Latest Updates
-
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ
ಆರೋಗ್ಯ ಪೋಷಣೆಗಾಗಿ 12 ಕಿರು ಹೆಜ್ಜೆಗಳು
ನಮ್ಮಲ್ಲಿನ ಬಹುತೇಕ ಜನರ ಅಭಿಪ್ರಾಯದಂತೆ, ಆರೋಗ್ಯಕರವಾದ ಆಹಾರ ಸೇವನಾ ಕ್ರಮಕ್ಕೆ ಬದ್ಧರಾಗಿರುವುದೆಂದರೆ, ತಮ್ಮ ಅಚ್ಚುಮೆಚ್ಚಿನ ತಿನಿಸುಗಳ ಸೇವನೆಯನ್ನು ಕಡಿಮೆ ಮಾಡುವುದು ಮತ್ತು ತಮಗೆ ಬಹು ಪ್ರಿಯವಾದ ಅನೇಕಾನೇಕ ತಿನಿಸುಗಳನ್ನು ತ್ಯಜಿಸಿಬಿಡುವುದು. ವಸ್ತುಸ್ಥಿತಿ ಏನೆಂದರೆ, ನಮ್ಮ ಜನರ ತಿಳುವಳಿಕೆಗೆ ವಿರುದ್ಧವಾದ ಸಂಗತಿಯೇ ವಾಸ್ತವವಾಗಿದೆ, ಸತ್ಯವಾಗಿದೆ. ನಿಜಕ್ಕೂ ಸರಿಯಾದ ಆಹಾರ ಸೇವನಾ ಕ್ರಮವೆಂದರೆ, ನಿಮ್ಮ ತಿನಿಸುಗಳ ಆಯ್ಕೆಗಳನ್ನು ವಿಸ್ತೃತಗೊಳಿಸುವುದು; ಅರ್ಥಾತ್ ನಿಮ್ಮ ಊಟದ ಮೇಜಿಗೆ ಹೆಚ್ಚಿನ ಆಯ್ಕೆಗಳನ್ನು ತರುವುದು ಹಾಗೂ ಹೆಚ್ಚು ಸಂತುಲಿತ ಆದರೂ ಸ್ವಾದಿಷ್ಟವಾದ ತಿನಿಸುಗಳನ್ನು ಸೇವಿಸುವುದು. ಇದರ ಅರ್ಥವೇನೆಂದರೆ, ಈ ವೈವಿಧ್ಯಮಯ ತಿನಿಸುಗಳ ಮೂಲಕ ನಿಮ್ಮ ಶರೀರಕ್ಕೆ ಅತ್ಯಾವಶ್ಯಕವಾದ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ನಿಮಗೆ ಅಚ್ಚುಮೆಚ್ಚಾದ ತಿಂಡಿಯ ಸೇವನೆಯನ್ನೂ ಮಾಡುವುದರ ಮೂಲಕನಮ್ಮ ಆಸೆಯನ್ನೂ ಪೂರೈಸಿಕೊಳ್ಳುವುದು.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಪೂರಕ ಮಾಹಿತಿ ಬೇಕೆ ? ಈ ಕೆಳಗೆ ನೀಡಲಾಗಿರುವ ಶರೀರದ ಪೋಷಣೆಯನ್ನು ವೃದ್ಧಿಗೊಳಿಸುವಂತಹ ಕೆಲವು ಮಾರ್ಗಗಳನ್ನು ಅನುಸರಿಸಿರಿ. ಈ ಸಲಹೆಗಳ ಪೈಕಿ ಕೆಲವು, ನಿಮ್ಮ ಶಾಪಿಂಗ್ ನ ವೇಳೆ ನಿಖರವಾದ ಆಯ್ಕೆಯನ್ನು ಬಯಸುತ್ತವೆ, ಇನ್ನು ಇತರ ಕೆಲವು ಸಲಹೆಗಳು, ಅಡುಗೆಯ ಗಂಧಗಾಳಿಯಿಲ್ಲದವರೂ ಕೂಡ ನಿರ್ವಹಿಸಬಹುದಾದ, ಸರಳ ಆಹಾರ ತಯಾರಿ ಕ್ರಮ ಹಾಗೂ ಅದನ್ನು ಪೂರೈಸುವ ವಿಧಾನಗಳ ಮೇಲೆ ಬೆಳಕು ಚೆಲ್ಲುತ್ತವೆ. ಈ ಮಾಹಿತಿಯು ನಿಮಗೂ ಮತ್ತು ನಿಮ್ಮ ಪರಿವಾರಕ್ಕೂ ಪ್ರಿಯವಾದ ಆಹಾರ ವಸ್ತುಗಳನ್ನು ತಿನ್ನಲು ಅನುವುಮಾಡಿಕೊಡುತ್ತದೆ, ನೀವು ಹೆಚ್ಚಿನ ಚೈತನ್ಯವನ್ನು ಹೊಂದುವಂತೆಯೂ ನಿಗಾ ವಹಿಸುತ್ತದೆ, ಹಾಗೂ ನೀವು ಮುಂದೆಂದೂ ಆರೋಗ್ಯಕರ ಆಹಾರ ಕ್ರಮವನ್ನು, ಪ್ರಿಯವಾದ ತಿನಿಸುಗಳ ತ್ಯಜಿಸುವಿಕೆಯ ಕಲ್ಪನೆಗೆ ಸಮೀಕರಿಸದಂತೆ ಮಾಡುತ್ತವೆ.

2. ಪೋಷಕಾಂಶ ಸೇರಿಸಿ
ಪ್ರತೀ ಬಾರಿಯೂ ನೀವು ವಾಲ್ ನಟ್ ಒಂದನ್ನು ಜಗಿಯುವಾಗ, ನೀವು ಒಮೇಗಾ-3 ಕೊಬ್ಬಿನಾಮ್ಲವನ್ನು ನಿಮ್ಮ ಶರೀರಕ್ಕೆ ಅಗತ್ಯ ಪೋಷಕಾಂಶದ ರೂಪದಲ್ಲಿ ಸೇರಿಸಿರುತ್ತೀರಿ ಹಾಗೂ ಈ ಪೋಷಕಾಂಶವು ಕ್ಯಾನ್ಸರ್ ಮತ್ತು ಹೃದಯ ಸಂಬಂಧೀ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ. ಈ ಬೀಜಗಳನ್ನು ನೀವು ಹಸಿಯಾಗಿಯೇ ಸೇವಿಸಬಹುದು ಅಥವಾ ಸಲಾಡ್ ನೊಂದಿಗೋ ಅಥವಾ ಯಾವುದಾದರೂ ಉಪಹಾರದೊಂದಿಗೋ ಸಣ್ಣ ಸಣ್ಣ ಚೂರುಗಳನ್ನಾಗಿಸಿ ಇವುಗಳೊಂದಿಗೆ ಬೆರೆಸಿ ಸೇವಿಸಬಹುದು ಅಥವಾ ಅವುಗಳ ಚೂರುಗಳನ್ನೇ ಖರೀದಿಸಿ ತಂದು ಮೀನಿನೊಂದಿಗೆ ಅಥವಾ ಚಿಕನ್ ನೊಂದಿಗೆ ಬೆರೆಸಿ ತಿನ್ನಬಹುದು.

6 . ಸಿದ್ಧಪಡಿಸಿದ ಉತ್ಪನ್ನಗಳನ್ನು ಖರೀದಿಸಿರಿ
ಇವುಗಳ ಬೆಲೆ ತುಸು ಹೆಚ್ಚಿರಬಹುದು. ಆದರೂ ಕೂಡ ಮೊದಲೇ ತೊಳೆದು, ಕತ್ತರಿಸಲ್ಪಟ್ಟ ಹಣ್ಣು ಮತ್ತು ತರಕಾರಿಗಳು, ಅವು ತಾಜಾವಿರುವಾಗಲೇ ಸೇವಿಸಲು ಯೋಗ್ಯವಾಗಿದ್ದು, ರೆಫ್ರಿಜಿರೇಟರ್ ನಲ್ಲಿ ವಾರಗಟ್ಟಲೆ ದಾಸ್ತಾನು ಇರಿಸಿದ್ದ ತರಕಾರಿಗಳಿಗಿಂತಲೂ ಎಷ್ಟೋ ಪಟ್ಟು ಉತ್ತಮ ಎಂಬ ಅರ್ಥವನ್ನು ನೀಡುತ್ತವೆ. ಅನನಾಸು, ಕಲ್ಲಂಗಡಿ, ಮತ್ತು ದ್ರಾಕ್ಷಿಯಂತಹ ಹಣ್ಣುಗಳ ತುಣುಕುಗಳ ಪ್ಯಾಕ್ ಗಳು, ಲಘು ತಿನಿಸುಗಳ ರೂಪದಲ್ಲಿಯೂ ಹಾಗೂ ನಿಮ್ಮ ಮಧ್ಯಾನ್ಹದ ಭೋಜನದ ವೇಳೆ ಉಪ ಆಹಾರ ಪದಾರ್ಥದ ರೂಪದಲ್ಲಿಯೂ ಕೂಡ ಅತ್ಯುತ್ತಮವಾಗಿ ಉಪಯೋಗಕ್ಕೆ ಬರುತ್ತದೆ. ಮಕ್ಕಳೂ ಕೂಡ ಇವನ್ನು ಇಷ್ಟಪಡುತ್ತಾರೆ. ಇದರ ಜೊತೆಗೆ, ಅದಾಗಲೇ ಸಿಪ್ಪೆ ಸುಲಿದು, ಕತ್ತರಿಸಿಟ್ಟು, ಮತ್ತು ಮೈಕ್ರೋವೇವ್ ಸ್ಟೀಮೆರ್ ಬ್ಯಾಗ್ ಗಳಲ್ಲಿ ಪ್ಯಾಕ್ ಮಾಡಲಾದ ತರಕಾರಿಗಳೂ ಕೂಡ ನಿಮ್ಮ ಸಂಜೆಯ ಊಟಕ್ಕೆ ತತ್ ಕ್ಷಣವೇ ಉಪಯೋಗಿಸಲು ಸಾಧ್ಯವಾಗುವoತಿರುತ್ತವೆ.

7. ಮೂಲಂಗಿ
ಆಲೂಗಡ್ಡೆಯನ್ನು ಸಣ್ಣ ಸಣ್ಣ ಚೂರುಗಳಾಗಿ ಉಪಯೋಗಿಸುವಿರಾ ?! ಒಳ್ಳೆಯದು. ಏಕೆಂದರೆ, ಈ ಆಲೂಗೆಡ್ಡೆಯೊoದೇ ಅನ್ನಾಂಗ C, ಅನ್ನಾಂಗ B6, ಮತ್ತು ಪೊಟ್ಯಾಸಿಯಂ ಗಳನ್ನು ಸಮೃದ್ಧವಾಗಿ ಹೊಂದಿದೆ. ಆದರೆ, ಇದರೊಂದಿಗೆ ಟರ್ನಿಪ್ ಗಡ್ಡೆಯ ಚೂರುಗಳನ್ನೂ ಸೇರಿಸಿದರೆ, ಅದು ಮಿಶ್ರಣದ ಅನ್ನಾಂಗ C ಯ ಮಟ್ಟವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಜೊತೆಗೆ ಆಂಟಿಆಕ್ಸಿಡೆಂಟ್ ಗಳು ಮತ್ತು ಅನ್ನಾಂಗ A ಗಳನ್ನು ಸೇರಿಸುತ್ತದೆ. ಟರ್ನಿಪ್ ಗೆಡ್ಡೆಯ ಮೇಲ್ಬಾಗದಲ್ಲಿರುವ ಸೊಪ್ಪನ್ನೂ ಸಹ ಹೆಚ್ಚಿ ಅದನ್ನೂ ಕೂಡ ಬಾಣಲೆಗೆ ಸೇರಿಸಿ ಬೇಯಿಸಿದರೆ, ನೀವು ನಿಮ್ಮ ಶರೀರಕ್ಕೆ ಅತ್ಯುತ್ತಮವಾದ ಕ್ಯಾಲ್ಸಿಯಂ, ತಾಮ್ರ, ಮತ್ತು ಕಬ್ಬಿಣವನ್ನೂ ಕೂಡ ಪೂರೈಸಿದoತಾಗುತ್ತದೆ.

9. Dip ದ್ರಾವಣಗಳನ್ನು ಉಪಯೋಗಿಸಿರಿ
ನಿಮ್ಮ ಕುಟುಂಬದ ಸದಸ್ಯರೆಲ್ಲರೂ ಕೂಡ ಒಂದು ವೇಳೆ ತರಕಾರಿಯ ವಿರೋಧಿಗಳಾಗಿದ್ದರೆ, dip ಗಳು ಅಂಥವರಿಗೆ ಅತ್ಯುತ್ತಮ ದ್ರಾವಣಗಳಾಗಿವೆ. Salsa, hummus, guacamole, white bean, spinach, ಮತ್ತು avocado dip ಗಳು ತರಕಾರಿಗಳಿಂದ ಅಥವಾ ಕಾಳುಗಳಿಂದ ಮಾಡಲ್ಪಟ್ಟವುಗಳಾಗಿದ್ದು, ಇವುಗಳು ಆಹಾರ ಸಂಸ್ಕಾರಕಗಳೊಂದಿಗೆ ಮಿಳಿತಗೊಂಡಿವೆ. ಇಂತಹ ಒಂದು dip ಅನ್ನು tortilla ಅಥವಾ pita ಚಿಪ್ಸ್ ನೊಂದಿಗೆ ಬೆರೆಸಿ ನಿಮ್ಮ ಆ ತರಕಾರಿ ವಿರೋಧಿ ಬಂಧುಗಳು ತಮಗರಿವಿಲ್ಲದಂತೆಯೇ ಸಸ್ಯಜನ್ಯ ಆಹಾರವನ್ನು ಸೇವಿಸಿರುತ್ತಾರೆ ಮತ್ತು ಜೊತೆಗೆ ಅತ್ಯಧಿಕ ಪೋಷಕಾಂಶದ ಲಾಭವನ್ನೂ ಸೂರೆಗೈದಿರುತ್ತಾರೆ.

10 . ಕ್ಯಾರೆಟ್ ಗಳನ್ನು ಇಡಿಯಾಗಿಯೇ ಬೇಯಿಸಿರಿ
ನಿಮ್ಮ ಆಹಾರದ ಪೋಶಕಾಂಶವನ್ನು ಹೆಚ್ಚಿಸಲು ಇದಕ್ಕಿಂತ ಸುಲಭ ಉಪಾಯ ಬೇರೊಂದಿರಲಾರದು: ಕ್ಯಾರೆಟ್ ಗಳನ್ನು ತವೆಗೆ ಅಥವಾ ಸ್ಟವ್ ಮೇಲೆ ಉಪಯೋಗಿಸುವ ಪಾನ್ ಗೆ ಹಾಕುವುದಕ್ಕಿಂತ ಮೊದಲೇ ಅವುಗಳನ್ನು ಕತ್ತರಿಸಿ ಹಾಕುವುದರ ಬದಲಾಗಿ, ಅವುಗಳನ್ನು ಬೇಯಿಸಿದ ನಂತರ ಕತ್ತರಿಸಿರಿ. ಯುನೈಟೆಡ್ ಕಿಂಗ್ ಡಮ್ ನ ಸಂಶೋಧಕರು ಕಂಡುಕೊಂಡಂತೆ, ಹೀಗೆ ಮಾಡುವುದರಿಂದ ನೀವು ಕ್ಯಾರಟ್ ಗಳಲ್ಲಿನ ಆಂಟಿಆಕ್ಸಿಡೆಂಟ್ ಗಳ ಪ್ರಮಾಣವನ್ನು ಸುಮಾರು ಶೇ. 25 ರಷ್ಟು ಹೆಚ್ಚಿಸಿರುತ್ತೀರಿ. ಇದಕ್ಕೆ ಕಾರಣವೇನೆಂದರೆ, ನೀವು ಬೇಯಿಸುವುದಕ್ಕಿಂತ ಮೊದಲೇ ಈ ಕ್ಯಾರಟ್ ಗಳನ್ನು ಕತ್ತರಿಸುವುದರಿಂದ, ಅವುಗಳ ತೆರೆದ ಮೇಲ್ಮೈಯ ಭಾಗವು ಹೆಚ್ಚುತ್ತದೆ ಮತ್ತು ಅಂತಹವುಗಳನ್ನು ಬೇಯಿಸುವಾಗ, ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ವಾತಾವರಣಕ್ಕೆ ಸೋರಿಹೋಗುತ್ತವೆ.

11 . ಸಾವಯವ ಪದಾರ್ಥಗಳನ್ನು ಅರಿಸಿಕೊಳ್ಳಿರಿ
ಕೆಲ ಬುದ್ಧಿವಂತರೆನ್ನಿಸಿಕೊಂಡವರು ಇನ್ನೂ ಕೂಡ ಸಾವಯವ ಪದಾರ್ಥಗಳ ಸೇವನೆಯು ಆರೋಗ್ಯಕಾರಿ ಹೌದೇ, ಅಲ್ಲವೇ ಎಂಬ ಅನುಮಾನದಲ್ಲಿದ್ದಾರೆ. ಆದರೆ, ಕೆಲವೊಂದು ಸಾವಯವ ಹಣ್ಣುಗಳು ಮತ್ತು ತರಕಾರಿಗಳು (ಪ್ರಮುಖವಾಗಿ ಸೇಬುಗಳು, ಸ್ಟ್ರಾಬೆರಿಗಳು, ಮತ್ತು ಟೋಮಟೋಗಳು) ಸಾಂಪ್ರದಾಯಿಕ ರೀತಿಯಲ್ಲಿ ಬೆಳೆಸಲ್ಪಟ್ಟ ಅವುಗಳ ಸಮಾನ ಉತ್ಪನ್ನಗಳಿಗಿಂತ ಹೆಚ್ಚಿನ ಸ್ವಾದವನ್ನು ಹೊಂದಿರುತ್ತವೆ ಎಂಬ ವಿಷಯವನ್ನು ಹೆಚ್ಚಿನ ಜನರು ಒಪ್ಪುತ್ತಾರೆ. ಈ ಕಾರಣಕ್ಕಾಗಿ ಇವುಗಳ ಸೇವನೆಯು ಹೆಚ್ಚಿನ ಸಂತಸವನ್ನು ಉಂಟುಮಾಡುತ್ತವೆ. ಇದೇ ಮಾತು ಕೃಷಿ ಮಾರುಕಟ್ಟೆಯ ಉತ್ಪನ್ನಗಳಿಗೂ ಕೂಡ ಅನ್ವಯವಾಗುತ್ತದೆ. ಒಂದು ವೇಳೆ ಟೊಮೇಟೊವೊಂದನ್ನು ತಿನ್ನುವಾಗ ನಿಮ್ಮ ಬಾಯಿಯಿಂದ ಅಸಹನೀಯವಾದ ಉದ್ಗಾರವೇ ಹೊರಡುವುದಾದರೆ, ಮುಂದಿನ ಬಾರಿ ನಿಮ್ಮ ಹಲ್ಲುಗಳು ಒಂದು ಸಾವಯವ ಟೊಮೇಟೊ ಕಚ್ಚುವಂತೆ ಮಾಡಿರಿ. ಆಗ ನಿಮ್ಮ ಬಾಯಿಯಿಂದ ಸವಿಯನ್ನುಂಡ ಸಿಹಿಯಾದ ಚಕಿತ ಉದ್ಗಾರವು ಹೊರಬೀಳುತ್ತದೆ.



Click it and Unblock the Notifications











