Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ನಿಂಬೆ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ 12 ಲಾಭ!
ನಿಂಬೆ ಹಣ್ಣಿನಲ್ಲಿ ಅಡುಗೆಗೆ ಸ್ವಾದವನ್ನು ಹೆಚ್ಚಿಸುವ ಗುಣ ಮಾತ್ರವಲ್ಲದೆ ನಮ್ಮ ಆರೋಗ್ಯದ ಸ್ವಾದವನ್ನು ಹೆಚ್ಚಿಸುವ ಗುಣವೂ ಇದೆ. ಇದರಲ್ಲಿ ಸಿಟ್ರಸ್ ಅಂಶವಿದೆ. ಆದ್ದರಿಂದ ಇದು ಆರೋಗ್ಯಕರ ಎಂದು ಹೆಚ್ಚಿನವರಿಗೆ ಗೊತ್ತಿರುತ್ತದೆ. ಆದರೆ ಒಂದು ನಿಂಬೆಯಲ್ಲಿ 10ಕ್ಕೂ ಹೆಚ್ಚಿನ ಆರೋಗ್ಯವರ್ಧಕ ಗುಣಗಳಿವೆ ಅನ್ನುವುದು ಗೊತ್ತಿದೆಯೇ?
ನಿಂಬೆ ಹಣ್ಣು ವಾಂತಿ, ತಲೆ ಸುತ್ತು ಉಂಟಾಗುವುದನ್ನು ತಡೆಯುತ್ತದೆ. ಆದ್ದರಿಂದಲೇ ದೂರ ಪ್ರಯಾಣ ಮಾಡುವಾಗ ವಾಂತಿ ಬರುವುದನ್ನು ತಡೆಗಟ್ಟಲು ಇದನ್ನು ಮನೆಮದ್ದಾಗಿ ಬಳಸಲಾಗುವುದು. ಒಂದು ನಿಂಬೆಯಲ್ಲಿ 5% ಸಿಟ್ರಿಕ್ ಆಸಿಡ್, ವಿಟಮಿನ್ ಬಿ, ರೈಬೋಫ್ಲೇವಿನ್, ಕ್ಯಾಲ್ಸಿಯಂ, ರಂಜಕ, ಪ್ರೊಟೀನ್, ಕಾರ್ಬೋಹೈಟ್ರೇಟ್ಸ್ ಅಂಶವಿರುತ್ತದೆ.
ನಿಂಬೆ ಹಣ್ಣಿನಲ್ಲಿರುವ ಪ್ರಮುಖ 12 ಆರೊಗ್ಯವರ್ಧಕ ಗುಣಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

1. ಅಜೀರ್ಣಕ್ಕೆ ಮನೆಮದ್ದು
ಅಜೀರ್ಣ ಸಮಸ್ಯೆ ಉಂಟಾದರೆ ಹೊಟ್ಟೆ ಉಬ್ಬುವುದು, ಕೆಳ ಹೊಟ್ಟೆ ಎಳದಂತಾಗುವುದು, ಗ್ಯಾಸ್ ಮುಂತಾದ ತೊಂದರೆಗಳು ಉಂಟಾಗುವುದು. ಈ ರೀತಿ ಉಂಟಾದರೆ ಪ್ರತೀದಿನ ನಿಂಬೆ ಶರಬತ್ತು ಕುಡಿದರೆ ಕುಡಿದರೆ ಸಾಕು ಈ ಸಮಸ್ಯೆಯಿಂದ ಮನೆಮದ್ದು.

2. ಮುಟ್ಟಿನ ಹೊಟ್ಟೆನೋವು ಕಡಿಮೆ ಮಾಡಲು
ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಉಂಟಾದರೆ 2-3 ಲೋಟ ನಿಂಬೆ ಜ್ಯೂಸ್ ಕುಡಿದರೆ ನೋವು ಕಡಿಮೆಯಾಗುವುದು.

3. ತ್ವಚೆ ಸೌಂದರ್ಯಕ್ಕೆ
ನಿಂಬೆ ಹಣ್ಣನ್ನು ಸೌಂದರ್ಯ ವೃದ್ಧಿಸುವ ಮಾಂತ್ರಿಕವೆಂದೇ ಹೇಳಬಹುದು. ಅನೇಕ ಸೌಂದರ್ಯ ಸಮಸ್ಯೆಗಳಿಗೆ ಪರಿಹಾರ ನಿಂಬೆ ರಸದಲ್ಲಿದೆ.

4. ಹಲ್ಲಿನ ಶುಚಿತ್ವಕ್ಕೆ
ಬಾಯಿ ದುರ್ವಾಸನೆ ಬೀರದಿರಲು, ಹಲ್ಲು ಬಿಳುಪಾಗಲು ಹಲ್ಲುಜ್ಜಿದ ನಂತರ ಒಂದು ತುಂಡು ನಿಂಬೆ ಹಣ್ಣಿನಿಂದ ಉಜ್ಜಿದರೆ ಸಾಕು.

5. ಗಂಟಲಿನ ತೊಂದರೆಗೆ
ಗಂಟಲು ನೋವು, ಟ್ರಾನ್ಸಿಲ್ ಈ ಸಮಸ್ಯೆಗಳು ಕಂಡು ಬಂದರೆ ನಿಂಬೆ ರಸದಿಂದ ಬಾಯಿ ಮುಕ್ಕಳಿಸಿದರೆ ( do gargle) ಸಾಕು, ನೋವು ಕಡಿಮೆಯಾಗುವುದು.

6. ಕೊಬ್ಬನ್ನು ಕರಗಿಸುತ್ತದೆ
ದೇಹದ ತೂಕ ಹೆಚ್ಚಾಗುವುದನ್ನು ತಡೆಯುವಲ್ಲಿ ನಿಂಬೆರಸ ತುಂಬಾ ಸಹಕಾರಿ. ಪ್ರತೀದಿನ ಜೇನು ಹಾಕಿ ಮಾಡಿದ ನಿಂಬೆ ಜ್ಯೂಸ್ ಕುಡಿಯುವವರು ಸಮತೂಕದಿಂದ ಇರುತ್ತಾರೆ.

7. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಹೃದಯದ ಸಮಸ್ಯೆ ಇರುವವರು ಇದನ್ನು ತಮ್ಮ ಆಹಾರಕ್ರಮದಲ್ಲಿ ಬಳಸುವುದು ಒಳ್ಳೆಯದು. ಏಕೆಂದರೆ ಇದರಲ್ಲಿ ಪೊಟಾಷ್ಯಿಯಂ ಅಧಿಕವಿದ್ದು, ದೇಹದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

8. ಉಸಿರಾಟದ ತೊಂದರೆಯನ್ನು ಕಡಿಮೆ ಮಾಡುತ್ತದೆ
ಕೆಲವರಿಗೆ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದರೆ ಅಥವಾ ಕಮ್ಮಿಯಾದರೆ, ದೂಳಿನಲ್ಲಿ ಓಡಾಡಿದರೆ ಉಸಿರಾಟದ ತೊಂದರೆ ಉಂಟಾಗುತ್ತದೆ. ನಿಂಬೆ ರಸ ಇದನ್ನು ಹೋಗಲಾಡಿಸುತ್ತದೆ.

9. ಮೂಳೆಗಳ ಆರೋಗ್ಯಕ್ಕೆ
ಇದು ದೇಹದಲ್ಲಿರುವ ಕಲ್ಮಶ ಹಾಗೂ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊರಹಾಕಿ ಮೂಳೆಗಳ ಆರೋಗ್ಯ ಹೆಚ್ಚಿಸುತ್ತದೆ.

10. ರಕ್ತವನ್ನು ಶುದ್ಧೀಕರಿಸುತ್ತದೆ
ನಿಂಬೆರಸವನ್ನು ಕಾಲರಾ, ಮಲೇರಿಯಾದಮತಹ ಸಮಸ್ಯೆಗಳನ್ನು ಸಂಪೂರ್ಣವಾಗಿ ಗುಣ ಪಡಿಸಲು ಬಳಸಲಾಗುವುದು. ಇದು ರಕ್ತವನ್ನು ಶುದ್ಧೀಕರಿಸುತ್ತದೆ.

11. ಜ್ವರಕ್ಕೆ ಒಳ್ಳೆಯದು
ಜ್ವರ ಬಂದಾಗ ತುಂಬಾ ಬೆವರುವುದನ್ನು ತಡೆಯಲು ನಿಂಬೆ ಜ್ಯೂಸ್ ಸಹಾಯ ಮಾಡುತ್ತದೆ.

12. ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ
ವಿಟಮಿನ್ ಸಿ ಇರುವ ಎಲ್ಲಾ ಆಹಾರ ಪದಾರ್ಥಗಳು ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.



Click it and Unblock the Notifications
