Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಮನಸ್ಸನ್ನು ಶಾಂತಗೊಳಿಸುವ 15 ಆಹಾರಗಳು
ಇತ್ತೀಚಿಗೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಂಡುಬರುವ ಸಾಮಾನ್ಯ ಸಮಸ್ಯೆ, ಮಾನಸಿಕ ಒತ್ತಡ! ಕೆಲಸ ಮಾಡುವ ಸ್ಥಳದಲ್ಲಾಗಲೀ ವಾಸಿಸುವ ಸ್ಥಳದಲ್ಲಾಗಲೀ ಯಾವುದೇ ಸಮಸ್ಯೆಯಿದ್ದರೆ ಅದು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮಾನಸಿಕ ಒತ್ತಡ ಉಂಟಾಗುತ್ತದೆ. ಮಾನಸಿಕ ಒತ್ತಡವನ್ನು ನಿಯಂತ್ರಿಸಲು ವ್ಯಾಯಾಮ ಅಥವಾ ಯಾವುದೇ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುತ್ತೇವೆ.
ಆದರೆ ಅದಕ್ಕಿಂತಲೂ ಮುಖ್ಯವಾಗಿ ನಮ್ಮ ಆಹಾರ ಕ್ರಮದಲ್ಲಿ ಸರಿಯಾದ ಅನುಕರಣೆ ನಿಮ್ಮನ್ನು ಒತ್ತಡದ ಸಮಸ್ಯೆಯಿಂದ ಸಂಪೂರ್ಣವಾಗಿ ದೂರವಿರಿಸಬಲ್ಲದು. ಇಲ್ಲಿ, ನಿಮ್ಮ ಒತ್ತಡ ಸಮಸ್ಯೆಯಿಂದ ಹೊರತರುವ ಕೆಲವು ಪ್ರಮುಖವಾದ ಆಹಾರ ಪದಾರ್ಥಗಳನ್ನು ನೀಡಲಾಗಿದೆ.

1. ನಟ್ಸ್ / ಬೀಜಗಳು
ಸೇಲೆನಿಯಂ ಅಂಸವನ್ನು ಹೊಂದಿರುವ ನಟ್ಸ್, ಬಳಲುವಿಕೆ, ಆತಂಕ ಹಾಗೂ ಇತರ ಮಾನಸಿಕ ಒತ್ತಡಕ್ಕೆ ಒಳಗಾದವರಿಗೆ ಸಹಾಯಕವಾಗುವ ಖನಿಜದಂತೆ ಕೆಲಸಮಾಡುತ್ತದೆ. ಆದ್ದರಿಂದ ಎಲ್ಲಾ ವಿಧದ ನಟ್ಸ್ ಗಳೂ ಕೂಡ ನಿಮ್ಮ ಮನಸ್ಸು ಶಾಂತವಾಗಿರಲು ಸಹಾಯಮಾಡುತ್ತದೆ.

2. ಚಾಕಲೇಟ್
ಚಾಕಲೇಟ್ ನಲ್ಲಿರುವ ಡಾರ್ಕ್ ನೆಸ್ ನಿಮ್ಮನ್ನು ಸದಾ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಅಲ್ಲದೇ ನಿಮ್ಮ ಬುದ್ಧಿ ಹಾಗೂ ಮನಸ್ಸು ಸದಾ ಶಾಂತವಾಗಿರುವಂತೆ ಮಾಡುತ್ತದೆ.

3. ಪಾಲಾಕ್
ಮ್ಯಾಗ್ನೀಶಿಯಂ ಸಮೃದ್ಧ ಅಂಶವನ್ನು ಹೊಂದಿರುವ ಪಾಲಾಕ್ ಮನಸ್ಸನ್ನು ಸದಾ ನಿಶ್ಚಲವಾಗಿರುವಂತೆ ಮಾಡುತ್ತದೆ. ಸರಿಯಾದ ಪ್ರಮಾಣದ ವಿಟಮಿನ್ ಎ ಹಾಗೂ ಸಿ ಯ ಜೊತೆಗೆ ಕಬ್ಬಿಣದ ಅಂಶ ಆರೋಗ್ಯಕರ ಮನಸ್ಸನ್ನು ನಿಮ್ಮದಾಗಿಸುತ್ತದೆ.

4. ಪಾಸ್ತಾ
4. ಸಮೃದ್ಧ ಮ್ಯಾಗ್ನೀಶಿಯಂ ಅಂಶವನ್ನು ಹೊಂದಿರುವ ಪಾಸ್ತಾ ಹಲವು ಧಾನ್ಯಗಳಿಂದ ತಯಾರಿಸಲಾಗುತ್ತಿದ್ದು ಒತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯಕಾರಿ.

5. ಬ್ರೆಡ್
ಬ್ರೆಡ್ ನಲ್ಲಿಯೂ ಪಾಸ್ತಾದಲ್ಲಿರುವ ಅಂಶಗಳೇ ಅಧಿಕವಾಗಿರುತ್ತದೆ. ಇದು ಮ್ಯಾಗ್ನೀಶಿಯಂ ಕೊರತೆ ಪ್ರಮಾಣವನ್ನು ನಿಯಂತ್ರಿಸುತ್ತದೆ.

6. ಬೆರಿಹಣ್ಣುಗಳು
ರುಚಿಕರವಾದ ಬೆರಿಹಣ್ಣುಗಳು ಒತ್ತಡ ನಿವಾರಿಸುವ ಅತ್ಯಂತ ಪರಿಣಾಮಕಾರಿ ಹಣ್ಣುಗಳು. ಇದರ ಉತ್ಕರ್ಷಣ ನಿರೋಧಕಗಳು ನಿಮ್ಮನ್ನು ಒತ್ತಡದಿಂದ ದೂರವಿರಿಸುತ್ತದೆ.

7. ಬಾದಾಮಿ
ಸತು ಮತ್ತು ವಿಟಮಿನ್ ಬಿ 12 ಅಂಶಗಳು ನಿಮ್ಮ ಊಟದ ಜೊತೆಗೆ ಸೇರಿದರೆ ನಿಮ್ಮ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಒಳ್ಳೆಯದು. ಈ ಪೋಷಕಾಂಶಗಳು ಸಮತೋಲಿತ ಚಿತ್ತ ನಿರ್ವಹಿಸಲು ಮತ್ತು ಆತಂಕ ದೂರಗೊಳಿಸಲು ಸಹಾಯಕ.

8. ಗ್ರೀನ್ ಟೀ
ಒಂದು ಕಪ್ ಗ್ರೀನ್ ಟೀ ನಮ್ಮ ಮನಸ್ಸಿನ ಮೇಲೆ ನಿಶ್ಚಲವಾದ ಪರಿಣಾಮ ಬೀರಬಹುದು. ತಕ್ಷಣದಲ್ಲಿ ಆರಾಮವನ್ನು ನೀಡುವ ಗ್ರೀನ್ ಟೀ ಆರೋಗ್ಯಕ್ಕೂ ಒಳ್ಳೆಯದು.

9. ಮೀನು
ಸಾಲ್ಮನ್ ಮತ್ತು ಬಂಗಡೆಯಂತಹ ಮೀನುಗಳು ಶಾಂತ ಮನಸ್ಸಿಗೆ ಅತ್ಯಗತ್ಯ. ಇದು ಮೆದುಳಿಗೆ ಸೆಲೆನಿಯಮ್ ಮತ್ತು ಟ್ರಿಪ್ಟೊಫಾನ್ ಒದಗಿಸುವ ಒಮೆಗಾ -3 ಕೊಬ್ಬಿನ ಆಮ್ಲವನ್ನು ಹೊಂದಿರುತ್ತದೆ.

10. ಓಟ್ಸ್
ದೇಹಕ್ಕೆ ಅಗತ್ಯವಿರುವ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಇದು ಪ್ರಯೋಜನಕಾರಿ. ಜೊತೆಗೆ ಓಟ್ಸ್ ಪ್ರಶಾಂತ ಮನಸ್ಸಿನಿಂದ ದಿನ ಕಳೆಯುವಂತೆ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಒಂದು ಉತ್ತಮ ಹಾದಿಯಾಗಿದೆ ಓಟ್ಸ್.

11. ಹಾಲು
ಸಿರೊಟೋನಿನ್ ನ್ನು ಹೆಚ್ಚಿಸುವ ಟ್ರಿಪ್ಟೊಫಾನ್ ಒಳಗೊಂಡಿರುವ ಹಾಲು ಮನಸ್ಸಿನ ಒತ್ತಡ ನಿವಾರಣೆಗೆ ಅತ್ಯಂತ ಅಗತ್ಯ.

12 . ಬ್ರೊಕೋಲಿ
ಆಯಾಸ ಮತ್ತು ಒತ್ತಡ ಕಡಿಮೆಮಾಡುವ ಅಗತ್ಯ ಪೊಟಾಷ್ಯಿಯಂ ಪ್ರಮಾಣವನ್ನು ಪಡೆಯಲು, ಬ್ರೊಕೋಲಿ ತಿನ್ನುವುದು ಅತ್ಯಂತ ಸೂಕ್ತ.

13. ಕಿವಿ ಹಣ್ಣು
ಇದೂ ಸಹ ಮೆದುಳಿನ ಆತಂಕ ತಗ್ಗಿಸುತ್ತದೆ. ಮೆದುಳಿಗೆ ಅಗತ್ಯವಾಗ ಟ್ರಿಪ್ಟೊಫಾನ್ ನ್ನು ಸಿರೊಟೋನಿನ್ ಆಗಿ ಪರಿವರ್ತಿಸಲು ಸಹಾಯಕ.

14. ಬಾಳೆಹಣ್ಣು
ಕಡಿಮೆ ಪ್ರಮಾಣದ ಫೈಬರ್ ಹೊಂದಿರುವ ಗ್ಯಾಸ್ ಸಮಸ್ಯೆಯನ್ನು ತಗ್ಗಿಸುತ್ತದೆ. ಈ ಮೂಲಕ ನೀವು ದಿನವೂ ಶಾಂತ ಮತ್ತು ಒತ್ತಡ ಮುಕ್ತರಾಗಿ ಉಳಿಯಲು ಸಾಧ್ಯ.

15. ಅನ್ನ
ಮನಸ್ಸನ್ನು ಶಾಂತಗೊಳಿಸುವ ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಅಗಾಧವಾಗಿ ಹೊಂದಿರುವ, ಅಕ್ಕಿಯನ್ನು ಜೀರ್ಣಿಸಿಕೊಳ್ಳುವುದು ಸುಲಭ ಮತ್ತು ಕೊಬ್ಬನ್ನು ಕಡಿಮೆ ಕೂಡ ಇದು ಕಡಿಮೆ ಮಾಡುತ್ತದೆ.

ಒತ್ತಡ ಮುಕ್ತ ಜೀವನ
ಈ ಮೇಲೆ ಹೇಳಿದ ಆಹಾರಗಳನ್ನು ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ನಿಯಮಿತವಾಗಿ ಅಳವಡಿಸಿಕೊಂಡರೆ ನೀವು ಒತ್ತಡ ಮುಕ್ತ ಜೀವನವನ್ನು ಕಂಡುಕೊಳ್ಳಲು ಸಾಧ್ಯ. ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನೂ ಕುಡಿಯುವುದು ದೇಹಕ್ಕೆ ಅತ್ಯಂತ ಅಗತ್ಯ. ನಿಮ್ಮ ಆಹಾರ ಕ್ರಮಗಳು ನಿಮ್ಮನ್ನು ಸದಾ ಸಂತೋಷವಾಗಿರಿಸಲಿ!



Click it and Unblock the Notifications