶಗಳು ಮತ್ತು ಬಿಳಿ ರಕ್ತಕಣಗಳ ರಚನೆಗೆ ಸಹಾಯಕ
ಈ ಗೋಧಿ ಹುಲ್ಲಿನಲ್ಲಿ ಹೇರಳವಾಗಿರುವ ಕ್ಲೋರೋಫಿಲ್ ದೇಹದಲ್ಲಿ ಹಿಮೊಗ್ಲೋಬಿನ್ ಉತ್ಪತ್ತಿಯನ್ನು ಹೆಚ್ಚಿಸುತ್ತದೆ.ಇದರಿಂದ ರಕ್ತವು ಹೆಚ್ಚು ಆಮ್ಲಜನಕ ದೇಹಕ್ಕೆ ಸಾಗಿಸಲು ಸಹಾಯಕವಾಗುತ್ತದೆ.ಇದರಿಂದ ದೇಹದಲ್ಲಿ ಕೆಂಪು ರಕ್ತಕಣಗಳು ಮತ್ತು ಬಿಳಿ ರಕ್ತಕಣಗಳ ರಚನೆಯಾಗುತ್ತದೆ.

3.ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕ
ಈ ಗೋಧಿ ಹುಲ್ಲಿನ ಪುಡಿಯನ್ನು ಜ್ಯೂಸ್ ಅಥವಾ ಸ್ಮೂತೀಸ್ ಗೆ ಮಿಶ್ರ ಮಾಡಬಹುದಾದ್ದರಿಂದ ಆರೋಗ್ಯಕರವಾಗಿರಲು ಇದನ್ನು ಇತರ ಪದಾರ್ಥಗಳೊಂದಿಗೆ ಮಿಶ್ರ ಮಾಡಬಹುದು.ಇದು ದೇಹಕ್ಕೆ ಹೆಚ್ಚಿನ ಬಲ ನೀಡಿ ವ್ಯಾಯಾಮ ಮಾಡಲು ಹೆಚ್ಚಿನ ಶ್ರಮ ನೀಡುತ್ತದೆ.ಇದಲ್ಲದೆ ಈ ಗ್ರಂಥಿ ಥೈರಾಯಿಡ್ ಗ್ರಂಥಿಯನ್ನು ಉತ್ತೇಜಿಸುವ ಮೂಲಕ ತೂಕ ಕಡಿಮೆ ಮಾಡಿಕೊಳ್ಳಲು ಸಹಕರಿಸುತ್ತದೆ.ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ,ಬೊಜ್ಜು ಮತ್ತು ಅಜೀರ್ಣ ತಡೆಯುತ್ತದೆ.

4.PH ಸಮತೋಲನವನ್ನು ಕಾಪಾಡುತ್ತದೆ
ವ್ಹೀಟ್ ಗ್ರಾಸ್ ಆಹಾರ ಪುರಕವಾದ್ದರಿಂದ ಇದರ ಪುಡಿ ದೇಹದಲ್ಲಿ PH ಮಟ್ಟದ ಸಮತೋಲನ ಕಾಪಾಡಲು ಸಹಾಯಕ.ಆದ್ದರಿಂದ ಇದು ರಕ್ತದಲ್ಲಿ ಅಸಿಡಿಟಿ ಮಟ್ಟವನ್ನು ಕಡಿಮೆ ಮಾಡುತ್ತದೆ.

5.ಸ್ವಚ್ಚಮಾಡುವ ಮತ್ತು ನಿರ್ವಿಷಗೊಳಿಸುವ ಗುಣಲಕ್ಷಣವನ್ನು ಹೊಂದಿದೆ
ಗೋಧಿ ಹುಲ್ಲಿನ ಪುಡಿ ದೇಹವನ್ನು ವಿಷಮುಕ್ತವಾಗಿಸಲು ಸಹಕರಿಸುತ್ತದೆ.ಇದರಲ್ಲಿರುವ ಪೌಷ್ಟಿಕತೆಯು ತಾಜಾ ತರಕಾರಿಗೆ ಸಮಾನವಾಗಿದ್ದು ಇದರಲ್ಲಿ ಖನಿಜಾಂಶ,antioxidants,ಮತ್ತು ಉರಿಯೂತ ಕಡಿಮೆ ಮಾಡುವ ಕಿಣ್ವಗಳಿರುತ್ತವೆ.

6.ರಕ್ತಹೀನತೆ ತಡೆಯುವಲ್ಲಿ ಉಪಯುಕ್ತ
ಗೋಧಿ ಹುಲ್ಲಿನ ಪುಡಿಯಲ್ಲಿರುವ ಕ್ಲೋರೋಫಿಲ್ ಮಾನವ ದೇಹದ ಹಿಮೊಗ್ಲೋಬಿನ್ ಗೆ ಸರಿಸಮವಾಗಿರುತ್ತದೆ.ಇದರಲ್ಲಿರುವ ಅಧಿಕ ಮಟ್ಟದ ಕ್ಲೋರೋಫಿಲ್ ಸುಲಭವಾಗಿ ದೇಹಕ್ಕೆ ಸೇರಿ ರಕ್ತ ಉತ್ಪತ್ತಿಯನ್ನು ಹೆಚ್ಚಿಸುತ್ತದೆ ಮತ್ತು ಹಿಮೊಗ್ಲೋಬಿನ್ ಅನ್ನು ಅಗತ್ಯ ಮಟ್ಟಕ್ಕೆ ತರುವಲ್ಲಿ ಸಹಕರಿಸುತ್ತದೆ.ಆದ್ದರಿಂದ ವ್ಹೀಟ್ ಗ್ರಾಸ್ ಪೌಡರ್ ಉಪಯೋಗಿಸುವುದರಿಂದ ರಕ್ತಹೀನತೆ ತಡೆಯಬಹುದು ಎನ್ನಲಾಗಿದೆ.

7.ಕ್ಯಾನ್ಸರ್ ಗೆ ಮದ್ದು
ಗೋಧಿ ಹುಲ್ಲಿನಲ್ಲಿರುವ ಕ್ಲೋರೋಫಿಲ್ ರೇಡಿಯೇಶನ್ ನಿಂದ ದೇಹಕ್ಕೆ ಆಗುವ ಹಾನಿಯನ್ನು ತಡೆಯುವ ಗುಣವನ್ನು ಹೊಂದಿದೆ.ಆದ್ದರಿಂದ ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಅಥವಾ ರೇಡಿಯೋಥೆರಪಿ ಮಾಡಿದ ನಂತರ ಗೋಧಿ ಹುಲ್ಲನ್ನು ಹೆಚ್ಚು ಬಳಸಲು ಸಲಹೆ ನೀಡಲಾಗುತ್ತದೆ.

8.ಮಧುಮೇಹಕ್ಕೆ ನೈಸರ್ಗಿಕ ಮದ್ದು
ಗೋಧಿ ಹುಲ್ಲಿನ ಪುಡಿ ಕಾರ್ಬೋಹೈಡ್ರೇಟ್ ಅನ್ನು ನಿಧಾನವಾಗಿ ಹೀರುವುದರ ಮೂಲಕ ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.ಇದು ಮಧುಮೇಹಿಗಳ ಪ್ರಾಥಮಿಕ ಹಂತ ಅಥವಾ ಮುಂದುವರೆದ ಹಂತದಲ್ಲಿ ಮಧುಮೇಹ ಕಡಿಮೆ ಮಾಡಲು ಸಹಕರಿಸುತ್ತದೆ.

9.ಮೂಲವ್ಯಾಧಿಗೆ ಮದ್ದು
ಗೋಧಿ ಹುಲ್ಲಿನಲ್ಲಿರುವ ಪೌಷ್ಟಿಕಾಂಶದ ಕಾರಣದಿಂದ ಇದು ಪೈಲ್ಸ್ ಗೆ ಮದ್ದಾಗಿ ಕೆಲಸ ಮಾಡುತ್ತದೆ.ಇದರಲ್ಲಿರುವ ಕ್ಲೋರೋಫಿಲ್,ನಾರಿನಂಶ,ಜೀವಸತ್ವಗಳು,ಖನಿಜಾಂಶಗಳು ಮೂಲವ್ಯಾಧಿ ತಡೆಗಟ್ಟಲು ಪರಿಣಾಮಕಾರಿ ಔಷಧಿ ಎಂದು ಸಾಬೀತಾಗಿದೆ.ಮೂಲವ್ಯಾಧಿ ನಿವಾರಿಸಲು ಗೋಧಿ ಹುಲ್ಲಿನ ಪುಡಿಯನ್ನು ದಿನದಲ್ಲಿ 2 ಬಾರಿ 3 ತಿಂಗಳವರೆಗೆ ಸತತವಾಗಿ ತೆಗೆದುಕೊಳ್ಳಬೇಕು.

10.ದಂತ ಕ್ಷಯಕ್ಕೆ ಮದ್ದು
ದಂತ ಕ್ಷಯ ಮತ್ತು ಇತರ ಹಲ್ಲಿಗೆ ಸಂಬಂಧಿಸಿದ ರೋಗಗಳಿಗೆ ಈ ಗೋಧಿ ಹುಲ್ಲಿನ ಪುಡಿ ಮದ್ದಾಗಿ ಕೆಲಸ ಮಾಡುತ್ತದೆ.ಒಸಡುಗಳನ್ನು ಗೋಧಿ ಹುಲ್ಲಿನ ಪುಡಿಯಿಂದ ತಿಕ್ಕುವುದರಿಂದ ಒಸಡಿನ ಸಮಸ್ಯೆಯನ್ನು ನಿವಾರಿಸಬಹುದು.

11.ನೋವು ಮತ್ತು ಉರಿಯೂತಕ್ಕೆ ಪರಿಹಾರ
ಇದರಲ್ಲಿರುವ ಅಂಶವು ಉರಿಯೂತ ಕಡಿಮೆ ಮಾಡುವ ಗುಣವನ್ನು ಹೊಂದಿದೆ.ಆದ್ದರಿಂದ ಇದು ದೇಹದ ಸಾಮಾನ್ಯ ನೋವುಗಳನ್ನು ಕಡಿಮೆ ಮಾಡುತ್ತದೆ ಮತ್ತು ದೇಹ ಆರೋಗ್ಯಯುತವಾಗಲು ಸಹಕರಿಸುತ್ತದೆ.

12.ಕಣ್ಣಿಗೆ ಉಪಯುಕ್ತ
ಪ್ರತಿದಿನ ಗೋಧಿ ಹುಲ್ಲಿನ ಪುಡಿಯನ್ನು ಸೇವಿಸುವುದರಿಂದ ಕಣ್ಣುಗಳು ಪ್ರಕಾಶಮಾನವಾಗುತ್ತವೆ.

13.ಉಬ್ಬಿರುವ ನಾಳಗಳನ್ನು ನಿಗ್ರಹಿಸುತ್ತದೆ
ಗೋಧಿ ಹುಲ್ಲಿನ ನಿಯಮಿತವಾದ ಬಳಕೆಯಿಂದ ಉಬ್ಬಿರುವ ನಾಳಗಳ ಸಮಸ್ಯೆ ಹೋಗಲಾಡಿಸುತ್ತದೆ.

14.ರಕ್ತ ಶುದ್ಧಿ ಮಾಡುತ್ತದೆ
ಗೋಧಿ ಹುಲ್ಲಿನ ಪುಡಿ ಕಲ್ಮಶ ಹೋಗಲಾಡಿಸುವ ಗುಣವನ್ನು ಹೊಂದಿದೆ,ಇದು ರಕ್ತವನ್ನು ಶುದ್ಧಿಗೊಳಿಸಿ,ಉಸಿರಿನ ಮತ್ತು ಬೆವರಿನ ವಾಸನೆಯನ್ನು ಹೋಗಲಾಡಿಸುತ್ತದೆ.

15.ಸಂತಾನೋತ್ಪತ್ತಿ ಸಮಸ್ಯೆ ನಿವಾರಿಸುತ್ತದೆ
ಇದು ಮಹಿಳೆ ಮತ್ತು ಪುರುಷ ಇಬ್ಬರಲ್ಲೂ ಸಂತಾನೋತ್ಪತ್ತಿ ಸಮಸ್ಯೆ ನಿವಾರಿಸುತ್ತದೆ.ಚೇತನ ಶಕ್ತಿಯನ್ನು ತುಂಬಿ,ಗರ್ಭ ಧರಿಸಲು ಸಹಕರಿಸುತ್ತದೆ

16.ತ್ವಚೆಯನ್ನು ಸ್ವಚ್ಚವಾಗಿಡುತ್ತದೆ
ಗೋಧಿ ಹುಲ್ಲು ಸತ್ತ ಚರ್ಮದ ಜೀವಕೋಶಗಳನ್ನು ಹೋಗಲಾಡಿಸುತ್ತದೆ.ಆಂತರಿಕ ಕಾಂತಿಯನ್ನು ವರ್ಧಿಸಿ,ಚರ್ಮ ತಾರುಣ್ಯಯುತ ಕಾಂತಿ ಹೊಂದುವಂತೆ ಮಾಡುತ್ತದೆ.

17.ಮೊಡವೆಗೆ ಚಿಕಿತ್ಸಕ
ಗೋಧಿ ಹುಲ್ಲಿನ ಪುಡಿಯು ಚರ್ಮದ ಕಲ್ಮಶವನ್ನು ತೆಗೆಯುವುದರಿಂದ ಮೊಡವೆಯನ್ನು ಹೋಗಲಾಡಿಸಿ ಕಾಂತಿಯುತವಾಗುವಂತೆ ಮಾಡುತ್ತದೆ.ಗೋಧಿ ಹುಲ್ಲಿನ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆ,ಸೂರ್ಯನ ಕಿರಣಗಳಿಂದ ಆಗುವ ಟ್ಯಾನ್ ಇವುಗಳನ್ನು ಹೋಗಲಾಡಿಸಬಹುದು.

18.ಸೋಂಕುನಿವಾರಕ ಗುಣಲಕ್ಷಣ
ಗೋಧಿ ಹುಲ್ಲಿನಲ್ಲಿ ನಂಜು ನಿರೋಧಕ ಗುಣ ಇರುವುದರಿಂದ ಕೀಟ ಕಡಿತಗಳು,ತುರಿಕೆ,ಕೀವು,ಯಾತನೆಗಳಿಗೆ ಪರಿಹಾರ ಒದಗಿಸುತ್ತದೆ.ದೇಹದಿಂದ ವಿಷಯುಕ್ತ ಅಂಶಗಳನ್ನು ಹೊರಹಾಕುವುದಕ್ಕೂ ಇದು ಸಹಾಯಕ.ಜೊತೆಗೆ ಸನ್ ಬರ್ನ್ ಅನ್ನು ಕೂಡ ಹೋಗಲಾಡಿಸುತ್ತದೆ.

19.ತಾರುಣ್ಯ ಕಾಪಾಡುತ್ತದೆ
ಗೋಧಿ ಹುಲ್ಲಿನ ಪುಡಿ ತ್ವಚೆಗೆ ರಾಡಿಕಲ್ ನಿಂದ ಆಗುವ ಹಾನಿಯನ್ನು ತಪ್ಪಿಸುತ್ತದೆ.ಇದು ಕಾಂತಿಯನ್ನು ಹೆಚ್ಚಿಸುವ ಗುಣ ಹೊಂದಿರುವುದರಿಂದ ನಿಧಾನವಾಗಿ ತಾರುಣ್ಯವನ್ನು ಹೆಚ್ಚಿಸುತ್ತದೆ.ಚರ್ಮ ಸುಕ್ಕುಗಟ್ಟುವುದನ್ನು ತಡೆಯುವುದರಿಂದ ತಾರುಣ್ಯದ ಕಾಂತಿಯನ್ನು ಮುಖದಲ್ಲಿ ಚಿಮ್ಮುವಂತೆ ಮಾಡುತ್ತದೆ.

20.ತಲೆಹೊಟ್ಟು ಮತ್ತು ನೆತ್ತಿಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ
ಗೋಧಿ ಹುಲ್ಲಿನ ಪುಡಿಯನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ತಲೆಹೊಟ್ಟು ಕಡಿಮೆ ಆಗುತ್ತದೆ ಮತ್ತು ನೆತ್ತಿ ಒಣಗುವುದನ್ನು ಕೂಡ ತಪ್ಪಿಸುತ್ತದೆ.ಗೋಧಿ ಹುಲ್ಲಿನ ಪುಡಿ ಮತ್ತು ಶಾಂಪೂ ಮಿಶ್ರಣವನ್ನು ತಯಾರಿಸಿ ಕೂದಲಿಗೆ ಹಚ್ಚುವುದರಿಂದ ಹಾನಿಗೊಳಗಾದ ಕೂದಲನ್ನು ಸರಿಪಡಿಸಬಹುದು.

21.ಬಿಳಿ ಕೂದಲನ್ನು ಕಡಿಮೆ ಮಾಡುತ್ತದೆ
ಗೋಧಿ ಹುಲ್ಲಿನಲ್ಲಿ ಬಿಳಿ ಕೂದಲನ್ನು ನೈಸರ್ಗಿಕ ಬಣ್ಣಕ್ಕೆ ತರುವ ಗುಣವಿದೆ.ಈ ಪೌಡರ್ ನಿಂದ ಕೂದಲನ್ನು ನೆನೆಸಿದಲ್ಲಿ ಕೂದಲು ಬಿಳಿ ಆಗುವುದನ್ನು ತಡೆಗಟ್ಟಬಹುದು.



Click it and Unblock the Notifications











