ನಿಂಬೆ ಹಣ್ಣಿನ 13 ಚಮತ್ಕಾರಿಕ ಚಿಕಿತ್ಸಾ ಗುಣಗಳು

ನಿಂಬೆ ಹಣ್ಣನ್ನು ನಮ್ಮ ದಿನನಿತ್ಯ ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತೇವೆ, ಇದರ ಆರೋಗ್ಯಕರ ಗುಣಗಳ ಬಗ್ಗೆ ಅಲ್ಪ ಸ್ವಲ್ಪ ತಿಳುವಳಿಕೆಯೂ ನಮ್ಮಲ್ಲಿ ಇದೆ. ಬಸ್ಸಿನಲ್ಲಿ ಹೋಗುವಾಗ ವಾಂತಿ ಬರದಿರಲೆಂದು ನಿಂಬೆ ಹಣ್ಣನ್ನು ಬ್ಯಾಗ್ ನಲ್ಲಿ ಹಾಕಿ ಕೊಂಡೊಯ್ಯುತ್ತೇವೆ. ತುಂಬಾ ಸುಸ್ತಾಗ ಒಂದು ನಿಂಬೆ ಜ್ಯೂಸ್ ಕುಡಿದರೆ ರಿಫ್ರೆಶ್ ಆಗುವುದೆಂದೂ ನಮಗೆ ಗೊತ್ತು, ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ತೆಳ್ಳಗಿನ ಮೈ ಮಾಟ ಪಡೆಯಬಹುದೆಂದೂ ಗೊತ್ತು.

ಆದರೆ ಆ ಗುಣಗಳಲ್ಲದೆ ಮಧುಮೇಹ, ಕ್ಯಾನ್ಸರ್, ಕರುಳಿನ ಸಮಸ್ಯೆಯಂತಹಾ ದೊಡ್ಡ-ದೊಡ್ಡ ಕಾಯಿಲೆಯನ್ನು ಬರದಂತೆ ತಪ್ಪಿಸುವ ಗುಣ ನಿಂಬೆ ಹಣ್ಣಿಗಿದೆ ಅನ್ನುವುದು ಗೊತ್ತೆ? ಇಲ್ಲ ಅಂದರೆ ಈ ಲೇಖನದತ್ತ ಕಣ್ಣಾಡಿಸಿ.

ನಿoಬೆ ಹಣ್ಣಿನ 13 ಚಮತ್ಕಾರಿಕ ಚಿಕಿತ್ಸಾ ಗುಣಗಳ ಬಗ್ಗೆ ತಿಳಿಯಲು ಸ್ಲೈಡ್ ನೋಡಿ:

ದೊಡ್ಡ ಕರುಳನ್ನು ಸ್ವಚ್ಚಗೊಳಿಸುತ್ತದೆ

ದೊಡ್ಡ ಕರುಳನ್ನು ಸ್ವಚ್ಚಗೊಳಿಸುತ್ತದೆ

ನಿಂಬೆ ಹಣ್ಣಿನ ಕಡು ರುಚಿಯು, ಆ ಹಣ್ಣಿಗೆ peristalsis ಅರ್ಥಾತ್ ಕರುಳಿನಲ್ಲಿ ತ್ಯಾಜ್ಯದ ಸುಲಭ ಚಲನೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ. ಇದರಿಂದ ದೊಡ್ಡ ಕರುಳಿನಿಂದ ತ್ಯಾಜ್ಯದ ನಿವಾರಣೆಯು ಸರಾಗವಾಗಿ ಆಗುತ್ತದೆ ಹಾಗೂ ಈ ಕ್ರಿಯೆಯು ನಿಯಮಿತಗೊಳ್ಳುತ್ತದೆ. ಒಂದು ನಿಂಬೆ ಹಣ್ಣಿನ ರಸವನ್ನು ಬಿಸಿ ನೀರಿನೊoದಿಗೆ ಸೇರಿಸಿ ಪ್ರತಿದಿನ ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಸೇವಿಸಿರಿ.

ಕ್ಯಾನ್ಸರ್

ಕ್ಯಾನ್ಸರ್

ನಿಂಬೆ ಹಣ್ಣು, limonene ಅನ್ನೂ ಒಳಗೊಂಡಂತೆ ಸುಮಾರು 22 ಕ್ಯಾನ್ಸರ್ ಪ್ರತಿಬಂಧಕ ಸಂಯುಕ್ತಗಳನ್ನು ಒಳಗೊಂಡಿದೆ. limonene ಒಂದು ಪ್ರಾಕೃತಿಕ ತೈಲವಾಗಿದ್ದು ಇದು ಪ್ರಾಣಿಗಳಲ್ಲಿ ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತದೆ ಅಥವಾ ನಿಧಾನಗೊಳಿಸುತ್ತದೆ. ನಿಂಬೆ ಹಣ್ಣುಗಳಲ್ಲಿ flavonol glycosides ಎಂಬ ರಾಸಾಯನಿಕವಿದ್ದು, ಇದು ಕ್ಯಾನ್ಸರ್ ಕೋಶಗಳ ವಿಭಜನೆಯನ್ನು ತಡೆಗಟ್ಟುತ್ತದೆ.

ನೆಗಡಿ ಮತ್ತು ಫ್ಲೂ

ನೆಗಡಿ ಮತ್ತು ಫ್ಲೂ

ನಿಂಬೆ ಹಣ್ಣು ವಿಟಮಿನ್ C ಮತ್ತು flavanoid ಗಳಿಂದ ಸಮೃಧ್ಧವಾಗಿದ್ದು, ಇವುಗಳ ಸಂಯೋಜನೆಯು ಸೋoಕಿನ ವಿರುದ್ದ ರಾಮಬಾಣದಂತೆ ಕೆಲಸ ಮಾಡುತ್ತದೆ.

ಲಿವರ್

ಲಿವರ್

ದೊಡ್ಡ ಲೋಟದಲ್ಲಿ, ತಾಜಾ ನಿಂಬೆ ರಸವನ್ನು ಬೆರೆಸಿದ ನೀರನ್ನು ಬೆಳಗ್ಗೆ ಎದ್ದ ಕೂಡಲೇ ಸೇವಿಸುವುದು ಒಂದು ಲಿವರ್ ನ ಆರೋಗ್ಯ ಕಾಪಾಡಬಹುದು.

ಪೋಷಕಾಂಶ

ಪೋಷಕಾಂಶ

ನಿಂಬೆ ಹಣ್ಣುಗಳು ವಿಟಮಿನ್ C, ಸಿಟ್ರಿಕ್ ಆಮ್ಲ, flavanoid ಗಳು, B - ಕಾಂಪ್ಲೆಕ್ಸ್ ವಿಟಮಿನ್ ಗಳು ಕ್ಯಾಲ್ಸಿಯಂ, ತಾಮ್ರ, ಕಬ್ಬಿಣ, ಮೆಗ್ನೀಷಿಯಂ, ರಂಜಕ, ಪೊಟಾಷ್ಯಿಯಂ ಹಾಗೂ ನಾರಿನಂಶವನ್ನು ಒಳಗೊಂಡಿವೆ.

ದೇಹದ ರಾಸಾಯನಿಕಗಳ ಸಮತೋಲನವನ್ನು ಕಾಪಾಡುತ್ತವೆ

ದೇಹದ ರಾಸಾಯನಿಕಗಳ ಸಮತೋಲನವನ್ನು ಕಾಪಾಡುತ್ತವೆ

ನಿಂಬೆ ಹಣ್ಣುಗಳು ಆಮ್ಲೀಯವಾಗಿದ್ದು, ಅವು ದೇಹದ ಪಚನ ಕ್ರಿಯೆಯಲ್ಲಿ ಪಾತ್ರವಹಿಸುತ್ತವೆ ಹಾಗೂ ದೇಹದ ವಿವಿಧ ದ್ರವಗಳ ಮೇಲೆ ಪ್ರತ್ಯಾಮ್ಲೀಯ ಪರಿಣಾಮವನ್ನು ಉಂಟು ಮಾಡುತ್ತವೆ ಹಾಗೂ ತನ್ಮೂಲಕ ದೇಹದ pH ಮಟ್ಟವನ್ನು ಕಾಪಾಡುತ್ತವೆ.

ಅಲರ್ಜಿ

ಅಲರ್ಜಿ

ನಿಂಬೆ ಹಣ್ಣುಗಳು phytonutrient hesperetin ಅನ್ನು ಒಳಗೊಂಡಿದ್ದು, ಇವು ಅಲರ್ಜಿಯ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ.

ಮಿದುಳು ಹಾಗೂ ನರಸಂಬಂಧಿ ರೋಗಗಳು

ಮಿದುಳು ಹಾಗೂ ನರಸಂಬಂಧಿ ರೋಗಗಳು

ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಪರಿಣಾಮಕಾರಿಯಾದ phytonutrient tangeretin ಇರುವುದರಿಂದ, ನಿಂಬೆ ಹಣ್ಣುಗಳು ಮಿದುಳಿಗೆ ಸಂಬoಧಿಸಿದ ದೋಷಗಳಾದ Parkinson ನಂತಹ ಕಾಯಿಲೆಗಳಿಗೆ ಬಹಳ ಪರಿಣಾಮಕಾರಿಯಾಗಿದೆ.

ಕಣ್ಣಿನ ವ್ಯಾಧಿಗಳು

ಕಣ್ಣಿನ ವ್ಯಾಧಿಗಳು

ನಿಂಬೆ ಹಣ್ಣುಗಳಲ್ಲಿರುವ Rutin ಎಂಬ ಅಂಶವು, diabetic retinopathy ಯನ್ನೂ ಒಳಗೊಂಡಂತೆ ಅನೇಕ ಕಣ್ಣಿನ ರೋಗಗಳನ್ನು ನಿವಾರಿಸುತ್ತದೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ.

ವೈರಾಣುಗಳ ವೈರಿ

ವೈರಾಣುಗಳ ವೈರಿ

ನಿಂಬೆ ಹಣ್ಣುಗಳು ನೆಗಡಿ ಮತ್ತು ಫ್ಲೂ ಸಂಬಂಧಿ ವೈರಣುಗಳ ವಿರುದ್ದ ಕೆಲಸ ಮಾಡುವುದರ ಜೊತೆಗೆ, ಅವುಗಳಲ್ಲಿರುವ terpene limonoids ಎಂಬ ರಾಸಾಯನಿಕವು ಇತರೆ ವೈರಾಣುಗಳ ಮೇಲೂ ಸಹ ಪ್ರತಿಬಂಧಕವಾಗಿ ಕಾರ್ಯನಿರ್ವಹಿಸುತ್ತದೆ.

ಡಯಾಬಿಟಿಸ್ (ಮಧುಮೇಹ)

ಡಯಾಬಿಟಿಸ್ (ಮಧುಮೇಹ)

ಮಧುಮೇಹ ಸಂಬಂಧಿ ಕಣ್ಣಿನ ರೋಗಗಳನ್ನು ನಿವಾರಿಸುವುದರೊಂದಿಗೆ, ನಿಂಬೆ ಹಣ್ಣಿನಲ್ಲಿರುವ hesperetin ಎಂಬ ರಾಸಾಯನಿಕವು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಸಹ ಕಡಿಮೆ ಮಾಡುತ್ತದೆ (ಸಕ್ಕರೆಯ ಪ್ರಮಾಣವು ರಕ್ತದಲ್ಲಿ ಹೆಚ್ಚು ಇದ್ದಾಗ).

ಪ್ಲೀಹ (gallbladder) ಮತ್ತು ಕಿಡ್ನಿಯ ಕಲ್ಲುಗಳು

ಪ್ಲೀಹ (gallbladder) ಮತ್ತು ಕಿಡ್ನಿಯ ಕಲ್ಲುಗಳು

ನಿಂಬೆ ಹಣ್ಣಿನಲ್ಲಿರುವ ಸಿಟ್ರಿಕ್ ಅಮ್ಲವು ಪ್ಲೀಹದಲ್ಲಿರುವ ಕಲ್ಲುಗಳು, ಕಿಡ್ನಿಯ ಕಲ್ಲುಗಳು, ಹಾಗೂ ಕ್ಯಾಲ್ಸಿಯಂನ ಸಂಚಯನಗಳನ್ನು (ಕ್ಯಾಲ್ಸಿಯಂ deposits) ಕರಗಿಸಿ ನಿವಾರಿಸುತ್ತವೆ.

ತಾರುಣ್ಯವನ್ನು ಕಾಪಾಡುತ್ತದೆ

ತಾರುಣ್ಯವನ್ನು ಕಾಪಾಡುತ್ತದೆ

ನಿಂಬೆ ಹಣ್ಣಿನಲ್ಲಿರುವ ವಿಟಮಿನ್ C, ದೇಹದ ಮುಕ್ತ radicals (free radicals) ಗಳನ್ನು ತಟಸ್ಥಗೊಳಿಸುತ್ತವೆ ಹಾಗೂ ತನ್ಮೂಲಕ ಮುಪ್ಪಿನ ಪ್ರಕ್ರಿಯೆಗಳನ್ನು ಮುoದೂಡುತ್ತದೆ ಹಾಗೂ ಅನೇಕ ರೋಗಗಳನ್ನು ತಡೆಗಟ್ಟುತ್ತವೆ.

X
Desktop Bottom Promotion