Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಸ್ಟೆಮಿನಾ ಹೆಚ್ಚಿಸುವ 20 ವೆಜ್ ಫುಡ್ಸ್
ಸ್ಟೆಮಿನಾ ಯಾರಿಗೆ ಬೇಡ ಹೇಳಿ? ಸ್ಟೆಮಿನಾ ಕಮ್ಮಿಯಾದರೆ ದೇಹ ಬಲ ಕುಗ್ಗುವುದು ಎನ್ನುವುದು ತಿಳಿದಿರುವ ವಿಷಯ. ಸ್ಪೋರ್ಟ್ಸ್ ನಲ್ಲಿರುವವರಿಗೆ ಸ್ಟೆಮಿನಾ ಹೆಚ್ಚಿಸಲು ಮೊಟ್ಟೆ, ಮಾಂಸ ಕೊಡುತ್ತಾರೆ. ಮೊಟ್ಟೆ, ಮಾಂಸ ಇವುಗಳು ಸ್ಟೆಮಿನಾವನ್ನು ಹೆಚ್ಚಿಸುವುದಾದರೂ ಮಾಂಸ ಮುಟ್ಟದ ಸಸ್ಯಾಹಾರಿಗಳು ತಮ್ಮ ಸ್ಟೆಮಿನಾವನ್ನು ಹೆಚ್ಚಿಸಿಕೊಳ್ಳಲು ಸ್ಟೆಮಿನಾ ಇರುವ ಆಹಾರಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.
ಸ್ಟೆಮಿನಾ ಹೆಚ್ಚು ಮಾಡುವುದು ಎಂದರೆ ದೇಹದ ತೂಕ ಹೆಚ್ಚಿಸಿಕೊಳ್ಳುವುದಲ್ಲ, ನಿಮ್ಮ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. ಹೆಚ್ಚು ಸ್ಟೆಮಿನಾ ಇರುವವರಿಗೆ ಬೇಗನೆ ಸುಸ್ತು ಕಾಡುವುದಿಲ್ಲ.
ಸ್ಟೆಮಿನಾ ಹೆಚ್ಚಿಸುವ ಸಸ್ಯಾಹಾರಗಳ ಪಟ್ಟಿಯನ್ನು ಸ್ಲೈಡ್ ನಲ್ಲಿ ನೀಡಲಾಗಿದೆ ನೋಡಿ:

ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ನಾರಿನಂಶ, ಫ್ರೂಕ್ಟೋಸ್, ನೈಸರ್ಗಿಕವಾದ ಸಕ್ಕರೆಯಂಶವಿದೆ. ಪ್ರತೀದಿನ 1-2 ಬಾಳೆ ಹಣ್ಣು ತಿನ್ನುವವರಿಗೆ ಸ್ಟೆಮಿನಾದ ಸಮಸ್ಯೆ ಕಾಡುವುದೇ ಇಲ್ಲ.

ಪೀನಟ್ ಬಟರ್
ಇದರಲ್ಲಿ ಒಮೆಗಾ 3 ಕೊಬ್ಬಿನಂಶವಿದ್ದು, ಇದು ನಮ್ಮ ದೇಹವನ್ನು ಸೇರಿದಾಗ ನಿಧಾನವಾಗಿ ಜೀರ್ಣವಾಗುತ್ತದೆ, ಇದರಿಂದ ದೇಹದ ಸ್ಟೆಮಿನಾ ಹೆಚ್ಚಾಗುವುದು.

ಬೀಟ್ ರೂಟ್ ಜ್ಯೂಸ್
ಬೀಟ್ ರೂಟ್ ಜ್ಯೂಸ್ ಕುಡಿದು ನೋಡಿ ತಲೆಸುತ್ತು, ಸುಸ್ತು ಮುಂತಾದ ಸಮಸ್ಯೆ ಕಂಡು ಬರುವುದಿಲ್ಲ. ದೈಹಿಕ ವ್ಯಾಯಾಮ ಅಥವಾ ಕೆಲಸ ಮಾಡುವಾಗ ಸುಸ್ತಾಗದಿರಲು ಒಂದು ಲೋಟ ಬೀಟ್ ರೂಟ್ ಜ್ಯೂಸ್ ಕುಡಿಯುವುದು ಒಳ್ಳೆಯದು.

ನೀರು
ದೇಹಕ್ಕೆ ಅವಶ್ಯಕವಾದ ನೀರು ಕುಡಿಯದಿದ್ದರೆ ಸುಸ್ತು ಕಂಡು ಬರುವುದು ಸಹಜ. ಇದು ದೇಹದಲ್ಲಿರುವ ಕಲ್ಮಶವನ್ನು ಹೊರಹಾಕಿ, ದೇಹಕ್ಕೆ ಚೈತನ್ಯ ತುಂಬುತ್ತದೆ. ನೀರಿಗೆ ಈ ಸುಸ್ತು ನಿವಾರಿಸುವ ಶಕ್ತಿ ಇರುವುದರಿಂದಲೇ ತುಂಬಾ ದಣಿದಾಗ ನೀರು ಕುಡಿದರೆ ಸುಸ್ತು ಕಡಿಯಾದಂತೆ ಅನಿಸುವುದು.

ಕೆಂಪು ದ್ರಾಕ್ಷಿ
ಇದರಲ್ಲಿ resveratol ಎಂಬ ರಾಸಾಯನಿಕವಿದ್ದು ಇದು ದೇಹದಲ್ಲಿ ಸ್ಟೆಮಿನಾ ಹೆಚ್ಚಾಗುವಲ್ಲಿ ಸಹಕಾರಿಯಾಗಿದೆ.

ಓಟ್ಸ್
ಓಟ್ಸ್ ಅನ್ನು ಕಾರ್ಬೋಹೈಡ್ರೇಟ್ಸ್ ಆಹಾರಗಳ ವರ್ಗಕ್ಕೆ ಸೇರಿಸಬಹುದಾದರೂ ಇದರಲ್ಲಿ ನಾರಿನಂಶ ಅಧಿಕವಿದೆ. ಇದನ್ನು ತಿಂದರೆ ಕಠಿಣ ಕೆಲಸಮಾಡಿದಾಗ ಬೇಗನೆ ಸುಸ್ತು ಅಂತ ಅನಿಸುವುದಿಲ್ಲ.

ಕಾಫಿ
ಕಾಫಿಯಲ್ಲಿ ಕೆಫೀನ್ ಇರುವುದರಿಂದ ಇದು ಕೂಡ ಶಕ್ತಿ ವರ್ಧಕವಾಗಿದೆ. ಹಾಗೆಂದು ತುಂಬಾ ಕುಡಿದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಸುಸ್ತು, ವಾಂತಿ ಮುಂತಾದ ಸಮಸ್ಯೆ ಕಂಡು ಬರುವುದು.

ಬೀನ್ಸ್
ಬೀನ್ಸ್ ನಲ್ಲಿ ಕಬ್ಬಿಣದಂಶವಿದೆ. ಕಬ್ಬಿಣದಂಶವಿರುವ ಆಹಾರಗಳು ದೇಹದಲ್ಲಿ ಆಮ್ಲಜನಕ ರಕ್ತದಲ್ಲಿ ಹೆಚ್ಚಿರುವಂತೆ ಮಾಡುತ್ತದೆ. ಆದ್ದರಿಂದ ಸ್ಟೆಮಿನಾ ಹೆಚ್ಚಿಸಲು ಬೀನ್ಸ್ ಕೂಡ ಅತ್ಯುತ್ತಮವಾದ ತರಕಾರಿಯಾಗಿದೆ.

ಹಸಿರು ತರಕಾರಿಗಳು
ಹಸಿರು ತರಕಾರಿಗಳಲ್ಲಿ ಕಬ್ಬಿಣದಂಶ, ವಿಟಮಿನ್ ಸಿ ಇರುವುದರಿಂದ ಇವು ಕೂಡ ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ.

ಸಿಟ್ರಸ್ ಇರುವ ಆಹಾರಗಳು
ಬೆಳಗ್ಗೆ ಒಂದು ಗ್ಲಾಸ್ ಸಿಟ್ರಸ್ ಇರುವ ಜ್ಯೂಸ್ ಕುಡಿದರೆ ದಿನಾಪೂರ್ತಿ ಲವಲವಿಕೆಯಿಂದ ಇರುವಿರಿ. ಏಕೆಂದರೆ ಇದು ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುತ್ತಿದೆ.

ಕೆಂಪಕ್ಕಿ
ಕೆಂಪಕ್ಕಿಯಲ್ಲಿ ಕಾರ್ಬೋಹೈಟ್ರೇಟ್, ವಿಟಮಿನ್ ಬಿ ಮತ್ತು ನಾರಿನಂಶ ಅಧಿಕವಿದೆ. ಆದ್ದರಿಂದಲೇ ಕೆಂಪಕ್ಕಿ ಅನ್ನ ತಿಂದರೆ ಬೇಗನೆ ಹೊಟ್ಟೆ ಹಸಿವಾಗುವುದಿಲ್ಲ.

ಸೇಬು
ಸೇಬಿನಲ್ಲೂ ಅತ್ಯಧಿಕವಾದ ಕಬ್ಬಿಣದಂಶವಿದೆ. ಆದ್ದರಿಂದ ಇದು ದೇಹದಲ್ಲಿ ಹೀಮೋಗ್ಲೋಬಿನ್ ಹೆಚ್ಚಿಸಿ ಕೆಂಪು ರಕ್ತ ಕಣಗಳ ಉತ್ಪತ್ತಿಯನ್ನು ಹೆಚ್ಚು ಮಾಡುತ್ತದೆ.

ಗ್ರೀನ್ ಟೀ
ಗ್ರೀನ್ ದೇಹಕ್ಕೆ ಹಾಗೂ ಮೆದುಳಿಗೆ ತುಂಬಾ ಆರೋಗ್ಯಕರವಾದ ಆಹಾರವಾಗಿದೆ. ಗ್ರೀನ್ ಟೀಯನ್ನು ದಿನದಲ್ಲಿ ಒಂದರಿಂದ ಎರಡು ಲೋಟ ಮಾತ್ರ ಕುಡಿಯಿರಿ

ಸಾವಕ್ಕಿ(quinoa)
ಸಾವಕ್ಕಿಯನ್ನು ಕ್ರೀಡಾಪಟುಗಳು ತಿನ್ನುವುದು ತುಂಬಾ ಒಳ್ಳೆಯದು. ಇದರಲ್ಲಿರುವ ಅಮೈನೋ ಆಸಿಡ್ ಸ್ನಾಯುಗಳನ್ನು ಬಲಪಡಿಸುತ್ತದೆ.

ಬಾದಾಮಿ
ಇದರಲ್ಲಿ ವಿಟಮಿನ್ ಸಿ, ಒಮೆಗಾ3 ಇದ್ದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಅದರಲ್ಲೂ ಇದನ್ನು ನೀರಿನಲ್ಲಿ ನೆನೆ ಹಾಕಿ ತಿಂದರೆ ಮತ್ತಷ್ಟು ಒಳ್ಳೆಯದು.

ಸೋಯಾಬೀನ್
ಸೋಯಾಬೀನ್ ಮಸಲ್ ಬಿಲ್ಡ್ ಮಾಡುವ ಆಹಾರವಾಗಿದೆ. ಸೋಯಾಬೀನ್ ತಿಂದರೆ ಅಧಿಕ ಹೊತ್ತು ಕೆಲಸ ಮಾಡಿದರೂ ಸುಸ್ತು ನಿಮ್ಮನ್ನು ಕಾಡದಂತೆ ನೋಡಿಕೊಳ್ಳುತ್ತದೆ.

ಮಕಾ ಬೇರು
ಇದನ್ನು ಮನೆಮದ್ದಾಗಿ ಪುರಾತನ ಕಾಲದಿಂದಲೂ ಬಳಸುತ್ತಾರೆ. ಇದರ ಬೇರು ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿ ತುಂಬಾ ಸಹಕಾರಿಯಾಗಿದೆ. ಲೈಂಗಿಕ ನಿಶ್ಯಕ್ತಿ ಇರುವವರು ಇದನ್ನು ತಿಂದರೆ ಒಳ್ಳೆಯದು.

ಒಣ ಹಣ್ಣುಗಳು
ಒಣ ಹಣ್ಣುಗಳನ್ನು ತಿಂದರೆ ತಂಬಾ ಹೊತ್ತಿನವರೆಗೆ ಬೇರೇನು ತಿನ್ನದಿದ್ದರೂ ಆರಾಮವಾಗಿ ಇರುತ್ತೀರಿ. ಒಣ ಹಣ್ಣುಗಳಲ್ಲಿ ನೈಸರ್ಗಿಕವಾದ ಸಕ್ಕರೆಯಂಶ, ಒಮೆಗಾ 3 ಕೊಬ್ಬಿನಂಶವಿರುತ್ತದೆ.

ಕುಂಬಳಕಾಯಿ
ಸಿಹಿ ಕುಂಬಳಕಾಯಿ, ಕುಂಬಳಕಾಯಿ ಬೀಜ ಕೂಡ ಶಕ್ತಿ ವರ್ಧಕವಾಗಿ ಕೆಲಸಮಾಡುತ್ತದೆ. ಇದು ಹಾರ್ಮೋನ್ ಗಳ ಚಟುವಟಿಕೆಯನ್ನು ನಿಯಂತ್ರಣದಲ್ಲಿಡುತ್ತದೆ.

ಜೋಳ
ಜೋಳದಲ್ಲಿ ಅತ್ಯಂತ ಆರೋಗ್ಯಕರವಾದ ಕಾರ್ಬೋಹೈಡ್ರೇಟ್ಸ್ ಇದೆ. ಇದರಲ್ಲಿರುವ ಗ್ಲೈಕೋಜಿನ್ ನಮ್ಮ ದೇಹ ಸೇರಿದಾಗ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ.



Click it and Unblock the Notifications