Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಜೇನಿನಲ್ಲಿದೆ ಔಷಧೀಯ ಗುಣಗಳು
ಪ್ರತಿಯೊಬ್ಬರಿಗೂ ಇಷ್ಟವಾಗುವ ಪ್ರಕೃತಿಯ ಕೊಡುಗೆ ಈ ಜೇನು. ಬಣ್ಣ ತಿಳಿಯಾಗಿಸಿಕೊಳ್ಳಲು ಹಾತೊರೆಯುವ ಯುವಕರಿಗಂತೂ ಇದು ಹೇಳಿ ಮಾಡಿಸಿದ ಖಾದ್ಯ. ಅದು ಹೇಗೆಂದರೆ, ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಜೇನು ಹಾಗು 4 ಹನಿ ನಿಂಬೆರಸ ಸೇರಿಸಿ ಸೇವಿಸುವುದರಿಂದ ಬಣ್ಣ ತಿಳಿಯಾಗುತ್ತದೆ ಮತ್ತು ರಕ್ತ ಶುದ್ಧಿಯಾಗಿ ಆರೋಗ್ಯದಲ್ಲಿಯೂ ಸುಧಾರಣೆ ಕಂಡುಬರುತ್ತದೆ.
ವಿವಿಧ ಹೂವುಗಳಿಂದ ಜೇನುಹುಳಗಳು ಮಕರಂದವನ್ನು ಹೀರಿ ಶೇಖರಣೆ ಮಾಡಿದ ಜೇನನ್ನು ಸಂಗ್ರಹಿಸಿಡುತ್ತವೆ. ಹೀಗೆ ಶೇಖರಣೆ ಮಾಡಿದ ಜೇನನ್ನು ಸೇವಿಸಿ ಮಾನವನು ಉತ್ತಮ ಆರೋಗ್ಯವನ್ನು ಪಡೆಯುತ್ತಾನೆ. ಇಂತಹ ಒಂದು ಅದ್ಭುತವಾದ ಆಹಾರ ಪದಾರ್ಥದ ಪ್ರಯೋಜನ ಅಥವಾ ಉಪಯೋಗಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ತ್ವಚೆ ರಕ್ಷಣೆಯಲ್ಲಿ ಜೇನಿನ ಪಾತ್ರ
ಜೇನು ಹ್ಯೂಮಕ್ಟೆಂಟ್ ಕಾಂಪೌಂಡ್ ನಿಂದ ಸಮೃದ್ಧವಾಗಿದೆ. ಆದ್ದರಿಂದ ಇದು ತ್ವಚೆಯಯ ತೇವಾಂಶವನ್ನು ಉಳಿಸಿ ಮತ್ತು ಅದರ ಹಿಗ್ಗುವಿಕೆಯನ್ನು ಸಂಕುಚಿತಗೊಳಿಸಿ ಚರ್ಮವನ್ನು ಮತ್ತಷ್ಟು ಮೆದುವಾಗಿಸುತ್ತದೆ.

2) ಅಕಾಲಿಕ ನೆರಿಗೆಯನ್ನು ತಡೆಯುತ್ತದೆ
ಇದು ತ್ವಜೆಯಲ್ಲಿರುವ ಸತ್ತ ಜೀವಕಣಗಳನ್ನು ಹೊರಹಾಕಿ ಚರ್ಮ ಸುಕ್ಕು ಕಟ್ಟದ ಹಾಗೆ ನಿಯಂತ್ರಿಸುತ್ತದೆ.

3) ಆಂಟಿ ಬ್ಯಾಕ್ಟೀರಿಯಲ್
ಆಂಟಿ ಬ್ಯಾಕ್ಟೀರಿಯಲ್ ಹಾಗು ಆಂಟಿ ಮೈಕ್ರೋಬಿಯಲ್ ಗುಣವನ್ನು ಹೊಂದಿರುವ ಜೇನು ಕೆಲವು ಸೂಕ್ಷ್ಮಾಣು ಜೀವಿಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಇದನ್ನು ಸಣ್ಣಪುಟ್ಟ ಗಾಯದ ಮೇಲೆ, ಸುಟ್ಟ ಗಾಯದ ಮೇಲೆ ಹಾಗು ತುರಿಕೆಯುಳ್ಳ ಚರ್ಮದ ಭಾಗದ ಮೇಲೆ ಔಷಧೀಯ ರೂಪದಿಂದ ಲೇಪಿಸಲಾಗುತ್ತದೆ.

4) ಗಾಯವನ್ನು ಒಣಗಿಸುತ್ತದೆ
ಜೇನು ಗಾಯವನ್ನು ಸ್ವಚ್ಛಗೊಳಿಸಿ ಅದರ ವಾಸನೆಯನ್ನು ಹಾಗು ಕೀವು ಕಟ್ಟುವುದನ್ನು ನಿಯಂತ್ರಿಸುತ್ತದೆ. ನೋವನ್ನು ಕಡಿಮೆಗೊಳಿಸಿ ಬೇಗ ಗಾಯ ಒಣಗಿ ವಾಸಿಯಾಗಲು ಸಹಾಯ ಮಾಡುತ್ತದೆ.

5) ತ್ವಚೆ ರಕ್ಷಣೆ ಮಾಡುತ್ತೆ
ಹಾನಿಯಾದ ತ್ವಚೆಯ ಆರೋಗ್ಯವನ್ನು ಗುಣಪಡಿಸಲು ಹಾಗು ತ್ವಚೆಯಲ್ಲಿ ಹೊಸ ಜೀವಕಣಗಳನ್ನು ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ತ್ವಚೆಯ ರೋಗ ಲಕ್ಷಣಗಳಾದ ಎಕ್ಜೀಮಾ, ಡರ್ಮಟೈಟಿಸ್ ಮತ್ತು ಇತರ ತೊಂದರೆಗಳನ್ನು ಗುಣಪಡಿಸಲು ಜೇನು ಸಹಾಯಮಾಡುತ್ತದೆ.

6) ಅಥ್ಲೀಟ್ಸ್ ಫೂಟ್ ಮತ್ತು ಜಾಕ್ ಇಚ್ ನಿವಾರಿಸುತ್ತೆ
ಜೇನು ಪ್ರಾಚೀನವಾದ ಆಂಟಿ ಫಂಗಲ್ ಗುಣ ಹೊಂದಿರುವುದರಿಂದ ಸೋಂಕು ಜಾಡ್ಯಗಳಾದ ಅಥ್ಲೀಟ್ಸ್ ಫೂಟ್ ಮತ್ತು ಜಾಕ್ ಇಚ್ ಮುಂತಾದವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

7) ಸೂರ್ಯನ ಕಿರಣಗಳಿಂದ ರಕ್ಷಣೆ
ನೈಸರ್ಗಿಕ ಆಂಟಿ ಆಕ್ಲಿಡೆಂಟ್ ಗಳನ್ನು ಜೇನು ಒಳಗೊಂಡಿರುವುದರಿಂದಚರ್ಮವನ್ನು ಅಲ್ಟ್ರಾ ವಯೊಲೆಟ್ (ಅತಿನೇರಳೆ) ರಶ್ಮಿಗಳಿಂದ ಆಗುವ ಹಾನಿಯಿಂದ ಕಾಪಾಡುತ್ತದೆ. ಅತಿಯಾಗಿ ತ್ವಚೆಯನ್ನು ಸೂರ್ಯನ ಕಿರಣಗಳಿಗೆ ಒಡ್ಡುವುದರಿಂದ ತ್ವಚೆ ಹಾನಿಗೊಳಗಾಗಿ ವಯಸ್ಸಿಗೆ ಮುನ್ನ ಮುಪ್ಪು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳಲು ಜೇನನ್ನು ಸನ್ ಸ್ಕ್ರೀನಾಗಿ ಬಳಸಬಹುದು.

9. ತ್ವಚೆಯನ್ನು ಶುದ್ಧವಾಗಿಸುತ್ತದೆ
ಚರ್ಮದ ಮೇಲಿನ ಪದರದಲ್ಲಿ ಜೇನು ಆಳವಾಗಿ ಹೊಕ್ಕು ರಂಧ್ರಗಳಲ್ಲಿ ಹುದುಗಿರುವ ಕೊಳಕನ್ನು ತೆಗೆದುಹಾಕುತ್ತದೆ. ಹೀಗೆ ಸೋಂಕಿನ ಜಾಡ್ಯದೊಡನೆ ಹೋರಾಡಿ ಮೊಡವೆ ಸಮಸ್ಯೆಗಳನ್ನು ಜೇನು ನಿವಾರಿಸುತ್ತದೆ.

14) ಸ್ನಾಯು ನೋವು ಕಮ್ಮಿ ಮಾಡುತ್ತೆ
ಗ್ಲೂಕೋಸ್ ಮತ್ತು ಫ್ರಕ್ಟೋಸ್ ರೂಪದ ಕಾರ್ಬೊಹೈಡ್ರೇಟ್ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ. ಇದರಿಂದ ಸಹನಶಕ್ತಿ ಉತ್ಕರ್ಷವಾಗುತ್ತದೆ ಮತ್ತು ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ.

15) ಆಲಸ್ಯವನ್ನು ತೊಲಗಿಸುತ್ತದೆ
ಜೇನು ಬೆಳಗಿನ ಜಾವದ ನಿಸ್ತೇಜತೆಯನ್ನು ಮತ್ತು ಆಲಸ್ಯವನ್ನು ತೊಲಗಿಸುತ್ತದೆ.

16) ರಕ್ತ ಹೀನತೆ ಸಮಸ್ಯೆ ಹೋಗಲಾಡಿಸುತ್ತದೆ
ನಿಯಮಿತವಾಗಿ ಜೇನನ್ನು ಸೇವಿಸುವುದರಿಂದ ಕ್ಯಾಲ್ಶಿಯಂ ಹೀರುವಿಕೆ, ಹಿಮೊಗ್ಲೋಬಿನ್ ಎಣಿಕೆ ಹೆಚ್ಚಾಗಿ ರಕ್ತಹೀನತೆ ಹೋಗಲಾಡಿಸುವಲ್ಲಿ ಸಹಾಯವಾಗುತ್ತದೆ.

17) ಕೊಲೆಸ್ಟ್ರಾಲ್
ಜೇನು ಪೂರ್ಣವಾಗಿ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸಿ, ಉತ್ತರ ಕೊಲೆಸ್ಟ್ರಾಲ್ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.

18) ಶ್ವಾಸಕೋಶದ ಸೋಂಕು ನಿವಾರಿಸುತ್ತೆ
ಶ್ವಾಸಕೋಶದ ಸೋಂಕು ನಿವಾರಿಸಲು ಜೇನು ತುಂಬಾ ಸಹಾಯ ಮಾಡುತ್ತದೆ.

19) ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮರಳಿ ಮರಳಿ ಬರುವ ಸೋಂಕು ಜಾಡ್ಯವನ್ನು ತಡೆಯುತ್ತದೆ.

20) ಒಬೆಸಿಟಿ
ಜೇನು ಬೊಜ್ಜು ಅಥವಾ ತೂಕ ಜಾಸ್ತಿ ಹೆಚ್ಚಾಗುವಿಕೆಯನ್ನು ಜೇನು ಅತ್ಯಂತ ಸಮರ್ಥವಾಗಿ ನಿಯಂತ್ರಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜೀರ್ಣಕ್ರಿಯೆನ್ನು ವೃದ್ಧಿಸುತ್ತದೆ ಮತ್ತು ಜೀರ್ಣಕ್ರಿಯೆಯ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ದೇಹದಲ್ಲಿ ಹೆಚ್ಚಾದ ಕೊಬ್ಬು ಕರಗಿಸುವಲ್ಲಿ ಸಹಾಯ ಮಾಡುತ್ತದೆ.



Click it and Unblock the Notifications