ಇವುಗಳು ನಾವು ತಿಳಿದಿರುವುದಕ್ಕಿಂತಲೂ ಆರೋಗ್ಯಕರ!

By Super

ಉತ್ತಮ ಆರೋಗ್ಯಕ್ಕಾಗಿ ಯಾವ ಆಹಾರವನ್ನು ತಿನ್ನಬೇಕು ಎಂಬುದು ಯಾವಾಗಲೂ ಗೊಂದಲದ ವಿಚಾರವೇ? ಯಾವ ಆಹಾರದಲ್ಲಿ ಯಾವ ಜೀವಸತ್ವಗಳಿವೆ ಮತ್ತು ಅವುಗಳಿಂದ ನಮ್ಮ ದೇಹದ ಆರೋಗ್ಯಕ್ಕೆ ಸಹಾಯವಾಗುವುದೇ ಎಂಬುದೇ ಎಲ್ಲರ ಚಿಂತೆ. ಆರೋಗ್ಯಕರ ಆಹಾರಗಳ ಕುರಿತು ತಿಳಿದುಕೊಳ್ಳಲು ಎಲ್ಲರೂ ಪ್ರಯತ್ನ ಪಡುತ್ತಾರೆ.

ಇತ್ತೀಚಿನ ದಿನಗಳಲ್ಲಂತೂ ಮಾರುಕಟ್ಟೆಯಂತೂ ಶುಗರ್ ಫ್ರೀ, ಕ್ಯಾಲೋರಿ ಫ್ರೀ ಇಂತಹ ಆಹಾರ ವಸ್ತುಗಳಿಂದಲೇ ತುಂಬಿಕೊಂಡಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಂದು ಯಾರಿಗೂ ತಿಳಿದಿರುವುದಿಲ್ಲ. ಇದನ್ನು ತಿಳಿದುಕೊಳ್ಳಲು ಸುರಕ್ಷಿತರಾಗುವುದು ಅವಶ್ಯಕ. ಆದ್ದರಿಂದ ಇಲ್ಲಿ ಕೆಳಗೆ ಆರೋಗ್ಯಕರ ಆಹಾರಗಳ ಪಟ್ಟಿಯನ್ನು ನೀಡಲಾಗಿದೆ.

1. ಬಾಳೆಹಣ್ಣು

1. ಬಾಳೆಹಣ್ಣು

ಬಾಳೆಹಣ್ಣು ಒಂದು ಜನಪ್ರಿಯ ಹಣ್ಣು. ಇದರಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೆಟ್ ಪ್ರಮಾಣ ಯಥೇಚ್ಚವಾಗಿದೆ. ಇದು ನಮ್ಮ ದೇಹಕ್ಕೆ ಬಹು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಮತ್ತು ಬಿ6 ವಿಟಮಿನ್ ಗಳನ್ನು ಒದಗಿಸುತ್ತದೆ. ಬಾಳೆಹಣ್ಣಿನಲ್ಲಿ ಪೊಟಾಷ್ಯಿಯಂ ಕೂಡ ಹೇರಳವಾಗಿದ್ದು, ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.

2. ಕಡಲೆ ಕಾಯಿಗಳು

2. ಕಡಲೆ ಕಾಯಿಗಳು

ಇದು ಸಮೃದ್ಧ ಪ್ರೋಟಿನ್ ಹೊಂದಿದೆ. ಇದರ ಬಹು ಮಹತ್ವದ ಅಂಶ ಏನೆಂದರೆ ಇದು ಹಸಿವೆಯನ್ನು ನಿಯಂತ್ರಿಸಲು ಬಹು ಸಹಾಯವನ್ನು ಮಾಡುತ್ತದೆ. ನೀವು ಕಡಲೆಕಾಯಿಗಳನ್ನು ಬೇರೆ ತರಕಾರಿಗಳೊಂದಿಗೆ ಬೆರೆಸಿ ಅಥವಾ ಸಾಸ್ ನೊಂದಿಗೆ ಸೇರಿಸಿದರೆ ಒಂದು ರುಚಿಕರ ತಿಂಡಿ ಅಥವಾ ಕುರುಕುಲು ತಿಂಡಿ ತಿನ್ನಲು ತಯಾರು.

3. ಉಪ್ಪಿನ ಕಾಯಿಗಳು

3. ಉಪ್ಪಿನ ಕಾಯಿಗಳು

ಉಪ್ಪಿನ ಕಾಯಿಗಳು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಉಪ್ಪಿನ ಕಾಯಿ ಕೇವಲ ರುಚಿಕರ ಮಾತ್ರವಲ್ಲ. ಆರೋಗ್ಯಕಾರಿಯೂ ಹೌದು. ಆದರೆ ನೀವು ಸಾಮಾನ್ಯವಾಗಿ ಉಪ್ಪಿನ ಕಾಯಿಯು ದೇಹದಲ್ಲಿ ಕೊಬ್ಬನ್ನು ಹುಟ್ಟು ಹಾಕುತ್ತದೆ ಎಂದು ಕೇಳಿರುತ್ತೀರಿ. ಆದರೆ ಈಗ ನಂಬಿಕೆಗೆ ವ್ಯತಿರಿಕ್ತವಾದ ಫಲಿತಾಂಶ ಕಂಡು ಬಂದಿದೆ. ಉಪ್ಪಿನ ಕಾಯಿಯನ್ನು ಮಿತವಾಗಿ ಸೇವಿಸಿದಾಗ ಅದು ಕೆಟ್ಟದಕ್ಕಿಂತ ಒಳ್ಳೆಯ ಪರಿಣಾಮವನ್ನೇ ಮಾಡುತ್ತದೆ. ಏಕೆಂದರೆ ಇದರಲ್ಲಿ ಸಾಕಷ್ಟು ಪ್ರಮಾಣದ ವಿನೆಗರ್ ಇದೆ. ಈ ವಿನೆಗರ್ ದೇಹದಲ್ಲಿರುವ ಪಿಷ್ಟದ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ

4.ಪೀ ನಟ್ ಬಟರ್

4.ಪೀ ನಟ್ ಬಟರ್

ನೀವು ಆಶ್ಚರ್ಯ ಚಕಿತರಾಗಿದ್ದೀರಿ ಅಲ್ಲವೇ? ಈ ಕಡಲೆ ಕಾಯಿ ಬೆಣ್ಣೆಯನ್ನು ಈ ಪಟ್ಟಿಯಲ್ಲಿ ಸೇರಿಸಬಹುದೇ ಎಂಬುದು ನಿಮ್ಮ ಪ್ರಶ್ನೆಯಾಗಿದೆ ಅಲ್ಲವೇ? ಇರಲಿ. ಕಡಲೆ ಕಾಯಿ ಬೆಣ್ಣೆಯು ಸಾಕಷ್ಟು ಪ್ರಮಾಣದ ಪ್ರೊಟೀನ್, ವಿಟಮಿನ್ ಜೊತೆಗೆ ನಾರು (ಫೈಬರ್) ಹೊಂದಿದೆ. ಮತ್ತು ಇದು ನಮ್ಮ ದೇಹಕ್ಕೆ ಅಗತ್ಯ ಪ್ರಮಾಣದ ಕಾಲೋರಿಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಷಯವನ್ನು ಸಂತೋಷದಿಂದ ನಿಮ್ಮ ಸ್ನೇಹಿತರಿಗೆ ಹೇಳಿ.

5. ಕಾಫಿ

5. ಕಾಫಿ

ನೀವು ಇಲ್ಲಿಯವರೆಗೂ ಬಹುಶಃ ಕಾಫಿಯನ್ನು ಹೆಚ್ಚಾಗಿ ಕುಡಿಯುವುದರಿಂದ ಆಗುವ ಋಣಾತ್ಮಕ ಪರಿಣಾಮಗಳ ಕುರಿತು ಕೇಳಿರುತ್ತೀರಿ. ಈಗ ಈ ಕಾಫಿಯ ಧನಾತ್ಮಕ ಆಂಶಗಳ ಕುರಿತು ತಿಳಿದುಕೊಳ್ಳಿ. ನೀವು ಕುಡಿಯುವ ಕಾಫಿಯಲ್ಲಿ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಇವು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ದಿಗೊಳಿಸುತ್ತವೆ. ರೋಗಗಳ ವಿರುದ್ಧ ಹೋರಾಡಲು ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಅಷ್ಟೇ ಅಲ್ಲ ಕಾಫಿಯನ್ನು ಕುಡಿಯುವುದರಿಂದ ಎರಡನೇ ವಿಧದ ಮಧುಮೇಹದ ಅಪಾಯವನ್ನು ಕೂಡ ತಗ್ಗಿಸಬಹುದು.

 6. ಮೊಟ್ಟೆಗಳು

6. ಮೊಟ್ಟೆಗಳು

ಮೊಟ್ಟೆ - ಇದು ಒಂದು ಸಮೃದ್ಧ ಆಹಾರವಾಗಿದ್ದು ನಮ್ಮ ದೇಹಕ್ಕೆ ಅವಶ್ಯಕ ಇರುವ ಎಲ್ಲ ಪ್ರಯೋಜನಕಾರಿ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ವಿಟಾಮಿನ ಎ ಮತ್ತು ವಿಟಾಮಿನ ಡಿ ಯತೇಚ್ಛವಾಗಿದ್ದು , ಉತ್ಕರ್ಷಣ ನಿರೋಧಕಗಳು ಸಹ ಇವೆ. ಆದ್ದರಿಂದ ದಿನಕ್ಕೊಂದು ಮೊಟ್ಟೆ ತಪ್ಪದೇ ನಿಮ್ಮ ಆಹಾರದ ಭಾಗವಾಗಿರಲಿ

7. ಆಲೂಗಡ್ಡೆಗಳು

7. ಆಲೂಗಡ್ಡೆಗಳು

ಬಹುತೇಕ ಜನರು ಆಲೂಗಡ್ಡೆಗಳನ್ನು ಕಂಡರೆ ದೂರ ಓಡುತ್ತಾರೆ. ಇದಕ್ಕೆ ಕಾರಣ ಅದರಲ್ಲಿ ಯತೇಚ್ಛವಾಗಿರುವ ಪಿಷ್ಟದ ಪ್ರಮಾಣ. ಆದರೆ ವಾಸ್ತವವಾಗಿ ಆಲೂಗಡ್ಡೆಯು ಪ್ರತಿಯೊಬ್ಬರ ಆಹಾರದ ಆರೋಗ್ಯಕರ ಭಾಗವಾಗುವುದರಲ್ಲಿ ಸಂಶಯವಿಲ್ಲ. ಆಲೂಗಡ್ಡೆಗಳು ನಿಮ್ಮ ದೇಹಕ್ಕೆ ಪ್ರತಿದಿನ ಬೇಕಾಗುವ ಅಗತ್ಯ ಪ್ರಮಾಣದ ಪ್ರೊಟೀನ್ , ಫೈಬರ್(ನಾರು) ಕಬ್ಬಿಣ ಅಂಶಗಳನ್ನು ಮತ್ತು ಜೀವಸತ್ವಗಳನ್ನು ಒದಗಿಸುತ್ತದೆ.

8. ಚಿಕನ್ ಲೆಗ್ ಪೀಸ್

8. ಚಿಕನ್ ಲೆಗ್ ಪೀಸ್

ಚಿಕನ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಎಲ್ಲರೂ ಇದನ್ನು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಚಿಕನ್ ಎದೆಯು ಅಪರ್ಯಾಪ್ತ ಕೊಬ್ಬಿನ ಆಗರವಾಗಿದೆ. ಆದರೆ ಚಿಕನ್ ರೆಕ್ಕೆಯು ತಿನ್ನಲು ರುಚಿಯಾಗಿದ್ದು, ಆರೋಗ್ಯಕಾರಿಯು ಹೌದು. ಇದನ್ನು ದೈನಂದಿನ ಆಹಾರದ ಪದ್ದತಿಯಲ್ಲಿ ಅಳವಡಿಸಿಕೊಂಡರೆ ಒಳ್ಳೆಯದು. ಇದು ಆರ್ಥಿಕವಾಗಿಯೂ ಒಳ್ಳೆಯ ಆಯ್ಕೆ ಆಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಕನಿಷ್ಟಪಕ್ಷ ವಾರಕ್ಕೆ ಎರಡು ಬಾರಿಯಾದರೂ ಚಿಕನ್ ಅನ್ನು ಆಹಾರದ ಭಾಗವಾಗಿ ಸೇವಿಸಿ, ಉತ್ತಮ ಆರೋಗ್ಯವನ್ನು ಪಡೆಯಿರಿ.

9. ಕೆಂಪು ಮಾಂಸ

9. ಕೆಂಪು ಮಾಂಸ

ಕೆಂಪು ಮಾಂಸದಲ್ಲಿ ಯಥೇಚ್ಛವಾಗಿ ಪರ್ಯಾಪ್ತ ಕೊಬ್ಬಿನ ಪ್ರಮಾಣ ಇರುತ್ತದೆ. ಇದು ಅಪಾಯಕಾರಿಯೂ ಹೌದು. ಆದರೆ ಇತ್ತೀಚಿಗಿನ ಅಧ್ಯಯನಗಳ ಪ್ರಕಾರ ಕೆಂಪು ಮಾಂಸವು ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪ್ರೊಟೀನ್ ಅನ್ನು ಒದಗಿಸುತ್ತದೆ. ಅಲ್ಲದೇ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ. ಇಷ್ಟೇ ಎಲ್ಲ ಅನುಕೂಲಗಳಿದ್ದರೂ ಈ ಕೆಂಪು ಮಾಂಸವನ್ನು ಮಿತ ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ಮರೆಯದಿರಿ.

10. ಪಾಸ್ತಾ

10. ಪಾಸ್ತಾ

ಈ ಪಾಸ್ತಾವನ್ನು ಈ ಆರೋಗ್ಯಕರ ಆಹಾರದ ಪಟ್ಟಿಯಲ್ಲಿ ಸೇರಿಸಬಹುದೇ ಎಂದು ಯೋಚಿಸುತ್ತಿದ್ದೀರಿ ಅಲ್ಲವೇ? ಇರಲಿ ಪಾಸ್ತಾ ಕಡಿಮೆ ಕೊಬ್ಬಿನ ಅಂಶವನ್ನು ಹೊಂದಿದ ಆಹಾರವಾಗಿದೆ. ಇದು ಒಂದು ಆರೋಗ್ಯಕರವಾದ ಆಯ್ಕೆ ಆಗಿದ್ದು, ಇದನ್ನು ನೀವು ಕಡಿಮೆ ಕೆನೆ ಇರುವ ಸಾಸ ಮತ್ತು ತರಕಾರಿಗಳೊಂದಿಗೆ ಉಪಯೋಗಿಸಬಹುದು. ಈಗ ಆರೋಗ್ಯದ ವಿಷಯ ಬಂದಾಗ ಇಷ್ಟವಾದ ಕೆಲವು ಆಹಾರಗಳನ್ನು ತ್ಯಜಿಸುವುದು ಅವಶ್ಯಕತೆ ಏನಿಲ್ಲ.

X
Desktop Bottom Promotion