ಕೊಲೆಸ್ಟ್ರಾಲ್ ಬಗ್ಗೆ ನಮ್ಮಲ್ಲಿರುವ ತಪ್ಪು ತಿಳುವಳಿಕೆಗಳಿವು

By Super

ಕೊಲೆಸ್ಟ್ರಾಲ್ ಎಂಬುದನ್ನು ಜನರು ಬಹುತೇಕ ತಪ್ಪಾಗಿ ಅರ್ಥಮಾಡಿಕೊಂಡಿರುವವರೇ ಹೆಚ್ಚು. ದಪ್ಪಗಾದರೆ ಮಾತ್ರ ಕೊಲೆಸ್ಟ್ರಾಲ್ ಬರುತ್ತದೆ, ಕೊಲೆಸ್ಟ್ರಾಲ್ ಗೆ ಮಾತ್ರೆ ಮಾತ್ರ ತೆಗೆದುಕೊಂಡರೆ ಸಾಕು, ಆಹಾರಕ್ರಮದಲ್ಲಿ ವ್ಯತ್ಯಾಸ ಮಾಡಬೇಕಾಗಿಲ್ಲ, ಚಿಕ್ಕ ವಯಸ್ಸಿನಲ್ಲಿ ಕೊಲೆಸ್ಟ್ರಾಲ್ ಬರುವುದಿಲ್ಲ ಹೀಗೆ ಅನೇಕ ಕಲ್ಪನೆಗಳು ನಮ್ಮಲ್ಲಿವೆ. ಈ ಕಲ್ಪನೆಗಳೇ ನಮ್ಮನ್ನು ಕೊಲೆಸ್ಟ್ರಾಲ್ ವಿರುದ್ಧ ಮುನ್ನೆಚ್ಚರಿಕೆಕ್ರಮ ವಹಿಸದಂತೆ ತಡೆಯುತ್ತದೆ. ದಪ್ಪಗಿದ್ದವರಿಗೆ ಮಾತ್ರ ಕೊಲೆಸ್ಟ್ರಾಲ್ ಬರುತ್ತದೆ ಎಂದು ತೆಳ್ಳಗಿನ ವ್ಯಕ್ತಿ ತನ್ನ ಪಾಡಿಗೆ ತಾನು ಚೆಕಪ್ ಮಾಡಿಸದೆ ಇದ್ದು, ಕೊನೆಗೆ ಕೊಲೆಸ್ಟ್ರಾಲ್ ಅಧಿಕವಾದ ಬಳಿಕ ಕಷ್ಟಪಡಬೇಕಾದ ಸ್ಥಿತಿ ಬರಬಹುದು.

ಆದ್ದರಿಂದ ಈ ತಪ್ಪು ಕಲ್ಪನೆಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಕೊಲೆಸ್ಟ್ರಾಲ್ ಬರದಂತೆ ಎಚ್ಚರ ವಹಿಸಲು, ಒಂದು ವೇಳೆ ಬಂದರೆ ಬೇಗನೆ ಕಂಡು ಹಿಡಿಯಲು ಸಹಾಯವಾಗುವುದು. ನಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನು ಸ್ಲೈಡ್ ನಲ್ಲಿ ವಿವರಿಸಿದ್ದೇವೆ ನೋಡಿ:

1: ಕೊಲೆಸ್ಟ್ರಾಲ್ ಮಹಿಳೆಯರಿಗಿಂತ ಪುರುಷರಿಗೆ ಅಧಿಕ

1: ಕೊಲೆಸ್ಟ್ರಾಲ್ ಮಹಿಳೆಯರಿಗಿಂತ ಪುರುಷರಿಗೆ ಅಧಿಕ

ಮಹಿಳೆಯರು ಮದಜನಕ (Estrogen) ಅಂಶವನ್ನು ಹೊಂದಿರುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಸಾಮಾನ್ಯ ಮಟ್ಟದಲ್ಲಿಟ್ಟುಕೊಳ್ಳುವುದಕ್ಕೆ ಸಹಕಾರಿಯಾಗಿದೆ. ಆದಾಗ್ಯೂ ಮೆನೋಪಸ್ ನನಂತರ ಈ ಲಾಭವು ಇರುವುದಿಲ್ಲ. 45 ವರ್ಷಗಳಿಗಿಂತ ಮೇಲ್ಪಟ್ಟ ಪುರುಷರು ಮತ್ತು 55 ವರ್ಷಗಳಿಗಿಂತ ಮೇಲ್ಪಟ್ಟ ಮಹಿಳೆಯರು ಹೆಚ್ಚಳ ಕೊಲೆಸ್ಟ್ರಾಲ್ ನ ಅಪಾಯದಲ್ಲಿರುತ್ತಾರೆ.

2: ಕೊಲೆಸ್ಟ್ರಾಲ್ ಅನುವಂಶೀಯವಾಗಿದ್ದು ನೀವು ಏನೂ ಮಾಡುವಹಾಗಿಲ್ಲ

2: ಕೊಲೆಸ್ಟ್ರಾಲ್ ಅನುವಂಶೀಯವಾಗಿದ್ದು ನೀವು ಏನೂ ಮಾಡುವಹಾಗಿಲ್ಲ

ಈ ಅನುವಂಶೀಯಯ ಪ್ರಭಾವ ಖಂಡಿತವಾಗಿದ್ದರೂ, ಆಹಾರ ಮತ್ತು ಜೀವನಶೈಲಿಗಳ ಆಯ್ಕೆಗಳು ಕೊಲೆಸ್ಟ್ರಾಲಿನ ಮಟ್ಟದಮೇಲೆ ಗಮನಾರ್ಹ ಪ್ರಭಾವ ಬೀರುತ್ತವೆ. ಹೀಗೆ ಕುಟುಂಬದ ಚರಿತ್ರೆಯಲ್ಲಿ ಉನ್ನತ ಕೊಲೆಸ್ಟ್ರಾಲ್ ಇದ್ದರೆ ಪೂರ್ವಭಾಗಿಯಾಗಿ ಕೆಲವು ತಡೆಗಟ್ಟುವ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಮುಂಜಾಗ್ರತೆಯಿಂದ ಅದರ ಮಟ್ಟವನ್ನು ವ್ಯಾಪ್ತಿಯೊಳಗೆ ಉಳಿಸಿಕೊಳ್ಳಬೇಕು.

3: ಕೊಲೆಸ್ಟ್ರಾಲ್ ಮಟ್ಟವನ್ನು ಶಸ್ತ್ರಚಿಕಿತ್ಸೆಯಿಂದ ಯಶಸ್ವಿಯಾಗಿ ಇಳಿಸಬಹುದು

3: ಕೊಲೆಸ್ಟ್ರಾಲ್ ಮಟ್ಟವನ್ನು ಶಸ್ತ್ರಚಿಕಿತ್ಸೆಯಿಂದ ಯಶಸ್ವಿಯಾಗಿ ಇಳಿಸಬಹುದು

ನಿಮ್ಮ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಿದೆ ಎಂದು ತಿಳಿದಾಗ ಅದಕ್ಕೆ ಕಾರಣವನ್ನು ತಿಳಿಯಲು ತನಿಖೆಮಾಡುವುದು ಬಹಳ ಮುಖ್ಯವಾಗಿರುತ್ತದೆ. ಆಗಾಗ್ಗೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸರಿಪಡಿಸಿಕೊಳ್ಳುತ್ತಿದ್ದರೆ, ಅದು ಸಾಮಾನ್ಯ ಮಟ್ಟಕ್ಕೆ ಹಿಂದಿರುಗುವುದು. ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಗೆ ಸಾಮಾನ್ಯ ಕಾರಣಗಳು - ಕಳಪೆ ಆಹಾರ, ಚಟುವಟಿಕೆಯ ಕೊರತೆ, ಸೋಂಕು, ಮಾನಸಿಕ ಮತ್ತು ದೈಹಿಕ(ಶಸ್ತ್ರ ಚಿಕಿತ್ಸೆಯ) ಒತ್ತಡ.

4: ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗಲು ಔಷಧಿ ಮಾತ್ರ ಸಾಕು

4: ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗಲು ಔಷಧಿ ಮಾತ್ರ ಸಾಕು

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡಲು ಕೊಲೆಸ್ಟ್ರಾಲ್ ಔಷಧಿಗಳನ್ನು ತೆಗೆದುಕೊಳ್ಳುವತನಕ ಸಹಕಾರಿಯಾಗಿರುತ್ತವೆ. ಆರೋಗ್ಯಕರ ಆಹಾರ ಮತ್ತು ಉತ್ತಮ ಜೀವನಶೈಲಿಯಿಂದ ಔಷಧಿಗಳ ಪರಿಣಾಮವನ್ನು ಹೆಚ್ಚಿಸಬಹುದು.

5:' 0'mg ಕೊಲೆಸ್ಟ್ರಾಲ್ ಅಂತ ಲೇಬಲ್ ಇರುವ ಆಹಾರ ಮಾತ್ರ ಒಳ್ಳೆಯದು

5:' 0'mg ಕೊಲೆಸ್ಟ್ರಾಲ್ ಅಂತ ಲೇಬಲ್ ಇರುವ ಆಹಾರ ಮಾತ್ರ ಒಳ್ಳೆಯದು

ಪೌಷ್ಟಿಕಾಂಶದ ಲೇಬಲ್ ನಲ್ಲಿ ತೋರುವುದು ಕೇವಲ ಕೊಲೆಸ್ಟ್ರಾಲ್ ಆಹಾರದ ಭಾಗವಾಗಿದ್ದು ಅದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಗಗನಕ್ಕೇರಿಸುವ ಸಂಭವವಿರುತ್ತದೆ. ಪರ್ಯಾಪ್ತ(Saturated) ಕೊಬ್ಬು (ಪ್ರಾಣಿಗಳ ಆಹಾರ ಮತ್ತು ಹೈನುಗಾರಿಕೆ ಉತ್ಪನ್ನದಲ್ಲಿ ಕಂಡುಬರುವ) ಮತ್ತು ಟ್ರಾನ್ಸ್ಫಾಟ್ಸ್(ಪ್ಯಾಕ್ಡ್ ಆಹಾರಗಳಲ್ಲಿ ಕಂಡುಬರುವ ಭಿನ್ನಕಣದ ಕೊಬ್ಬು) ಇವುಗಳು ಕಡಿಮೆ ಸಾಂದ್ರತೆಯ ಲಿಪೋಪ್ರೋಟೀನ್(LDL) ಮೇಲೆ ಆಹಾರ ಕೊಲೆಸ್ಟ್ರಾಲ್ ಗಿಂತ ಅತೀವ ಪ್ರಭಾವ ಕಾಣುತ್ತದೆ.

6: ಮಕ್ಕಳಲ್ಲಿ ಅಧಿಕ ಕೊಲೆಸ್ಟ್ರಾಲ್ ಇರುವುದಿಲ್ಲ

6: ಮಕ್ಕಳಲ್ಲಿ ಅಧಿಕ ಕೊಲೆಸ್ಟ್ರಾಲ್ ಇರುವುದಿಲ್ಲ

ಸಂಶೋಧನೆಗಳ ಪ್ರಕಾರ ಅಪಧಮನಿ (Atherosclerosis) ಅಂದರೆ - ಸಂಕುಚಿತಗೊಳ್ಳುವ ರಕ್ತನಾಳಗಳಿಂದ ಹೃದಯಘಾತವಾಗುವುದು) - ಮಕ್ಕಳಲ್ಲಿ ಎಂಟುವರ್ಷಕ್ಕೆಲ್ಲಾ ಕಂಡುಬರುವ ಸಾಧ್ಯತೆಗಳಿವೆ. ಅಮೇರಿಕನ್ ಅಕಡೆಮಿ ಆಫ್ ಪೀಡಿಯಾಟ್ರಿಕ್ಸ್ (The American Academy of Pediatrics) ಅವರ ಮಕ್ಕಳು ಮತ್ತು ಕೊಲೆಸ್ಟ್ರಾಲ್ ಮಾರ್ಗದರ್ಶನದ ಪ್ರಕಾರ ಯಾವ ಮಕ್ಕಳು ಅಧಿಕ ತೂಕದಿಂದಿದ್ದರೆ ಅವರಿಗೆ ಅಧಿಕ ರಕ್ತದೊತ್ತಡವಿರುತ್ತದೆ ಅಥವಾ ಅವರ ಕುಟುಂಬದ ಚರಿತ್ರೆಯಲ್ಲಿ ಹೃದಯರೋಗವಿದ್ದಲ್ಲಿ ಅಂತಹ ಮಕ್ಕಳು ಎರಡುವರ್ಷವಾಗಿದ್ದಾಗಲೇ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿಕೊಳ್ಳಬೇಕು. ಅಧಿಕ ಕೊಲೆಸ್ಟ್ರಾಲ್ ಇರುವ ಮಕ್ಕಳಿಗೆ ಗರಿಷ್ಟ ಪ್ರಮಾಣದ ಕೊಬ್ಬಿರುವ ಮತ್ತು ಡಯೆಟ್ರಿ ಕೊಲೆಸ್ಟ್ರಾಲ್ ಆಹಾರವನ್ನು ನಿರ್ಬಂಧಿಸಬೇಕು. ಅಂತಹವರಿಗೆ ಹೆಚ್ಚು ವ್ಯಾಯಾಮ ಮಾಡಿಸಬೇಕು.

7: ಕೊಲೆಸ್ಟ್ರಾಲ್ ಯಾವಾಗಲೂ ಒಂದು ಕೆಟ್ಟ ವಿಷಯವಾಗಿದೆ

7: ಕೊಲೆಸ್ಟ್ರಾಲ್ ಯಾವಾಗಲೂ ಒಂದು ಕೆಟ್ಟ ವಿಷಯವಾಗಿದೆ

ಸಾಮಾನ್ಯವಾಗಿ ಜನರು "ಕೊಲೆಸ್ಟ್ರಾಲ್" ಎಂಬ ಪದವನ್ನು ಕೇಳಿದ ತಕ್ಷಣ ಅವರು ಅದೊಂದು "ಕೆಟ್ಟ" ವಿಷಯವೆಂದು ಭಾವಿಸುತ್ತಾರೆ. ವಾಸ್ತವಾಗಿ ಅದೊಂದು ಜಟಿಲ ವಿಷಯ. ಉನ್ನತ ಕೊಲೆಸ್ಟ್ರಾಲ್ ಆಗಿದ್ದರೆ ಬಹಳ ಅಪಾಯಕಾರಿಯಗಬಹುದು, ಕೊಲೆಸ್ಟ್ರಾಲ್ ಸ್ವತಃ ಮೆದುಳಿನಲ್ಲಿರುವ ನರಕೋಶಗಳನ್ನು ರಕ್ಷಿಸಿ ಜೀವಕೋಶದ ಒಳಪೊರೆಗಳ ಆಧಾರಕ್ಕೆ ಮತ್ತು ಇತರ ಅಗತ್ಯ ವಿವಿಧ ದೈಹಿಕ ಪ್ರಕ್ರಿಯೆಗಳಿಗೆ ಬಹು ಮುಖ್ಯವಾಗಿ ಬೇಕಾಗಿದೆ. ಹೃದಯಸಂಬಂಧ ರೋಗದಲ್ಲಿ ಕೊಲೆಸ್ಟ್ರಾಲ್ ನ ಪಾತ್ರವನ್ನು ಸಾಮಾನ್ಯವಾಗಿ ಜನರು ತಪ್ಪಾಗಿ ತಿಳಿದಿದ್ದಾರೆ. ರಕ್ತದ ಹರಿವಿನಲ್ಲಿ ರಕ್ತನಾಳದ ಮೂಲಕ ಕಡಿಮೆ ಸಾಂದ್ರತೆ ಮತ್ತು ಹೆಚ್ಚಿನ ಸಾಂದ್ರತೆಯ (LDL & HDL) ಲಿಪೋಪ್ರೋಟೀನ್ನ್ ಗಳು ಕೊಲೆಸ್ಟ್ರಾಲ್ ಅನ್ನು ಸಾಗಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಆದ LDLನಿಂದ ಅಪಧಮನಿ (Atherosclerosis) ಕಾರಣವಾಗಿದ್ದು, ಹರಿದು ಬರುವ ಕೊಲೆಸ್ಟ್ರಾಲ್ ನಿಂದಲ್ಲ.

8: ಕಡಿಮೆ ಕೊಲೆಸ್ಟ್ರಾಲ್ ಉತ್ತಮ ಆರೋಗ್ಯದ ಲಕ್ಷಣ

8: ಕಡಿಮೆ ಕೊಲೆಸ್ಟ್ರಾಲ್ ಉತ್ತಮ ಆರೋಗ್ಯದ ಲಕ್ಷಣ

ಕಡಿಮೆ ಕೊಲೆಸ್ಟ್ರಾಲ್ ಸಾಮಾನ್ಯವಾಗಿ ಆರೋಗ್ಯಕರವಾಗಿದ್ದರೂ ಒಂದು ಹೊಸ ಅಧ್ಯಯನದ ಪ್ರಕಾರ ಕ್ಯಾನ್ಸರ್ ಗೆ ಈಡಾಗುವ ಜನರಲ್ಲಿ ರೋಗನಿರ್ಣಯದ ಮೊದಲು ವಿಶಿಷ್ಟವಾಗಿ ಕಡಿಮೆ ಮಟ್ಟದ ಕೊಲೆಸ್ಟ್ರಾಲ್ ಇರುವುದೆಂದು ವರದಿಯಾಗಿದೆ. ಕಡಿಮೆ ಕೊಲೆಸ್ಟ್ರಾಲ್ ಇರುವ ಜನರು ಹಲವಾರು ಸೋಂಕುಗಳಿಗೆ ಒಳಗಾಗಿ ಬಹಳಕಾಲ ಬಳಲುತ್ತಾರೆ ಮತ್ತು ಸೋಂಕಿನಿಂದಾಗಿ ಸಾಯುವ ಸಾಧ್ಯತೆಯೂ ಹೆಚ್ಚು.

9: ಕೊಲೆಸ್ಟ್ರಾಲ್ ಗೆ ಲಕ್ಷಣಗಳಿರುವುದಿಲ್ಲ

9: ಕೊಲೆಸ್ಟ್ರಾಲ್ ಗೆ ಲಕ್ಷಣಗಳಿರುವುದಿಲ್ಲ

ಅಧಿಕ ಕೊಲೆಸ್ಟ್ರಾಲ್ ಇರುವ ಕೆಲವು ಜನರಿಗೆ ಎಕ್ಸಾಂತೋಮಾಸ್ (Exanthemas) ಎಂಬ ಹೆಸರಿನ ಹಳದಿ ಮಿಶ್ರಿತ ಉಬ್ಬುಗಳು ಕಣ್ಣಿನ ರೆಪ್ಪೆಗಳು, ಕೀಲುಗಳು, ಕೈ ಅಥವಾ ದೇಹದ ಇತರ ಭಾಗಗಳ ಮೇಲೆ ಕಾಣಬಹುದು. ಮಧುಮೇಹ ಇರುವ ಜನರಿಗೆ ಅಥವ ಕೌಟುಂಬಿಕ ಹೈಪರ್ಕೊಲೆಸ್ಟಾರೋಲೆಮಿಯ (Familial Hypercholesterolemia) ಅನುವಂಶಿಕ ಸ್ಥಿತಿಯಲ್ಲಿರುವವರಿಗೆ ಎಕ್ಸಾಂತೋಮಾಸ್ ಹೊಂದುವ ಸಾಧ್ಯತೆ ಹೆಚ್ಚು. ನಿಮಗೆ ಕೊಲೆಸ್ಟ್ರಾಲ್ ಮಟ್ಟವು ಅತಿ ಹೆಚ್ಚು ಇದೆಯೆಂದು ಅತ್ಯುತ್ತಮರೀತಿಯಲ್ಲಿ ಹೇಳಬೇಕಾದರೆ ಮೂರುವರ್ಷಕ್ಕೊಮ್ಮೆ ಪರೀಕ್ಷೆಮಾಡಿಸಿಕೊಳ್ಳುವುದು.

 ಕೊಲೆಸ್ಟ್ರಾಲ್ ಕಡಿಮೆಯಾದ ಬಳಿಕ ಔಷಧಿ ಬೇಕಾಗಿಲ್ಲ

ಕೊಲೆಸ್ಟ್ರಾಲ್ ಕಡಿಮೆಯಾದ ಬಳಿಕ ಔಷಧಿ ಬೇಕಾಗಿಲ್ಲ

ನೀವು ಕೊಲೆಸ್ಟ್ರಾಲ್ ಔಷಧಿಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಮೊದಲಿದ್ದ ಮಟ್ಟಕ್ಕೆ ಪುನಃ ಬರುವ ಸಾಧ್ಯತೆಯಿದೆ. ನಿಮ್ಮ ಕೊಲೆಸ್ಟ್ರಾಲ್ ಮಟ್ಟವು ಕೆಳಗಿಳಿದಾಗ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಹೊಡೆತದ ಅಪಾಯ ಕಮ್ಮಿಯಾಗುತ್ತದೆ. ಅಧಿಕ ಕೊಲೆಸ್ಟ್ರಾಲಿಗೆ ಯಾವ "ಚಿಕಿತ್ಸೆ" ಇಲ್ಲದಿದ್ದಾಗ್ಯೂ, ಕಡಿಮೆಮಾಡಬಹುದು. ಕೊಲೆಸ್ಟ್ರಾಲ್ ಅನ್ನು ಯಶಸ್ವೀಯಾಗಿ ನಿರ್ವಹಿಸಲು ನೀವು ಜೀವನಪರ್ಯಂತ ನಿಮ್ಮ ಔಷಧಿಯನ್ನು ಪ್ರತಿದಿನವೂ ತೆಗೆದುಕೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

11: ತೆಳ್ಳಗಿರುವ ಜನರಿಗೆ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇಲ್ಲ

11: ತೆಳ್ಳಗಿರುವ ಜನರಿಗೆ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇಲ್ಲ

ತೆಳ್ಳಗಿರುವವರು, ಅಧಿಕ ತೂಕ ಇರುವವರು, ಅಥವ ಇವರಿಬ್ಬರ ನಡುವೆ ಇರುವವರು, ಎಲ್ಲರೂ ಆಗಾಗ್ಗೆ ನಿಯಮಿತವಾಗಿ ತಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸುತ್ತಿರಬೇಕು. ಅಧಿಕ ತೂಕವಿರುವ ಜನರು ತುಂಬಾ ಕೊಬ್ಬಿನ ಆಹಾರತಿನ್ನುವ ಪ್ರವೃತ್ತಿ ಹೊಂದಿರುತ್ತಾರೆ ಮತ್ತು ಯಾರಿಗೆ ಸುಲಭವಾಗಿ ತೂಕ ಹೆಚ್ಚಾಗುವುದಿಲ್ಲವೋ ಅಂತಹವರು ತಾವು ತಿನ್ನುವ ಪರ್ಯಾಪ್ತ (Saturated) ಆಹಾರದ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.

12:Margarine ಬಳಸುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು

12:Margarine ಬಳಸುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು

ಕೃತಕ ಬೆಣ್ಣೆಯಲ್ಲಿ, ಬೆಣ್ಣೆಯಲ್ಲಿರುವಂತೆಯೇ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿರುತ್ತದೆ ಮತ್ತು ನೀವು ಎಲ್ಲಾ ಕೊಬ್ಬಿರುವ ಆಹಾರಗಳನ್ನು ಮಿತವಾಗಿ ತಿನ್ನಬೇಕು. ಬಹುತೇಕ ಕೃತಕ ಬೆಣ್ಣೆ(Margarine)ಯಲ್ಲಿ ಪರ್ಯಾಪ್ತ (Saturated) ಕೊಬ್ಬುಇರುವುದು ಒಂದು ಪ್ರಮುಖ ಅಂಶವಾಗಿದೆ. ದ್ರವ ರೂಪದಲ್ಲಿರುವ ತರಕಾರಿ ತೈಲದಲ್ಲಿ(Hydrogenated Vegetable Oil) ಭಿನ್ನಕಣದ ಕೊಬ್ಬು(Trans-fat) ಇಲ್ಲದಿರುವುದರಿಂದ ಅದನ್ನು ಉಪಯೋಗಿಸುವುದು ಒಳ್ಳೆಯ ಆಯ್ಕೆ.

13: ಮಧ್ಯವಯಸ್ಕರಾಗುವತನಕ ಕೊಲೆಸ್ಟ್ರಾಲ್ ಬರುವುದಿಲ್ಲ

13: ಮಧ್ಯವಯಸ್ಕರಾಗುವತನಕ ಕೊಲೆಸ್ಟ್ರಾಲ್ ಬರುವುದಿಲ್ಲ

ಮಕ್ಕಳು ಸಹ, ವಿಶೇಷವಾಗಿ ಕುಟುಂಬದ ಚರಿತ್ರೆಯಲ್ಲಿ ಹೃದಯರೋಗವಿದ್ದರೆ, ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುತ್ತಾರೆ. ಕೊಲೆಸ್ಟ್ರಾಲ್ ಮಟ್ಟವನ್ನು ಚಿಕ್ಕವಯಸ್ಸಿನಿಂದಲೇ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

14: ಆಹಾರದಿಂದಲೇ ಎಲ್ಲಾ ಕೊಲೆಸ್ಟ್ರಾಲ್ ಬರುತ್ತದೆ

14: ಆಹಾರದಿಂದಲೇ ಎಲ್ಲಾ ಕೊಲೆಸ್ಟ್ರಾಲ್ ಬರುತ್ತದೆ

ನಿಮ್ಮೊಳಗಿರುವ ಬಹುತೇಕ ಕೊಲೆಸ್ಟ್ರಾಲ್ ನೀವು ತಿನ್ನುವ ಆಹಾರದಿಂದ ಬರುವುದಿಲ್ಲ, ಆದರೆ ನಿಮ್ಮ ದೇಹದ ಸ್ವಾಭಾವಿಕ ಕಾರ್ಯಾಚರಣೆಗಳಿಂದ ಬರುತ್ತದೆ.

X
Desktop Bottom Promotion