Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ಈ ಆರೋಗ್ಯಕರ ಆಹಾರಗಳು ಅನಾರೋಗ್ಯ ತರುವುದು!
ಸಾವಧಾನವು ಅವಸರದ ಬೆನ್ನೇರಿರುವ ಈ ಕಾಲದಲ್ಲಿ ಅಡುಗೆ ಮನೆ, ಅಡುಗೆ, ಊಟ-ತಿಂಡಿಗಳು, ಅವುಗಳನ್ನು ತಯಾರಿಸುವ ಹಾಗೂ ತಿನ್ನುವ ವಿಧಾನ ಎಲ್ಲವೂ ಬದಲಾಗಿದೆ. ಫಾಸ್ಟ್ ಫುಡ್ಸ್, ರೆಡಿ ಟು ಈಟ್ ನಮ್ಮ ದೈನಂದಿನ ಬದುಕಿನ ಭಾಗವಾಗಿಬಿಟ್ಟಿವೆ. ವಿರಾಮದಲ್ಲಿ ತಯಾರಿಸಿ, ಆರಾಮದಲ್ಲಿ ತಿನ್ನಲು ನಮಗೀಗ ಸಮಯವಿಲ್ಲ. ಒಂದೆಡೆ ಸಮಯದ ಅಭಾವ ಮತ್ತೊಂದೆಡೆ ಆರೋಗ್ಯದ ಕಾಳಜಿ ಎರಡೂ ಇಂದಿನ ಆಹಾರ ಮಾರುಕಟ್ಟೆಯ ಲಾಭಕ್ಕೆ ಸರಕುಗಳಾಗಿವೆ. ಅವರು ಕೊಟ್ಟಿದ್ದನ್ನು ನಾವಿಂದು ಪರೀಕ್ಷಿಸದೆ ಒಪ್ಪಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ.
ಮೊದಲೇ ಹೇಳಿದಂತೆ ಇದು ದರ್ಶಿನಿ ತಿಂಡಿಗಳ ಅಂದರೆ ಸಿದ್ಧಪಡಿಸಿದ ಆಹಾರಗಳ ಕಾಲ. ನಾವೆಲ್ಲಾ ಹೆಚ್ಚಾಗಿ ರೆಡಿ ಟು ಈಟ್ ಎನ್ನುವ ಆಹಾರಗಳ ಮೇಲೆ ಹಾಗೂ ಸಂಸ್ಕರಿಸಿದ ಆಹಾರದ ಮೇಲೆ ಅವಲಂಬಿತರಾಗುತ್ತಿದ್ದೇವೆ. ನಾವು, ಈ ಆಹಾರಗಳು ಹೆಚ್ಚು ಪೋಷಕಾಂಶ ನಮಗೆ ನೀಡುತ್ತದೆ ಎಂದು ಹೇಳಲಾಗುವ ಆರೋಗ್ಯದ ಲಾಭಗಳಿಂದ ತೃಪ್ತರಾಗಿ ಅವುಗಳಿಂದ ನಮಗೆ ಸಿಗುವ ಪೌಷ್ಟಿಕಾಂಶಗಳೆಷ್ಟು ಎಂಬುದನ್ನು ತಿಳಿಯಲು ವಿಫಲರಾಗುತ್ತೇವೆ. ಇಂತಹ ಆಹಾರದಿಂದ ದೂರ ಉಳಿಯಲು ಇದು ಸರಿಯಾದ ಸಮಯ. ನಿಮ್ಮ ಸಾಮಾನುಗಳ ಪಟ್ಟಿಯಿಂದ ಕಿತ್ತುಹಾಕಬೇಕಾದ 12 ಆಹಾರಗಳು ಹೀಗಿವೆ:

1. ಬಹುಧಾನ್ಯಗಳ ಹಿಟ್ಟು
ಬಹುಧಾನ್ಯಗಳ ಹಿಟ್ಟು ಎಂದು ಹೇಳುತ್ತಾರಲ್ಲ ಅದು ನಿಜಕ್ಕೂ ಬಹುಧಾನ್ಯಗಳ ಹಿಟ್ಟಲ್ಲ. ಅಂತಹವುಗಳನ್ನು ಕೊಳ್ಳುವ ಮೊದಲು ಅದರಲ್ಲಿ ಗೋಧಿಯೊಂದಿಗೆ ಉಳಿದ ಯಾವ ಧಾನ್ಯಗಳಿವೆ ಎಂದು ನೋಡಿ ತಿಳಿದುಕೊಳ್ಳಿ. ಇಲ್ಲವಾದರೆ ಗೋಧಿಯೊಂದಿಗೆ ಯಾವ್ಯಾವುದೋ ಧಾನ್ಯಗಳ ಹಿಟ್ಟಿನ ಮಿಶ್ರಣವನ್ನು ನೀವು ಬಳಸುತ್ತಿರುತ್ತೀರಿ. ಇದನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಮನೆಯಲ್ಲೇ ತಯಾರಿಸುವುದರಿಂದ ನೀವು ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸಿ ಉತ್ತಮ ಪದಾರ್ಥವನ್ನೇ ತಯಾರಿಸಿಕೊಳ್ಳಬಹುದು.

2. ಸೋಯಾ ಹಾಲು ಮತ್ತು ಇತರೆ ಸೋಯಾ ಪದರ್ಥಾಗಳು
ಅನೇಕರಿಗೆ ಸೋಯಾವನ್ನು ಅಂಶಗಳನ್ನು ಸೋಯಾ ತಳಿಯಲ್ಲಿ ಬದಲಾವಣೆ ಮಾಡುವ ಮೂಲಕ ಮಾಡಲಾಗುತ್ತದೆ ಎಂದು ತಿಳಿದಿರುವುದಿಲ್ಲ. ಸೋಯಾವನ್ನು ಹೆಕ್ಸೇನ್ ಎನ್ನುವ ವಿಷಕಾರಿ ಕೆಮಿಕಲ್ ಬಳಸಿ ಸಂಸ್ಕರಿಸಲಾಗುತ್ತದೆ. ಇದು ಸಂತಾನೋತ್ಪತ್ತಿ ಮತ್ತು ಜನನ ದೋಷಗಳಿಗೆ ಕಾರಣವಾಗಬಹುದು. ನೀವು ಉತ್ತಮ ಆರೋಗ್ಯಕ್ಕಾಗಿ ಡೈರಿ ಪದಾರ್ಥಗಳಲ್ಲದೆ ಬೇರೆಯದನ್ನು ಹುಡುಕುತ್ತಿರುವಿರಾದರೆ ಕೆನೆ ತೆಗೆದ ಹಾಲನ್ನೇ ಬಳಸುವುದು ಉತ್ತಮ.

3. ಕೃತಕ ಸಿಹಿ
ಇದೊಂದು ಆರೋಗ್ಯ ಪದಾರ್ಥಗಳಲ್ಲೇ ಅತ್ಯಂತ ದೊಡ್ಡ ಮೋಸ ಎನ್ನುವುದನ್ನು ನೀವು ತಿಳಿದರೆ ಆಘಾತಕ್ಕೆ ಒಳಗಾಗುವಿರಿ. ಆಸ್ಪರ್ಟೆಮ್ ಅಥವ ಶುಕ್ರೋಸ್ ಇದನ್ನು ಸಕ್ಕರೆಗೆ ಬದಲಾಗಿ ಬಳಸುವ ಬದಲು ಸಕ್ಕರೆಯನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದೇ ಉತ್ತಮ. ಕೃತಕ ಸಿಹಿ ಪದಾರ್ಥಗಳು ನರಮಂಡಲಕ್ಕೆ ಹಾನಿ ಉಂಟುಮಾಡುತ್ತದೆ. ಜಠರ ಮತ್ತು ಎಂಡೋಕ್ರೈನ್ ಗಳ ಅಸಮರ್ಪಕ ಕಾರ್ಯನಿರ್ವಹಣೆಗೆ ಕಾರಣವಾಗುತ್ತದೆ.

4. ಐಸ್ ಟೀ ಮಿಕ್ಸ್
ಐಸ್ ಟೀ ಮಿಕ್ಸ್ ಎನ್ನುವುದು ಶುದ್ಧ ವ್ಯಾಪಾರಿ ಗಿಮಿಕ್. ಇದು ನಿಮಗೆ ಅನಾರೋಗ್ಯಕರ. ಇದರಲ್ಲಿ ಕೋಲಾಕ್ಕಿಂತ ಸಕ್ಕರೆಯೇ ಹೆಚ್ಚಿರುತ್ತದೆ. ಇದು ಫ್ರಕ್ಟೋಸ್ ಕಾರ್ನ್ ರಸ, ಸಂಸ್ಕರಿಸಿದ ಸಕ್ಕರೆ ಮತ್ತು ಕೃತಕ ರುಚಿಗಳನ್ನು ಹೊಂದಿರುತ್ತದೆ ಇವುಗಳು ದೇಹಕ್ಕೆ ಒಳ್ಳೆಯದಲ್ಲ. ಆದ್ದರಿಂದ ಉತ್ತಮ ಆರೋಗ್ಯ ಮತ್ತು ಹಣದ ಉಳಿತಾಯಕ್ಕಾಗಿ ತಾಜಾ ಐಸ್ ಟೀಯನ್ನು ಸಕ್ಕರೆ ಹಾಕಿ ಅಥವಾ ಹಾಕದೆ ರೆಫ್ರಿಜರೇಟರ್ ನಲ್ಲಿ ಇಡುವುದು ಉತ್ತಮ.

5. ಮಾರ್ಗರೈನ್
ನೀವು ಬೆಣ್ಣೆಗಿಂತ ಉತ್ತಮ ಎಂದು ಮಾರ್ಗರೈನ್ ಬಳಸುತ್ತಿದ್ದೀರಾ? ಇದು ನಿಮಗೆ ಮತ್ತೊಮ್ಮೆ ಯೋಚಿಸಲು ಸರಿಯಾದ ಸಮಯ! ಮಾರ್ಗರೈನ್ ಹೈಡ್ರೋಜನರೇಟಡ್ ಟ್ರಾನ್ಸ್-ಫ್ಯಾಟ್ ಎಣ್ಣೆ. ಇದು ನಿಮ್ಮ ದೇಹದ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ತಗ್ಗಿಸುತ್ತದೆ. ಆದ್ದರಿಂದ ಸಂಸ್ಕರಿಸಿದ ಆಹಾರವನ್ನು ಎಂದೂ ಬಳಸದಿರಿ.

6. ಅಕಾಲದಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳು
ಅಕಾಲದಲ್ಲಿ ದೊರೆಯುವ ಹಣ್ಣು ಮತ್ತು ತರಕಾರಿಗಳು ಯಾಕೆ ಆರೋಗ್ಯಕರವಲ್ಲ ಎಂದು ಆಶ್ಚರ್ಯವಾಗುತ್ತಿದ್ದೆಯೇ? ಹೌದು ಅವುಗಳನ್ನು ಕೃತಕವಾಗಿ ಮಾಗಿಸಲಾಗುತ್ತದೆ. ಆದ್ದರಿಂದ ಜಾಣತನವೆಂದರೆ ಆಯಾ ಕಾಲದಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳನ್ನು ಬಳಸುವುದು. ಇದು ಸುರಕ್ಷಿತವಾದದ್ದು.

7. ಕ್ಯಾನ್/ ಪ್ಯಾಕ್ ಮಾಡಿದ ಆಹಾರ
ಇದರಲ್ಲಿ ಬಿಸ್ಫೆನೊಲ್ (ಬಿಪಿಎ) ಇರುತ್ತದೆ. ಇದು ಹಾರ್ಮೋನುಗಳ ಮೇಲೆ ದುಷ್ಟರಿಣಾಮ ಉಂಟುಮಾಡುತ್ತದೆ. ದೇಹದಲ್ಲಿ ಬಿಪಿಎ ಅಂಶ ಹೆಚ್ಚಾದರೆ ಸಂತಾನೋತ್ಪತ್ತಿ ಸಮಸ್ಯೆಗಳು, ಸ್ತನ ಕ್ಯಾನ್ಸರ್ ಇತ್ಯಾದಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಈ ರೀತಿ ಪ್ಯಾಕ್ ಮಾಡಿದ ಆಹಾರ ಬಳಸದಿರುವುದು ಉತ್ತಮ.

8. ಮೈಕ್ರೋವೇವ್ ನಲ್ಲಿ ತಯಾರು ಮಾಡಬಹುದಾದ ಪಾಪ್ಕಾರ್ನ್
ಸಿನೆಮಾ ನೋಡುವಾಗ ಪಾಪ್ಕಾರ್ನ್ ತಿನ್ನುವುದು ಮಜ ಎನ್ನಿಸಿದರೂ ಈ ರೀತಿ ತಯಾರಾದ ಪಾಪ್ಕಾರ್ನ್ನ ತೊಂದರೆಗಳನ್ನು ಗಮನಿಸಬೇಕು. ನೀವು ತಳಿಯಲ್ಲೇ ಬದಲುಮಾಡಿದ ಜೋಳದ ಕಾಳುಗಳನ್ನು, ಸಂಸ್ಕರಿಸಿದ ಉಪ್ಪು ಮತ್ತು ಅದರ ಸುವಾಸನೆ ಹೆಚ್ಚಿಸಲು ಸೇರಿಸಿದ ಪದಾರ್ಥಗಳು ಮತ್ತು ಅದರ ಸಂರಕ್ಷಕಗಳನ್ನು ಸೇವಿಸುತ್ತೀರಿ. ಮೈಕ್ರೋವೇವ್ ಪಾಪ್ಕಾರ್ನ್ನಲ್ಲಿ ಸೋಡಿಯಂ ಮತ್ತು ಡೈಯಾಸಿಟಿಲ್ ಹೆಚ್ಚಿರುತ್ತದೆ. ನಾವು ಹೆಚ್ಚು ಬೆಣ್ಣೆ ಬಳಸಿದ ಮತ್ತು ಹೆಚ್ಚಿನ ಸುವಾಸನೆ ಸೇರಿಸಿದ ಪಾಪ್ಕಾನ್ ಗಳ ಬಗ್ಗೆ ಮಾತಾಡುತ್ತಿಲ್ಲ.

9. ಟೆಟ್ರಾ ಪ್ಯಾಕ್ಗಳಲ್ಲಿನ ಹಣ್ಣಿನ ಜ್ಯೂಸ್ಗಳು
ಪ್ಯಾಕ್ ಮಾಡಿದ ಹಣ್ಣಿನ ಜ್ಯಸ್ ಗಳಲ್ಲಿ ಸಕ್ಕರೆಯ ಅಂಶ ಮತ್ತು ಸಂರಕ್ಷಕಗಳನ್ನು ಅವು ಹೆಚ್ಚು ಕಾಲ ಉಳಿಯಲಿ ಎನ್ನುವ ಕಾರಣಕ್ಕಾಗಿ ಸೇರಿಸಲಾಗುತ್ತದೆ. ಈ ರೀತಿಯ ಜ್ಯೂಸ್ ಬಳಸುವ ಬದಲು ಹಣ್ಣನ್ನೇ ತಿನ್ನುವುದು ಉತ್ತಮ. ಇದರಿಂದ ನೀವು ಜ್ಯೂಸ್ ಮತ್ತು ಪೌಷ್ಟಿಕಾಂಶ ಎರಡನ್ನೂ ಪಡೆಯುತ್ತಿರಿ.

10. ಶೈತ್ಯೀಕರಿಸಿದ ಮಾಂಸ
ಶೈತ್ಯೀಕರಿಸಿದ ಬರ್ಗರ್ ಅಥವ ಮಾಂಸದ ತುಂಡುಗಳನ್ನು ಕೊಳ್ಳುವುದರಿಂದ ನಮ್ಮ ಅಡುಗೆ ಮನೆ ಕೆಲಸ ಕಡಿಮೆಯಾಗಬಹುದು ಆದರೆ ಅವು ನಮ್ಮ ದೇಹಕ್ಕೆ ಹೆಚ್ಚಿನ ಸಂರಕ್ಷಕಗಳನ್ನು ಸೇರಿಸುತ್ತದೆ. ಕಾರ್ಖಾನೆಗಳಲ್ಲಿ ತಯಾರಾದ ಶೈತ್ಯೀಕರಿಸಿದ ಮಾಂಸದಲ್ಲಿ ಹೈಡ್ರೋಜನರೇಟೆಡ್ ಎಣ್ಣೆಗಳು, ಸಂರಕ್ಷಕಗಳು ಮತ್ತು ಇತರ ಕೃತಕ ಪದಾರ್ಥಗಳು ಇರುತ್ತವೆ. ಆದ್ದರಿಂದ ತಾಜಾ ಮಾಂಸವನ್ನು ಕೊಂಡು ತಂದು ಮನೆಯಲ್ಲಿ ರೆಫ್ರಿಜರೇಟರ್ ನಲ್ಲಿ ಇಡುವುದು ಉತ್ತಮ.

11 . ಎನರ್ಜಿ ಡ್ರಿಂಕ್ಸ್
ಇವುಗಳಲ್ಲಿ ಕೆಫಿನ್ ಪ್ರಮಾಣ ಹೆಚ್ಚಿರುತ್ತದೆ ಮತ್ತು ಇವು ಸಕ್ಕರೆಯನ್ನು ತಕ್ಷಣ ರಕ್ತಕ್ಕೆ ಸೇರಿಸುವುದರಿಂದ ಇದು ದೇಹಕ್ಕೆ ಅನಾರೋಗ್ಯಕರ. ಆದ್ದರಿಂದ ಕಿಕ್ ಪಡೆಯಲು ಇದಕ್ಕಿಂತ ಕಾಫಿ ಕುಡಿಯುವುದು ಉತ್ತಮ. ಇದು ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಪುಷ್ಟಿದಾಯಕ ಪಾನೀಯಗಳಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿರುತ್ತದೆ.

12. ಪ್ಯಾಕ್ ಮಾಡಿದ ಕುಡಿಯುವ ನೀರು
ಪ್ಯಾಕ್ ಮಾಡಿದ ನೀರನ್ನು ಕೊಳ್ಳುವ ಮೊದಲು ನೀರಿನ ಗುಣಮಟ್ಟದ ಬಗ್ಗೆ ಮಾತ್ರವಲ್ಲ ನೀರನ್ನು ಪ್ಯಾಕ್ ಮಾಡಲು ಬಳಸಿದ ಬಾಟಲಿಯನ್ನು ಯಾವುದರಿಂದ ತಯಾರಿಸಲಾಗಿದೆ ಎಂದು ತಿಳಿದುಕೊಳ್ಳಿ. ಈ ಬಾಟಲುಗಳ ತಯಾರಿಕೆಯಲ್ಲಿ ಬಳಸಲಾಗುವ ಕೆಮಿಕಲ್ಗಳು (ಬಿಪಿಎ ಮತ್ತು ಫಥಲ್ಯಾಟ್ಸ್) ಆರೋಗ್ಯಕ್ಕೆ ಹಾನಿಕರ. ಇವುಗಳು ಅಲ್ಪ ಪ್ರಮಾಣದಲ್ಲಿ ದೇಹದೊಳಗೆ ಸೇರಿದರೂ ಕೂಡ ಸಂತಾನೋತ್ಪತ್ತಿ ಸಮಸ್ಯೆಗಳು, ಮೆದುಳಿಗೆ ತೊಂದರೆ, ಒಬ್ಯಾಸಿಟಿ, ಹೈಪರ್ ಆಕ್ಟಿವಿಟಿ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಮುಂದಿನ ಸಾರಿ ನೀವು ಈ ಬಾಟಲಿ ನೀರನ್ನು ಬಳಸುವ ಮುನ್ನ ಪರಿಸರ ಮತ್ತು ಆರೋಗ್ಯದ ಮೇಲೆ ಇದು ಬೀರುವ ಪರಿಣಾಮಗಳ ಕುರಿತು ಚಿಂತಿಸಿ.



Click it and Unblock the Notifications











