Latest Updates
-
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ!
ಲಿವರ್ ಕ್ಲೆನ್ಸ್ ಮಾಡುವ 13 ಸೂಪರ್ ಆಹಾರಗಳು
ಲಿವರ್ ಪ್ರಾಬ್ಲಮ್ ಬಂದ ಮೇಲೆ ಕಷ್ಟ ಪಡುವ ಬದಲು, ಬರುವ ಮೊದಲೇ ಅದರ ಬಗ್ಗೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಲಿವರ್ ಅಥವಾ ಯಕೃತ್ತ್ ಗೆ ಹಾನಿಯಾದರೆ ಅನಾರೋಗ್ಯ ಉಂಟಾಗಿ ಜೀವಕ್ಕೆ ಅಪಾಯ ಉಂಟಾಗಬಹುದು. ಮದ್ಯಪಾನ, ಅಧಿಕ ಕೊಬ್ಬಿನಂಶವಿರುವ ಆಹಾರಕ್ರಮ ಪಾಲಿಸುವುದರಿಂದ ಲಿವರ್ ಹಾನಿಗೊಳಗಾಗುತ್ತದೆ.
ಲಿವರ್ ಕ್ಲೆನ್ಸಿಂಗ್ ಆಹಾರಗಳನ್ನು ತಿಂದರೆ ಲಿವರ್ ನ ಆರೋಗ್ಯವನ್ನು ಹೆಚ್ಚಿಸಬಹುದು. ಲಿವರ್ ಕ್ಲೆನ್ಸಿಂಗ್ ಆಹಾರಗಳನ್ನು ತಿಂದು ಮದ್ಯಪಾನ ಮಾಡಿದರೆ ಈ ಆಹಾರಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ಲಿವರ್ ನಲ್ಲಿ ಏನಾದರೂ ಸಮಸ್ಯೆ ಕಂಡು ಬಂದರೆ ಈ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ಲಿವರ್ ತನ್ನ ಕಾರ್ಯವನ್ನು ಸರಿಯಾದ ರೀತಿಯಲ್ಲಿ ಮಾಡುವಲ್ಲಿ ಈ ಆಹಾರಗಳು ಸಹಾಯ ಮಾಡುತ್ತವೆ.
ಲಿವರ್ ಕ್ಲೆನ್ಸಿಂಗ್ ಮಾಡುವ 13 ಆಹಾರಗಳ ಪಟ್ಟಿ ನೋಡಿ ಇಲ್ಲಿದೆ:

1. ದವಸ ಧಾನ್ಯಗಳು
ಲಿವರ್ ನಲ್ಲಿ ಕೊಬ್ಬಿನಂಶದ ಪದರ ನಿಲ್ಲುತ್ತಾ ಬಂದರೆ ಕ್ರಮೇಣ ಲಿವರ್ ಗೆ ತನ್ನ ಕಾರ್ಯವನ್ನು ನಿರ್ವಹಿಸಲು ಕಷ್ಟವಾಗುತ್ತದೆ. ದವಸ ಧಾನ್ಯಗಳನ್ನು ತಿನ್ನುವುದರಿಂದ ಇದರಲ್ಲಿರುವ ವಿಟಮಿನ್ ಬಿ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡಿ, ದೇಹದಲ್ಲಿ ಕೊಬ್ಬಿನಂಶ ನಿಲ್ಲದಂತೆ ನೋಡಿಕೊಳ್ಳುತ್ತದೆ.

2. ಆಲೀವ್ ಎಣ್ಣೆ
ಒಮೆಗಾ 3 ಕೊಬ್ಬಿನಂಶವೂ ಲಿವರ್ ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಒಮೆಗಾ 3 ಆಲೀವ್ ಎಣ್ಣೆಯಲ್ಲಿರುವುದರಿಂದ ಲಿವರ್ ಸಮಸ್ಯೆ ಇರುವವರು ಇದನ್ನು ಬಳಸಿ ಲಿವರ್ ನ ಆರೋಗ್ಯವನ್ನು ಹೆಚ್ಚಿಸಬಹುದು.

3. ಬೆಳ್ಳುಳ್ಳಿ
ಬೆಳ್ಳುಳ್ಲಿಯಲ್ಲಿ allicin ಮತ್ತು selenium ಅಂಶವಿದ್ದು ಇದು ಅತ್ಯುತ್ತಮವಾದ ಲಿವರ್ ಕ್ಲೆನ್ಸಿಂಗ್ ಆಹಾರವಾಗಿದೆ.

4. ಸೇಬು
ಸೇಬಿನಲ್ಲಿ ಪೆಕ್ಟಿನ್ ಅಂಶವಿದ್ದು ಇದು ಲಿವರ್ ನಲ್ಲಿ ಕಶ್ಮಲಗಳನ್ನು ಹೋಗಲಾಡಿಸಿ, ಲಿವರ್ ನ ಆರೋಗ್ಯ ಹೆಚ್ಚಿಸಲು ಸಹಕಾರಿಯಾಗಿದೆ.

5. ಬ್ರೊಕೋಲಿ
ಹೂಕೋಸು, ಬ್ರೊಕೋಲಿ ಈ ರೀತಿಯ ಆಹಾರ ಪದಾರ್ಥಗಳಲ್ಲಿ glucosinolate ಅಂಶವಿದ್ದು ಇದು ಲಿವರ್ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.

6. ಬೀಟ್ ರೂಟ್
ಇದರಲ್ಲಿ ಫ್ಲೇವೋನೈಡ್ ಅಂಶ ಅಧಿಕವಿದ್ದು ಇದು ಲಿವರ್ enzymes ಅನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿ ಮಾಡುವಂತೆ ಮಾಡುತ್ತದೆ. ಲಿವರ್ ನ ಆರೋಗ್ಯಕ್ಕೆ enzymes ಕೂಡ ಪ್ರಮುಖವಾದ ಅಂಶ.

7. ಬೆಣ್ಣೆ ಹಣ್ಣು
ಬೆಣ್ಣೆ ಹಣ್ಣಿನಲ್ಲಿ glutathione ಇದ್ದು, ಇದು ಲಿವರ್ ಅನ್ನು ಕ್ಲೀನ್ ಮಾಡಿ ಅದರ ಆರೋಗ್ಯವನ್ನು ಹೆಚ್ಚಿಸುತ್ತದೆ.

8. ಹಸಿರು ತರಕಾರಿಗಳು
ಹಸಿರು ಬಣ್ಣವಿರುವ ಎಲ್ಲಾ ತರಕಾರಿಗಳು ಲಿವರ್ ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಸಿರು ತರಕಾರಿಗಳಲ್ಲಿ ಕ್ಲೋರೋಫೈಲ್ ಅಂಶವಿದ್ದು ಇದು ಲಿವರ್ ನಲ್ಲಿ ಕಶ್ಮಲಗಳನ್ನು ಹೀರಿಕೊಂಡು ಲಿವರ್ ನ ಆರೋಗ್ಯವನ್ನು ವೃದ್ಧಿಸುತ್ತದೆ.

9. ಗ್ರೇಪ್ ಫ್ರೂಟ್ ಮತ್ತು ನಿಂಬೆ ಹಣ್ಣು
ಆಹಾರದಲ್ಲಿ ವಿಟಮಿನ್ ಸಿ ಅಂಶವಿದ್ದರೆ ಲಿವರ್ ತನ್ನಷ್ಟಕ್ಕೆ ಡಿಟಾಕ್ಸ್ ಮಾಡಿಕೊಳ್ಳುತ್ತದೆ. ಪ್ರತಿದಿನ ವಿಟಮಿನ್ ಸಿ ಇರುವ ಆಹಾರ ನಿಮ್ಮ ಆಹಾರಕ್ರಮದಲ್ಲಿದ್ದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

10. ಕೊತ್ತಂಬರಿ
ಕೊತ್ತಂಬರಿ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಇದು ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತದೆ, ಲಿವರ್ ನ ಆರೋಗ್ಯಕ್ಕೂ ಒಳ್ಳೆಯದು.

11. ಅರಿಶಿಣ
ಅರಿಶಿಣವನ್ನು ಸಾರು ಮಾಡುವಾಗ ಹಾಕಿದರೆ ಇದು ಸಾರಿಗೆ ಬಣ್ಣ ಮತ್ತು ರುಚಿ ನೀಡುವುದಷ್ಟೇ ಅಲ್ಲ, ಇದು ಲಿವರ್ ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

12. ವಾಲ್ ನಟ್ಸ್
ಲಿವರ್ ನಲ್ಲಿ ಅಮೋನಿಯದಿಂದಾಗಿ ಕಶ್ಮಲ ಉಂಟಾಗಿ ಲಿವರ್ ನ ಆರೋಗ್ಯ ಹಾನಿಯುಂಟಾಗುತ್ತದೆ. ವಾಲ್ ನಟ್ಸ್ ನಲ್ಲಿ ಅಮೋನಿಯ ಆಸಿಡ್ ಇದ್ದು ಇದು ಲಿವರ್ ನಲ್ಲಿರುವ ಅಮೋನಿಯಂ ಅನ್ನು ಹೋಗಲಾಡಿಸುತ್ತದೆ.

13. ಗ್ರೀನ್ ಟೀ
ಇದು ದೇಹದಲ್ಲಿರುವ ಅಧಿಕ ಕೊಬ್ಬನ್ನು ಕರಗಿಸುವುದು ಮಾತ್ರವಲ್ಲದೆ ಇದರಲ್ಲಿರುವ antioxidants ಲಿವರ್ ನ ಆರೋಗ್ಯವನ್ನು ಕಾಪಾಡುತ್ತದೆ.



Click it and Unblock the Notifications